Breaking News

ಮೊಬೈಲ್​​ ಕೊಡಿಸದಿದ್ದಕ್ಕೆ ಅಪ್ಪನ ಜನ್ಮ ದಿನವೇ ಮಗ ಆತ್ಮಹತ್ಯೆ

ಬೆಳಗಾವಿ: ತಂದೆಯ ಜನ್ಮದಿನದಂದೇ 17 ವರ್ಷದ ಮಗನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಖಾನಾಪೂರದ ಹಲಕರ್ಣಿ ಗ್ರಾಮದಲ್ಲಿ ನಡೆದಿದೆ‌. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಹಲಕರ್ಣಿ ಗ್ರಾಮದ ಪ್ರಥಮೇಶ ರಾಜು ಕೋಳಿ (17) ಮೃತ ದುರ್ದೈವಿ. ಇವರ ತಂದೆ ರಾಜು ಕೋಳಿ ಮೊಬೈಲ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ‌. ತಂದೆಗೆ ಮೊಬೈಲ್ ಕೊಡಿಸುವಂತೆ ಖಾನಾಪೂರ ಪಟ್ಟಣದ ಮರಾಠಾ ಮಂಡಳ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಪ್ರಥಮೇಶ ಎರಡು ದಿನಗಳಿಂದ ಹಠ …

Read More »

ಮೂಡಲಗಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ಮೂಡಲಗಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಮೂಡಲಗಿ ಪಟ್ಟಣದ ಗವಿ ತೋಟದ ಆನಂದ ಶರತ್ ಚೌಗಲಾ(25), ಕಲ್ಲಪ್ಪ ಮಲ್ಲಿಕಾರ್ಜನ ಬಿಸನಕೊಪ್ಪ (27), ಬಸವರಾಜ ಶ್ರೀಕಾಂತ ನಿಡಗುಂದಿ (26) ಬಂಧಿತರು.   ಪಟ್ಟಣದ ಗೋಕಾಕ್​ ಕ್ರಾಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮೂವರನ್ನು ಪೊಲೀಸರು ತಡೆಯಲು ಯತ್ನಿಸಿದಾಗ ಬೈಕ್ ನಿಲ್ಲಿಸದೇ ಪರಾರಿಯಾಗುತ್ತಿದ್ದರು. ಹಿಂಬಾಲಿಸಿ ಹಿಡಿದ …

Read More »

ಬೈಲಹೊಂಗಲ ಪಟ್ಟಣದಲ್ಲಿ‌ ದುಷ್ಕರ್ಮಿಗಳಿಂದ ಚಿತ್ರನಟ ಶಿವರಂಜನ್ ಮೇಲೆ ಫೈರಿಂಗ್

ಬೆಳಗಾವಿ : ಬೈಲಹೊಂಗಲ ಪಟ್ಟಣದಲ್ಲಿ‌ ಮಂಗಳವಾರ ರಾತ್ರಿ ಬೈಕ್‌ ಮೇಲೆ ಬಂದ ದುಷ್ಕರ್ಮಿಗಳು ಚಿತ್ರ ನಟ ಶಿವರಂಜನ್ ಬೋಳಣ್ಣವರ ಅವರ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದ್ದು, ಅದೃಷ್ಟವಶಾತ್ ಯಾವುದೇ ಗುಂಡು ತಗುಲಿಲ್ಲ. ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಶಿವರಂಜನ್ ಅವರಿಗೆ ಯಾವುದೇ ಗುಂಡು ತಗುಲಿಲ್ಲ. ಶಿವರಂಜನ್ ಅವರ ಸಹೋದರ ಸಂಬಂಧಿ ಗುಂಡು ಹಾರಿಸಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇನ್ನುವರೆಗೆ ಯಾವುದೇ ನಿಖರ ಮಾಹಿತಿ ತಿಳಿದು ಬಂದಿಲ್ಲ. ಗುಂಡು ಹಾರಿಸಿದವರ ಬಗ್ಗೆ …

Read More »

ಸ್ಮಾರ್ಟ್‌ ಸಿಟಿ ಕೆಲಸ ನಿಗದಿತ ವೇಳೆ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ

ಬೆಳಗಾವಿ: ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ನಗರ ಬಸ್‌ ನಿಲ್ದಾಣ (ಸಿಬಿಟಿ) ಕಾಮಗಾರಿಯನ್ನು ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಸೂಚನೆ ನೀಡಿದರು. ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಸೋಮವಾರ ಪರಿಶೀಲಿಸಿದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.   ಬೆಳಗಾವಿಯಲ್ಲಿ ಅರ್ಧಂಬರ್ಧ ಸ್ಮಾರ್ಟ್‌ ಎಂಬ ಶೀರ್ಷಿಕೆಯಡಿ ಉದಯವಾಣಿಯಲ್ಲಿ ವಿಶೇಷ ವರದಿ ಪ್ರಕಟವಾದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಕಾಮಗಾರಿ ಪರಿಶೀಲಿಸಿದ್ದು ವಿಶೇಷವಾಗಿತ್ತು. ಸಿಬಿಟಿ ಪಕ್ಕದ ಜಾಗಕ್ಕೆ ಸಂಬಂಧಿಸಿದ …

Read More »

ಹಿಡಕಲ್‌ ಡ್ಯಾಂಗೆ ಒಂದೇ ದಿನ 8 ಅಡಿ ನೀರು

ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ. ಅದರೆ ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿಗಳಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಆದರೆ ಜಿಲ್ಲೆಯಲ್ಲಿ ಇನ್ನೂ ಆತಂಕ ಪಡುವಷ್ಟು ಪ್ರವಾಹದ ಸ್ಥಿತಿ ಎದುರಾಗಿಲ್ಲ.   ಮಹಾರಾಷ್ಟ್ರದ ಅಂಬೋಲಿ ಮತ್ತು ಚಂದಗಡ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಇದರಿಂದ ಹಿಡಕಲ್‌ ಜಲಾಶಯದ ನೀರಿನ ಮಟ್ಟ ಒಂದೇ ದಿನದಲ್ಲಿ ಎಂಟು ಅಡಿಗಳಷ್ಟು ಏರಿಕೆಯಾಗಿದೆ. ಘಟಪ್ರಭಾ ನದಿಗೆ ಈಗ …

Read More »

ಖಾನಾಪುರ: ಕಣಕುಂಬಿ ಅರಣ್ಯದಲ್ಲಿ 13 ಸೆಂ.ಮೀ. ಮಳೆ

ಖಾನಾಪುರ: ತಾಲ್ಲೂಕಿನ ಕಣಕುಂಬಿ ಅರಣ್ಯದಲ್ಲಿ ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆಯವರೆಗೆ 13 ಸೆಂ.ಮೀ. ಮಳೆಯಾಗಿದೆ. ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಮಲಪ್ರಭಾ, ಪಾಂಡರಿ ಮತ್ತು ಮಹದಾಯಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಹಬ್ಬನಹಟ್ಟಿಯ ಆಂಜನೇಯ ದೇವಾಲಯ ಮಲಪ್ರಭಾ ನದಿಯಲ್ಲಿ ಬಹುತೇಕ ಮುಳುಗಡೆಯಾಗಿದೆ. ಸತತ ಮಳೆಯ ಕಾರಣ ಕಾನನದಂಚಿನ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

Read More »

ಚಿಕ್ಕೋಡಿ: ನರಸಿಂಹವಾಡಿ ದತ್ತ ಮಂದಿರ ಜಲಾವೃತ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ನರಸಿಂಹವಾಡಿಯ ದತ್ತಾತ್ರೇಯ ದೇವಸ್ಥಾನ ಮಂಗಳವಾರ ನಸುಕಿನಲ್ಲಿ ಜಲಾವೃತವಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆಯ ಕಾರಣ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಪಂಚಗಂಗಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ.   ಈ ಎರಡೂ ನದಿಗಳ ಸಂಗಮ ಸ್ಥಾನವಾದ ನರಸಿಂಹವಾಡಿಯ ದತ್ತ ದೇಗುಲವನ್ನು ನೀರು ಸುತ್ತುವರಿದಿದ್ದು, ಪ್ರವೇಶ ಬಂದಾಗಿದೆ.

Read More »

ಬೆಳಗಾವಿ: ಯಲ್ಲಿ ಧಾರಾಕಾರ ಮಳೆ , ಈವರೆಗೆ 317 ಮನೆಗಳು ಕುಸಿದಿವೆ.

ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದ್ದು, ಈವರೆಗೆ 317 ಮನೆಗಳು ಕುಸಿದಿವೆ. ಚಿಕ್ಕೋಡಿ ತಾಲ್ಲೂಕಿನಲ್ಲಿ 82, ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ 39, ರಾಮದುರ್ಗ ತಾಲ್ಲೂಕಿನಲ್ಲಿ 43, ಸವದತ್ತಿ 35 ಹಾಗೂ ಬೆಳಗಾವಿ ತಾಲ್ಲೂಕಿನಲ್ಲಿ 19 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.   ಉಳಿದಂತೆ, ಮೂಡಲಗಿ ತಾಲ್ಲೂಕು 22, ಕಾಗವಾಡ 24, ಬೈಲಹೊಂಗಲ 19, ಹುಕ್ಕೇರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 14 ಮನೆಗಳ ಗೋಡೆಗಳು ಕುಸಿದಿವೆ. ನಿರಂತರ ಸುರಿಯುತ್ತಿರುವ ಮಳೆಯಿಂದಯಾಗಿ …

Read More »

ಗೋಕಾಕದಲ್ಲಿಂದು ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ

  *ಗೋಕಾಕ*: ಪ್ರಸಕ್ತ ಸನ್ನಿವೇಶದಲ್ಲಿ ಪ್ರವಾಹ ಭೀತಿ ಇಲ್ಲದಿದ್ದರೂ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಪ್ರವಾಹ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಜರುಗಿದ ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, …

Read More »

ರಸ್ತೆ ಅಪಘಾತದಲ್ಲಿ ಮೃತಪಟ್ಟ ಸೈನಿಕನಿಗೆ ಬೆಳಗಾವಿ ಎಂಎಲ್‌ಐಆರ್‌ಸಿ ಯೋಧರಿಂದ ಅಂತಿಮ ನಮನ

ಬೆಳಗಾವಿ ತಾಲೂಕಿನ ಬೋಕನೂರ್ ಕ್ರಾಸ್ ಹತ್ತಿರ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯೋಧನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ.   ಹೌದು ರಸ್ತೆ ಅಪಘಾತದಲ್ಲಿ ಸೈನಿಕನೋರ್ವ ದುರ್ಮರಣ ಹೊಂದಿದ್ದಾನೆ. ಮೃತಬ ವ್ಯಕ್ತಿಯನ್ನು ಓಂಕಾರ ಮಹಾದೇವ ಹಿಂಡಲಗೇಕರ (೨೨) ಎಂದು ಗುರುತಿಸಲಾಗಿದೆ. ಓಂಕಾರ ಹಿಂಡಲಗೇಕರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗುಂದಿ ಕಡೆಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಬೋಕನೂರ ಕ್ರಾಸ್ ಹತ್ತಿರ ನಿಯಂತ್ರಣ ಕಳೆದುಕೊಂಡು ಕಾರ ಮರಕ್ಕೆ …

Read More »