Breaking News

ಸುಟ್ಟ ಸ್ಥಿತಿಯಲ್ಲಿ ಕಾರಿನಲ್ಲಿ ಮೃತದೇಹ ಪತ್ತೆ; ಸತ್ತ ಮಹಿಳೆ ಬದುಕಿರುವುದಾದರೂ ಹೇಗೆ?

ಉಡುಪಿ: ಬೈಂದೂರು ಬಳಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಹಾಗೂ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತಪಟ್ಟಿದ್ದಾರೆ ಎನ್ನಲಾಗಿದ್ದ ಮಹಿಳೆ ಬದುಕುಳಿದಿರುವುದು ಗೊತ್ತಾಗಿದ್ದು, ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ಯಾರದು ಎಂಬುದು ಯಕ್ಷಪ್ರಶ್ನೆಯಾಗಿದೆ.   ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಬಳಿ ಒತ್ತಿಣೆಯ ಹೆನ್ ಬೇರು ಎಂಬಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಹಾಗೂ ಕಾರಿನೊಳಗೆ ಮೃತದೇಹ ಪತ್ತೆಯಾಗಿತ್ತು.   ಕಾರಿನ ಹಿಂಬದಿ ಸೀಟಿನಲ್ಲಿ …

Read More »

2000 ರೂ ಲಂಚ: ಎಸಿಬಿ ಬಲೆಗೆ ಬಿದ್ದ ಎಫ್ ಡಿಸಿ

ಬೆಳಗಾವಿ – ಹೆಚ್ಚುವರಿ ವೇತನ ಬಡ್ತಿ ಆದೇಶಕ್ಕಾಗಿ 2 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಆರೋಗ್ಯ ಇಲಾಖೆ ಪ್ರಥಮ ದರ್ಜೆ ಸಹಾಯಕನೋರ್ವ ಎಸಿಬಿ ಬಲೆಗೆ ಬಿದ್ದಿದ್ದಾನೆ. ದಿನಾಂಕ: 14.07.2022 ರಂದು ಫಿಲ್ಯಾದಿ ಸಂತೊಷ ಚೌದರಿ (ಸಾಃ ಮನೆ ನಂ.830, ಗುನ್ಯಾಳಕರ ಕಲ್ಯಾಣ ಮಂಟಪ ರೊಡ್, ರಹೀಮ್ ನಗರ, ವಿಜಯಪೂರ) ಇವರು ಎಸಿಬಿ ಪೊಲೀಸ್ ಠಾಣೆ ಬೆಳಗಾವಿಗೆ ಹಾಜರಾಗಿ ತಮ್ಮ ಪಿರ್ಯ್ಯಾದಿ ನೀಡಿದ್ದರಲ್ಲಿ, ಫಿರಾದಿಯ ತಾಯಿ ಕೆ.ಎಸ್.ಕುಳಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, …

Read More »

ಅಂಗಡಿಗಳಲ್ಲಿ ಕಳ್ಳತನ ನಡೆಸುತ್ತಿದ್ದ ಅಂತಾರಾಜ್ಯ ಇರಾನಿ ಗ್ಯಾಂಗ್ ನ ಇಬ್ಬರ ಬಂಧನ

ಬೆಳಗಾವಿ: ನಾನಾ ರಾಜ್ಯಗಳಲ್ಲಿ ಕಿರಾಣಿ ಹಾಗೂ ಆಭರಣ ಅಂಗಡಿಗಳಲ್ಲಿ ಕಳುವು ನಡೆಸುತ್ತಿದ್ದ ಕುಖ್ಯಾತ ಇರಾನಿ ಗ್ಯಾಂಗ್ ನ ಇಬ್ಬರನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 9,58,000 ರೂ. ಮೌಲ್ಯದ ಬಂಗಾರದ ಆಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಕಳೆದ ತಿಂಗಳು ಹುಕ್ಕೇರಿ ಪಟ್ಟಣದ ವಿದ್ಯಾ ಜ್ಯುವೆಲರಿ ಶಾಪ್‌ನಲ್ಲಿ ಮಾಲೀಕರ ಗಮನ ಬೇರೆಡೆ ಸೆಳೆದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಅಂಗಡಿ ಮಾಲೀಕರು ಹುಕ್ಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. …

Read More »

ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ; ಅಂಗಾಂಗ ದಾನ ಮಾಡಿ ಮೂವರ ಬಾಳಿಗೆ ಬೆಳಕಾದ ಕಮಲವ್ವ

ಬೆಳಗಾವಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಎಸ್ ಡಿ ಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಎತ್ತಿನಗುಡ್ಡ ಗ್ರಾಮದ 48 ವರ್ಷದ ಕಮಲವ್ವ ಕೆಲಗೇರಿ ಅವರು ತಮ್ಮ ಅಂಗಾಂಗಳನ್ನು ದಾನ ಮಾಡಿ ಮೂವರ ಜೀವ ಉಳಿಸಿ ಸಮಾಜಕ್ಕೆ ಪ್ರೇರಣಾದಾಯಿಯಾಗಿದ್ದಾರೆ.   ಕಮಲವ್ವ ಅವರ ಒಂದು ಕಿಡ್ನಿಯನ್ನು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. …

Read More »

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮೇಷ: ಆರೋಗ್ಯ ಗಮನಿಸಿ. ನಿರೀಕ್ಷಿತ ಧನಾಗಮ. ಸಂದಭೋìಚಿತ ವಿಚಾರದಿಂದ ಸಹೋದರಾದಿ ಸುಖ. ಗೃಹ ಆಸ್ತಿ ವಿಚಾರದಲ್ಲಿ ಮುನ್ನಡೆ. ವಿದ್ಯಾರ್ಜನೆಯಲ್ಲಿ ಪ್ರಗತಿ. ಸಾಂಸಾರಿಕ ಸುಖ ಮಧ್ಯಮ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ಉದ್ಯೋಗ ವ್ಯವಹಾರದ ಬಗ್ಗೆ ಪ್ರಯಾಣ .   ವೃಷಭ: ಆರೋಗ್ಯ ವೃದ್ಧಿ. ಹೆಚ್ಚಿದ ಧನಾಗಮ. ಬಂಧುಮಿತ್ರರ ಸಹಾಯ. ಆಸ್ತಿ ವಿಚಾರದಲ್ಲಿ ಮುನ್ನಡೆ. ವಿದ್ಯಾರ್ಜನೆಯಲ್ಲಿ ನಿಪುಣತೆ. ಸ್ಪರ್ಧಾತ್ಮಕ ಮನೋಭಾವ. ಸಾಂಸಾರಿಕ ಸುಖ ಮಧ್ಯಮ. ಧರ್ಮಕರ್ಮದಲ್ಲಿ ಶ್ರೇಯಸ್ಸು. ನಿರೀಕ್ಷೆಗೂ ಮೀರಿದ ಸ್ಥಾನ ಲಾಭ. …

Read More »

ಅಮೃತ್‌ ಪೌಲ್‌-ಶಾಂತಕುಮಾರ್‌ ನಡುವೆ 1.36 ಕೋಟಿ ರೂ. ವಹಿವಾಟು!

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣದ ಕಿಂಗ್‌ಪಿನ್‌ಗಳಾದ ಎಡಿಜಿಪಿ ಅಮೃತ್‌ ಪೌಲ್‌ ಮತ್ತು ಡಿವೈಎಸ್ಪಿ ಶಾಂತಕುಮಾರ್‌ ನಡುವೆ 1.36 ಕೋಟಿ ರೂ.ಗಳ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ತನಿಖಾಧಿಕಾರಿಗಳು ಅಮೃತ್‌ ಪೌಲ್‌ರನ್ನು ಮತ್ತೆ 3 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ. 10 ದಿನಗಳ ಪೊಲೀಸ್‌ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಬುಧವಾರ ಪೌಲ್‌ ಅವರನ್ನು ಒಂದನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಆರೋಪಿಯ ಹಣದ …

Read More »

ಅತ್ಯಾಚಾರ ಪ್ರಕರಣ; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಉಡುಪಿ ಕೋರ್ಟ್

ಉಡುಪಿ: ಮದುವೆ ಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು 20 ವರ್ಷ ಕಠಿನ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.   ಉಡುಪಿಯ ಕೊಡವೂರು ನಿವಾಸಿ ಕಿರಣ್‌ (28) ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ. ಸಂತ್ರಸ್ತ ಬಾಲಕಿ 16 ವರ್ಷದವಳಾಗಿದ್ದು ಪ್ರೀತಿ-ಪ್ರೇಮದ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ. …

Read More »

ಬೆಂಗಳೂರು: ಲಾಂಗ್ ಆಯ್ತೂ ಈಗ ಗನ್ ಹಿಡಿದು ಬೈಕ್ ನಲ್ಲಿ ಬಿಲ್ಡಪ್ ಕೊಡ್ತಿರೋ ಪುಂಡರು!

ಬೆಂಗಳೂರು:ನಗರದಲ್ಲಿ ಲಾಂಗ್ ಹಿಡಿದು ರಾಬರಿ ಮಾಡೊ ಪುಂಡರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾಲೆ ಇದೆ. ಈ‌ ಮಧ್ಯೆ ಪುಂಡರ ಗುಂಪೊಂದು ಗನ್ ಹಿಡಿದು ಬೈಕ್ ನಲ್ಲಿ ಶೋ‌ಕೊಟ್ಟಿದ್ದಾರೆ. ನಗರದಲ್ಲಿ ಗನ್ ಹಿಡಿದು ಬೈಕ್ ರೈಡಿಂಗ್ ಮಾಡಿದ ಪುಂಡರ ಫೋಟೋ ತೆಗೆದು ಬೆಂಗಳೂರು ಸಿಟಿ ಪೊಲೀಸ್ ಪೇಜ್‌ಗೆ ಪೋಸ್ಟ್ ಮಾಡಿ ದೂರು ನೀಡಿದ್ದಾರೆ.   ಬನ್ನೇರುಘಟ್ಟ ರಸ್ತೆ ಮಾರ್ಬಲ್ ರೋಡ್ ಬಳಿ ಗನ್ ಹಿಡಿದು ಬೈಕ್ ನಲ್ಲಿ ತೆರಳುತ್ತಿರುವುದಾಗಿ ವ್ಯಕ್ತಿಯೊಬ್ರು ಪೋಸ್ಟ್ …

Read More »

ಹೆಣ್ಣು ಮಗುವಿನ ಪೋಷಕರೇ, ಕೇಂದ್ರ ಸರ್ಕಾರ ವಾರ್ಷಿಕ ₹12,000 ನೀಡ್ತಿದೆ ; ನೀವೂ ಈ ರೀತಿ ಪಡೆದುಕೊಳ್ಳಿ

ಹೆಣ್ಣು ಮಕ್ಕಳ ಸಬಲಿಕರಣಕ್ಕಾಗಿ ಕೇಂದ್ರ ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ ಸೇರಿ ಹಲವು ಯೋಜನೆಗಳನ್ನ ನಡೆಸ್ತಿದೆ. ಅದ್ರಲ್ಲಿ ಒಂದು ಈ ‘CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆ’. ಈ ಯೋಜನೆಯಡಿ ಸರ್ಕಾರ, ಒಂದೇ ಹೆಣ್ಣು ಮಗು ಹೊಂದಿರುವ ಪೋಷಕರಿಗೆ 12 ಸಾವಿರ ಸ್ಕಾಲರ್‌ಶಿಪ್‌ ನೀಡ್ತಿದೆ.   ಆರ್ಥಿಕವಾಗಿ ಹಿಂದುಳಿದ, ಸರಿಯಾದ ಶಿಕ್ಷಣ ಪಡೆಯಲಾಗದ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಬಹುಪಾಲು ಶುಕ್ಷಣ ವಂಚಿತರಾಗುತ್ತಾರೆ. ಹಾಗಾಗಿ ಇದನ್ನ ತಪ್ಪಿಸುವ ಉದ್ದೇಶದಿಂದ …

Read More »

ಕೊಪ್ಪಳ: ಭಕ್ತರಿಂದ ಗವಿಮಠಕ್ಕೆ ಬಂತು ₹3.71 ಕೋಟಿ ದೇಣಿಗೆ

ಕೊಪ್ಪಳ: ಇಲ್ಲಿನ ಗವಿಸಿದ್ದೇಶ್ವರ ಮಠದಲ್ಲಿ ಐದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಕಟ್ಟಡ ನಿರ್ಮಾಣಕ್ಕಾಗಿ ಇದುವರೆಗೆ ಭಕ್ತರು ಒಟ್ಟು ₹3,71,81,931 ದೇಣಿಗೆ ನೀಡಿದ್ದಾರೆ. ಗವಿಮಠದ ಆವರಣದಲ್ಲಿ ಜೂನ್‌ 23ರಂದು ಈ ಕಾಮಗಾರಿ ಉದ್ಘಾಟನೆ ನೆರವೇರಿತ್ತು. ಆಗ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ‘ಎಷ್ಟು ಶಕ್ತಿ ಇದೆಯೊ ಅಷ್ಟೂ ಮಕ್ಕಳನ್ನು ಓದಿಸುವೆ. ಅವರ ಏಳಿಗೆಗಾಗಿ ಜೋಳಿಗೆ ಹಿಡಿಯುವೆ’ ಎಂದು ಭಾವುಕರಾಗಿ ಹೇಳಿದ್ದರು. ಅವರ ಈ ಮಾತುಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ …

Read More »