Breaking News

ಧರೆಗುರುಳಿದ ವಿಕ್ರಾಂತ್‌ ರೋಣ ಕಟೌಟ್‌ : ಲಾಲ್‌ಬಾಗ್‌ ರಸ್ತೆಯಲ್ಲಿ ʻ ತಪ್ಪಿದ ಭಾರೀ ಅನಾಹುತ ʼ

ಬೆಂಗಳೂರು : ಬೆಂಗಳೂರಿನ ಊರ್ವಶಿ ಥಿಯೇಟರ್‌ ಬಳಿ ಬೃಹತ್‌ ಗಾತ್ರದ ವಿಕ್ರಾಂತ್‌ ರೋಣ ಕಟೌಟ್‌ ಧರೆಗುರುಳಿ ಬಿದ್ದಿದೆ. 20 ಅಡಿಗೂ ಹೆಚ್ಚು ಎತ್ತರವಿರುವ ಕಟೌಟ್‌. ಲಾಲ್‌ಬಾಗ್‌ ಮುಖ್ಯರಸ್ತೆಗೆ ಬಿದ್ದಿದೆ.   ಹೂವಿನ ಹಾರಗಳ ಭಾರಕ್ಕೆ ಮುರಿದು ಬಿದ್ದಿದೆ. ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತಲೇ ಇರುತ್ತದೆ. ಯಾರು ಓಡಾಡದೇ ಇರುವ ಸಂದರ್ಭದಲ್ಲಿ ಧರೆಗಪ್ಪಳಿಸಿದ ಅನಾಹುತವನ್ನು ತಪ್ಪಿಸಿದೆ. ಯಾವುದೇ ಕಾರಣಕ್ಕೂ ಪ್ರಾಣಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Read More »

ಇದಕ್ಕೆಲ್ಲ ಸರಕಾರದ ನೀತಿಯೇ ಕಾರಣ: ಹೈಕೋರ್ಟ್ ಅಸಮಾಧಾನ

ಬೆಂಗಳೂರು,: ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಸರಕಾರಿ ವಸತಿ ಶಾಲೆಗಳಿಗೆ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನೇಮಿಸುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಇದಕ್ಕೆಲ್ಲ ಸರಕಾರದ ನೀತಿಯೆ ಕಾರಣವೆಂದು ಹೇಳಿದೆ. ನವೋದಯ ವಸತಿ ಶಾಲೆಗಳು, ಮುರಾರ್ಜಿ ದೇಸಾಯಿ, ಏಕಲವ್ಯ, ಕಿತ್ತೂರು ರಾಣಿ ಚೆನ್ನಮ್ಮ, ಅಲ್ಪಸಂಖ್ಯಾತರ ವಸತಿ ಶಾಲೆಗಳನ್ನು ನಡೆಸುತ್ತಿರುವ ವಸತಿ ಶಾಲೆಗಳ ನೂರಾರು ಶಿಕ್ಷಕರು ಹುದ್ದೆಗಳನ್ನು ಕಾಯಂಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.   ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ …

Read More »

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇವರ ಸಾರಥ್ಯದಲ್ಲಿ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಗೆ ಅತ್ಯುತ್ತಮ ಕೈಗಾರಿಕಾ ಶ್ರೇಷ್ಠ ಪ್ರಶಸ್ತಿ

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇವರ ಸಾರಥ್ಯದಲ್ಲಿ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಗೆ ಅತ್ಯುತ್ತಮ ಕೈಗಾರಿಕಾ ಶ್ರೇಷ್ಠ ಪ್ರಶಸ್ತಿ ಲಭಿಸಿದ್ದು, ಈ ಪ್ರಶಸ್ತಿಯನ್ನು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ ಶ್ರೀಮಂತ ಪಾಟೀಲರು ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ್ ಸಾವಂತ್ ಹಾಗೂ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಶ್ರೀಮತಿ ಸಾಧ್ವಿ ನಿರಂಜನ್ ಜ್ಯೋತಿಯವರಿಂದ ಸ್ವೀಕರಿಸಿದರು. ಶುಕ್ರವಾರ ರಂದು ಗೋವಾ ರಾಜ್ಯದ ಪಣಜಿಯಲ್ಲಿ “ದಿ. ಶುಗರ್ ಟೆಕ್ನಾಲಾಜಿಸ್ಟ್ಸ್ ಅಸೊಶಿಯೇಶನ್ ಆಫ್ …

Read More »

ಫೇಸ್‌ಬುಕ್‌ನಲ್ಲಿ ಯುವತಿಯ ಫೋಟೊ ಹಾಕಿ 5,000 ಜನರನ್ನು ಯಾಮಾರಿಸಿದ ಯುವಕನ ಬಂಧನ

ಬೆಳಗಾವಿ: ಯುವತಿಯೊಬ್ಬರ ಫೋಟೊ ಬಳಸಿ, ಫೇಸ್‌ಬುಕ್‌ ಖಾತೆ ಸೃಷ್ಟಿಸಿ ₹ 20 ಲಕ್ಷ ಹಣ ಕಬಳಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಿಪ್ಪಾಣಿ ತಾಲ್ಲೂಕಿನ ನಾಯಿಂಗ್ಲಜ್‌ ಗ್ರಾಮದ ನಿವಾಸಿ ಮಹಾಂತೇಶ ಮೂಡಸೆ ಬಂಧಿತ ಆರೋಪಿ. ಬೆಳಗಾವಿ ಮೂಲದ, ಸದ್ಯ ದುಬೈನಲ್ಲಿ ವಾಸವಾಗಿರುವ ಯುವತಿಯ ಕೆಲವು ಫೋಟೊಗಳನ್ನು ಫೇಸ್‌ಬುಕ್‌ನಿಂದಲೇ ಡೌನ್‌ಲೋಡ್‌ ಮಾಡಿಕೊಂಡ ಆರೋಪಿ, ಎಂ.ಸ್ನೇಹಾ (ಬದಲಾಯಿಸಿದ ಹೆಸರು) ಎಂಬ ಹೆಸರಲ್ಲಿ ಖಾತೆ ಮಾಡಿದ್ದ. ಆ ಖಾತೆಯಿಂದಲೇ ಯುವಕರಿಗೆ, ವಯಸ್ಕರಿಗೆ ‘ಫ್ರೆಂಡ್‌ …

Read More »

PAN Card ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ! ಈ ರೀತಿ ಸುಲಭವಾಗಿ e-PAN ಡೌನ್‌ಲೋಡ್ ಮಾಡಿ!

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಸಮೀಪಿಸುತ್ತಿದೆ. ಜುಲೈ 31 ಅದರ ಕೊನೆಯ ದಿನಾಂಕವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸಾಧ್ಯವಾದಷ್ಟು ಬೇಗ ITR ಅನ್ನು ಸಲ್ಲಿಸಬೇಕು. ಇದಕ್ಕೆ ಪ್ಯಾನ್ ಕಾರ್ಡ್ ಬಹಳ ಮುಖ್ಯ. ಆದರೆ ನೀವು ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪ್ಯಾನ್ ಕಾರ್ಡ್ ಕಳೆದುಹೋಗುವುದು ಅಥವಾ ಹಾನಿಗೊಳಗಾಗುವುದು ಹಲವು ಬಾರಿ ಸಂಭವಿಸುತ್ತದೆ. ಮತ್ತು ಐಟಿಆರ್ ಸಲ್ಲಿಸುವಾಗ ನಾವು ತೊಂದರೆಗಳನ್ನು ಎದುರಿಸಬಹುದು. ಇದು ನಿಮಗೆ ಸಮಸ್ಯೆಯಾಗಿದ್ದರೆ …

Read More »

ರಾಜ್ಯದಲ್ಲಿ ಇನ್ನೂ 5 ದಿನ ಮಳೆ

ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 5 ದಿನ ಮುಂದುವರಿಯಲಿದ್ದು, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಆ.1 ಮತ್ತು 2ರಂದು ಜೋರು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಇಲಾಖೆ, ಆರೆಂಜ್ ಅಲರ್ಟ್ ಕೊಟ್ಟಿದೆ. ಅಲ್ಲದೆ, ಈ ಜಿಲ್ಲೆಗಳಲ್ಲಿ ಜು.30ರಂದು ಹಾಗೂ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ …

Read More »

ಉತ್ತರ ಕರ್ನಾಟಕದ ಯುವಕರ ಕನಸು ಕೊನೆಗೂ ನನಸು: ಆ. 1ರಿಂದ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕಾರ್ಯಾರಂಭ

ಬೆಂಗಳೂರು: ಮಾಹಿತಿ ತಂತ್ರಜ್ಞಾನದ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಹುಬ್ಬಳ್ಳಿಯಲ್ಲಿ ತೆರೆಯಬೇಕು ಎನ್ನುವ ಹಲವರ ಕನಸು ಕೊನೆಗೂ ನನಸಾಗಿದೆ. ಇದೇ ಆಗಸ್ಟ್​ 1ರಿಂದ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಇನ್ಫೋಸಿಸ್​ ಶುರು ಮಾಡಬೇಕು ಎಂದು ದಶಕದಿಂದಲೇ ಕೂಗು ಕೇಳಿಬಂದಿತ್ತು. ಈ ಭಾಗದ ಯುವ ಜನತೆಗೆ ಉದ್ಯೋಗಾವಕಾಶಗಳು ತೆಗೆದುಕೊಳ್ಳಲಿವೆ ಎಂಬ ಭರವಸೆಯಿಂದ ಇನ್ಫೋಸಿಸ್ ಕಾರ್ಯಾರಂಭಕ್ಕೆ ಒತ್ತಡ ಹೆಚ್ಚಿತ್ತು. ‌ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸುಸಜ್ಜಿತವಾದ, ಬೃಹದಾಕಾರದ ಇನ್ಫೋಸಿಸ್ …

Read More »

ಬೆಳಗಾವಿ ನಗರದಲ್ಲಿ ಮತ್ತೆ ಮಳೆ ಅಟ್ಟಹಾಸ ರಸ್ತೆಗಳಲ್ಲೆಲ್ಲ ಕ್ಷಣಕಾಲದಲ್ಲಿ ನೀರೋ ನೀರು

ಬೆಳಗಾವಿ ನಗರದಲ್ಲಿ ಮತ್ತೆ ಮಳೆರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಕಳೆದ ಒಂದು ವಾರದಿಂದ ಸುಮ್ಮನಿದ್ದ ವರುಣರಾಯ ಮತ್ತೆ ಇಂದು ಮಧ್ಯಾಹ್ನ ಆರ್ಭಟಿಸಿದ್ದಾನೆ. ವರುಣನ ಆರ್ಭಟಕ್ಕೆ ಕುಂದಾನಗರಿಯ ರಸ್ತೆಗಳಲ್ಲೆಲ್ಲ ಕ್ಷಣಕಾಲದಲ್ಲಿ ನೀರೋ ನೀರು ಎನ್ನುವಂತಾಗಿತ್ತು. ಹೌದು ಬೆಳಗಾವಿಯಲ್ಲಿ ಕಳೆದ ಒಂದು ತಿಂಗಳಿನಿಂದ ಚೆನ್ನಾಗಿತ್ತು ಮಳೆಯಾಗಿತ್ತು. ಮಳೆಯ ಆರ್ಭಟಕ್ಕೆ ಜನ ಸಾಕಷ್ಟು ತೊಂದರೆಗೊಳಗಾಗಿದ್ದರು. ಆದರೆ ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ಮಳೆ ಕಡಿಮೆಯಾಗಿದ್ದರಿಂದ ಜನಜೀವನ ಎಥಾ ಸ್ಥಿತಿಗೆ ಬರುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ನಗರದಲ್ಲಿ …

Read More »

ನಿಮ್ಮ ಜಮೀನಿನಲ್ಲಿ ಉಚಿತ ಕೊಳವೇ ಬಾವಿ ಕೊರೆಸಬೇಕೇ: ಈಗಲೇ ಅರ್ಜಿ ಸಲ್ಲಿಸಿ

ಬೆಂಗಳೂರು: ಹಲವಾರು ರೈತರು ಇಂದಿಗೂ ಮಳೆಯನ್ನೇ ಆಶ್ರಯಿಸಿಕೊಂಡು ಜಮೀನು ಕಾರ್ಯದಲ್ಲಿ ತೊಡಗಿದ್ದಾರೆ. ಕಾರಣ ಅವರಲ್ಲಿ ಕೊಳವೆ ಬಾವಿ ತೋಡಿಸುವಷ್ಟು ಆರ್ಥಿಕ ಶಕ್ತಿ ಇಲ್ಲದಿರುವುದು. ಈ ಕಾರಣಕ್ಕೆ ಸರ್ಕಾರವೇ ಉಚಿತವಾಗಿ ಈ ಸೌಲಭ್ಯಗಳನ್ನು ರೈತರಿಗೆ ನೀಡುತ್ತಿದೆ. ನೀವು ಸದುಪಯೋಗಪಡಿಸಿಕೊಳ್ಳಿ. ಯೋಜನೆ ಏನು? : ಕೊಳವೆ ಬಾವಿ (ಬೋರ್ ವೆಲ್) ಕೊರೆಯುವ ಮತ್ತು ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲ್ಯಾಣ ಯೋಜನೆ. ವಿದ್ಯುತ್ ಸಂಪರ್ಕ ಕಲ್ಪಿಸಿ ಪಂಪ್ …

Read More »

ಫೋಟೊ ಅಶ್ಲೀಲವಾಗಿ ಎಡಿಟ್ ಮಾಡಿ ಮಹಿಳೆಯರಿಗೆ ಬ್ಲ್ಯಾಕ್​ಮೇಲ್; ಯುವಕ ಅರೆಸ್ಟ್​

ಮುಂಬೈ: ಮಹಿಳೆಯರ ಅಶ್ಲೀಲ ವಿಡಿಯೋ ತಯಾರಿಸಿ ಅವರಿಗೆ ಹಣಕ್ಕಾಗಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಯುವಕನೊಬ್ಬನನ್ನು ಗುಜರಾತ್ ಪೊಲೀಸರ ಸಹಾಯದಿಂದ ಮುಂಬೈ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಈತನನ್ನು ಜುಲೈ 29 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಆರೋಪಿ ಪ್ರಶಾಂತ ಆದಿತ್ಯ (19) ಈತ, ಯುವತಿಯರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಫೋಟೊಗಳನ್ನು ಕದ್ದು ಅವುಗಳಿಗೆ ಪೋರ್ನ್ ಚಲನಚಿತ್ರದ ಧ್ವನಿಯನ್ನು ಸೇರಿಸಿ ಎಡಿಟ್ ಮಾಡುತ್ತಿದ್ದ. ನಂತರ, ಅವನ್ನು ಮತ್ತೆ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೆ ಅಪ್ಲೋಡ್ …

Read More »