ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಕಾರ್ಯಕರ್ತರು ಸರ್ಕಾರದ ವಿರುದ್ಧವೇ ಸಿಡಿಮಿಡಿಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸಕ್ಕಿಂದು ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ವೈಫಲ್ಯವನ್ನ ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಕಚೇರಿಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂತಹ ಘಟನೆ ಒಪ್ಪಿಕೊಳ್ಳುವಂತ ವಿಚಾರ ಅಲ್ಲ. …
Read More »ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ.. ಆರೋಗ್ಯ ಇಲಾಖೆಗೆ ಬೆಳಗಾವಿ ಡಿಹೆಚ್‌ಒ ಪತ್ರ
ಬೆಳಗಾವಿ : ಡಿಹೆಚ್‌ಒಗೆ ‘ಕೈ’ ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ ಹಿನ್ನೆಲೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬೆಳಗಾವಿ ಡಿಹೆಚ್‌ಒ ಡಾ.ಮಹೇಶ್ ಕೋಣಿ ಪತ್ರ ಬರೆದಿದ್ದಾರೆ. ತಮ್ಮದೇನೂ ತಪ್ಪು ಇಲ್ಲದೇ ಇದ್ದರೂ ಜನಪ್ರತಿನಿಧಿಗಳು ತಮಗೆ ಕರೆ ಮಾಡಿ ತರಾಟೆಗೆ ತಗೆದುಕೊಳ್ಳುತ್ತಿದ್ದಾರೆ ಎಂದು ಬೆಳಗಾವಿ ಡಿಹೆಚ್‌ಒ ಡಾ.ಮಹೇಶ್ ಕೋಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ …
Read More »20 ರೂಪಾಯಿ ಕೊಟ್ಟು ಧ್ವಜ ಖರೀದಿಸಿ ಮನೆಯ ಮೇಲೆ ಹಾರಿಸಿ: ಜೋಶಿ
ಹುಬ್ಬಳ್ಳಿ: 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಒಂದು ಧ್ವಜಕ್ಕೆ 20 ರೂ. ಕೊಟ್ಟು ಸಾರ್ವಜನಿಕರು ಖರೀದಿ ಮಾಡಬೇಕು. ಆಗಸ್ಟ್ 13ರಿಂದ 15ರವರೆಗೆ ಧ್ವಜವನ್ನು ಮನೆಗಳ ಮೇಲೆ ಹಾರಿಸಬಹುದು. ನ್ಯಾಯಬೆಲೆ ಅಂಗಡಿ, ಮಾಲ್, ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ಕಚೇರಿಗಳಲ್ಲಿ ಧ್ವಜಗಳು ದೊರೆಯುತ್ತವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ನಮಗೆ ಹತ್ತು ಕೋಟಿ ಧ್ವಜ ಬೇಕು. ಅದನ್ನು ಪೂರೈಕೆ ಮಾಡೋಕೆ ಆಗೋದಿಲ್ಲ. …
Read More »ರಾಜ್ಯದ ಯುವ ಜನತೆಗೆ ಸಿದ್ದರಾಮಯ್ಯ ಭಾವನಾತ್ಮಕ ಪತ್ರ
ಬೆಂಗಳೂರು: ಕರಾವಳಿಯಲ್ಲಿ ಅಮಾ ಯಕ ಯುವಕರು ವಿನಾಕಾರಣ ದುರಂತ ಸಾವನ್ನಪ್ಪುತ್ತಿದ್ದು, ಅಲ್ಲಿನ ಸಮುದಾಯಗಳು ಅತಿ ಜರೂರಾಗಿ ಜಾಗೃತಗೊಳ್ಳಬೇಕು ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕೆಟ್ಟ ಕಾರಣಕ್ಕಾಗಿ ನಮ್ಮ ಕರಾವಳಿ ರಾಜ್ಯಕ್ಕೆ ಮಾದರಿ ಯಾಗುವುದು ಬೇಡ ಎಂದೂ ಹೇಳಿದ್ದಾರೆ. ಈ ಬಗ್ಗೆ ಶುಕ್ರವಾರ ಯುವ ಜನತೆಗೆ ಭಾವನಾ ತ್ಮಕ ಪತ್ರ ಬರೆದಿರುವ ಅವರು, ಕರಾವಳಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನನ್ನನ್ನು ನೋವಿನಲ್ಲಿ ಮುಳುಗಿಸಿವೆ. ಬಾಳಿ ಬದುಕಬೇಕಾದ ಯುವಕರು ಕ್ಷುಲ್ಲಕ ಕಾರಣಗಳಿಗಾಗಿ, …
Read More »ಚುನಾವಣಾ ವರ್ಷದಲ್ಲಿ ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ: BJP ವಿರುದ್ಧ ಎಚ್ ಡಿಕೆ ಕಿಡಿ
ಬೆಂಗಳೂರು: ನಾಡಿನ ಜನರನ್ನಷ್ಟೇ ಅಲ್ಲ, ತನ್ನ ಕಾರ್ಯಕರ್ತರನ್ನೇ ರಕ್ಷಣೆ ಮಾಡಿಕೊಳ್ಳಲಾಗದ ಅಸಮರ್ಥ, ಅಸಹಾಯಕ ಬಿಜೆಪಿ ಸರಕಾರ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಿದೆ. ಆದರೆ, ಕರಾವಳಿಯಲ್ಲಿ ನಡೆದ ಎಲ್ಲ ಹತ್ಯೆಗಳನ್ನೂ ಎನ್‌ಐಎ ತನಿಖೆಗೆ ವಹಿಸಲು ಯಾಕೆ ಹಿಂಜರಿಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕರಾವಳಿ ಭಾಗದಲ್ಲಿ ಪ್ರತಿ ಕೊಲೆ ಬಗ್ಗೆಯೂ ಸರಕಾರಕ್ಕೆ ಮಾಹಿತಿ ಇದೆ. …
Read More »ಜೂಜಾಟ ಆಡುತ್ತಿದ್ದ ಪೊಲೀಸರ ಬಂಧನ: ಇನ್ಸ್ ಪೆಕ್ಟರ್ ಪರಾರಿ!
ಹುಬ್ಬಳ್ಳಿ: ಜೂಜಾಟದಲ್ಲಿ ತೊಡಗಿದವರನ್ನು ಹಿಡಿಯಬೇಕಾಗಿದ್ದ ಪೊಲೀಸರೇ ಜೂಜಾಟ ಕೇಸ್ ನಲ್ಲಿ ಬಂಧನವಾಗಿದ್ದಾರೆ. ಇಸ್ಪೀಟ್ ಆಟದಲ್ಲಿ ತೊಡಗಿದ್ದ ಆರೋಪದ ಮೇರೆಗೆ ನಗರ ಸಶಸ್ತ್ರ ಪಡೆಯ ನಾಲ್ವರು ಸಿಬ್ಬಂದಿಯನ್ನು ಇಲ್ಲಿನ ಗೋಕುಲರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಅಕ್ಷಯ ಕಾಲೋನಿಯ ಮನೆಯೊಂದರಲ್ಲಿ ಇಸ್ಪೀಟು ಜೂಜಿನಲ್ಲಿ ತೊಡಗಿದ್ದ ವೇಳೆ ಗೋಕುಲರಸ್ತೆ ಪೊಲೀಸರು ದಾಳಿ ಮಾಡಿದ್ದಾರೆ. ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಓರ್ವ ಇನ್‌ಸ್ಪೆಕ್ಟರ್, ಇಬ್ಬರು ಹೆಡ್ ಕಾನ್ಸ್‌ಟೆಬಲ್‌ಗಳು, ಓರ್ವ ಕಾನ್ ಸ್ಟೆಬಲ್, …
Read More »ಧಾರಾಕಾರ ಮಳೆಗೆ ತತ್ತರಿಸಿದ ಮಂಗಳೂರು: ಹಲವೆಡೆ ಜಲಾವೃತ..ವಾಹನ ಸವಾರರ ಪರದಾಟ
ಶನಿವಾರ (ಜುಲೈ 30) ಮುಂಜಾನೆ ಗುಡುಗು ಸಹಿತವಾಗಿ ಸುಮಾರು ಮೂರು ಗಂಟೆಗಳ ಕಾಲ ಸುರಿದ ಮಳೆಗೆ ಮಂಗಳೂರು ಅಕ್ಷರಶಃ ನಲುಗಿದೆ. ಬೆಳಗ್ಗೆ ಬಿಡದೆ ಸುರಿದ ಬಿರುಸಿನ ಮಳೆಯ ಕಾರಣದಿಂದ ಪಂಪ್ ವೆಲ್ ಸೇತುವೆ ಕೆಳಗೆ ನಾಲ್ಕು ಭಾಗದಲ್ಲೂ ನೀರು ತುಂಬಿ ಕೆರೆಯಂತಾಗಿದೆ. ವರುಣಾರ್ಭಟದಿಂದ ಜಲಾವೃತಗೊಂಡ ಪ್ರದೇಶಗಳ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.
Read More »ಇಷ್ಟು ದಿನ ಮದುವೆ ಅಂತಿದ್ರು ಈಗ ಅಣ್ಣ-ತಂಗಿಯಾಗಿಬಿಟ್ರಾ!
ಕಳೆದ ಕೆಲವು ದಿನಗಳಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್ ಅಫೇರ್ ವೈರಲ್ ಆಗುತ್ತಿರುವುದು ಗೊತ್ತೇ ಇದೆ. ನರೇಶ್ ಪವಿತ್ರಾ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜನರಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಮೇಲಾಗಿ ಈ ರೀತಿ ನಡೆದರೆ ನರೇಶ್ ಗೆ ಇದು ನಾಲ್ಕನೇ ಮದುವೆ ಆಗಿದ್ದು ಹಾಟ್ ಟಾಪಿಕ್ ಆಗಿದೆ. ಸಿನಿನಗರದ ಟಾಕ್ ಪ್ರಕಾರ ವಿಜಯ್ ನಿರ್ಮಲಾ ಅವರ ಪುತ್ರ ಹಿರಿಯ ನಟ ನರೇಶ್ (ಹಿರಿಯ ನರೇಶ್) ಈಗಾಗಲೇ ಮೂರು ಮದುವೆಯಾಗಿದ್ದಾರೆ. …
Read More »ಡಿ.ಕೆ.ಶಿವಕುಮಾರ್ ವಿರುದ್ಧವೇ ಜಮೀರ್ ದೂರು
ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಹೇಳಿಕೆ ಹೈಕಮಾಂಡ್‌ಗೆ ತಲುಪಿದ ಬೆನ್ನಲ್ಲೇ ಈಗ ಮಾಜಿ ಸಚಿವ ಜಮೀರ್ ಅಹಮದ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧವೇ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರಿಗೆ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಹುಟ್ಟುಹಬ್ಬ ವಿಚಾರದಲ್ಲಿ ನಾನು ರಾಜ್ಯವ್ಯಾಪಿ ಪ್ರವಾಸ ಮಾಡಿ ಮುಸ್ಲಿಮರನ್ನು ಕಾಂಗ್ರೆಸ್ ಪರವಾಗಿ ಒಟ್ಟು ಸೇರಿಸುತ್ತಿದ್ದೇನೆ. ವೈಯಕ್ತಿಕ ಅಭಿಪ್ರಾಯ ವಾಗಿ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಲಿ ಎಂದಿದ್ದನ್ನೇ ಮುಂದಿಟ್ಟು ನನ್ನನ್ನು ವಿಲನ್‌ನಂತೆ ಬಿಂಬಿಸಲಾಗಿದೆ. …
Read More »ನೌಕರರಿಗೆ ಟೆಸ್ಟ್ ಟೆನ್ಶನ್!; ಕಂಪ್ಯೂಟರ್ ಸಾಕ್ಷರತೆ ಕಡ್ಡಾಯ, ಇನ್ನೂ ಪಾಸಾಗಿಲ್ಲ ಹಲವರು.
ಬೆಂಗಳೂರು :ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ (ಸಿಎಲ್ಟಿ)ಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿಯಮವೇ ಈಗ ಅವ್ಯವಹಾರಕ್ಕೆ ಆಸ್ಪದವಾಗಿದೆ. ಹಲವು ಬಾರಿ ಪರೀಕ್ಷೆ ಬರೆದರೂ ಅನುತ್ತೀರ್ಣ ರಾಗಿರುವವರು ಹಾಗೂ ಕಂಪ್ಯೂಟರ್ ಜ್ಞಾನವಿಲ್ಲದೆ ಟೆಸ್ಟ್ಗೆ ಹಾಜರಾಗಲು ಹೆದರುತ್ತಿರುವ ನೌಕರರು ಅಡ್ಡದಾರಿ ಹಿಡಿದಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರದ ಸಿಬ್ಬಂದಿ, ತಲಾ ನೌಕರನಿಂದ 20ರಿಂದ 30 ಸಾವಿರ ರೂ. ಲಂಚ ಪಡೆದು ಪಾಸ್ ಆಗಲು ಸಹಾಯ …
Read More »