ವಿಜಯಪುರ: ಕಾಳರಾತ್ರಿ, ನಿರವ ಮೌನ, ನಾಯಿಗಳ ಬೊಗಳುವಿಕೆಯ ಸದ್ದು, ಗಾಬರಿಗೊಂಡು ಮನೆಯಿಂದ ಹೊರಬಂದ ನಿವಾಸಿಗಳಿಗೆ ಕಂಡಿದ್ದು ದೊಣ್ಣೆ ಹಿಡಿದುಕೊಂಡು, ಮುಸುಕು ಧರಿಸಿ ಹೊರಟಿದ್ದ ದಾಂಡಿಗರ ಪಡೆ….! ಅಬ್ಬಾ ಏನಿದು? ಯಾರು ಈ ಮುಸುಕುಧಾರಿಗಳು? ಎಲ್ಲಿಗೆ ಹೊರಟಿದ್ದಾರೆ? ಎಂದು ಅರಿಯದ ಜನ ಆತಂಕದಿಂದಲೇ ಮನೆಯ ಬಾಗಿಲು, ಕಿಟಕಿ ಹಾಕಿಕೊಂಡು ಬೆಚ್ಚಗೆ ಮಲಗಿಕೊಂಡಿದ್ದಾರೆ. ಆದರೆ, ರಾತ್ರಿ ಪೆಟ್ರೋಲಿಂಗ್ನಲ್ಲಿದ್ದ ಪೊಲೀಸರು ನಾಯಿಗಳ ಜೋರಾದ ಬೊಗಳುವಿಕೆಯ ಸದ್ದು ಕೇಳಿ ಆ ಬಡವಾಣೆಗೆ ಕಾಲಿಟ್ಟರೆ ಇದ್ದಕ್ಕಿದ್ದಂತೆ ಎಲ್ಲರೂ ಮಂಗಮಾಯ. …
Read More »ಸತೀಶ ಜಾರಕಿಹೊಳಿ ಅಭಿಮಾನಿ ಯಮಕನಮರಡಿಯಿಂದ ಸಿದ್ದರಾಮಯ್ಯ ಹುಟ್ಟು ಹಬ್ಬಕ್ಕೆ ಬೈಕ್ ಮೂಲಕ ಪ್ರಯಾಣ
ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಭಾಗಿಯಾಗಲು ಯಮಕನಮರಡಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭಿಮಾನಿ ಓರ್ವ ಬೈಕ್ ಮೂಲಕ ಪ್ರಯಾಣ ಆರಂಭಿಸಿದ್ದಾರೆ. ಹೌದು ಯಮಕನಮರಡಿಯ ಕಾಂಗ್ರೆಸ್ ಕಾರ್ಯಕರ್ತ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸತೀಶ ಜಾರಕಿಹೊಳಿ ಅವರ ಅಪ್ಪಟ ಅಭಿಮಾನಿ ಆಗಿರುವ ಅರುಣ ರಾವಳ ಯಮಕನಮರಡಿಯಿಂದ ಬೈಕ್ ಮೂಲಕ ದಾವಣಗೆರೆಗೆ ಪ್ರಯಾಣ ಬೆಳೆಸಿದ್ದಾನೆ. ಕಡೋಲಿ ಗ್ರಾ.ಪಂ. ಮುಂದೆ ಆಗಮಿಸಿದ …
Read More »ದೇಶದಲ್ಲಿ ಸಂಪೂರ್ಣವಾಗಿ ಹಿಂದೂ ರಾಷ್ಟ್ರದ ವಿರುದ್ಧ ಇಸ್ಲಾಮೀಕರಣ ಮಾಡುವ ಹುನ್ನಾರ: ಲಕ್ಷ್ಮಣ ಸವದಿ
ದೇಶದಲ್ಲಿ ಸಂಪೂರ್ಣವಾಗಿ ಹಿಂದೂ ರಾಷ್ಟ್ರದ ವಿರುದ್ಧವಾಗಿ ಇಸ್ಲಾಮೀಕರಣ ಮಾಡುವ ಹುನ್ನಾರ ನಡೆಯುತ್ತಿದೆ ಹೀಗಾಗಿ ಸರಣಿ ಕೊಲೆಗಳು ನಡೆಯುತ್ತಿವೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಗಂಭೀರ ಆರೋಪ ಮಾಡಿದ್ದಾರೆ. ಅಥಣಿ ತಾಲೂಕಿನ ರಡ್ಡೆರಹಟ್ಟಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂಎಲ್ಸಿ ಲಕ್ಷ್ಮಣ ಸವದಿ ಬಿಜೆಪಿ ಕಾರ್ಯಕರ್ತರ ಕೊಲೆ ಖಂಡನೀಯವಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಯಾರೇ ಆಗಲಿ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾದರೆ ಸರ್ಕಾರ ಸಹಿಸಲ್ಲ ಉಗ್ರ ಕಾನೂನು ತಂದು ಶಿಕ್ಷಿಸಲಾಗುವುದು …
Read More »ಬಿಜೆಪಿ ಕಾರ್ಯಕರ್ತ ಹತ್ಯೆಯಾದ್ರೆ 25 ಲಕ್ಷ: ಬೇರೆ ಧರ್ಮದವರಿಗೆ 1 ರೂಪಾಯಿನೂ ಪರಿಹಾರ ಇಲ್ಲ: ಸತೀಶ ಜಾರಕಿಹೊಳಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ರಾಜ್ಯದಲ್ಲಿ ಹತ್ಯೆಯಂತಹ ಘಟನೆ ನಡೆಯುತ್ತಿದ್ದರೂ ಗೃಹ ಸಚಿವರೇ ಗಂಭೀರವಾಗಿ ಗಮನಿಸುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು. ಗೋಕಾಕ್ನಲ್ಲಿ ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಅವರು, ಬಿಜೆಪಿ ಸರ್ಕಾರ ಮುಂಬರುವ ಚುನಾವಣೆ ತಯಾರಿಯಲ್ಲಿದೆ. ಸರ್ಕಾರವನ್ನು ಯಾವ ರೀತಿ ನಡೆಸಬೇಕು ಎನ್ನುವ ಚಿಂತನೆ ಬಿಜೆಪಿ ನಾಯಕರಿಗಿಲ್ಲ. ಹತ್ಯೆ ಪ್ರಕರಣದಲ್ಲಿ …
Read More »ಕೊಟ್ಟ ಮಾತು ಬೊಮ್ಮಾಯಿ ತಪ್ಪಬಾರದು: ಕಾಶಪ್ಪನವರ
ಪಂಚಮಸಾಲಿ ಮೀಸಲಾತಿ ಕೊಡದೆ ಇದ್ದರೆ ನಿಮ್ಮನ್ನ ಮನೆಗೆ ಕಳಿಸುತ್ತೇವೆ. ಕೊಟ್ಟ ಮಾತು ತಪ್ಪಿದ ಕಾರಣಕ್ಕೆ ಯಡಿಯೂರಪ್ಪನವರಿಗೆ ನಮ್ಮ ಸಮಾಜದ ಶಾಪ ತಟ್ಟಿದೆ. ಕೊಟ್ಟ ಮಾತನ್ನ ಬಸವರಾಜ ಬೊಮ್ಮಾಯಿ ತಪ್ಪಬಾರದು, ಮಾತು ತಪ್ಪಿದರೆ ನಮ್ಮ ಶಾಪ ನಿಮಗೆ ತಟ್ಟುತ್ತದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ನಗರದಲ್ಲಿಂದು ಪಂಚಮಸಾಲಿ ಬೃಹತ್ ರ್ಯಾಲಿಗೂ ಮೊದಲು ಸಮಾವೇಶದಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಪಂಚಮಸಾಲಿ ಸಮಯ ದೊಡ್ಡದಿದೆ. ನಾವು ಬಹುಸಂಖ್ಯಾತರು, ಆದ್ರೆ ಇಲ್ಲಿ …
Read More »ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಕಾರ್ಯಕರ್ತರು ಸರ್ಕಾರದ ವಿರುದ್ಧವೇ ಸಿಡಿಮಿಡಿಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸಕ್ಕಿಂದು ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ವೈಫಲ್ಯವನ್ನ ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಕಚೇರಿಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂತಹ ಘಟನೆ ಒಪ್ಪಿಕೊಳ್ಳುವಂತ ವಿಚಾರ ಅಲ್ಲ. …
Read More »ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ.. ಆರೋಗ್ಯ ಇಲಾಖೆಗೆ ಬೆಳಗಾವಿ ಡಿಹೆಚ್ಒ ಪತ್ರ
ಬೆಳಗಾವಿ : ಡಿಹೆಚ್ಒಗೆ ‘ಕೈ’ ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ ಹಿನ್ನೆಲೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬೆಳಗಾವಿ ಡಿಹೆಚ್ಒ ಡಾ.ಮಹೇಶ್ ಕೋಣಿ ಪತ್ರ ಬರೆದಿದ್ದಾರೆ. ತಮ್ಮದೇನೂ ತಪ್ಪು ಇಲ್ಲದೇ ಇದ್ದರೂ ಜನಪ್ರತಿನಿಧಿಗಳು ತಮಗೆ ಕರೆ ಮಾಡಿ ತರಾಟೆಗೆ ತಗೆದುಕೊಳ್ಳುತ್ತಿದ್ದಾರೆ ಎಂದು ಬೆಳಗಾವಿ ಡಿಹೆಚ್ಒ ಡಾ.ಮಹೇಶ್ ಕೋಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ …
Read More »20 ರೂಪಾಯಿ ಕೊಟ್ಟು ಧ್ವಜ ಖರೀದಿಸಿ ಮನೆಯ ಮೇಲೆ ಹಾರಿಸಿ: ಜೋಶಿ
ಹುಬ್ಬಳ್ಳಿ: 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಒಂದು ಧ್ವಜಕ್ಕೆ 20 ರೂ. ಕೊಟ್ಟು ಸಾರ್ವಜನಿಕರು ಖರೀದಿ ಮಾಡಬೇಕು. ಆಗಸ್ಟ್ 13ರಿಂದ 15ರವರೆಗೆ ಧ್ವಜವನ್ನು ಮನೆಗಳ ಮೇಲೆ ಹಾರಿಸಬಹುದು. ನ್ಯಾಯಬೆಲೆ ಅಂಗಡಿ, ಮಾಲ್, ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ಕಚೇರಿಗಳಲ್ಲಿ ಧ್ವಜಗಳು ದೊರೆಯುತ್ತವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ನಮಗೆ ಹತ್ತು ಕೋಟಿ ಧ್ವಜ ಬೇಕು. ಅದನ್ನು ಪೂರೈಕೆ ಮಾಡೋಕೆ ಆಗೋದಿಲ್ಲ. …
Read More »ರಾಜ್ಯದ ಯುವ ಜನತೆಗೆ ಸಿದ್ದರಾಮಯ್ಯ ಭಾವನಾತ್ಮಕ ಪತ್ರ
ಬೆಂಗಳೂರು: ಕರಾವಳಿಯಲ್ಲಿ ಅಮಾ ಯಕ ಯುವಕರು ವಿನಾಕಾರಣ ದುರಂತ ಸಾವನ್ನಪ್ಪುತ್ತಿದ್ದು, ಅಲ್ಲಿನ ಸಮುದಾಯಗಳು ಅತಿ ಜರೂರಾಗಿ ಜಾಗೃತಗೊಳ್ಳಬೇಕು ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕೆಟ್ಟ ಕಾರಣಕ್ಕಾಗಿ ನಮ್ಮ ಕರಾವಳಿ ರಾಜ್ಯಕ್ಕೆ ಮಾದರಿ ಯಾಗುವುದು ಬೇಡ ಎಂದೂ ಹೇಳಿದ್ದಾರೆ. ಈ ಬಗ್ಗೆ ಶುಕ್ರವಾರ ಯುವ ಜನತೆಗೆ ಭಾವನಾ ತ್ಮಕ ಪತ್ರ ಬರೆದಿರುವ ಅವರು, ಕರಾವಳಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನನ್ನನ್ನು ನೋವಿನಲ್ಲಿ ಮುಳುಗಿಸಿವೆ. ಬಾಳಿ ಬದುಕಬೇಕಾದ ಯುವಕರು ಕ್ಷುಲ್ಲಕ ಕಾರಣಗಳಿಗಾಗಿ, …
Read More »ಚುನಾವಣಾ ವರ್ಷದಲ್ಲಿ ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ: BJP ವಿರುದ್ಧ ಎಚ್ ಡಿಕೆ ಕಿಡಿ
ಬೆಂಗಳೂರು: ನಾಡಿನ ಜನರನ್ನಷ್ಟೇ ಅಲ್ಲ, ತನ್ನ ಕಾರ್ಯಕರ್ತರನ್ನೇ ರಕ್ಷಣೆ ಮಾಡಿಕೊಳ್ಳಲಾಗದ ಅಸಮರ್ಥ, ಅಸಹಾಯಕ ಬಿಜೆಪಿ ಸರಕಾರ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಿದೆ. ಆದರೆ, ಕರಾವಳಿಯಲ್ಲಿ ನಡೆದ ಎಲ್ಲ ಹತ್ಯೆಗಳನ್ನೂ ಎನ್ಐಎ ತನಿಖೆಗೆ ವಹಿಸಲು ಯಾಕೆ ಹಿಂಜರಿಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕರಾವಳಿ ಭಾಗದಲ್ಲಿ ಪ್ರತಿ ಕೊಲೆ ಬಗ್ಗೆಯೂ ಸರಕಾರಕ್ಕೆ ಮಾಹಿತಿ ಇದೆ. …
Read More »