Breaking News

ಕಾಳಿ ಸ್ವಾಮಿ ವಿರುದ್ಧ ಕಾನೂನು ಕ್ರಮ: ಎಡಿಜಿಪಿ ಅಲೋಕ್‌ ಕುಮಾರ್‌

ಬೆಂಗಳೂರು: ಪ್ರಚೋದನಕಾರಿ ಭಾಷಣ ಮಾಡಿರುವ ಹಿನ್ನೆಲೆಯಲ್ಲಿ ಕಾಳಿ ಸ್ವಾಮಿ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಕಾನೂನು ಸುವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪ್ರಚೋದನಕಾರಿ ವಿಷಯಗಳನ್ನು ಪೋಸ್ಟ್ ಮಾಡುತ್ತಿರುವುದನ್ನು ಗಮನಿಸಲಾಗಿದೆ. ನಾವು ಅಂತಹ ಪೋಸ್ಟ್‌ಗಳನ್ನು ಪರಿಶೀಲಿಸುತ್ತಿದ್ದೇವೆ. ಅಲ್ಲದೇ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ. ಪ್ರಚೋದನಕಾರಿ ಭಾಷಣ ಮಾಡಿದ ಕಾಳಿ ಸ್ವಾಮಿ ವಿರುದ್ಧ ಕಾನೂನು ಕ್ರಮ …

Read More »

ಬುಲೆಟ್ ಪ್ರೂಫ್ ಕಾರು ಖರೀದಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ನಿತ್ಯವೂ ಭಯದಿಂದಲೇ ಬದುಕುತ್ತಿದ್ದಾರಂತೆ. ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಟೀಮ್ ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ಅವರಿಗೆ ಸ್ವತಂತ್ರವಾಗಿ ಓಡಾಡಲು ಕಷ್ಟವಾಗುತ್ತಿದೆಯಂತೆ. ಜೀವ ಬೆದರಿಕೆ ಪತ್ರಗಳು, ಮಸೇಜ್ ಗಳಿಂದ ಕಿರಿಕಿರಿ ಅನುಭವಿಸುತ್ತಿರುವ ಸಲ್ಮಾನ್ ಖಾನ್ ಮೊನ್ನೆಯಷ್ಟೇ ಮುಂಬೈ ಪೊಲೀಸ್ ಕಮಿಷ್ನರ್ ಭೇಟಿ ಮಾಡಿ, ಗನ್ ಇಟ್ಟುಕೊಳ್ಳಲು ಅನುಮತಿ ಕೊಡಿ ಎಂದು ಮನವಿ ಮಾಡಿದ್ದರು. ಅಲ್ಲದೇ, ಸಲ್ಮಾನ್ ಖಾನ್ ಮನೆಗೆ ಬಿಗಿಭದ್ರತೆಯನ್ನು ಗೃಹ ಇಲಾಖೆ ಆಯೋಜನೆ …

Read More »

ಹುಕ್ಕೇರಿಯ ಬೀಳ್ಕೊಡು ಸಮಾರಂಭ ಸುದ್ದಿ.

ಹುಕ್ಕೇರಿ  ತಾಲೂಕಿನ ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯಕಾರಿ ಅಭಿಯಂತರು ಶ್ರೀ ಎ ಬಿ ಪಟ್ಟಣಶೆಟ್ಟಿ ರವರ ಕರ್ತವ್ಯ ಬೀಳ್ಕೊಡುವ ಸಮಾರಂಭದ ಕಾರ್ಯಕ್ರಮವನ್ನು ಇವತ್ತು ಹುಕ್ಕೇರಿಯಲ್ಲಿ ನಿರ್ವಹಿಸಲಾಯಿತು. ಶ್ರೀ ಪಟ್ಟಣಶೆಟ್ಟಿಯವರು ಸತತ 33 ವರ್ಷಗಳನ್ನು ತಮ್ಮ ಕಾರ್ಯದಲ್ಲಿ ತೊಡಗಿಕೊಂಡಿರುವ ಒಂದು ಅದ್ಭುತ ಕಾರ್ಯಕಾರಿ ಅಧಿಕಾರಿ ಅನ್ನಬೇಕು ಇವರು ಇವರು ಬಹಳ ಕಷ್ಟ ಕರ್ತವ್ಯಗಳಿಂದ ತಮ್ಮ ಹಂತದಲ್ಲಿರುವ ಎಲ್ಲಾ ಕಾರ್ಯ ಕೆಲಸಗಳನ್ನು ಸರಿ ಸಮೇತ ಸರಿಯಾದ ವೇಳೆಗೆ ನಿಭಾಯಿಸಿ ಇವತ್ತು ತಮ್ಮ ಕೊನೆಯ …

Read More »

ಮೂಡಲಗಿ ವಲಯಕ್ಕೆ ಮತ್ತೆರಡು ಸರಕಾರಿ ಪ್ರೌಢ ಶಾಲೆಗಳ ಮಂಜೂರು : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಹಿತಿ

  ಗೋಕಾಕ : ಮೂಡಲಗಿ ವಲಯದ ತಪಸಿ ಮತ್ತು ಗೋಸಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಪಸಿ ಮತ್ತು ಗೋಸಬಾಳ ಗ್ರಾಮಸ್ಥರ ಒತ್ತಾಸೆಯಂತೆ ಎರಡೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢ ಶಾಲೆಗಳನ್ನಾಗಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ತಮ್ಮ ಮನವಿಯ ಮೇರೆಗೆ ಮೂಡಲಗಿ ವಲಯದಲ್ಲಿರುವ ತಪಸಿ …

Read More »

ಸಾರಿಗೆ ಇಲಾಖೆಯಲ್ಲಿ ಚಾಲಕರ ನೇಮಕ, ₹ 30 ಸಾವಿರ ವೇತನ: ಸಚಿವ ಶ್ರೀರಾಮುಲು

ಬಳ್ಳಾರಿ: ಸಾರಿಗೆ ಇಲಾಖೆಯಲ್ಲಿ ಚಾಲಕರ ಕೊರತೆ ಹಿನ್ನೆಲೆ ನಿವೃತ್ತಿ ಆಗಿರುವ ಚಾಲಕರನ್ನ ಹೊರಗುತ್ತಿಗೆ ಮೂಲಕ ಫಿಜಿಕಲ್ ಫಿಟ್ನೆಸ್ ಇರುವವರನ್ನ ಪುನ: ನೇಮಕ ಮಾಡಲಾಗುವುದೆಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಾಲಕರ ಕೊರತೆ ಇದೆ. 2006-07 ರಲ್ಲಿ ನಿವೃತ್ತಿ ಆಗಿರುವ ಚಾಲಕರನ್ನ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು. ಪ್ರತಿ ತಿಂಗಳಿಗೆ 30 ಸಾವಿರ ರೂಪಾಯಿ ವೇತನ ನೀಡಲಾಗುವುದು. ಹೊಸ ಚಾಲಕರ ನೇಮಕಾತಿಗೆ …

Read More »

ಕೊಲೆ ಮಾಡಿದವರನ್ನು ಶೂಟೌಟ್‌ ಮಾಡಲಿ: ಬಸವರಾಜ ಹೊರಟ್ಟಿ

ಹಾವೇರಿ: ಕರಾವಳಿಯಲ್ಲಿ ನಡೆದ ಘಟನೆಗಳು ಇಡೀ ರಾಜ್ಯಕ್ಕೆ ನೋವು ತರುವ ಸಂಗತಿ. ಈ ಕುರಿತು ಸಿಎಂ ಬೊಮ್ಮಾಯಿ ಗಟ್ಟಿ ನಿರ್ಧಾರ ಮಾಡಬೇಕು. ಹೈದರಾಬಾದ್‌ನಲ್ಲಿ ನಮ್ಮ ಅಧಿಕಾರಿ ಸಜ್ಜನರ್‌ ಅವರು ಶೂಟೌಟ್‌ ಮಾಡಿದಂತೆ ಇಲ್ಲಿಯೂ ಆಗಬೇಕು. ಮುಂದೆ ಏನು ಆಗುತ್ತದೆ ನೋಡೋಣ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.   ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಯ ಕೊಲೆಗಳಿಗೆ ಕಡಿವಾಣ ಹಾಕಬೇಕು ಎಂದರು. ಹಿಂದೊಮ್ಮೆ ಇಸ್ರೇಲ್‌ಗೆ ಹೋಗಿದ್ದೆ. ಅಲ್ಲಿ …

Read More »

ಅಗ್ನಿವೀರರ ನೇಮಕಕ್ಕೆ ಸಿದ್ಧತೆ ಕೈಗೊಳ್ಳಿ

ಹಾವೇರಿ: ಅಗ್ನಿಪಥ ಸೇನಾ ನೇಮಕಾತಿ ಯೋಜನೆಯಡಿ ಸೆಪ್ಟೆಂಬರ್ 1ರಿಂದ 20ರವರೆಗೆ ಹಾವೇರಿ ನಗರದಲ್ಲಿ ಅಗ್ನಿವೀರರ ನೇಮಕಾತಿ ರ‍್ಯಾಲಿ ಆಯೋಜಿಸಲಾಗಿದ್ದು, ನೇಮಕಾತಿ ರ‍್ಯಾಲಿಗೆ ಅಗತ್ಯವಾದ ಮೂಲಸೌಕರ್ಯಗಳ ಸಿದ್ಧತೆಗೆ ವಿವಿಧ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.   ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಅಗ್ನಿಪಥ ನೇಮಕಾತಿ ರ‍್ಯಾಲಿ ಪೂರ್ವ ಸಿದ್ಧತೆ ಕುರಿತಂತೆ ಸೇನಾ ನೇಮಕಾತಿ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಹೊಸಮನಿ ಸಿದ್ದಪ್ಪ …

Read More »

ಆನಂದ್ ಸಿಂಗ್ ಗೆ ತವರು ಜಿಲ್ಲೆ ಉಸ್ತುವಾರಿ ನೀಡಿ ವಾಪಸ್ ಪಡೆದ ರಾಜ್ಯ ಸರ್ಕಾರ!

ಬೆಂಗಳೂರು: ರಾಜ್ಯ ಸರ್ಕಾರದಿಂದ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಆನಂದ್ ಸಿಂಗ್ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಶಿಕಲಾ ಜೊಲ್ಲೆ ನೇಮಿಸಿ ಆದೇಶಿಸಲಾಗಿತ್ತು. ಆದ್ರೇ.. ಈ ಆದೇಶವನ್ನು ರದ್ದು ಮಾಡಿಲಾಗಿದೆ. ಈ ಮೂಲಕ ಆನಂದ್ ಸಿಂಗ್ ಗೆ ಬಿಗ್ ಶಾಕ್ ನೀಡಲಾಗಿದೆ.   ರಾಜ್ಯ ಸರ್ಕಾರದಿಂದ ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿದ್ದಂತ ಆನಂದ್ ಸಿಂಗ್ ಬದಲಾವಣೆ ಮಾಡಿ, ವಿಜಯನಗರ ಜಿಲ್ಲೆಗೆ ನೇಮಿಸಿ ನಿನ್ನೆ ಆದೇಶ ಹೊರಡಿಸಲಾಗಿತ್ತು. ಕೊಪ್ಪಳ ಜಿಲ್ಲೆಗೆ ಶಶಿಕಲಾ …

Read More »

2ಎ ಮೀಸಲಾತಿಗೆ ಧರಣಿ: ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಎಚ್ಚರಿಕೆ

ಹುಬ್ಬಳ್ಳಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಆಗಸ್ಟ್‌ 22ರ ಒಳಗೆ 2(ಎ) ಮೀಸಲಾತಿ ಕಲ್ಪಿಸಬೇಕು. ಇಲ್ಲದಿದ್ದರೆ ಆಗಸ್ಟ್‌ 23ರಂದು ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಪಂಚ ಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಎಚ್ಚರಿಸಿದರು.   ಲಿಂಗಾಯತ ಪಂಚಮಸಾಲಿ ಸಮಾಜ ದಿಂದ ಶನಿವಾರ ಹುಬ್ಬಳ್ಳಿಯಲ್ಲಿ ನಡೆದ ಹಕ್ಕೊತ್ತಾಯ ರ‍್ಯಾಲಿ ಮತ್ತು ಧರಣಿಯಲ್ಲಿ ಅವರು ಮಾತನಾಡಿದರು. ‘ಮೀಸಲಾತಿ ಕಲ್ಪಿಸಿದರೆ ಮುಖ್ಯಮಂತ್ರಿಗೆ ಸನ್ಮಾನ ಮಾಡಲಾಗುವುದು. ಇಲ್ಲದಿದ್ದರೆ ಅವಮಾನ …

Read More »

ರೈಲು ಡಿಕ್ಕಿ: ಬೆಳಗಾವಿಯಲ್ಲಿ ವೃದ್ಧ ಸಾವು

ಬೆಳಗಾವಿ: ಇಲ್ಲಿನ ಟಿಳಕವಾಡಿಯ ಮೊದಲನೇ ಗೇಟ್‌ ಬಳಿ ಶನಿವಾರ, ರೈಲು ಡಿಕ್ಕಿ ಹೊಡೆದು ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಳಕವಾಡಿಯ ಸೋಮವಾರಪೇಟೆಯ ನಿವಾಸಿ ಪ್ರಭಾಕರ ಮುಕುಂದ ಕಬ್ಬೆ (86) ಮೃತಪಟ್ಟವರು. ಪ್ರಭಾಕರ ಅವರು ಟಿಳಕವಾಡಿಯಲ್ಲಿರುವ ಮೊದಲನೇ ರೈಲ್ವೆ ಗೇಟ್‌ ದಾಟುತ್ತಿದ್ದರು. ಅದೇ ಕಾಲಕ್ಕೆ ರೈಲು ವೇಗವಾಗಿ ಬಂತು. ರೈಲಿನ ಶಬ್ದ ಅವರಿಗೆ ಕೇಳಸದ ಕಾರಣ ಹಳಿಗಳಿಂದ ಬೇಗ ಸರಿಯಲಿಲ್ಲ. ನಿಧಾನವಾಗಿ ಹಳಿ ದಾಟುವಷ್ಟರಲ್ಲಿ ರೈಲು ಬಂದು ಡಿಕ್ಕಿ ಹೊಡೆಯಿತು. ತೀವ್ರ ಗಾಯಗೊಂಡ …

Read More »