Breaking News

B.I.M.S. ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಆಚರಣೆ

ಇಂದು ಸೆಪ್ಟೆಂಬರ್ 15 ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಹಿನ್ನೆಲೆ ಬೆಳಗಾವಿಯಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಆಚರಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕ್ರಿಯಾತ್ಮಕ ಕೆಲಸಗಳ ಮೂಲಕ ಭರವಸೆಯನ್ನು ಮೂಡಿಸೋಣ ಎಂಬ ಘೋಷ್ಯವಾಕ್ಯದಡಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಬಿಮ್ಸ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ …

Read More »

ಮದ್ಯದ ಅಮಲಿನಲ್ಲಿ ಹಾವು ಹಿಡಿದ ವ್ಯಕ್ತಿ..

ಬೆಳಗಾವಿ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಎಂಟು ಅಡಿ ಉದ್ದದ ಹಾವನ್ನು ಹಿಡಿದಿರುವ ಘಟನೆ ಜಿಲ್ಲೆಯ ಫಾಲಬಾವಿ ಗ್ರಾಮದಲ್ಲಿ ನಡೆದಿದೆ. ಈ ವೇಳೆ ಹಾವು ನಾಲ್ಕು ಬಾರಿ ಕಚ್ಚಿದರೂ ಅವರು ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಪಾಲಭಾವಿ ಸೊನ್ನದ್ ತೋಟದ ಅಂಗನವಾಡಿಯಲ್ಲಿ ಕಾಣಿಸಿಕೊಂಡ ಹಾವನ್ನು ಮದ್ಯದ ಅಮಲಿನಲ್ಲಿದ್ದ ರಮೇಶ್ ಬಾಗಡೆ ಎಂಬುವರು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಯಾವುದೇ ಮುಂಜಾಗ್ರತ ಕ್ರಮ ಅನುಸರಿಸದೇ ಇರುವುದರಿಂದ ರಮೇಶ್ ಅವರಗೆ ಮುಖ, ಕೆನ್ನೆ. …

Read More »

ಕರ್ನಾಟಕದ ಬೆಟ್ಟ ಕುರುಬ ST ಜಾತಿ ಪಟ್ಟಿಗೆ, ಕೇಂದ್ರ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌

ನವದೆಹಲಿ: ಕರ್ನಾಟಕದ ಬೆಟ್ಟ ಕುರುಬ ಜಾತಿ ಪಟ್ಟಿಗೆ ಸೇರಿಸಲು ಕೇಂದ್ರ ಒಪ್ಪಿಗೆ ನೀಡಿದೆ. ಇದಲ್ಲದೇ ದೇಶದ 5 ರಾಜ್ಯಗಳ ವಿವಿಧ ಜಾತಿಗಳನ್ನು ಎಸ್​​ಟಿಗೆ ಸೇರಿಸಲು ಕೇಂದ್ರ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ಇಂದು ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.   ಕರ್ನಾಟಕದಲ್ಲಿನ ಎಸ್‌ಟಿ ಪಟ್ಟಿಯಲ್ಲಿರುವ ಇತರೆ ಪಂಗಡಗಳ ವಿವರ ಕರ್ನಾಟಕ 1. ಅಡಿಯಾನ್ 2. ಬರ್ದಾ 3. ಬಾವಚ, ಬಮ್ಚಾ 4. ಭಿಲ್, ಭಿಲ್ ಗರಾಸಿಯಾ, …

Read More »

ಕೇಂದ್ರ ಸರ್ಕಾರದಿಂದ ದಸರಾ ಗಿಫ್ಟ್‌ ; ಸುಕನ್ಯಾ, ಪಿಪಿಎಫ್, ಉಳಿತಾಯ ಮತ್ತು ಅಂಚೆ ಕಛೇರಿ ಯೋಜನೆಗಳ ‘ಬಡ್ಡಿದರ’ ಹೆಚ್ಚಳ

ನವದೆಹಲಿ : ಈ ಬಾರಿಯ ದಸರಾ ಮತ್ತು ದೀಪಾವಳಿಯಲ್ಲಿ ಕೇಂದ್ರ ಸರ್ಕಾರ ಜನರಿಗೆ ಒಳ್ಳೆಯ ಸುದ್ದಿ ನೀಡಲಿದೆಯೇ? ಪೋಸ್ಟ್ ಆಫೀಸ್ ಯೋಜನೆಗಳು ಎಂದು ಕರೆಯಲ್ಪಡುವ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನ ಹೆಚ್ಚಿಸಲಾಗುವುದು ಎಂದು ವರದಿಯಾಗಿದೆ. ಪರಿಷ್ಕೃತ ದರಗಳು ಅಕ್ಟೋಬರ್ʼನಿಂದ ಜಾರಿಗೆ ಬರಲಿದೆಯಂತೆ. ಇದು ಸಂಭವಿಸಿದಲ್ಲಿ, ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಯೋಜನೆ (SSY), ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳ (NSC) …

Read More »

ಬಸ್​- ಲಾರಿ ಡಿಕ್ಕಿ: 50ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿತು ಚಾಲಕನ ಸಮಯ ಪ್ರಜ್ಞೆ

ರಾಯಚೂರು: ಸಾರಿಗೆ ಬಸ್ ಹಾಗೂ ಲಾರಿ ನಡುವೆ ಅಪಘಾತ ನಡೆದಿದ್ದು, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಸ್ವಲ್ಪದಲ್ಲಿಯೇ ಭಾರಿ ಅನಾಹುತವೊಂದು ತಪ್ಪಿದೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ತಿಂಥಣಿ ಸೇತುವೆ ಬಳಿ ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಪಲ್ಟಿಯಾಗಿ ಲಾರಿ ಕಂದಕಕ್ಕೆ ಉರುಳಿದೆ. ಬಸ್​ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಬಸ್​ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಅಡ್ಡಲಾಗಿ ಸಾರಿಗೆ ಬಸ್ ನಿಂತ ಹಿನ್ನೆಲೆಯಲ್ಲಿ ಜೇವರ್ಗಿ-ಚಾಮರಾಜನಗರ ಹೆದ್ದಾರಿ ಬಂದ್ …

Read More »

ವಿಮಾ ಕಂಪನಿಗಳನ್ನೂ ಹೈರಾಣಗೊಳಿಸಿದೆ. ಮಳೆ

ಬೆಂಗಳೂರು, ಸೆ. 15: ನಗರದಲ್ಲಿ ಕೆಲ ದಿನಗಳ ಹಿಂದೆ ಸುರಿದ ಮಹಾಮಳೆ ಮತ್ತು ಪ್ರವಾಹ ಕೆಲ ಪ್ರದೇಶಗಳಲ್ಲಿ ಜನಜೀವನವನ್ನು ಅಲುಗಾಡಿಸಿದೆ. ದೊಡ್ಡ ದೊಡ್ಡ ಲೇಔಟ್‌ಗಳಲ್ಲಿ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದ ಶ್ರೀಮಂತರೂ ನಲುಗಿ ಹೋಗಿದ್ದರು. ಎತ್ತರದ ಕಟ್ಟಡದಿಂದ ನಿಂತು ನೋಡಿದರೆ ಇಡೀ ಪ್ರದೇಶವೇ ಕೆರೆ ಎಂಬಂತೆ ಭಾಸವಾಗುತ್ತಿತ್ತು ಆವತ್ತಿನ ದಿನಗಳ ದೃಶ್ಯ.   ವಿಲ್ಲಾಗಳ ಒಳಗೆ ನೀರು ನುಗ್ಗಿದ್ದು, ಐಷಾರಾಮಿ ಕಾರುಗಳು ನೀರಿನಲ್ಲಿ ಮುಳುಗಿಹೋಗಿದ್ದು, ಇವೆಲ್ಲವೂ ರಾಷ್ಟ್ರಾದ್ಯಂತ ಗಮನ ಸೆಳೆಯಿತು. ಐಟಿ …

Read More »

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರಗೆ ಜೀವಭಯ?

ಚಾಮರಾಜನಗರ: ನಮ್ಮ ಕೈಯನ್ನೇ ಈಗ ನಂಬಕ್ಕಾಗಲ್ಲ- ಯಾರು ಏನು-ಹೇಗೆ ಅಂತ ಗೊತ್ತಿರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೀವಭಯ ಇದ್ದಂತೆ ಮಾತನಾಡಿದ ಘಟನೆ ಕೊಳ್ಳೇಗಾಲದಲ್ಲಿ ನಡೆಯಿತು. ಕೊಳ್ಳೇಗಾಲದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದಭಾರತ್ ಜೋಡೋ ಯಾತ್ರೆಯಫೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನನಗೆ ಯಾರೂ ಮಾಲೆ ಹಾಕಬೇಡಿ; ಚುನಾವಣೆಯಲ್ಲಿ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಗೆಲುವಿನ ಮಾಲೆ ಹಾಕಿ ಎಂದರು. ಮಾತು ಮುಂದುವರೆಸಿದ ಡಿಕೆಶಿ ರಾಜೀವ್ …

Read More »

ಬಿಎಸ್‌ವೈ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶ

ಬೆಂಗಳೂರು: ‘ಬಿಡಿಎ ವಸತಿ ಯೋಜನೆ ಅನುಷ್ಠಾನದಲ್ಲಿ ಲಂಚ ಪಡೆದಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.   ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಲ್ಲಿಸಿರುವ ಖಾಸಗಿ ದೂರನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ಬಿ.ಜಯಂತ ಕುಮಾರ್‌ ಬುಧವಾರ ವಿಚಾರಣೆ ನಡೆಸಿ, ‘ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಬೇಕು’ ಎಂದು ಆದೇಶಿಸಿ ವಿಚಾರಣೆ ಮುಂದೂಡಿದರು. ಪ್ರಕರಣವೇನು?: ಬಿಡಿಎ ಗುತ್ತಿಗೆದಾರ ಸೇರಿದಂತೆ …

Read More »

ಅತಿವೃಷ್ಟಿ;ಜಿಲ್ಲೆಯಲ್ಲಿ 355 ಕೋಟಿ ಹಾನಿ; ಕೃಷಿ ಕ್ಷೇತ್ರ ಅಲ್ಲೋಲ ಕಲ್ಲೋಲ

ಬೆಳಗಾವಿ:ಎರಡು ತಿಂಗಳಲ್ಲಿ ಮೂರು ಬಾರಿ ಪ್ರವಾಹ. ಇದು ಸಾಲದು ಎನ್ನುವಂತೆ ಸತತ ಮಳೆ. ಈ ಎರಡೂ ಅವಾಂತರಗಳಿಂದ ನಮ್ಮನ್ನು ಪಾರು ಮಾಡುವುದು ಸರಕಾರಕ್ಕೆ ಸಾಧ್ಯವೇ ಇಲ್ಲ. ಕೊನೆಗೆ ದೇವರೇ ನಮ್ಮನ್ನು ಕಾಪಾಡಬೇಕು. ಸರಕಾರ ನೀಡುವ ಅಲ್ಪಸ್ವಲ್ಪ ಪರಿಹಾರ ಸಮಾಧಾನಕ್ಕೂ ಸಾಲಲ್ಲ. ಇದು ಗಡಿ ಜಿಲ್ಲೆ ಬೆಳಗಾವಿಯ ರೈತ ಸಮುದಾಯದ ಈ ವರ್ಷದ ಸ್ಥಿತಿ. ಪ್ರವಾಹಕ್ಕೆ ಒಂದು ರೀತಿಯಲ್ಲಿ ಒಗ್ಗಿಕೊಂಡಿರುವ ನದಿ ಪಾತ್ರದ ಜನರಿಗೆ ಈ ಬಾರಿ ಪ್ರವಾಹದ ಜತೆಗೆ ನಿರಂತರವಾಗಿ …

Read More »

ಉಪಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು ; ಚೆನ್ನೈ ಆಸ್ಪತ್ರೆಗೆ ದಾಖಲು

ಬೆಳಗಾವಿ: ವಿಧಾನಸಭೆ ಉಪಸಭಾಪತಿ, ಸವದತ್ತಿ ಶಾಸಕ ಆನಂದ ಮಾಮನಿ ಅವರ ಆರೋಗ್ಯದಲ್ಲಿ ಕೆಲ ದಿನಗಳಿಂಸ ಏರುಪೇರು ಆಗಿದ್ದು, ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು 15-20 ದಿನಗಳಿಂದ ಆನಂದ ಮಾಮನಿ ಅವರ ಆರೋಗ್ಯ ಸರಿ ಇಲ್ಲ. ಹೀಗಾಗಿ ಇತ್ತೀಚೆಗೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾಮನಿ ಕಂಡು ಬಂದಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಸೆ.‌ 5ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೂಡಲೇ ಅಲ್ಲಿಂದ ವಾಪಸ್ …

Read More »