Breaking News

ಎಲೆಕ್ಷನ್ ಕಮಿಟಿ ಟಿಕೆಟ್ ನೀಡುವ ನಿರ್ಧಾರ ಮಾಡುತ್ತದೆ. ಇಲ್ಲಿ ಒಬ್ಬರ ನಿರ್ಧಾರ ಅಂತಿಮವಲ್ಲ: ಬಸವರಾಜ ರಾಯರೆಡ್ಡಿ

ರಾಯಚೂರು: ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದು, ಕೆಲಸ ಮಾಡದವರಿಗೆ ಟಿಕೆಟ್ ಕೊಡುವುದಿಲ್ಲ ಎನ್ನಲು ಅವರಿಗೆ ಅಧಿಕಾರವಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅಭಿಪ್ರಾಯ ಪಟ್ಟರು. ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ಸಾರ್ವತ್ರಿಕ ಚುವಾವಣೆಗೆ ಟಿಕೆಟ್ ನೀಡುವ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಲ್ಲ. ಅಧ್ಯಕ್ಷರಾಗಿ ಡಿಕೆಶಿವಕುಮಾರ್ ಗೆ ಅಧಿಕಾರವಿದ್ದು, ಅವರ ಹೇಳಿಕೆ ತಪ್ಪೇನಿಲ್ಲ. ಸಿಎಲ್ ಪಿ ನಾಯಕರಿದ್ದಾರೆ, ಎಲೆಕ್ಷನ್ ಕಮಿಟಿ …

Read More »

ಭಜನೆ , ಪೂಜೆ, ಮಾಡೋದು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಬಿಜೆಪಿ ಅವರಿಗೆ: ಸತೀಶ ಜಾರಕಿಹೊಳಿ ಲೇವಡಿ

ಪೂಜೆ, ಭಜನೆ ಮಾಡುವುದು ಬಿಟ್ಟು ಬೇರೆ ಹೆಚ್ಚಿಗೆ ಏನೂ ಬಿಜೆಪಿ ಅವರಿಗೆ ಗೊತ್ತಿಲ್ಲ. ದೇಶದ ಇತಿಹಾಸವನ್ನು ಮೊದಲು ಇವರು ತಿಳಿದುಕೊಳ್ಳಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲೇವಡಿ ಮಾಡಿದ್ದಾರೆ. ಇಂಡಿಯಾ ಪಾಕಿಸ್ತಾನ ಇಬ್ಬಾಗ ಮಾಡಿದ್ದ ಕಾಂಗ್ರೆಸ್‍ನವರು ಇದೀಗ ಭಾರತ್ ಜೋಡೋ ಮಾಡ್ತಿದ್ದಾರೆ ಎಂಬ ಬಿಜೆಪಿ ಟೀಕೆಗೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ ಅದು ಕಾಂಗ್ರೆಸ್ ಮಾಡಿದ್ದಲ್ಲ, ಬ್ರಿಟಿಷರೇ ಮಾಡಿದ್ದು. ಈ ಇತಿಹಾಸ ಅವರಿಗೆ ಗೊತ್ತಿಲ್ಲ. …

Read More »

ಬಿಎಸ್ವೈ ವಿರುದ್ದ FIR ಗುಮ್ಮ: ಒಂದು ಕಲ್ಲಿಗೆ ಅಮಿತ್ ಶಾ ಹೊಡೆದ 2 ಏಟು?

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ದ ಲೋಕಾಯುಕ್ತದಲ್ಲಿ FIR ದಾಖಲಾಗಿದೆ. ಇದರ ಜೊತೆಗೆ, ಅವರ ಪುತ್ರ ವಿಜಯೇಂದ್ರ ಮತ್ತು ತಾನೇ ಆಪರೇಶನ್ ಕಮಲದ ಮೂಲಕ ಕರೆದುಕೊಂಡು ಬಂದಿದ್ದ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ವಿರುದ್ದ ಕೂಡಾ. ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಈ ವಿದ್ಯಮಾನದ ಹಿಂದೆ ರಾಜಕೀಯ ಸಮೀಕರಣ ಏನಿರಬಹುದು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ವರಿಷ್ಠರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯಲು ಏನಾದರೂ ಹೊರಟಿದ್ದಾರಾ?   ಬಿಎಸ್ವೈ …

Read More »

’40 ಪರ್ಸೆಂಟ್ ಕಮಿಷನ್ ಸಿಎಂಗೆ ಸುಸ್ವಾಗತ’: ಬ್ಯಾನರ್ ಹಾಕಿ ಕರ್ನಾಟಕ ಮುಖ್ಯಮಂತ್ರಿ ಗುರಿಯಾಗಿಸಿದ ಟಿಆರ್ ಎಸ್

ಹೈದರಾಬಾದ್: ಸಿಕಂದರಾಬಾದ್ ನ ಪರೇಡ್ ಮೈದಾನದ ಬಳಿ ‘40% ಕಮಿಷನ್ ಸಿಎಂಗೆ ಸುಸ್ವಾಗತ’ ಎಂಬ ಬ್ಯಾನರ್ ಹಾಕುವ ಮೂಲಕ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣಕ್ಕೆ ಭೇಟಿ ನೀಡಿದ್ದು, ಇಂದು ಪರೇಡ್ ಮೈದಾನದಲ್ಲಿ ಹೈದರಾಬಾದ್ ಲಿಬರೇಶನ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ಸಮಯದಲ್ಲಿ ಈ ಬ್ಯಾನರ್ ಹಾಕಲಾಗಿದೆ ಎಂದು ತಿಳಿದು …

Read More »

ಶಾಲೆಗಳಿಗೆ ದಸರಾ ರಜೆ ಅವಧಿ ಬದಲಾವಣೆ : ಮಹತ್ವದ ಆದೇಶ

ಬೆಂಗಳೂರು : ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಶಾಲೆಗಳಿಗೆ ರಜೆ ಅವಧಿಯಲ್ಲಿ (Dussehra School Holiday change) ಮಾರ್ಪಾಡು ಮಾಡಲಾಗಿದೆ. ಸಪ್ಟೆಂಬರ್‌ 26ರಿಂದ ಅಕ್ಟೋಬರ್‌ 9 ವರೆಗೆ ದಸರಾ ರಜೆ ಘೋಷಣೆ ಮಾಡಿ ಶಿಕ್ಷಣ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದೆ.   ರಾಜ್ಯದಲ್ಲಿ ಅಕ್ಟೋಬರ್‌ 3ರಿಂದ ದಸರಾ ರಜೆ ನೀಡುವಂತೆ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿತ್ತು. ಆದ್ರೆ ಈ ಬಾರಿ ಸಪ್ಟೆಂಬರ್‌ 26 ರಿಂದ ನಾಡಹಬ್ಬ ದಸರಾ ಆರಂಭವಾಗಲಿದೆ. ಈ …

Read More »

ಊಟ ಸಿಗದೆ ಪರದಾಟ; ತಟ್ಟೆ ಎಸೆದು ಆಕ್ರೋಶ

ಕಲಬುರಗಿ: ಇಲ್ಲಿನ ನೂತನ ವಿದ್ಯಾಲಯ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಪ್ರಯುಕ್ತ ಕೆಕೆಆರ್‌ಡಿಬಿ ಮತ್ತು ಜಿಲ್ಲಾಡಳಿತದಿಂದ ಶನಿವಾರ ನಡೆ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಬಂದ ಸಾವಿರಾರು ಜನರು ತಿಂಡಿ, ಊಟ ಸಿಗದೆ ಪರದಾಡಿದರು. ನಗರ ಸೇರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಸುಮಾರು 40 ಸಾವಿರ ಜನರು ಬಂದಿದ್ದರು. ಉಚಿತ ಬಸ್ ವ್ಯವಸ್ಥೆಯಿದ್ದ ಕಾರಣ ವಿದ್ಯಾರ್ಥಿಗಳು ಸೇರಿ ಬಿಜೆಪಿ ಕಾರ್ಯಕರ್ತರು, ವೃದ್ಧರು ಮಹಿಳೆಯರು ತಮ್ಮ ಮಕ್ಕಳೊಂದಿಗೆ ಬಂದಿದ್ದರು. ಕಾರ್ಯಕ್ರಮದಲ್ಲಿನ ಊಟದ …

Read More »

ಪತಿ ಜತೆ ಆಟೋದಲ್ಲಿ ಬಂದವಳು, ಗಂಡ ಬಾಡಿಗೆ ಕೊಡಲು ಚಿಲ್ಲರೆ ತರುವಷ್ಟರಲ್ಲಿ ಮಗನೊಂದಿಗೆ ನಾಪತ್ತೆ!; ಆಗಿದ್ದೇನು?

ಬೆಳಗಾವಿ: ಆಟೋದಲ್ಲಿ ಪತಿ ಜತೆಗೇ ಬಂದಿದ್ದ ಪತ್ನಿ, ಬಳಿಕ ಬಾಡಿಗೆ ಹಣ ಕೊಡಲು ಗಂಡ ಚಿಲ್ಲರೆ ತರಲು ಹೋಗಿ ಬರುವಷ್ಟರಲ್ಲಿ ಆಕೆ ಮಗನೊಂದಿಗೆ ಕಣ್ಮರೆಯಾಗಿದ್ದಾಳೆ. ಇಂಥದ್ದೊಂದು ಪ್ರಕರಣ ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಈ ಪ್ರಕರಣ ನಡೆದಿದ್ದು, ರುದ್ರವ್ವ ಬಸವರಾಜ್ ಬನ್ನೂರು (30) ಮತ್ತು ಆಕೆಯ ಪುತ್ರ ಶಿವಲಿಂಗಪ್ಪ ಬನ್ನೂರ (2) ನಾಪತ್ತೆಯಾದವರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರುದ್ರವ್ವ ತನ್ನ ಎರಡು ವರ್ಷದ ಪುತ್ರನ ಜೊತೆಗೆ ಇಡಗುಂಡಿಯಲ್ಲಿನ …

Read More »

ಸ್ಪಂದನ ಸೂಪರ್ ಹಾಸ್ಪಿಟಲ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ

ಇಂದು ದಿನಾಂಕ 17/09/2022 ರಂದು ಜ್ಯೋತಿ ನಗರ, ಗಣೇಶಪೂರ ಬೆಳಗಾವಿ, ಇಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಹಾಗೂ ಸ್ಪಂದನ ಸುಪರ ಸ್ಪೆಶಾಲಿಸ್ಟ ಹಾಸ್ಪಿಟಲ್ ವತಿಯಿಂದ್ ಉಚಿತ್ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗಾವಿಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಗೋವಿಂದ ಕಾರ್ಜೋಳ ಇವರ ಅಮೃತ ಹಸ್ತದಿಂದ ನೆರೆವೆರಿತು. ಕಾರ್ಯಕ್ರಮದಲ್ಲಿ ಬೆಳಗಾವಿಯ ಸಂಸದರಾದ ಶ್ರೀಮತಿ. …

Read More »

ಸರ್ಕಾರಿ ನೌಕರರಿಗೆ ಬಿಗ್ ಶಾಕ್

ಬೆಂಗಳೂರು: ರಾಜ್ಯ ಸರ್ಕಾರದ ಅನೇಕ ಇಲಾಖೆಗಳ ನೌಕರರ ಅಂತರ್ ಜಿಲ್ಲಾ ವರ್ಗಾವಣೆಗೆ ಇದ್ದ ಅವಕಾಶಕ್ಕೆ ಕತ್ತರಿ ಬಿದ್ದಿದೆ. ಕೆಲವು ಇಲಾಖೆಗಳ ಸಿ ಮತ್ತು ಡಿ ದರ್ಜೆಯ ನೌಕರರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ 16(ಎ) ರದ್ದುಗೊಳಿಸಲಾಗಿದ್ದು, ಇದರಿಂದಾಗಿ ನಿವೃತ್ತಿಯೊಳಗೆ ಬಯಸಿದ ಜಿಲ್ಲೆಗೆ ಅಥವಾ ಸ್ವಂತ ಜಿಲ್ಲೆಗೆ ವರ್ಗಾವಣೆ ಪಡೆಯುವ ಅವಕಾಶದಿಂದ ವಂಚಿತರಾಗುವಂತಾಗಿದೆ.   ಅಬಕಾರಿ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ ಇಲಾಖೆಗಳಲ್ಲಿನ ಸಿಬ್ಬಂದಿಗೆ ಅಂತರ ಜಿಲ್ಲಾ ವರ್ಗಾವಣೆಗೆ ಇದ್ದ …

Read More »

2A ಮೀಸಲಾತಿ ವಿಳಂಬ 5 ಸಾವಿರಕ್ಕೂ ಹೆಚ್ಚು ಜನ ಬೊಮ್ಮಾಯಿನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ: ರಮೇಶ್ ಗೌಡ ಪಾಟೀಲ್

  ಅಥಣಿ  :ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವಂತೆ ಹಲವು ದಶಕಗಳ ಹೋರಾಟ ಇದಾಗಿದೆ, ಆದರೆ ಸರ್ಕಾರಗಳು ಭರವಸೆ ನೀಡುತ್ತಾ ಬಂದಿದೆ, ಇದನ್ನು ಖಂಡಿಸಿ ನಾವು ಬರುವ ದಿನಾಂಕ ಇಪ್ಪತ್ತರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಅಥಣಿ ತಾಲೂಕು ಪಂಚಮಸಾಲಿ ಸಂಘಟನೆಯ ಅಧ್ಯಕ್ಷರಾದ ರಮೇಶ್ ಗೌಡ ಪಾಟೀಲ್ ಅವರು ಹೇಳಿದರು. ಅವರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಪಂಚಮಸಾಲಿ ಸಮಾಜ …

Read More »