ಬೆಳಗಾವಿ: ಧಾರಾಕಾರ ಮಳೆ ಹಿನ್ನೆಲೆ ಮಾಡಮಗೇರಿ ಗ್ರಾಮದಲ್ಲಿ ಮನೆ ಕುಸಿತ ಆಗಿ ತಾಯಿ ಮಗು ಮೃತಪಟ್ಟಿದ್ದ ಕುಟುಂಬಕ್ಕೆ ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ ಮಹಾಂತೇಶ ಮಠದ ಅವರು ಹತ್ತು ಲಕ್ಷ ರೂ. ಪರಿಹಾರ ವಿತರಿಸಿದರು. ಕಳೆದ ಶನಿವಾರ ಉಂಟಾದ ಭೀಕರ ಮಳೆಗೆ ಯರಗಟ್ಟಿ ತಾಲೂಕಿನ ಮಾಗಮಗೇರಿ ಗ್ರಾಮದ ಮಹಾದೇವ ಎಂಬುವವರ ಮನೆ ಕುಸಿದು ಮಗ ಪ್ರಜ್ವಲ್ ಮಹಾದೇವ ಬಾಗಿಲದ (5) ಹಾಗೂ ಪತ್ನಿ ಯಲ್ಲವ್ವ ಮಹಾದೇವ ಬಾಗಿಲದ (40) ಸ್ಥಳದಲ್ಲೇ …
Read More »ಬೆಳಗಾವಿ: ನಿಷೇಧಿತ ಪಿಎಫ್ಐ ಕಾರ್ಯಕರ್ತರಿಗೆ ಷರತ್ತುಬದ್ಧ ಜಾಮೀನು ಮಂಜೂರು
ಬೆಳಗಾವಿ: ಎಸ್‌ಡಿಪಿಐ ಬೆಳಗಾವಿ ಜಿಲ್ಲಾಧ್ಯಕ್ಷ ಹಾಗೂ ನಿಷೇಧಿತ ಪಿಎಫ್ಐನ 6 ಮಂದಿ ಕಾರ್ಯಕರ್ತರಿಗೆ ಒಂದು ವಾರದ ಬಳಿಕ ಜಾಮೀನು ಸಿಕ್ಕಿದೆ.ಒಟ್ಟು 7 ಜನರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾಡಿ ಆದೇಶ ಹೊರಡಿಸಿದ್ದಾರೆ. ಎಸ್‌ಡಿಪಿಐ ಬೆಳಗಾವಿ ಜಿಲ್ಲಾಧ್ಯಕ್ಷ ಅಬೀದ್ ಖಾನ್ ಕಡೋಲಿ, ನಿಷೇಧಿತ ಪಿಎಫ್ಐ ಕಾರ್ಯಕರ್ತರಾದ ಝಕೀವುಲ್ಲಾ ಫೈಜಿ, ಸಲಾವುದ್ದೀನ್ ಖಿಲೆವಾಲೆ, ಬದ್ರುದ್ದೀನ್ ಪಟೇಲ್, ಸಮೀವುಲ್ಲಾ ಪೀರ್ಜಾದೆ, ಜಹೀರ್ ಘೀವಾಲೆ ರೆಹಾನ್ …
Read More »ಹುಬ್ಬಳ್ಳಿಯಲ್ಲಿ ರಸ್ತೆ ಸಮಸ್ಯೆ ಕಂಡು ಧರೆಗಿಳಿದ ದೇವತೆ..!
ಹುಬ್ಬಳ್ಳಿ(ಧಾರವಾಡ): ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ರಸ್ತೆಗಳ ಪರಿಸ್ಥಿತಿ ನೋಡಿದರೆ ಭಯ ಮೂಡುವಂತಿದೆ. ಇಲ್ಲಿನ ರಸ್ತೆಗಳ ದುಸ್ಥಿತಿ ಬಗ್ಗೆ ಬಾಲಕಿಯೊಬ್ಬಳು ವಿನೂತನ ರೀತಿಯಲ್ಲಿ ಸಮಾಜಕ್ಕೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾಳೆ. ಹುಬ್ಬಳ್ಳಿಯ ಹರ್ಷಿತಾ ಮೆಹರವಾಡೆ ಎಂಬ ಬಾಲಕಿ ರಾಜಧಾನಿ ಕಾಲೋನಿಯಲ್ಲಿರುವ ರಸ್ತೆ ಅವ್ಯವಸ್ಥೆ ಕುರಿತು ದೇವತೆ ವೇಷದಲ್ಲಿ ಸಾಕ್ಷ್ಯಚಿತ್ರದ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆದಿದ್ದಾಳೆ. ದಸರಾ ಸಂದರ್ಭದಲ್ಲಿ ಹದಗೆಟ್ಟ ರಸ್ತೆಗಳ ಪರಿಸ್ಥಿತಿಯ ವಿಡಂಬನಾತ್ಮಕ ಪ್ರದರ್ಶನ ಮಾಡಲಾಗಿದೆ. ದುರ್ಗಾ ದೇವಿ ವೇಶ ಧರಿಸಿರುವ ಬಾಲಕಿ …
Read More »F,S,L, ಅಧಿಕಾರಿ ಆತ್ಮಹತ್ಯೆ; ಕ್ಷಮಿಸಿ ಎಂದು ವಿಚ್ಛೇದಿತ ಪತಿಗೆ ಡೆತ್ನೋಟ್ ಮೂಲಕ ವಿನಂತಿ
ಬೆಂಗಳೂರು: ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪಾರ್ಟ್ಮೆಂಟ್ವೊಂದರಲ್ಲಿ ಈ ಪ್ರಕರಣ ನಡೆದಿದ್ದು, ಸ್ಥಳದಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದೆ. ಅದರಲ್ಲಿ ಕ್ಷಮೆಯನ್ನೂ ಕೋರಲಾಗಿದೆ. ಎಫ್ಎಸ್ಎಲ್ ಅಧಿಕಾರಿ ಶ್ರುತಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಈಕೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದುಕೊಂಡಿದ್ದರು. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈಕೆ ಇತ್ತೀಚೆಗೆ ವಿಚ್ಛೇದನ ಪಡೆದು ಪತಿಯಿಂದ ದೂರವಿದ್ದರು. ಆದರೆ ತನ್ನನ್ನು …
Read More »ಮನೆಯಲ್ಲಿಯೇ ಶವವಾಗಿ ಪತ್ತೆಯಾದ ಹಿರಿಯ ಪೊಲೀಸ್ ಅಧಿಕಾರಿ; ಕೆಲಸಗಾರನಿಂದಲೇ ಹತ್ಯೆಯಾಗಿರುವ ಶಂಕೆ
ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ, ಕಾರಾಗೃಹಗಳ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಜಮ್ಮುವಿನಲ್ಲಿರುವ ತಮ್ಮ ಮನೆಯಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕುತ್ತಿಗೆ ಸೀಳಿದ ಹಾಗೂ ಸುಟ್ಟ ಗಾಯಗಳ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದ್ದು, ಹೀಗಾಗಿ ಹತ್ಯೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆ ನಡೆದ ಬಳಿಕ ಹೇಮಂತ್ ಕುಮಾರ್ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಯಾಸಿರ್ ಎಂಬಾತ ನಾಪತ್ತೆಯಾಗಿದ್ದು, ಆತನೇ ಈ ಕೊಲೆ ಮಾಡಿರಬಹುದು ಎಂಬ ಅನುಮಾನದ ಮೇರೆಗೆ …
Read More »ಸ್ವಂತ ಖರ್ಚಿನಲ್ಲಿ ‘ರೈತ’ ರನ್ನು ಇಸ್ರೇಲ್ ಪ್ರವಾಸಕ್ಕೆ ಕಳಿಸಲು ಮುಂದಾದ ವಿಧಾನ ಪರಿಷತ್ ಮಾಜಿ ಸದಸ್ಯ.!
ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ತಮ್ಮ ಸ್ವಂತ ಖರ್ಚಿನಲ್ಲಿ ಚಿತ್ರದುರ್ಗ ತಾಲೂಕಿನ ಆಯ್ದ 50 ರೈತರಿಗೆ ಇಸ್ರೇಲ್ ಪ್ರವಾಸ ಕಲ್ಪಿಸಲು ಮುಂದಾಗಿದ್ದಾರೆ. ಒಂದು ವಾರಗಳ ಕಾಲ ‘ಸುವರ್ಣ ರೈತ – ದುರ್ಗಾ ಟು ಇಸ್ರೇಲ್’ ಹೆಸರಿನಡಿ ಈ ಪ್ರವಾಸ ಕಾರ್ಯಕ್ರಮ ನಡೆಯಲಿದ್ದು, ಪಕ್ಷಾತೀತವಾಗಿ ರೈತರನ್ನು ಆಯ್ಕೆ ಮಾಡುವ ಸಲುವಾಗಿ ಏಳು ಜನರಿರುವ ಸಮಿತಿ ರಚಿಸಲಾಗುತ್ತಿದೆ. ಮಹಿಳೆಯರನ್ನೂ ಒಳಗೊಂಡಂತೆ 40 ವರ್ಷದೊಳಗಿನ ಐವತ್ತು ರೈತರನ್ನು ಇಸ್ರೇಲ್ ಗೆ …
Read More »ಅನ್ಯ ಜಾತಿ ಯುವಕನ ಜತೆ ಮಗಳು ಪರಾರಿ: ಮರ್ಯಾದೆಗೆ ಅಂಜಿ ಸಾವಿನ ಹಾದಿ ಹಿಡಿದ ತಂದೆ, ತಾಯಿ, ಸಹೋದರ
ಚಿಕ್ಕಬಳ್ಳಾಪುರ: ಮಾನ-ಮರ್ಯಾದೆಗೆ ಹೆದರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ. ತಾಯಿ ಸರೋಜಮ್ಮ, ತಂದೆ ಶ್ರೀರಾಮಪ್ಪ ಹಾಗೂ ಮಗ ಮನೋಜ್ ಮೃತ ದುರ್ದೈವಿಗಳು. ಹೆತ್ತ ಮಗಳು ಅನ್ಯ ಜಾತಿಯ ಯುವಕನ ಜೊತೆ ಪರಾರಿಯಾಗಿದ್ದಕ್ಕೆ ಮನನೊಂದು ಸಾವಿನ ಹಾದಿ ಹಿಡಿದಿದ್ದಾರೆ. 26 ವರ್ಷದ ಮಗಳು ಅರ್ಚನಾ, ನಾರಾಯಣಸ್ವಾಮಿ ಎಂಬಾತನ ಜೊತೆ ಪರಾರಿಯಾಗಿದ್ದಾಳೆ. ಯುವಕ ಅನ್ಯಜಾತಿಯವನಾಗಿರುವುದರಿಂದ ಊರಿನವರಿಂದ ನಿಂದನೆ ಒಳಗಾಗಬಹುದು ಎಂದು ಹೆದರಿ …
Read More »‘ಆದಿಪುರುಷ್’ ಟೀಸರ್ ನೋಡಿ ಓಂ ರಾವುತ್ ಮೇಲೆ ಪ್ರಭಾಸ್ ಗರಂ?
ಆದಿಪುರುಷ್’ ಟೀಸರ್ ನೋಡಿ ಸಾಕಷ್ಟು ಜನ ನಿರ್ದೇಶಕ ಓಂ ರಾವುತ್ ಮೇಲೆ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಟೀಸರ್ ರಿಲೀಸ್ ಈವೆಂಟ್ ನಂತರ ಸ್ವತಃ ಪ್ರಭಾಸ್ ಕೂಡ ನಿರ್ದೇಶಕರ ಮೇಲೆ ಗರಂ ಆಗಿದ್ದರು ಎನ್ನಲಾಗ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾನುವಾರಷ್ಟೇ ಅಯೋಧ್ಯೆಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ‘ಆದಿಪುರುಷ್’ ಸಿನಿಮಾ ಟೀಸರ್ ಲಾಂಚ್ ಮಾಡಲಾಗಿತ್ತು. ರಾಮಾಯಣ ಕಾವ್ಯವನ್ನು ಆಧರಿಸಿ ಈ ಮೋಷನ್ ಕ್ಯಾಪ್ಚರ್ ಆನಿಮೇಷನ್ ಸಿನಿಮಾ ಕಟ್ಟಿಕೊಡಲಾಗ್ತಿದೆ. …
Read More »ಉತ್ತರ ಕರ್ನಾಟಕಕ್ಕೆ ಐಟಿ ಕಂಪೆನಿ ತರಲು ಯತ್ನ: ಅಶ್ವತ್ಥನಾರಾಯಣ
ಹುಬ್ಬಳ್ಳಿ: ಉದ್ಯಮಕ್ಕೆ ಹೂಡಿಕೆ ಮಾಡಲು ಬೇರೆ ಬೇರೆ ರಾಜ್ಯಗಳಿಂದ ಕಂಪೆನಿಗಳು ಬರುತ್ತಿವೆ. ರಾಜ್ಯಕ್ಕೆ ಬರುವ ಐಟಿ ಕಂಪೆನಿಗಳನ್ನು ಉತ್ತರ ಕರ್ನಾಟಕಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದು ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಅಶ್ವತ್ಥನಾರಾಯಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಕಲಿಕೆಗೆ ಒತ್ತು ನೀಡಲಾಗಿದೆ. ಆಡ್ಯಮ್ ಪ್ರೋಗ್ರಾಮ್, ಮೈಕ್ರೊಸೈಟ್, ಮೊಡ್ರಿಂಗ್ ಸಹಿತ 1200ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಅಧ್ಯಯನದಲ್ಲಿ …
Read More »ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತ ಸಾಗರ
ಸವದತ್ತಿ: ಜಗನ್ಮಾತೆ ನಿತ್ಯ ಪೂಜಿತೆ ಏಳುಕೊಳ್ಳದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಸಡಗರ ಅದ್ದೂರಿಯಿಂದ ವಿಜ್ರಂಭಿಸುತ್ತಿದೆ. 7 ನೇ ದಿನ ರವಿವಾರ ರಾಜ್ಯ ಸೇರಿ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನಾಶೀರ್ವಾದ ಪಡೆದು ಪುನೀತರಾದರು. ಏಳುಕೊಳ್ಳಗಳ ನಾಡಿನಲ್ಲಿ ನೆಲೆ ನಿಂತ ಯಲ್ಲಮ್ಮ ದೇವಿ ದರ್ಶನಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಘಟಸ್ಥಾಪನೆಯ 5 ನೇ ದಿನ ಶುಕ್ರವಾರ ಭಕ್ತರ ಆಗಮನ ಗಣನೀಯವಾಗಿ ಏರಿಕೆ ಕಂಡಿತ್ತು. 7 ನೇ ದಿನ ರವಿವಾರ …
Read More »
Laxmi News 24×7