ಅಕ್ಟೋಬರ್ 10 ರಂದು ಕೊಲ್ಲಾಪುರ ಜಿಲ್ಲೆಯ ಕನ್ನೇರಿ ಕಾಡಸಿದ್ದೇಶ್ವರ ಮಠದಲ್ಲಿ ದೇಶೀಯ ತಳಿಗಳ ಗೋವು ಪ್ರದರ್ಶನ,ಮತ್ತು ಶ್ವಾನ ಪಾಲನಾ ಮತ್ತು ಚಿಕಿತ್ಸಾ ಕೇಂದ್ರದ ಉದ್ಘಾಟನೆ ನಡೆಲಿದೆ. ಹೌದು. ಇಂತಹ ವಿಶೇಷ ವಾದ ಪ್ರಯತ್ನ ನಡೆತ್ತಿರುವುದು ಕೊಲ್ಲಾಪುರ ಜಿಲ್ಲೆಯ ಕನ್ನೇರಿ ಕಾಡಸಿದ್ದೇಶ್ವರ ಮಠದಲ್ಲಿಿಿ ಇದೇ ತಿಂಗಳು ಅಕ್ಟೋಬರ್ 10 ರಂದು ಜರುಗಲಿರುವ ನಮ್ಮ ದೇಶದ ಎಲ್ಲಾ ದೇಶೀಯ ತಳಿಗಳ ಗೋವು ಪ್ರದರ್ಶನ, ಶ್ವಾನ ಪಾಲನಾ ಮತ್ತು ಚಿಕಿತ್ಸಾ ಕೇಂದ್ರ ಮತ್ತು ಬೀದಿನಾಯಿಗಳಿಗೆ …
Read More »ಟನ್ ಕಬ್ಬಿಗೆ 2800 ರೂ. ದರ
ಕಾಗವಾಡ: ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್ ಕಬ್ಬಿಗೆ 2800 ರೂ. ನೀಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೆಂಪವಾಡದ ಅಥಣಿ ಶುಗರ್ಸ್ ಲಿ., ಸಕ್ಕರೆ ಕಾರ್ಖಾನೆ ಅಧ್ಯಕ್ಷರು ಹಾಗೂ ಶಾಸಕ ಶ್ರೀಮಂತ ಪಾಟೀಲ ಘೋಷಣೆ ಮಾಡಿದರು. ಬುಧವಾರ ಅಥಣಿ ಶುಗರ್ಸ್ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಅವರು ಮಾತನಾಡಿದರು. 2022-23ನೇ ಸಾಲಿನ ಹಂಗಾಮಿನಲ್ಲಿ ನಮ್ಮ ಕಾರ್ಖಾನೆ 20 ಲಕ್ಷ ಟನ್ ಕಬ್ಬು …
Read More »ಸದ್ಯದಲ್ಲೇ ‘ಬಸ್ ಯಾತ್ರೆ’ಗೆ ದಿನಾಂಕ ನಿಗದಿ: ಮಂಡ್ಯದಲ್ಲಿ ಸಿದ್ದರಾಮಯ್ಯ ಘೋಷಣೆ
ಮಂಡ್ಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ಬಹು ನಿರೀಕ್ಷಿತ ಬಸ್ ಯಾತ್ರೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲು ಕಾಂಗ್ರೆಸ್ ನಿರ್ಧರಿಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂಡ್ಯದಲ್ಲಿ ಈ ವಿಚಾರ ತಿಳಿಸಿದ್ದಾರೆ. ರಥಯಾತ್ರೆಯನ್ನು ಈ ಹಿಂದೆ ಅಕ್ಟೋಬರ್ ಅಥವಾ ನವೆಂಬರ್ ಮಾಸಾಂತ್ಯದಲ್ಲಿ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಕೆಲ ಕಾರಣಗಳಿಂದ ದಿನಾಂಕ ನಿಗದಿಗೊಳಿಸಲು ವಿಳಂಬವಾಗಿದೆ. ಬಸ್ ಯಾತ್ರೆ ಕುರಿತು ಪೂರ್ವಭಾವಿ ಸಭೆ ಈ ತಿಂಗಳು ಕೊನೆಯಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ರಾಜ್ಯದ …
Read More »ಸಹೋದರಿಯ ಗಂಡನನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಸಹೋದರರು
ಕಲಬುರಗಿ: ನಗರದ ಸಂತೋಷ್ ಕಾಲೊನಿಯಲ್ಲಿ ವಿಜಯದಶಮಿ ಹಬ್ಬದಂದು ಸಂಜೆ ಬನ್ನಿ ಬದಲಾಯಿಸಿಕೊಳ್ಳುವ ಸಂದರ್ಭದಲ್ಲಿಯೇ ಅಣ್ಣ ತಮ್ಮಂದಿರು, ಸಹೋದರಿಯ ಗಂಡನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಸಂತೋಷ್ ಕಾಲೊನಿಯ ಲಕ್ಷ್ಮೀ ಕಾಂತ್ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ದಸರಾ ಹಬ್ಬದ ಅಂಗವಾಗಿ ಬನ್ನಿ ಬಂಗಾರ ಕೊಡಲು ಮನೆಗೆ ಬಂದ ಹೆಂಡತಿಯ ಸಹೋದರರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಶಿವಕಾಂತ್, ಪ್ರಶಾಂತ್ ಎಂಬುವವರು ಈ ಕೊಲೆ ಮಾಡಿದ್ದು, ಕೊಲೆಯಾದ ಲಕ್ಷ್ಮಿಪುತ್ರನ …
Read More »ಅಕ್ಟೋಬರ್ 28 ರಂದು ವಿನೂತನ ಕೋಟಿ ಕಂಠ ಗಾಯನ: ಸಚಿವ ಸುನಿಲ್ ಕುಮಾರ್
ಬೆಂಗಳೂರು: ರಾಜ್ಯದ ಸಾಂಸ್ಕೃತಿಕ ಲೋಕದಲ್ಲೇ ವಿನೂತನವಾದ ಕೋಟಿ ಕಂಠ ಗಾಯನ ಎಂಬ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದು ಅಕ್ಟೋಬರ್ 28ರಂದು ನಾಡಿನಾದ್ಯಂತ ಏಕಕಾಲದಲ್ಲಿ ಕನ್ನಡದ ಕವಿಗಳ ಜನಪ್ರಿಯ ಗೀತೆಗಳನ್ನು ಕೋಟಿ ಕಂಠಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕ್ರತಿ ಹಾಗೂ ಇಂಧನ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ಕಳೆದ ವರ್ಷ ‘ಮಾತಾಡ್ ಮಾತಾಡ್ ಕನ್ನಡ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ‘ಲಕ್ಷಕಂಠ ಗಾಯನ’ಕ್ಕೆ ಈಗಾಗಲೇ ನಾಡಿನಾದ್ಯಂತ …
Read More »ಲೋಕಾರ್ಪಣೆಗೊಂಡು ವಾರದ ಒಳಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಾನಿ
ಗಾಂಧಿನಗರ : ಸೆಪ್ಟೆಂಬರ್ 30 ರಂದು ಲೋಕಾರ್ಪಣೆ ಗೊಳಿಸಲಾಗಿದ್ದ ಮುಂಬಯಿ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ರೋಡ್ ವಕ್ತಾರರ ಪ್ರಕಾರ, ಗೈರತ್‌ಪುರ ಮತ್ತು ವತ್ವಾ ನಿಲ್ದಾಣಗಳ ನಡುವೆ ಗುರುವಾರ ಬೆಳಗ್ಗೆ 11.20ರ ಸುಮಾರಿಗೆ ಈ ಘಟನೆ ನಡೆದಿದೆ. ಎಮ್ಮೆಗಳ ಹಿಂಡು ಢಿಕ್ಕಿಯಾದ ನಂತರ, ಇಂಜಿನ್ ನ ಮುಂಭಾಗಕ್ಕೆ ಹಾನಿಯಾಗಿದೆ. “ಮೂರರಿಂದ ನಾಲ್ಕು ಎಮ್ಮೆಗಳು ಮುಂಬಯಿ -ಗಾಂಧಿನಗರದ ವಂದೇ ಭಾರತ್ ದಾರಿಯಲ್ಲಿ ಇದ್ದಕ್ಕಿದ್ದಂತೆ …
Read More »ಹಳೆ ದ್ವೇಷದ ಹಿನ್ನೆಲೆಇಬ್ಬರು ಯುವಕರ ಕೊಲೆ
ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆ ಎದುರು ಗುರುವಾರ ರಾತ್ರಿ ಹಳೆಯ ದ್ವೇಷ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸುಳೇಭಾವಿ ಗ್ರಾಮದ ರಣಧೀರ ಮಹೇಶ ಅಲಿಯಾಸ್ ರಾಮಚಂದ್ರ ಮುರಾರಿ(26) ಹಾಗೂ ಪ್ರಕಾಶ ನಿಂಗಪ್ಪ ಹುಂಕರಿ ಪಾಟೀಲ(24) ಎಂಬ ಯುವಕರನ್ನು ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಕೊಲೆ ಮಾಡಲಾಗಿದೆ. ಶಿವಾಜಿಮಹಾರಾಜರ ಪ್ರತಿಮೆ ಎದುರು ಕೊಲೆ ಮಾಡಲಾಗಿದೆ. ಕೊಲೆ …
Read More »ಹುಬ್ಬಳ್ಳಿಯನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ರು: ಚೈತ್ರ ಕುಂದಾಪುರ
ಧಾರವಾಡ : ಹುಬ್ಬಳ್ಳಿಯಲ್ಲಿ ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದರು. ರಾಜ್ಯದಲ್ಲಿ ಕೆಲವು ಕಡೆ ಮಿನಿ ಪಾಕಿಸ್ತಾನ ಮಾಡುವುದನ್ನು ತಡೆಯಲು ಆಗಲಿಲ್ಲ. ಆದರೆ ಹುಬ್ಬಳ್ಳಿಯಲ್ಲಿನ ಮೈದಾನವನ್ನು ರಾಣಿ ಚನ್ನಮ್ಮ ಮೈದಾನ ಎಂದು ಪರಿವರ್ತನೆ ಮಾಡಬಹುದಾದರೆ, ಅದಕ್ಕೆ ಗಂಡು ಮೆಟ್ಟಿದ ನಾಡಿನ ಗುಂಡಿಗೆ ಬೇಕಾಗುತ್ತದೆ ಎಂದು ಹಿಂದೂಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಹೇಳಿದ್ದಾರೆ. ದಸರಾ ಹಬ್ಬದ ಹಿನ್ನೆಲೆ ನಂದಗೋಕುಲ ಸೇವಾ ಸಂಸ್ಥೆಯಿಂದ ಆಯೋಜಸಿದ ರಾವಣ ದಹನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಮ ನಮ್ಮ …
Read More »ನದಿಗೆ ಹಾರಿ ಆತ್ಮಹತ್ಯೆಗೆ ವೃದ್ಧೆ ಯತ್ನ; ಪ್ರಾಣದ ಹಂಗು ತೊರೆದು ಅಜ್ಜಿ ರಕ್ಷಿಸಿದ ಯುವಕ
ಬೆಳಗಾವಿ: ಮಲಪ್ರಭ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ಧೆಯನ್ನು ರಕ್ಷಿಸುವ ಮೂಲಕ ಯುವಕ ಸಾಹಸ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ನಡೆದಿದೆ. ಖಾನಾಪುರ ತಾಲೂಕಿನ ಬಸಾಪುರ ಗ್ರಾಮದ ಬಾಳಮ್ಮ ನಾವಳಗಿ (90) ಆತ್ಮಹತ್ಯೆಗೆ ಯತ್ನಿಸಿದ್ದರು. ವೃದ್ಧೆ ನದಿಗೆ ಹಾರಿದ್ದನ್ನು ಯುವಕ ಗಮನಿಸಿದ್ದಾನೆ. ತಕ್ಷಣವೇ ಪ್ರಾಣದ ಹಂಗು ತೊರೆದು ನದಿಗೆ ಹಾರಿ ರಕ್ಷಣೆ ಮಾಡಿದ್ದಾನೆ. ಪಾರಿಶ್ವಾಡ ಗ್ರಾಮದ ಐಜಾಜ್ ಮಾರಿಹಾಳ ವೃದ್ಧೆ ರಕ್ಷಿಸಿದ ಯುವಕ ಎಂಬುದು ತಿಳಿದು …
Read More »ಗಂಗಾವತಿಯಲ್ಲಿ ಜೋಡಿ ಚಿರತೆ ಪತ್ತೆ..
ಗಂಗಾವತಿ: ಬುಧವಾರವಷ್ಟೇ ಬಸವನದುರ್ಗಾ ಕಡೆಬಾಗಿಲು ಬಳಿ ಕಂಡು ಬಂದಿದ್ದ ಜೋಡಿ ಚಿರತೆಗಳು ಗುರುವಾರ ಮತ್ತೆ ತಾಲೂಕಿನ ಬಸವನದುರ್ಗಾ ಗೂಗಿಬಂಡೆ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದ್ದು, ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಇವು ನಿನ್ನೆ(ಬುಧವಾರ) ಕಂಡಿದ್ದ ಚಿರತೆಗಳಾ ಅಥವಾ ಬೇರೆ ಚಿರತೆಗಳೆ? ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಕಳೆದ ಒಂದು ವಾರದಿಂದ ನಿರಂತರ ಈ ಭಾಗದಲ್ಲಿ ಚಿರತೆಗಳು ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸಾರ್ವಜನಿಕರಲ್ಲಿ ಅಸಮಾಧಾನ: ಕಳೆದ ಹಲವು ದಿನಗಳಿಂದ ಚಿರತೆಗಳು ಜನವಸತಿ ಸನಿಹದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ …
Read More »
Laxmi News 24×7