ಚಿತ್ರದುರ್ಗ: ನನ್ನ ವಿರುದ್ಧ ಮುರುಘಾ ಮಠದ ಒಳಗಡೆ ನಡೆಯುತ್ತಿದ್ದ ಪಿತೂರಿ ಇದೀಗ ಹೊರಗಡೆ ನಡೆಯುತ್ತಿದೆ ಎಂದು ಮರಾಧೀಶ ಡಾ. ಶಿವಮೂರ್ತಿ ಶರಣರು ಸೋಮವಾರ ಹೇಳಿದರು. ಲೈಂಗಿಕ ಕಿರುಕುಳ ಪ್ರಕರಣ ಹಿನ್ನೆಲೆಯಲ್ಲಿ ಮಠದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇನು ಹೊಸದಲ್ಲ, ಕಳೆದ 15 ವರ್ಷದಿಂದ ನಡೆಯುತ್ತಿದೆ. ನಮ್ಮ ಮಠ ನ್ಯಾಯ ದೇಗುಲದಂತಿತ್ತು. ಇದೀಗ ಮಠದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದರು. ಈ ನೆಲದ ಕಾನೂನು ಎಲ್ಲರಿಗೂ ಒಂದೇ , ಕಾನೂನನ್ನು ಗೌರವಿಸೋಣ ಎಂದ …
Read More »25 ದಿನವಾದರೂ ಸಿಗದ ಚಿರತೆ
ಬೆಳಗಾವಿ ಗಾಲ್ಫ್ ಮೈದಾನದಲ್ಲಿ 25ನೇ ದಿನವೂ ಚಿರತೆಯ ಕಾರ್ಯಾಚರಣೆ ಮುಂದುವರಿದಿದೆ. ಗಾಲ್ಫ್ ಮೈದಾನದ ಉತ್ತರ ಧಿಕ್ಕಿನ ನೀರಿನ ಹೊಂಡದ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಹೆಜ್ಜೆ ಗುರುತು ಜಾಡು ಹಿಡಿದು ಶೋಧ ಕಾರ್ಯವನ್ನು ಸಿಸಿಎಫ ಮಂಜುನಾಥ ಚವ್ಹಾಣ, ಡಿಎಫ್ಓ ಡಾ.ಅಂಥೋನಿ, ಎಸಿಎಫ್ ಮಲ್ಲಿನಾಥ ಕುಸನಾಳ ನೇತೃತ್ವದ ತಂಡದಿಂದ ಮಾಡಲಾಗುತ್ತಿದೆ. ಇನ್ನು ಹೆಜ್ಜೆ ಗುರುತು ಪತ್ತೆ ಸ್ಥಳಕ್ಕೆ ಅರವಳಿಕೆ ತಜ್ಞರು ಬಂದಿದ್ದು. ಹನುಮಾನ್, ಜಾಧವ ನಗರ ಸಂಪರ್ಕಿಸುವ ಡಬಲ್ ರಸ್ತೆ …
Read More »ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜಿನಾಮೆ ನೀಡುತ್ತೇನೆ: ಉಮೇಶ ಕತ್ತಿ
ಚಿರತೆ ಸಿಗದ ಕಾರಣ ಉಮೇಶ ಕತ್ತಿ ರಾಜೀನಾಮೆಗೆ ಒತ್ತಾಯಿಸಿದ ಹಿನ್ನೆಲೆ ವಿಜಯಪುರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಉಮೇಶ ಕತ್ತಿ ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜಿನಾಮೆ ನೀಡುತ್ತೇನೆ ಎಂದಿದ್ದಾರೆ. ವಿಜಯಪುರದಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜಿನಾಮೆ ನೀಡುತ್ತೇನೆ.ಚಿರತೆ ಸಿಕ್ಕರೆ ನಂದೇನು ತಕರಾರಿಲ್ಲಾ .ಚಿರತೆ ಹಿಡಿಯಲು ಉತ್ತರ ಕರ್ನಾಟಕ ಭಾಗದ ಸ್ಟಾಫ್ ಹಾಕಿದ್ದೇವೆ. ಆನೆಗಳನ್ನು …
Read More »ನಟ, ಸಂಸದ ಜಗ್ಗೇಶ್ ಮನೆಗೆ ನುಗ್ಗಿದ ಮಳೆ ನೀರು, ಗಮನ ಹರಿಸುವಂತೆ ಅಧಿಕಾರಿಗಳಿಗೆ ಮನವಿ
ಬೆಂಗಳೂರು: ಬಿಜೆಪಿಯ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಅವರ ಮನೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಗ್ಗೇಶ್ ಮನವಿ ಮಾಡಿದ್ದಾರೆ. ತುಮಕೂರಿನ ಮಾಯಸಂದ್ರದಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದ ನೀರು ನಮ್ಮ ಮನೆಗೆ ನುಗ್ಗಿದ್ದರಿಂದ 20 ದಿನಗಳಿಂದ ನನ್ನ ಪತ್ನಿ ನಿದ್ದೆ ಮಾಡಿಲ್ಲ~ ಎಂದು ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ನಟ ಜಗ್ಗೇಶ್ ದೂರಿದ್ದಾರೆ. ಈ ಕುರಿತು TNIE …
Read More »ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದ ಕೊನೆಯ ಓವರ್ ಹೇಗಿತ್ತು?: ವಿಡಿಯೋ
Hardik Pandya: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಮಿಂಚಿದರೆ, ಬ್ಯಾಟಿಂಗ್ನಲ್ಲಿ ಕೂಡ ಹಾರ್ದಿಕ್ ಸ್ಫೋಟಕ ಆಟವಾಡಿದರು. ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಕೂಡ ಉಪಯುಕ್ತ ಕಾಣಿಕೆ ನೀಡಿದರು. What a win for our #TeamIndia in this nail biting match against arch rivals!! Congratulations for a flying start in Asia cup. #INDvsPAK …
Read More »ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆನಂದ ಪಾಟೀಲ ಸಾವು
ಅಥಣಿ ತಾಲೂಕಿನ ತಂಗಡಿ ಗ್ರಾಮದ ನಿವಾಸಿ ಆನಂದ ಪಾಟೀಲ (೪೮) ಮೃತ ದುರ್ದೈವಿ ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರ ಪಟ್ಟು. ವಿದ್ಯುತ್ ಲೈನ್ ರಿಪೇರಿ ಮಾಡುವಾಗ ವಿದ್ಯುತ್ ತಗುಲಿ ಹೆಸ್ಕಾಂ ಲೈನ್ ಮೆನ್ ಸಹಾಯಕ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿನಾಳ ಗ್ರಾಮದಲ್ಲಿ ಘಟನೆ ಅಥಣಿ ತಾಲೂಕಿನ ತಂಗಡಿ ಗ್ರಾಮದ ನಿವಾಸಿ ಆನಂದ ಪಾಟೀಲ (೪೮) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಹೆಸ್ಕಾಂ ಲೈನ್ ಮನ್ …
Read More »ಟಿವಿಎಸ್ ಎಕ್ಸೆಲ್ ಗೆ ಹಿಂಬದಿಯಿಂದ ಕಾರು ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು
ಗದಗ: ಟಿವಿಎಸ್ ಎಕ್ಸೆಲ್ ಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹೊಂಬಳ ರಸ್ತೆಯಲ್ಲಿ ಭಾನುವಾರ ನಡೆದಿದೆ. ಗದಗ ನಗರದ ಹಾಳದಿಬ್ಬ ನಿವಾಸಿ ಮಂಜಪ್ಪ ಬಸಪ್ಪ ಕಲಬಂಡಿ(25) ಮೃತಪಟ್ಟ ಸವಾರ. ಮಂಜಪ್ಪ ಕಲಬಂಡಿ ಅವರು ಭಾನುವಾರಬೆಳಿಗ್ಗೆ ಮನೆಯಿಂದ ಹೊಂಬಳ ರಸ್ತೆಯಲ್ಲಿನ ಜಮೀನಿಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಮಂಜಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳೆದ …
Read More »ಕೈ ದುರಹಂಕಾರಕ್ಕೆ ಹಿರಿಯರು ಪಕ್ಷ ತೊರೆದಿದ್ದಾರೆ : ಸಚಿವ ಜೋಶಿ ವ್ಯಂಗ್ಯ
ಧಾರವಾಡ : ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವದ ದುರಹಂಕಾರ ಮತ್ತು ಭೌದ್ದಿಕ ದಿವಾಳಿಕೋರತನದಿಂದಲೇ ಹಿರಿಯರು ಪಕ್ಷ ತೊರೆಯುವಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ತಾಲೂಕಿನ ಮುಗದ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಗುಲಾಬ್ ನಬೀ ಅಜಾದ್ ಈಗ ಪಕ್ಷ ತೊರೆದಿದ್ದಾರೆ. ಈ ಹಿಂದೆಯೂ ಸಾಕಷ್ಟು ಹಿರಿಯ ನಾಯಕರು ಪಕ್ಷದ ದುರಾಡಳಿತದಿಂದ ಮನನೊಂದು ಹೊರ ಬಂದಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಅನುಭವಿಸಿ …
Read More »ಮುರುಘಾ ಶ್ರೀ ಆರೋಪ; ತನಿಖೆಯ ನಂತರ ಸತ್ಯ ಹೊರಬೀಳಲಿದೆ, ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ವಿದೆ.:: ಬೊಮ್ಮಾಯಿ
ಬೆಂಗಳೂರು: ಮುರುಘಾ ಶ್ರೀಗಳ ಮೇಲೆ ಪೋಕ್ಸೋ ಅಡಿ ಎಫ್‌ಐಆರ್ ದಾಖಲಾಗಿದ್ದು, ತನಿಖೆಯ ನಂತರ ಸತ್ಯ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಭಾನುವಾರ ತಮ್ಮ ನಿವಾಸದ ಬಳಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ವಿದೆ. ತನಿಖೆ ಮಾಡಿದ ನಂತರ ಸತ್ಯ ಹೊರಗೆ ಬರಲಿದೆ ಎಂದರು. ಇದೊಂದು ಪ್ರಮುಖ ಪ್ರಕರಣ. ಪೋಸ್ಕೊ ಪ್ರಕರಣವೂ ಆಗಿದೆ ಹಾಗೂ ಚಿತ್ರದುರ್ಗದಲ್ಲಿ ಕಿಡ್ನಾಪ್ ಪ್ರಕರಣವೂ ದಾಖಲಾಗಿದೆ. ಎರಡೂ ಪ್ರಕರಣಗಳನ್ನು ದಾಖಲಿಸಿ ಪೊಲೀಸರು ತನಿಖೆ …
Read More »ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಯಲ್ಲಾಲಿಂಗ ಜಾತ್ರಾ ಮಹೋತ್ಸವದಲ್ಲಿ ಲಖನ ಜಾರಕಿಹೊಳಿ ಹಾಗೂ ವಿನಯ್ ಗುರೂಜಿ ಭಾಗಿ
ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಯಲ್ಲಾಲಿಂಗ ಜಾತ್ರಾ ಮಹೋತ್ಸವದಲ್ಲಿ ಲಖನ ಜಾರಕಿಹೊಳಿ ಹಾಗೂ ವಿನಯ್ ಗುರೂಜಿ ಭಾಗಿ ಯಾಗಿದ್ದರು. ಜಾತ್ರಾ ಮಹೋತ್ಸವ ದಲ್ಲಿ ಸಾವಿರಾರು ಜನ ಭಾಗ ವಹಿಸಿದ್ದರು. ವಿನಯ ಗುರೂಜಿ ಹಾಗೂ ಲಖನ ಜಾರಕಿಹೊಳಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಛೋಟಾ ಸಾಹುಕಾರ ಮಾತನಾಡಿ ಕ್ಷೇತ್ರದ ಜನತೆಗೆ ಹಾಗೂ ವಿನಯ್ ಗುರೂಜಿ ಹಾಗೂ ಭಾಗಿಯಾಗಿದ್ದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ , ರೈತಾಪಿ ವರ್ಗದ ಹಾಗೂ ಎಲ್ಲ ಜನರು ಒಂದೇ ಅವರು …
Read More »