ಗೌರಿ-ಗಣೇಶ ಹಬ್ಬದ ಸಂಭ್ರಮವನ್ನು ಎದುರು ನೋಡು ತ್ತಿರುವಾಗಲೇ ರಾಜ್ಯದ ಹಲವೆಡೆ ಮಳೆ ಭೋರ್ಗರೆದು ಅನಾಹುತ ಸೃಷ್ಟಿಸಿದೆ. ರಾಮನಗರ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಬಂಗಾಲ ಕೊಲ್ಲಿಯಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿ ಪರಿಣಾಮ, ರಾಜ್ಯದಲ್ಲಿ ಮುಂದಿನ 3ರಿಂದ 4 ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ರಾಮನಗರ ಜಿಲ್ಲೆಯ ಮೂಲಕ ಹಾದು ಹೋಗುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ …
Read More »ಬಸವೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಗ್ರಾಮದಲ್ಲಿ ಜನಮನ ಸೆಳೆದ ನಿಕಾಲಿ ಜಂಗಿ ಕುಸ್ತಿ
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ನಿಕಾಲಿ ಜಂಗಿ ಕುಸ್ತಿಗಳನ್ನು ಆಯೋಜಿಸಲಾಗಿತ್ತು… ಕಳೆದ 2 ವರ್ಷಗಳಿಂದ ಕೊರೊನಾದಿಂದಾಗಿ ಸರಳವಾಗಿ ನಡೆದಿದ್ದ ಇಂಗಳಿ ಗ್ರಾಮದ ಬಸವೇಶ್ವರ ಜಾತ್ರಾಮಹೋತ್ಸವ ಈ ಬಾರಿ ಅದ್ದೂರಿಯಾಗಿ ಜರುಗಿತು .ಇನ್ನೂ ಜಾತ್ರಾಮಹೋತ್ಸವ ಅಂಗವಾಗಿ ನಿಕಾಲಿ ಜಂಗಿ ಕುಸ್ತಿಗಳನ್ನು ಆಯೋಜಿಸಲಾಗಿತ್ತು.ಇದರಲ್ಲಿ ಕರ್ನಾಟಕ, ಮಹಾರಾಷ್ಟ್ರದ, ಹರಿಯಾಣ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹೆಸರಾಂತ ಕುಸ್ತಿಪಟುಗಳು ಭಾಗಿಯಾಗಿದ್ದರು. ಈ ನಿಕಾಲಿ ಜಂಗಿ ಕುಸ್ತಿಗಳನ್ನು ನೋಡಲು ಶಾಸಕ ಗಣೇಶ ಹುಕ್ಕೇರಿ …
Read More »ಗಣೇಶೋತ್ಸವ ವೇಳೆ ಕಾನೂನು ಮೀರಿ ವರ್ತಿಸಿದರೆ ಕಠಿಣ ಕ್ರಮ- ಅಲೋಕ್ ಕುಮಾರ್
ಬೆಳಗಾವಿಯಲ್ಲಿ ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈಗಾಗಲೇ ಸಾಕಷ್ಟು ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಇನ್ನು ಗಣೇಶೋತ್ಸವದ ವೇಳೆ ಕಾನೂನು ಮೀರಿ ವರ್ತಿಸುವವರ ಮೇಲೆ ಕಾನೂನು ರೀತಿಯಲ್ಲಿ ಮಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ನಗರದಲ್ಲಿ ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಮಾಡಿಕೊಳ್ಳಲಾದ ಪೂರ್ವಸಿದ್ಧತೆಗಳನ್ನು ವೀಕ್ಷಿಸಲು ಇಂದು ಮಂಗಳವಾರ ಬೆಳಗಾವಿ ನಗರಕ್ಕೆ ಆಗಮಿಸಿದ ಎಡಿಜಿಪಿ ಅಲೋಕ್ ಕುಮಾರ್ ರವರು ಬೆಳಗಾವಿಯಲ್ಲಿ ಎಸ್‍ಪಿ ಕಚೇರಿಗೆ ಆಗಮಿಸಿ …
Read More »ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಶ್ರೀಗಳಿಂದ ಅರ್ಜಿ ಸಲ್ಲಿಕೆ
ಚಿತ್ರದುರ್ಗ: ಡಾ| ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ದೂರಿನ ವಿಚಾರಣೆ ಚುರುಕುಗೊಂಡಿದ್ದು, ಮತ್ತೊಂದೆಡೆ ನಿರೀಕ್ಷಣಾ ಜಾಮೀನು ಕೋರಿ ಶ್ರೀಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮುರುಘಾ ಮಠ ಹಾಗೂ ಶ್ರೀಗಳ ಪರ ವಕೀಲರು ಚಿತ್ರದುರ್ಗದ 2ನೇ ಸೆಷನ್ಸ್ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅರ್ಜಿ ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಸೆ. 1ಕ್ಕೆ ಮುಂದೂಡಿದೆ. ಈ ನಡುವೆ ಶ್ರೀಗಳ ವಿರುದ್ಧ ದೂರು ನೀಡಿದ್ದ ಬಾಲಕಿಯರನ್ನು ಮಠಕ್ಕೆ …
Read More »ಲೈಂಗಿಕ ಕಿರುಕುಳ ಆರೋಪ ಹಿನ್ನಲೆ ಆಕ್ರೋಶ ಮುರುಘಾ ಶ್ರೀಗಳ ಪ್ರತಿಮೆ ಧ್ವಂಸ
ಚಿತ್ರದುರ್ಗದ ಮುರುಘಾ ಶರಣರ (Murugha Shri) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹಿನ್ನಲೆ ಆಕ್ರೋಶ ಹೆಚ್ಚಾಗಿದೆ. ಮುರುಘಾ ಶ್ರೀ ಬಂಧನ (Arrest) ಆಗದ ಹಿನ್ನಲೆ ಪ್ರತಿಭಟನೆಗಳು (Protest) ನಡೆಯುತ್ತಿದೆ. ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿ ಡಾ. ಶಿವಮೂರ್ತಿ ಶರಣರ ಪ್ರತಿಮೆ ಧ್ವಂಸ (Statue Collapse) ಮಾಡಲಾಗಿದೆ. ಮುರುಘಾ ಶರಣರ ಭಾವಚಿತ್ರಕ್ಕೆ ಬೆಂಕಿ (Fire) ಹಾಕಿ ಆಕ್ರೋಶ ವ್ಯಕ್ತಪಡಿಸಲಾಗ್ತಿದೆ. ಹಲವು ಸಂಘಟನೆಗಳು ಮುರುಘಾ ಶ್ರೀಗಳ ವಿರುದ್ಧ ಕಿಡಿಕಾರಿದೆ. ಇದರ ನಡುವೆ ಮುರುಘಾಶ್ರೀಗಳಿಗೆ …
Read More »ಗಣೇಶ ಹಬ್ಬದ ಹಿನ್ನೆಲೆ KSRTC ಬಸ್ ಮೂರೇ ದಿನಕ್ಕೆ 22 ಸಾವಿರ ಸೀಟ್ ಬುಕ್ಕಿಂಗ್
ಬೆಂಗಳೂರು: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಬೆಂಗಳೂರಿನಿಂದ ಸಾವಿರಾರು ಜನರು ತಮ್ಮ-ತಮ್ಮ ಊರಿನತ್ತ ಮುಖ ಮಾಡಿದ್ದು, ಎಲ್ಲ ಬಸ್‌ಗಳು ಫುಲ್ ರಶ್ ಆಗಿ ಪ್ರಯಾಣಿಸುತ್ತಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಈಗಾಗಲೇ ಟಿಕೆಟ್ ಬುಕ್ಕಿಂಗ್ ಹೆಚ್ಚಾಗಿದ್ದು, ಆದಾಯವೂ ಹರಿದುಬರುತ್ತಿದೆ. ಇಂದಿನಿಂದಲೇ ಬುಕ್ಕಿಂಗ್ ಹೌಸ್‌ಫುಲ್ ಆಗಿದ್ದು, ಸ್ಥಳದಲ್ಲೇ ಟಿಕೆಟ್ ಖರೀದಿಸಿ ಹೋಗುವವರು ನಿಂತುಕೊಂಡೇ ಪ್ರಯಾಣಿಸಬೇಕಿದೆ. ಸದ್ಯ ಮೂರು ದಿನಗಳ ಕಾಲ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬಾರೀ ಬೇಡಿಕೆ ಹೆಚ್ಚಿದೆ. 22 ಸಾವಿರ …
Read More »ರಸ್ತೆಅಗೆದು ಗ್ರಾಮಗಳಿಗೆ ಸಂಚಾರ ಬಂದ್ ಮಾಡಿದ್ದ ಬಿಜೆಪಿ ಮುಖಂಡನ ವಿರುದ್ಧ ಸಾರ್ವಜನಿಕರ ಆಕ್ರೋಶ
ಚಿಕ್ಕೋಡಿ: ತನ್ನ ಜಮೀನಿನಲ್ಲಿ ಕಾಲುವೆ ನೀರು ಬರುತ್ತಿದೆ ಎನ್ನುವ ಕಾರಣಕ್ಕೆ ರಸ್ತೆಯನ್ನು ಅಗೆದು ಎರಡು ಗ್ರಾಮಗಳಿಗೆ ಸಂಚಾರ ಬಂದ್ ಮಾಡಿದ್ದ ಬಿಜೆಪಿ ಮುಖಂಡನೋರ್ವನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಶಿ – ಯಬರಟ್ಟಿ ರಸ್ತೆಯ ಪಕ್ಕದ ತನ್ನ ಗದ್ದೆಯಲ್ಲಿ ನೀರು ನಿಲ್ಲುತ್ತೆ ಎನ್ನುವ ಕಾರಣಕ್ಕೆ ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತಮ್ಮಣ್ಣ ತೇಲಿ ಎಂಬಾತ ಸರ್ಕಾರದ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ರಸ್ತೆಯನ್ನೆ …
Read More »ಮಣ್ಣಿನಲ್ಲಿ ಅರಳಿದ ಅಪ್ಪುಗೆ ಭಾರೀ ಬೇಡಿಕೆ
ಪ್ರತಿ ವರ್ಷ ಗಣೇಶ ಚತುರ್ಥಿ (Ganesh Chaturthi) ಹಬ್ಬ ಬಂತು ಎಂದರೆ ನಾನಾ ರೀತಿಯ ಗಣಪನ ಮೂರ್ತಿ ಅನಾವರಣಗೊಳ್ಳುತ್ತದೆ. ಗಣಪನ ಮೂರ್ತಿಗೂ ಚಿತ್ರರಂಗಕ್ಕೂ ಒಂದು ನಂಟು ಇದೆ. ಕೆಲವರು ಗಣೇಶನಿಗೆ ಚಿತ್ರರಂಗದ ಟಚ್ ನೀಡುತ್ತಾರೆ. ಸಿನಿಮಾದ ಥೀಮ್ ಇಟ್ಟುಕೊಂಡು ಗಣೇಶನ ವಿಗ್ರಹ ರೆಡಿ ಆದ ಉದಾಹರಣೆ ಸಾಕಷ್ಟಿದೆ. ಈ ಬಾರಿ ಮತ್ತೆ ಗಣೇಶ ಚತುರ್ಥಿ ಬಂದಿದೆ. ಆ ಪ್ರಯುಕ್ತ ಎಲ್ಲ ಕಡೆಗಳಲ್ಲಿ ವಿಘ್ನ ವಿನಾಶಕನ ಮೂರ್ತಿ ರೆಡಿ ಆಗುತ್ತಿದೆ. ಈ ಬಾರಿ ಪುನೀತ್ ರಾಜ್ಕುಮಾರ್ (Puneeth …
Read More »ಮುಂಬೈನ ಈ ಶ್ರೀಮಂತ ಗಣೇಶನಿಗೆ 316 ಕೋಟಿ ರೂ. ವಿಮೆ!
ಗಣೇಶೋತ್ಸವಕ್ಕೆ ಇಡೀ ದೇಶದಲ್ಲೇ ಮುಂಬೈ ಹೆಚ್ಚು ಖ್ಯಾತಿ ಪಡೆದಿದೆ. ಇಲ್ಲಿನ ಗಣೇಶ ಶ್ರೀಮಂತ ಕೂಡ. ಅಂತಹ ಶ್ರೀಮಂತ ಗಣೇಶನಿಗೆ ಈ ಬಾರಿ 316.40 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಮುಂಬೈನ ಗಣೇಶ ಮಂಡಲ್ ನ ಗಣೇಶನಿಗೆ ಈ ಬಾರಿ ಗಣೇಶ ಚತುರ್ಥಿ ವೇಳೆ 316.40 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಇದರಲ್ಲಿ 31.97 ಕೋಟಿ ರೂ. ಚಿನ್ನ, ಬೆಳ್ಳಿ ಹಾಗೂ ಇನ್ನಿತರ ವಸ್ತುಗಳು ಸೇರಿದ್ದರೆ, 263 ಕೋಟಿ ರೂ. ವೈಯಕ್ತಿಕ …
Read More »ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ಸೆ. 6ಕ್ಕೆ `ವೇತನ ಆಯೋಗ’ ಘೋಷಣೆ ಸಾಧ್ಯತೆ
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯಸ ರ್ಕಾರಿ ವೇತನ ಆಯೋಗವನ್ನು ಸೆ. 6 ರಂದು ಘೋಷಣೆ ಮಾಡುವ ಸಾಧ್ಯತೆಗಳಿವೆ. ಸೆ.6 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರಿ ನೌಕರರಿಗೆ ವೇತನ ಆಯೋಗ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. …
Read More »