ಚಿತ್ರದುರ್ಗ : ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ( Murugha Matt Swamiji ) ವಿರುದ್ಧ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮಾತನಾಡಿ ಮುರುಘಾ ಶ್ರೀಗಳನ್ನು ಶೀಘ್ರವಾಗಿ ಬಂಧಿಸಬೇಕು’ ಎಂದು ಆಗ್ರಹಿಸಿದ್ದಾರೆ ತಾತ್ಕಾಲಿಕವಾಗಿ ಶ್ರೀಗಳ ಪೀಠ ತ್ಯಾಗ ಮಾಡಬೇಕು. 144 ಸೆಕ್ಷನ್ ಅಡಿಯಲ್ಲಿ ಹೇಳಿಕೆಯನ್ನು ಪಡೆಯಬೇಕು. ʻ ಮುರುಘಾ ಶ್ರೀಗಳನ್ನು ಶೀಘ್ರವಾಗಿ ಬಂಧಿಸಬೇಕು. ಇಂದೇ ನಾನು ಕೇಂದ್ರಕ್ಕೆ …
Read More »ಅರವಿಂದ್ ಕೇಜ್ರಿವಾಲ್‌ಗೆ ಅಧಿಕಾರದ ಅಮಲು ಹತ್ತಿದೆ ಎಂದ ಅಣ್ಣ ಹಜಾರೆ
ನವದೆಹಲಿ, ಆಗಸ್ಟ್ 30: ಹಿರಿಯ ಗಾಂಧಿವಾದಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದು ದೆಹಲಿಯ ಮದ್ಯ ನೀತಿಯನ್ನು ಟೀಕಿಸಿ ನಿಮಗೆ ಅಧಿಕಾರದ ಅಮಲು ಹತ್ತಿದೆ ಎಂದು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಹಜಾರೆ ತಮ್ಮ ಪತ್ರದಲ್ಲಿ ಹಳ್ಳಿಗಳಲ್ಲಿನ ಮದ್ಯದ ವ್ಯಸನದ ಸಮಸ್ಯೆ ಮತ್ತು ಅದರ ಪರಿಹಾರಗಳ ಬಗ್ಗೆ ವ್ಯವಹರಿಸುವ ಕೇಜ್ರಿವಾಲ್ ಅವರದೇ ಸ್ವರಾಜ್ ಪುಸ್ತಕದ ಸಾಲುಗಳನ್ನು …
Read More »ಸಾವಿನಲ್ಲೂ ಒಂದಾದ ದಂಪತಿ: ಮೂರು ಗಂಟೆ ಅಂತರದಲ್ಲಿ ಗಂಡ-ಹೆಂಡತಿ ಸಾವು
ರಬಕವಿ-ಬನಹಟ್ಟಿ : ಸಾವಿನಲ್ಲಿಯೂ ಒಂದಾಗುವ ಬಹಳಷ್ಟು ಘಟನೆ ನಡೆಯುತ್ತಲೇ ಇರುತ್ತವೆ. ವಿವಾಹವಾಗಿ ಬಾಳಿ, ಮಕ್ಕಳು, ಮೊಮ್ಮಕ್ಕಳನ್ನು ಕಂಡು ಸಿಹಿ, ಕಹಿ, ನೋವು, ಕಷ್ಟಗಳ ಸವಾಲುಗಳನ್ನು ಒಟ್ಟಿಗೆ ಎದುರಿಸಿ, ಒಟ್ಟಿಗೇ ಸ್ವರ್ಗಸ್ಥರಾಗುವುದೆಂದರೆ ಸುಮ್ಮನೆಯಾ? ಎಲ್ಲೋ ಒಂದಷ್ಟು ಜೋಡಿಗಳಷ್ಟೇ ಈ ಪುಣ್ಯ ಮಾಡಿರುತ್ತಾರೆ. ಸಾವಿನಲ್ಲೂ ಸಂಗಾತಿ ಜೊತೆಗೆ ಅನ್ನೋದು ಇದೇನಾ. ಹೌದು, ವಿವಾಹವಾಗಿ 55 ವರ್ಷಗಳ ಕಾಲ ಜತೆಯಾಗಿ ಬದುಕಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ …
Read More »ನಾಲೆಗೆ ಕಾರು ಉರುಳಿ ಬಿದ್ದು ಇಬ್ಬರು ಸಾವು
ಮಸ್ಕಿ: ಕಾರೊಂದು ನಾಲೆಗೆ ಉರುಳಿ ಬಿದ್ದು ಇಬ್ಬರು ಮೃತಪಟ್ಟು,ಒಬ್ಬ ಪಾರಾದ ಘಟನೆ ಸಮೀಪದ ತುಂಗಭದ್ರಾ ಎಡದಂಡೆಯಲ್ಲಿ ಮಂಗಳವಾರ ನಡೆದಿದೆ. ಕಾರಿನಲ್ಲಿದ್ದವರು ಅಮರೇಶ್ವರ ಹತ್ತಿರದ ಗೋನವಾಟ್ಲ ಗ್ರಾಮದಿಂದ ಸಿಂಧನೂರು ಕಡೆ ತೆರಳುತ್ತಿದ್ದರು. ಘಟನೆಯಲ್ಲಿ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮೃತರು ಆಂಧ್ರ ಮೂಲದವರಾಗಿದ್ದು, ವಿವರ ತಿಳಿದು ಬಂದಿಲ್ಲ. ಆದರೆ, ಕಾರಿನ ದಾಖಲೆಯಲ್ಲಿ ಹೈದರಬಾದ್ ನ ನೆಕ್ಕಂಟಿ ಶ್ರೀನಿವಾಸ ಎಂದು ತೋರಿಸುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾರು ಹಾಗೂ …
Read More »ಜಿ.ಪಂ. ಉಪ ಕಾರ್ಯದರ್ಶಿ ಹೃದಯಾಘಾತದಿಂದ ನಿಧನ
ದಾವಣಗೆರೆ: ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ. ಮೇ.ಬಿ.ಆರ್. ಹರ್ಷ ತೀವ್ರ ಹೃದಯಾಘಾತದಿಂದ ಮಂಗಳವಾರ ನಿಧನರಾದರು. ದಾವಣಗೆರೆ ತಾಲೂಕಿನ ಕಂದಗಲ್ ಗ್ರಾಮದ ಡಾ. ಬಿ.ಆರ್. ಹರ್ಷ ಸೇನೆಯಲ್ಲೂ ಕಾರ್ಯ ನಿರ್ವಹಿಸಿದವರು. ದಾವಣಗೆರೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯಾಗಿ ಎರಡು ತಿಂಗಳನಿಂದ ಕಾರ್ಯ ನಿರ್ವಹಿಸುತ್ತಿದ್ದರು. ದಾವಣಗೆರೆ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿಯೂ ಕೆಲಸ ಮಾಡಿದ್ದರು. ಮೃತರ ಪತ್ನಿ ಡಾ. ಮಧುಮಾಲ ಸಹ ಸೇನೆಯಲ್ಲಿ ಕೆಲಸ ನಿರ್ವಹಿಸಿದ್ದರು. ಇಬ್ಬರು ಹೆಣ್ಣುಮಕ್ಕಳು ಅಪಾರ ಬಂಧು ಬಳಗ …
Read More »ಹೆಸರಿನಲ್ಲಿ ʼರಾಮʼ.! ಉಂಡ ಮನೆಗೆ ಪಂಗನಾಮ.! : ಸಿದ್ದು ವಿರುದ್ಧ ಶ್ರೀರಾಮುಲು ಕಿಡಿ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾರಿಗೆ ಸಚಿವ ಬಿ. ಶ್ರೀರಾಮುಲು ವಾಗ್ಧಳಿ ನಡೆಸಿದ್ದಾರೆ. ಸಿದ್ದು ವಿರುದ್ಧ ಸರಣಿ ಟ್ವೀಟ್ ಮಾಡಿದ ಸಾರಿಗೆ ಸಚಿವರು ಹೆಸರಿನಲ್ಲಿ ರಾಮ ಇರಿಸಿಕೊಂಡು ಉಂಡ ಮನೆಗೆ ಪಂಗನಾಮ ಹಾಕುವವರು ನೀವು ಎಂದು ಗುಡುಗಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಶ್ರೀರಾಮುಲು… ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು. ದಾಸಶ್ರೇಷ್ಠ ಶ್ರೀ ಪುರಂದರದಾಸರು ಮಾಜಿ ಸಿ.ಎಂ. ಸಿದ್ದರಾಮಯ್ಯನಂತವರನ್ನು ನೋಡಿಯೇ ಈ …
Read More »ಮುರುಘಾ ಶ್ರೀಗೆ ಮತ್ತೊಂದು ‘ಬಿಗ್ ಶಾಕ್’: ‘ಅಟ್ರಾಸಿಟಿ’ ಪ್ರಕರಣ ದಾಖಲು
ಚಿತ್ರದುರ್ಗ: ಮುರುಘಾ ಶ್ರೀಗೆ ಮತ್ತೊಂದು ತೊಂದರೆ ಎದುರಾಗಿದೆ. ಹೌದು, ಲೈಂಗಿಕ ಕಿರುಕುಳದ ಬಗ್ಗೆ ಆರೋಪ ಮಾಡಿರುವ ಒಬ್ಬರಲ್ಲಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಹಿನ್ನಲೆಯಲ್ಲಿ ಶ್ರೀಗಳ ವಿರುದ್ದ , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಮುರುಘಾ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಆಗಸ್ಟ್ 28ರ (ಭಾನುವಾರ)ದಂದು ಪ್ರಕರಣದ ವಿಚಾರಣೆ ವೇಳೆಯಲ್ಲಿ ಬಾಲಕಿಯ ಹೇಳಿಕೆ ಮೇರೆಗೆಶ್ರೀಗಳ ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. …
Read More »ಬೆಳಗಾವಿ ನಗರದ ಮಾರುಕಟ್ಟೆಯಲ್ಲಿ ಜನಸಾಗರ
ನಾಳೆ ಬೆಳಗಾದರೆ ಸಾಕು ಮನೆ ಮನಮನೆಗೆ ಗಣೇಶನ ಆಗಮನವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜನತೆ ಗಣೇಶ ಹಬ್ಬದ ಆಚರಣೆಗೆ ಬೇಕಾದ ಎಲ್ಲಾ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಈ ವೇಳೆ ಬೆಳಗಾವಿ ನಗರದ ಮಾರುಕಟ್ಟೆಯಲ್ಲಿ ಜನಸಾಗರ ತುಂಬಿ ತುಳುಕುತ್ತಿತ್ತು ಹೌದು ನಾಳೆ ಬೆಳಗಾಗುವುದಷ್ಟೇ ತಡ, ಮನೆ ಮನೆಗೆ ಗಣೇಶನ ಆಗಮನವಾಗುತ್ತದೆ. ಇನ್ನು ಬೆಳಗಾವಿ ಎಂದರೆ ಕೇಳಬೇಕೆ, ನಗರದಲ್ಲಿ ಗಣೇಶೋತ್ಸವ ಆಚರಣೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಹಾಗಾಗಿ ಗಣೇಶೋತ್ಸವ ಆಚರಣೆಗೆ ಬೇಕಾದ …
Read More »ಬೈಲಹೊಂಗಲ ಕೃಷಿ ಇಲಾಖೆಗೆ ಮುತ್ತಿಗೆ ಹಾಕಿದ ಬೈಲವಾಡ ರೈತರು
ರೈತರಿಗೆ ಸಮರ್ಪಕವಾಗಿ ಬೆಳೆ ಹಾನಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಬೈಲಹೊಂಗಲ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಕೃಷಿ ಇಲಾಖೆಗೆ ತೆರಳಿ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು. ಬೈಲವಾಡ ಗ್ರಾಮದಲ್ಲಿ ಪ್ರವಾಹದಿಂದ ಬೆಳೆ ಹಾನಿಗೆ ಒಳಗಾದ ಪ್ರದೇಶಗಳಿಗೆ ಇತ್ತಿಚೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡುವಂತೆ ಸಂಬಂಧಪಟ್ಟ ಕೃಷಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಳೆ ಹಾನಿ ಪರಿಹಾರ ವಿತರಿಸುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ವಿಳಂಬ …
Read More »ಬಾವಿಗೆ ಬೇಕಾದ್ರೂ ಬೀಳುವೆ; ಕಾಂಗ್ರೆಸ್ ಸೇರಲ್ಲ: ನಿತಿನ್ ಗಡ್ಕರಿ
ನವದೆಹಲಿ: ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ, ಅಂದು ಕಾಂಗ್ರೆಸ್‌ನಲ್ಲಿ ಸಚಿವರಾಗಿದ್ದ ಶ್ರೀಕಾಂತ್ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದ್ದರು. ಆದರೆ ನಾನು, “ಬೇಕಾದರೆ ಬಾವಿಗೆ ಬೀಳುತ್ತೇನೆ. ನಿಮ್ಮ ಪಕ್ಷ ಸೇರುವುದಿಲ್ಲ, ನನಗೆ ನಿಮ್ಮ ಪಕ್ಷದ ಸಿದ್ಧಾಂತ ಇಷ್ಟವಿಲ್ಲ’ ಎಂದಿದ್ದೆ ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ನಾಗ್ಪುರದಲ್ಲಿ ನಡೆದ ಉದ್ಯಮಿಗಳ ಸಭೆಯಲ್ಲಿ ಅವರು ಹಳೆಯ ದಿನಗಳ ಈ ನೆನಪನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ, ಅಗತ್ಯವಿದ್ದಾಗ ಒಬ್ಬರನ್ನು …
Read More »