Breaking News

ಸಿವಿಲ್ ಪೊಲೀಸ್ ಪೇದೆಯ 1137 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ತೃತೀಯ ಲಿಂಗಿಗಳಿಗೂ ಅವಕಾಶ!

ಕರ್ನಾಟಕ ಸಿವಿಲ್ ಪೊಲೀಸ್ ಪೇದೆಗಳ (ಸಿಪಿಸಿ) 1137 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ರಾಜ್ಯ ಪೊಲೀಸ್ ಇಲಾಖೆಯು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು: ಕರ್ನಾಟಕ ಸಿವಿಲ್ ಪೊಲೀಸ್ ಪೇದೆಗಳ (ಸಿಪಿಸಿ) 1137 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ರಾಜ್ಯ ಪೊಲೀಸ್ ಇಲಾಖೆಯು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದು, ಅರ್ಜಿ ಸ್ವೀಕಾರ ಪ್ರಕ್ರಿಯೆ 2022 ಅಕ್ಟೋಬರ್ 20ರಿಂದ ಬೆಳಗ್ಗೆ 10 ಗಂಟೆಯಿಂದ …

Read More »

ಬಿಜೆಪಿ ಅಸ್ತ್ರಕ್ಕೆ ಬೆದರಿದ ಕಾಂಗ್ರೆಸ್‌, ಜೆಡಿಎಸ್‌

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸುವ ಆಡಳಿತಾರೂಢ ಬಿಜೆಪಿ “ಅಸ್ತ್ರ’ದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಮತಬ್ಯಾಂಕ್‌ ಕೈ ತಪ್ಪುವ ಆತಂಕ ಎದುರಾಗಿದ್ದು, ಪರ್ಯಾಯ ಕಾರ್ಯತಂತ್ರದತ್ತ ಚಿತ್ತ ಹರಿಸಿವೆ.   ಭಾರತ್‌ ಜೋಡೋ ಯಾತ್ರೆಯ ಗುಂಗಿನಲ್ಲಿದ್ದ ಕಾಂಗ್ರೆಸ್‌, ಜನತಾಮಿತ್ರ ಹುಮ್ಮಸ್ಸಿನಲ್ಲಿದ್ದ ಜೆಡಿಎಸ್‌ ಪಕ್ಷಗಳಿಗೆ ಮೀಸಲಾತಿ ವಿಚಾರದಲ್ಲಿ ಬಿಜೆಪಿ ದಿಢೀರ್‌ ಈ ರೀತಿಯ ತೀರ್ಮಾನ ಕೈಗೊಳ್ಳಬಹುದು ಎಂಬ ಅಂದಾಜು ಇರಲಿಲ್ಲ. ಪ್ರಮುಖವಾಗಿ ಕಾಂಗ್ರೆಸ್‌ ಮುಂದಿನ ಚುನಾವಣೆಯಲ್ಲಿ ಮೀಸಲಾತಿ ಪ್ರಮಾಣದ ವಿಚಾರ …

Read More »

37ನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ

ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ 37ನೇ ದಿನಕ್ಕೆ ಕಾಲಿಟ್ಟಿದೆ. ಇಂದು ರಾಹುಲ್ ಗಾಂಧಿಯವರ ಪಾದಯಾತ್ರೆ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ರಾಂಪುರದಿಂದ ಆಂಧ್ರಪ್ರದೇಶಕ್ಕೆ ತಲುಪಿದೆ. ಎಪಿಯ ಅನಂತಪುರ ಜಿಲ್ಲೆಯ ಜಾಜಿರಕಲ್ಲು ಟೋಲ್ ಪ್ಲಾಜಾ ತಲುಪಲಿದೆ. ಸಂಜೆ 04.30ಕ್ಕೆ ಋಉರುವಾಗುವ ಪಾದಯಾತ್ರೆ ಸಂಜೆ 6.30ಕ್ಕೆ ಅನಂತಪುರ ಜಿಲ್ಲೆಯ ಓಬುಳಾಪುರಂ ಗ್ರಾಮದಲ್ಲಿ ಕೊನೆಯಾಗಲಿದೆ. ಪುನಃ ಕರ್ನಾಟಕದ ಬಳ್ಳಾರಿಯ ಹಲಕುಂದಿ ಮಠದ ಬಳಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ. ರಾಹುಲ್ ಗಾಂಧಿ ಮತ್ತು ಭಾರತ್ ಜೋಡೋ …

Read More »

ಚಿತ್ರದುರ್ಗದ ಮುರುಘಾ ಮಠದಲ್ಲಿ ಓದುತ್ತಿದ್ದ ನನ್ನ ಇಬ್ಬರು ಹೆಣ್ಣುಮಕ್ಕಳು ಋತುಮತಿಯಾಗುವವರೆಗೂ ಮುರುಘಾ ಮಠದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ನಿರಂತರ ಲೈಂಗಿಕ ದೌರ್ಜನ್ಯ

ಮೈಸೂರು, ಅ.14: ಚಿತ್ರದುರ್ಗದ ಮುರುಘಾ ಮಠದಲ್ಲಿ ಓದುತ್ತಿದ್ದ ನನ್ನ ಇಬ್ಬರು ಹೆಣ್ಣುಮಕ್ಕಳು ಋತುಮತಿಯಾಗುವವರೆಗೂ ಮುರುಘಾ ಮಠದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಂತ್ರಸ್ತ ಬಾಲಕಿಯರ ತಾಯಿ ಮೈಸೂರಿನ‌ ನಝರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಈವರೆಗೆ ಒಟ್ಟು ಏಳು ಮಂದಿಯ ವಿರುದ್ಧ ಎಫ್.ಐ.ಆರ್. ದಾಖಲಾದಂತಾಗಿದೆ. ಆರು ವರ್ಷಗಳ ಹಿಂದೆ ಬಡತನದ ಕಾರಣ ನಾನು ಮಠಕ್ಕೆ ಬಂದು ಕೆಲಸಕ್ಕೆ …

Read More »

24 ಗಂಟೆಗಳಲ್ಲಿಯೇ ಮಳೆ ಹಾನಿ ಪರಿಹಾರ; ಮುಖ್ಯಮಂತ್ರಿ ಮಹತ್ವದ ಘೋಷಣೆ

ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜೀವ ಹಾನಿಯ ಜೊತೆಗೆ ಹೊಲಗದ್ದೆಗಳಿಗೆ ನೀರು ನುಗ್ಗಿರುವ ಪರಿಣಾಮ ಬೆಳೆ ನಷ್ಟವೂ ಸಂಭವಿಸಿದೆ. ಇದರ ಜೊತೆಗೆ ರಸ್ತೆಗಳು ಸಹ ಕಿತ್ತು ಹೋಗಿವೆ.   ಇದೀಗ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯದ ಆಯ್ದ 16 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮಳೆ ಹಾನಿಗೆ ಸಂಬಂಧಿಸಿದಂತೆ 24 ಗಂಟೆಗಳೊಳಗಾಗಿ ಪರಿಹಾರ ವಿತರಿಸುವಂತೆ ಸೂಚಿಸಲಾಗಿದೆ ಎಂದು …

Read More »

ಜೈನ್ ಶ್ವೇತಾಂಬರ ಪಂಥದ ೧೦ ಯುವಕರಿಂದ ಸನ್ಯಾಸ ಸ್ವೀಕಾರ:

ಬೆಳಗಾವಿ ನಗರದಲ್ಲಿ ಜೈನ ಸಮುದಾಯದ ೧೦ ಯುವಕರು ತಮ್ಮ ಸುಖ ಜೀವನವನ್ನು ತೊರೆದು ಜೈನ್ ಧರ್ಮ ದೀಕ್ಷೆಯನ್ನು ಸ್ವೀಕಾರ ಮಾಡಿದರು. ಈ ಹಿನ್ನೆಲೆ ಜೈನ ಸಮುದಾಯದ ಬಾಂಧವರ ವತಿಯಿಂದ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ನಗರದಲ್ಲಿ ಜೈನ್ ಸಮುದಾಯದ ೧೦ಜನ ಯುವಕರು ಜೈನ್ ತಮ್ಮ ಲೌಕಿಕ ಜೀವನವನ್ನು ತೊರೆದು ಜೈನ್ ದೀಕ್ಷೆಯನ್ನು ಸ್ವೀಕಾರ ಮಾಡಿದ ಹಿನ್ನೆಲೆ ಇಂದು ನಗರದಲ್ಲಿ ಜೈನ್ ಸಮುದಾಯದ ವತಿಯಿಂದ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ …

Read More »

ತೊಗರಿ ಕಿತ್ತು ಜೋಳ ಬೆಳೆಯಲು ಸಿದ್ಧತೆ

ತೆಲಸಂಗ: ಗ್ರಾಮದಲ್ಲಿ ಮೂರ್‍ನಾಏಲ್ಕು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅಳಿದುಳಿದಿದ್ದ ತೊಗರಿ ಬೆಳೆಯೂ ಕೈಗೆಟಕದ ಸ್ಥಿತಿ ತಲುಪಿದ್ದು, ತೊಗರಿ ಬೆಳೆ ಮಾಡಿದ್ದ ರೈತನಿಗೆ ಸಂಕಷ್ಟ ಎದುರಾಗಿದೆ. ತೆಲಸಂಗ ಹೋಬಳಿಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ತೊಗರಿ ಬಿತ್ತನೆ ಮಾಡಿದ ದಿನದಿಂದ ಇಲ್ಲಿಯವರೆಗೂ ಸತತವಾಗಿ ಸುರಿದ ಮಳೆ, ಮೋಡಕವಿದ ತಂಪು ವಾತಾವರಣ, ಹೊಲಗಳಲ್ಲಿ ನಿಂತ ನೀರಿನಿಂದ ತೊಗರಿ ಗಿಡದ ಬೇರು ಕೊಳೆತಿದೆ. ಮತ್ತೆ ಕೆಲವಡೆ ನೆಟಿರೋಗ ಕಾಣಿಸಿಕೊಂಡಿದೆ. ತೋಗರಿ ಹೂವು ಮತ್ತು …

Read More »

ಬಿಜೆಪಿಯವರದ್ದು ಸುಳ್ಳು ಹೇಳುವ ಸಂಕಲ್ಪ ಯಾತ್ರೆ: ಸಿದ್ದರಾಮಯ್ಯ ಟೀಕೆ

ಬೆಂಗಳೂರು: ಬಿಜೆಪಿಯವರದು ಜನಸಂಕಲ್ಪ ಯಾತ್ರೆಯಲ್ಲ, ಸುಳ್ಳು ಹೇಳುವ ಸಂಕಲ್ಪದ ಯಾತ್ರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬಿಜೆಪಿಯವರು ಅವರ ಯಾತ್ರೆಗಳಲ್ಲಿ ನನ್ನನ್ನು ಗುರಿಯಾಗಿಸಿಕೊಂಡು ಸುಳ್ಳುಗಳನ್ನು ಹೇಳಿದ್ದಾರೆ. ನೀವು ಏನು ಹೇಳುವುದಿದ್ದರೂ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾತನಾಡಿದರೆ ಬೊಮ್ಮಾಯಿ ಮತ್ತು ಯಡಿಯೂರಪ್ಪ ಇಬ್ಬರಿಗೂ ಒಂದಿಷ್ಟು ತೂಕ ಬರುತ್ತದೆ. ತಮ್ಮ ಸ್ಥಾನದ ಘನತೆಗಳನ್ನು ನಿರ್ಲಕ್ಷಿಸಿ ಮಾತನಾಡುತ್ತಾ ಹೋದರೆ ರಾಜ್ಯದ ಜನ ಬಿಜೆಪಿಯವರನ್ನು ವಿದೂಷಕರು ಎನ್ನುತ್ತಾರೆ ಎಂದರು. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ಸಿಗೆ …

Read More »

ಕಾಂಗ್ರೆಸ್ ಪಾದಯಾತ್ರೆ ಎಂಬ ಶಬ್ದ ಕಲಿತದ್ದೇ ಬಿಜೆಪಿಯಿಂದ: ನಳಿನ್ ಕಟೀಲ್

ಧಾರವಾಡ: ಬಿ.ಎಸ್.ಯಡಿಯೂರಪ್ಪನವರು ಮಾಡಿದಷ್ಟು ಪಾದಯಾತ್ರೆಯನ್ನು ಯಾರೂ ಮಾಡಿಲ್ಲ. ಅವರು ಮಾಡಿದಷ್ಟು ಸೈಕಲ್ ಯಾತ್ರೆಯನ್ನು ಯಾರೂ ಮಾಡಲಿಕ್ಕಾಗದು. ಪಾದಯಾತ್ರೆಯನ್ನು ಬಿಜೆಪಿಯಿಂದಲೇ ಕಾಂಗ್ರೆಸ್ ಕಲಿತುಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.   ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಪಾದಯಾತ್ರೆ ಈಗ ಆರಂಭವಾಗಿದೆ. ಬಿಜೆಪಿ ಬೆಳೆದಿದ್ದೇ ಪಾದಯಾತ್ರೆಯಿಂದ. ನಾವು ಅಧಿಕಾರಕ್ಕೆ ಬಂದಿರುವುದೇ ಯಾತ್ರೆಯಿಂದ. ಯಡಿಯೂರಪ್ಪ ಎರಡು ಕಿಲೋ ಮೀಟರ್ ನಡೆಯಲಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಯಡಿಯೂಪ್ಪನವರು …

Read More »

ಪೆನ್ನಿನ ಮೇಲೆ ಬರೆದು ಪರೀಕ್ಷೆಗೆ ನಕಲು ಮಾಡಿದ ಕಾನೂನು ವಿದ್ಯಾರ್ಥಿ

ಕ್ರಿಮಿನಲ್ ಕಾರ್ಯವಿಧಾನದ ಕಾನೂನನ್ನು ಅಧ್ಯಯನ (criminal procedural law) ಅಷ್ಟುಸುಲಭವಲ್ಲ. ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಉತ್ತೀರ್ಣರಾಗಲು ಹೆಚ್ಚಿನ ಶ್ರದ್ಧೆ, ಶ್ರಮ ಬೇಕಾಗುತ್ತದೆ. ಆದರೆ ಸ್ಪೇನ್‌ನಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ನಕಲು ಹೊಡೆಯುವುದಕ್ಕಾಗಿ ತನ್ನ ಸಂಪೂರ್ಣ ಪಠ್ಯಕ್ರಮವನ್ನು ಕೇವಲ 11 ಪೆನ್ನುಗಳಲ್ಲಿ ಕೆತ್ತಿದ್ದಾನೆ.     ಈ ಪೆನ್ನುಗಳ ಚಿತ್ರಗಳು ಟ್ವಿಟರ್ ನಲ್ಲಿ ವೈರಲ್ ಆಗಿವೆ. ವಿದ್ಯಾರ್ಥಿಯು ನೀಲಿ ಬಿಕ್ ಪೆನ್ನುಗಳ ಮೇಲೆ ಸಣ್ಣ ಅಕ್ಷರಗಳನ್ನು ಕೆತ್ತಿದ್ದಾನೆ. ನಕಲು ಮಾಡುತ್ತಿದ್ದಾಗ ಆತ ಸಿಕ್ಕಿ ಬಿದ್ದಿದ್ದು, …

Read More »