Breaking News

ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಸಿಇಓಗಳ ಜೊತೆಗೆ ಸಿಎಂ ಬೊಮ್ಮಾಯಿ ಸಭೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಸರ್ಕಾರದ ವಿವಿಧ ಯೋಜನೆಗಳನ್ನು ಯಾವ ರೀತಿ ಅನುಷ್ಠಾನಕ್ಕೆ ತರಲಾಗಿದೆ ಎಂಬ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಸಿಇಓಗಳ ಜೊತೆಗೆ ಸಿಎಂ ಬೊಮ್ಮಾಯಿ ಈ ವೇಳೆ ಚರ್ಚಿಸಿದರು. ಸಭೆಯಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಸಿ.ಸಿ.ಪಾಟೀಲ್, ವಿ.ಸೋಮಣ್ಣ, ಆರ್.ಅಶೋಕ್, ಬಿ.ಎ.ಬಸವರಾಜ, ಬಿ.ಶ್ರೀರಾಮುಲು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಎಲ್ಲ …

Read More »

ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ

*ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ* ಗೋಕಾಕ : ತಾಲೂಕಿನ ಸಂತೋಷ ಜಾರಕಿಹೊಳಿ ಅವರ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಹಿರೇನಂದಿ ಗ್ರಾಮದಿಂದ ಕಾರ್ಖಾನೆವರಗೆ ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ತರಲಾಯಿತು. ನಂತರ ಗೋಮಾತೆ ಗೆ ಪೂಜೆ ಸಲ್ಲಿಸಿ, ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದಲ್ಲಿ …

Read More »

ಬಸನಗೌಡ ಯತ್ನಾಳ್ ಮತ್ತು ಅರವಿಂದ ಬೆಲ್ಲದ ಪಕ್ಷದ ನಾಯಕರಲ್ಲ: ಉಸ್ತುವಾರಿ ಅರುಣ್ ಸಿಂಗ್

ಹುಬ್ಬಳ್ಳಿ: ಬಸನಗೌಡ ಪಾಟೀಲ ಯತ್ನಾಳ ಪಕ್ಷದ ನಾಯಕಲ್ಲ. ಅವರೇನೋ ರಾಜ್ಯ- ರಾಷ್ಟ್ರ ನಾಯಕರಲ್ಲ. ಪಕ್ಷದ ಕೋರ್ ಕಮಿಟಿಯಲ್ಲಿ ಇಲ್ಲ. ಹೀಗಾಗಿ ಅವರ ಮಾತಿಗೆ ಮನ್ನಣೆ ಕೊಡಬೇಕಾಗಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.   ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕರ ಬಗ್ಗೆ ಮಾತನಾಡಿದ್ದರ ಬಗ್ಗೆ ಹಿಂದೆಯೇ ನೋಟೀಸ್ ನೀಡಲಾಗಿದೆ. ಅದಕ್ಕೆ ಉತ್ತರ ನೀಡಿದ್ದಾರೆ. ಹಲವು ಬಾರಿ ಹೇಳಿದರೂ ಅದು ಪುನರಾವರ್ತನೆಯಾಗಿದೆ. ಅವರ ಸ್ವಭಾವ ಇರುವುದೇ ಹಾಗೆ. …

Read More »

ಭಾರತ್ ಜೋಡೋ ಪಾದಯಾತ್ರೆಯಲ್ಲಿ ವಿದ್ಯುತ್ ಅವಘಡ: ತಲಾ ಲಕ್ಷ ರೂ. ಪರಿಹಾರ ಘೋಷಿಸಿದ ರಾಹುಲ್

ಬಳ್ಳಾರಿ: ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಪಾದಯಾತ್ರೆ’ಯಲ್ಲಿ ವಿದ್ಯುತ್ ಅವಘಡ ಸಂಭವಿಸಿ, ಐವರಿಗೆ ಗಾಯಗಳಾಗಿರುವ ಘಟನೆ ಭಾನುವಾರ ನಡೆದಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಶನಿವಾರ ಸಾರ್ವಜನಿಕ ಬಹಿರಂಗ ಸಭೆಯನ್ನು ಮುಗಿಸಿಕೊಂಡು ತಾಲೂಕಿನ ಸಂಗನಕಲ್ಲು ಗ್ರಾಮದ ಹೊರ ವಲಯದಲ್ಲಿ ತಂಗಿದ್ದ ರಾಹುಲ್ ಗಾಂಧಿಯವರು, ಭಾನುವಾರ ಬೆಳಗ್ಗೆ 6.30ಕ್ಕೆ ಎಂದಿನಂತೆ ಪಾದಯಾತ್ರೆಗೆ ಕೈಗೊಂಡ ಮೋಕಾದತ್ತ ತೆರಳಿದರು. ಈ ವೇಳೆ ಹೊಸಮೋಕ ದಾಟುತ್ತಿದ್ದಂತೆ ಇದ್ದ ದೊಡ್ಡ …

Read More »

ವಿಜಯಪುರ ಪಾಲಿಕೆ ಚುನಾವಣೆ : ವಾಮಾಚಾರ ಹಾವಳಿ; ಜನರ ಆಕ್ರೋಶ

ವಿಜಯಪುರ: ವಿಜಯಪುರ ಮಹಾನಗರ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿರುವ ಈ ಹಂತದಲ್ಲಿ ಮಾಟ-ಮಂತ್ರದ ಕ್ಷುದ್ರ ಚಟುವಟಿಕೆಗಳು ತಲೆ ಎತ್ತಿದ್ದು, ಸಾರ್ವಜನಿಕರನ್ನು ಆತಂಕ ಪಡುವಂತೆ ಮಾಡಿವೆ. ವಾರ್ಡ್ ನಂ. 14 ರಲ್ಲಿ ಬರುವ ನಗರದ ಶಿಖಾರಖಾನೆ ಪ್ರದೇಶದ ಅನಂತಲಕ್ಷ್ಮೀ ಹಾಲ್ ಬಳಿ ಕಿಡಿಗೇಡಿಗಳು ಮಾಟ ಮಂತ್ರ ಮಾಡಿಸಿದಂತೆ ಕುಂಕು, ಅರಿಷಿಣ, ನಿಂಬೆಹಣ್ಣು, ಎಲೆ, ಮೊಟ್ಟೆ, ಹಣ ಸೇರಿದಂತೆ ಹೂವುಗ ಳೊಂದಿಗೆ ಮಾಟ ಮಂತ್ರ ಮಾಡಿ ಎಸೆದಿದ್ದಾರೆ.   ಸದರಿ ವಾರ್ಡ್ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ …

Read More »

ಬ್ರಿಟಿಷರೊಂದಿಗೆ ಶಾಮೀಲಾಗಿದ್ದ ಆರ್ ಎಸ್‍ಎಸ್ ನವರು ದೇಶ ಭಕ್ತರಲ್ಲ: ರಾಮಲಿಂಗಾ ರೆಡ್ಡಿ

ವಿಜಯಪುರ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಜೊತೆ ಶಾಮೀಲಾಗಿದ್ದ ಆರ್ ಎಸ್‍ಎಸ್ ನಾಯಕರು ಇದೀಗ ದೇಶ ಭಕ್ತರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು. ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಹೋರಾಟಕ್ಕಿಳಿದಿದ್ದರೆ, ಆರ್ ಎಸ್‍ಎಸ್ ಬ್ರಿಟಿಷರ ಜೊತೆ ಶಾಮೀಲಾಗಿತ್ತು. ಸ್ವಾತಂತ್ರ್ಯ ಹೋರಾಟ ದಲ್ಲಿ ಆರ್ ಎಸ್‍ಎಸ್, ಬಿಜೆಪಿ ಭಾಗಿ ಆಗರಿಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರು ಭಾಗವಹಿಸಿದವರು ಕಾಂಗ್ರೆಸ್‍ಗೆ ಸೇರಿದವರು ಎಂದರು. ಸ್ವಾತಂತ್ರ್ಯ …

Read More »

ಆಂಧ್ರ ಪ್ರವೇಶಿಸಿದ ಭಾರತ್‌ ಜೋಡೋ ಯಾತ್ರೆ; ರಾಜ್ಯದಲ್ಲಿ 17 ದಿನಗಳ ಯಾತ್ರೆ ಮುಕ್ತಾಯ

ಬಳ್ಳಾರಿ: ಎಐಸಿಸಿ ಮುಖಂಡ ರಾಹುಲ್‌ ಗಾಂಧಿ ಗಣಿನಾಡು ಬಳ್ಳಾರಿ ಜಿಲ್ಲೆ ಸಹಿತ ಕರ್ನಾಟಕದಲ್ಲಿ 17 ದಿನಗಳಿಂದ ಕೈಗೊಂಡಿದ್ದ ಭಾರತ್‌ ಜೋಡೋ ಯಾತ್ರೆ ರವಿವಾರ ಸಂಜೆ ನೆರೆಯ ಆಂಧ್ರಪ್ರದೇಶಕ್ಕೆ ಪ್ರವೇಶಿಸಿತು. ತಾಲೂಕಿನ ಸಂಗನಕಲ್ಲು ಗ್ರಾಮದ ಹೊರವಲಯದಲ್ಲಿ ಶನಿವಾರ ರಾತ್ರಿ ತಂಗಿದ್ದ ರಾಹುಲ್‌ ಗಾಂಧಿ  ಅ.16ರಂದು ಬೆಳಗ್ಗೆ 6.30ಕ್ಕೆ ಗ್ರಾಮದ ಕಾಳಿದಾಸ ವೃತ್ತದಿಂದ ಯಾತ್ರೆ ಆರಂಭಿಸಿದರು. ಆರಂಭದಲ್ಲಿ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಎಐಸಿಸಿ ಪ್ರಧಾನ …

Read More »

ಶೀಘ್ರವೇ 150 ಕ್ಷೇತ್ರಗಳ ಟಿಕೆಟ್‌ ಘೋಷಣೆ: ಡಿ.ಕೆ.ಶಿವಕುಮಾರ್‌

ಬಳ್ಳಾರಿ: ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ 150 ಜನರಿಗೆ ಮೊದಲೇ ಟಿಕೆಟ್‌ ಘೋಷಣೆ ಮಾಡುವ ಕಾರ್ಯ ಅಂತಿಮಘಟ್ಟ ತಲುಪಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ತಾಲೂಕಿನ ಮೋಕಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ ಗಾಂಧಿ ಪಾದಯಾತ್ರೆಯಲ್ಲಿ ಕೈಗೊಂಡ ಸೇವೆ, ಕ್ಷೇತ್ರದ ಜನರೊಂದಿಗೆ ಇರುವ ಸಂಪರ್ಕ, ಪಕ್ಷದ ನಿಷ್ಠೆ ಸೇರಿ ಹಲವು ಮಾನದಂಡಗಳನ್ನು ಪರಿಗಣಿಸುವುದರ ಜತೆಗೆ ಹೊಸ ಮುಖಗಳಿಗೂ ಈ ಬಾರಿ ಟಿಕೆಟ್‌ ನೀಡಲಾಗುವುದು. ಈ ಕುರಿತ ಸರ್ವೇ ವರದಿಗಳು …

Read More »

ನಾಲ್ಕೇ ದಿನದಲ್ಲಿ ನಗರದ ಟಿಳಕವಾಡಿ ಮೂರನೇ ರೈಲ್ವೇ ಗೇಟ್ ಮೇಲ್ಸೇತುವೆ(Flyover) ರಸ್ತೆಯಲ್ಲಿ ಗುಂಡಿ ಬಿದ್ದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ

ಬೆಳಗಾವಿ: ಉದ್ಘಾಟನೆಗೊಂಡ ನಾಲ್ಕೇ ದಿನದಲ್ಲಿ ನಗರದ ಟಿಳಕವಾಡಿ ಮೂರನೇ ರೈಲ್ವೇ ಗೇಟ್ ಮೇಲ್ಸೇತುವೆ(Flyover) ರಸ್ತೆಯಲ್ಲಿ ಗುಂಡಿ ಬಿದ್ದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಿ.ಸುರೇಶ ಅಂಗಡಿ(Suresh Angadi) ಕನಸಿನ ಕೂಸು ಆಗಿರುವ ನಗರದ ಟಿಳಕವಾಡಿ ಮೂರನೇ ರೈಲ್ವೆ ಗೇಟ್ ರಸ್ತೆ ಮೇಲ್ಸೇತುವೆಯನ್ನು ಕಳೆದ ನಾಲ್ಕು ದಿನಗಳ ಹಿಂದೆ ಸುರೇಶ್ ಅಂಗಡಿ ಧರ್ಮಪತ್ನಿ, ಸಂಸದೆ ಮಂಗಳ ಸುರೇಶ ಅಂಗಡಿ ಉದ್ಘಾಟಿಸಿದ್ದರು. ಆದರೆ ಅವರು ಚಾಲನೆ ನೀಡಿದ ನಾಲ್ಕೇ ದಿನಕ್ಕೆ ಮೇಲ್ಸೇತುವೆ ರಸ್ತೆಯಲ್ಲಿ ಗುಂಡಿಗಳು …

Read More »

ಬ್ಯಾಂಕನ ಕೀ ಮುರಿದು ಹಣ ದೋಚಿದ ಆರೋಪಿಗಳ ಹೆಡೆಮುರಿ ಕಟ್ಟಿ ನಾಲ್ವರು ಆರೋಪಿಗಳನ್ನು ಚಿಕ್ಕೋಡಿ ಪೋಲಿಸರು ಬಂಧಿಸಿದ್ದಾರೆ.

ಫೈನಾನ್ಸ ಬ್ಯಾಂಕನ ಕೀ ಮುರಿದು ಹಣ ದೋಚಿದ ಆರೋಪಿಗಳ ಹೆಡೆಮುರಿ ಕಟ್ಟಿ ನಾಲ್ವರು ಆರೋಪಿಗಳನ್ನು ಚಿಕ್ಕೋಡಿ ಪೋಲಿಸರು ಬಂಧಿಸಿದ್ದಾರೆ.   ಚಿಕ್ಕೋಡಿ ಪಟ್ಟಣದ ಫೀನ್ ಕೇರ್ ಸ್ಮಾಲ್ ಫೈನಾನ್ಸ ಬ್ಯಾಂಕಿನ ಕೀಲಿ‌ ಮುರಿದು 6.47,096 ರೂಗಳನ್ನು ದರೋಡೆ ಮಾಡಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.ಬಂಧಿತರನ್ನು ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದ ರಮೇಶ ಕುಟ್ನಪ್ಪಾ ನಾಯಿಕ(29),ಜಮಖಂಡಿ ತಾಲೂಕಿನ‌ ಮುತ್ತೂರ ಗ್ರಾಮದ ಬಸವರಾಜ ಉಮೇಶ ಕುಂಚನೂರೆ(28),ರಬಕವಿ ತಾಲೂಕಿನ …

Read More »