Breaking News

ಗಡಿ ವಿವಾದ; ಕೇಂದ್ರ ಸರ್ಕಾರ ಮೂಕ ಪ್ರೇಕ್ಷಕನಾಗಿ ಉಳಿಯಬಾರದು: ಪವಾರ್

ಮುಂಬಯಿ : ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದದ ನಡುವೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಗುರುವಾರ ಕೇಂದ್ರ ಸರ್ಕಾರ ಮೂಕ ಪ್ರೇಕ್ಷಕನಾಗಿ ಉಳಿಯಬಾರದು ಎಂದು ಹೇಳಿದ್ದಾರೆ. ಎನ್‌ಸಿಪಿ ಸಭೆಯನ್ನುದ್ದೇಶಿಸಿ ಮಾತನಾಡಿ, ಭಾಷಾ ಮಾಧ್ಯಮ ಮತ್ತು ಚಳವಳಿಯ ಕಲ್ಪನೆಯನ್ನು ನಾಶಮಾಡಲು ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಪ್ರತಿಕ್ರಿಯೆ ಉಂಟಾಗುತ್ತದೆ. ಆದರೆ ಕೇಂದ್ರವು ಅದರತ್ತ ಕಣ್ಣು ಮುಚ್ಚಿ ಕುಳಿತಿದೆ ಎಂದು ಪವಾರ್ ಹೇಳಿದರು. ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದವು ಎರಡು ರಾಜ್ಯಗಳ ನಡುವೆ …

Read More »

ಲಾಡ್ಜ್‌ ನಲ್ಲಿ ನೇಣಿಗೆ ಶರಣಾದ ಯುವಕ-ಯುವತಿ:

ಧಾರವಾಡ: (Suicide Case) ಲಾಡ್ಜ್‌ನಲ್ಲಿ ಯುವ ಜೋಡಿಯೊಂದು ಒಂದೆ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆ ನವಲಗುಂದದ ಪಟ್ಟಣದ ಲಾಡ್ಜ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ. ನವಲಗುಂದ ಪಟ್ಟಣದ ಅಶೋಕ ಲಾಡ್ಜ್‌ವೊಂದರ ಫ್ಯಾನಿಗೆ ಜೋಡಿಯಾಗಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಇವರನ್ನು ಕುಮಾರ ತಳವಾರ ಹಾಗೂ ದೀಪಾ ಎಂದು ಹೇಳಲಾಗುತ್ತಿದೆ.   ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಶೋಕ ಲಾಡ್ಜ್‌ನಲ್ಲಿ ಹೀಗೆ ನೇಣು …

Read More »

ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ; ಮುಹೂರ್ತ ಫಿಕ್ಸ್

ಬೆಂಗಳೂರು: ವಿಧಾನಮಂದಲ ಚಳಿಗಾಲದ ಅಧಿವೇಶನದ ನಡುವೆಯೇ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 21ರಂದು ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿಯೇ ಚುನಾವಣೆ ನಡೆಯಲಿದೆ.   ಹಾಲಿ ಹಂಗಾಮಿ ಸಭಾಪತಿಯಾಗಿ ರಘುನಾಥ್ ರಾವ್ ಮಲ್ಕಾಪುರೆ ಕಾರ್ಯನಿರ್ವಹಿಸುತ್ತಿದ್ದು, ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ದಟ್ಟವಾಗಿದೆ. ಈ‌ ಬಾರಿ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಗಡಿ ಜಿಲ್ಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ …

Read More »

ಕೆಲ ದಿನಗಳ ಹಿಂದೆ ಕಣ್ಮರೆಯಾಗಿದ್ದ ಕುಷ್ಟಗಿಯ ಕೃಷಿ ಅಧಿಕಾರಿ ಬೆಂಗಳೂರಿನಲ್ಲಿ ಪತ್ತೆ

ಕುಷ್ಟಗಿ: ಡಿ.1ರಿಂದ ಕಣ್ಮರೆಯಾಗಿದ್ದ ಕುಷ್ಟಗಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಅವರು, ಸಾಮಾಜಿಕ ಜಾಲತಾಣ ಸುಳಿವಿನಿಂದ ಪತ್ತೆ ಹಚ್ಚಿರುವ ಮಾಹಿತಿ ಪೋಲಿಸ್ ಮೂಲಗಳು ದೃಢಪಡಿಸಿವೆ‌. ಡಿ.1 ರ ಬೆಳಗ್ಗೆ ಅವರ ಸ್ವಗ್ರಾಮ ಹಿರೇಅರಳಹಳ್ಳಿ (ಯಲಬುರ್ಗಾ) ಗ್ರಾಮದಿಂದ ಅವರ ಪರಿಚಯಸ್ಥ ಹನುಮಂತ ಕೊಂಡಗುರಿ ಬೈಕಿನಲ್ಲಿ ಕುಷ್ಟಗಿ ಬಸ್ ನಿಲ್ದಾಣದವರೆಗೂ ಬಂದಿಳಿದು, ಅಲ್ಲಿಂದ ಕಣ್ಮರೆಯಾಗಿದ್ದರು. ಮನೆಯಲ್ಲಿ ತಮ್ಮ ಎರಡು ಮೋಬೈಲ್ ಬಿಟ್ಟು ಹೋದವರು ಸಂಜೆಯಾದರೂ ಮನೆಗೆ ಮರಳದೇ …

Read More »

ಹೆಚ್. ವಿಶ್ವನಾಥ್ – ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಕುತೂಹಲ ಕೆರಳಿಸಿದೆ ‘ಬಾಂಬೆ ಬಾಯ್ಸ್’ ನಡೆ.!

ಜೆಡಿಎಸ್ – ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾಗಿದ್ದ ‘ಬಾಂಬೆ ಬಾಯ್ಸ್’ ಈಗ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಪೈಕಿ ಬಹುತೇಕರು ಮಂತ್ರಿಯಾಗಿದ್ದು, ಹೆಚ್. ವಿಶ್ವನಾಥ್ ಅವರಿಗೆ ಅವಕಾಶ ಸಿಕ್ಕಿಲ್ಲ. ವಿಧಾನಸಭಾ ಚುನಾವಣೆಗೆ ಇನ್ನು ಐದಾರು ತಿಂಗಳು ಬಾಕಿ ಇದ್ದು, ರಾಜ್ಯ ರಾಜಕಾರಣದಲ್ಲಿ ಕೆಲವೊಂದು ಬದಲಾವಣೆಗಳಾಗುತ್ತಿವೆ.   ಇದರ ಮಧ್ಯೆ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಅಚ್ಚರಿ …

Read More »

ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಇನ್ಮುಂದೆ ಸಂಕಷ್ಟ..

ಬೆಂಗಳೂರು: ಟ್ರಾಫಿಕ್ ದಂಡ ಕಟ್ಟದೇ ಓಡಾಡ್ತಿದ್ರೆ ನಿಮ್ಮ ವಾಹನಗಳನ್ನ ರೋಡಿಗಿಳಿಸೋಕೆ ಅಗಲ್ಲ, ಪೊಲೀಸರು ದಂಡದ ರಶೀದಿಯನ್ನ ನಿಮ್ಮ ಮನೆಗೆ ಕಳಿಸಿದ್ರೂ ಡೋಂಟ್ ಕೇರ್ ಎಂದವರಿಗೆ ಕಾದಿದೆ ಬಿಗ್ ಶಾಕ್. ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಇನ್ಮುಂದೆ ಸಂಕಷ್ಟ. ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳ ಮೇಲೆ ಕಾನೂನು ಅಸ್ತ್ರ. ಆರ್​ಟಿಓ ಮತ್ತು ಇನ್ಶೂರೆನ್ಸ್ ಕಂಪನಿಗಳ ಮೂಲಕ ದಂಡ ವಸೂಲಿಗೆ ಫ್ಲಾನ್ ರೂಪಿಸಲಾಗಿದೆ. ಪೊಲೀಸರು ವೈಟ್ ಮತ್ತು ಯೆಲ್ಲೋ ಬೋರ್ಡ್ ವಾಹನಗಳ ದಂಡ ವಸೂಲಿಗೆ …

Read More »

ಕರವೇ ಕಾರ್ಯಕರ್ತರು ಪೊಲೀಸರ ವಶಕ್ಕೆ.

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ ಹಿನ್ನೆಲೆ ಪೊಲೀಸರ ವಿರುದ್ಧ ಕರವೇ ಶಿವರಾಮೇ ಗೌಡ ಕೆಂಡಾಮಂಡಲವಾಗಿದ್ದಾರೆ. ಎಂಇಎಸ್ ಪುಂಡರನ್ನ,ಮರಾಠಿ ಪುಂಡರನ್ನ ಮೊದಲು ಬಂಧಿಸಿ, ಕರ್ನಾಟಕದ ಬಸ್ಸುಗಳಿಗೆ ಬೆಂಕಿ ಹಚ್ಚಿದವರನ್ನ ಬಂಧಿಸಿ, ನಮ್ಮನ್ನ ಬಂಧಿಸಿ ಹೋರಾಟವನ್ನ ಹತ್ತಿಕ್ಕಲಾಗ್ತಿದೆ. ರಾಜ್ಯ ಸರ್ಕಾರ ಕನ್ನಡಪರ ಹೋರಾಟವನ್ನ ಹತ್ತಿಕ್ಕುತ್ತಿದೆ, ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ಕರವೇ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ಆರಂಭಕ್ಕೂ ಮುನ್ನವೇ ರಾಜ್ಯ ಸರ್ಕಾರ ಹತ್ತಿಕ್ಕುತ್ತಿದೆ, ಹೋರಾಟಕ್ಕೂ ಮೊದಲೇ ನಮ್ಮನ್ನ ಬಂಧಿಸಲಾಗುತ್ತಿದೆ. ಎಂದು …

Read More »

ಗುಜರಾತ್​​​​ ಎಲೆಕ್ಷನ್​ ಬೇರೆ.. ಕರ್ನಾಟಕದ ಎಲೆಕ್ಷನ್​ ಬೇರೆ: ಸಿ.ಎಂ.ಇಬ್ರಾಹಿಂ

ಬೆಂಗಳೂರು: ಗುಜರಾತ್​​​​ ಎಲೆಕ್ಷನ್​ ಬೇರೆ.. ಕರ್ನಾಟಕದ ಎಲೆಕ್ಷನ್​ ಬೇರೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಕಾಂಗ್ರೆಸ್ ಡ್ರೈವರ್ ಇಲ್ಲದ ಬಸ್​. ಗೊತ್ತು ಗುರಿಯೂ ಇಲ್ಲ. ಹೆಚ್​ಡಿಕೆ ಕರೆಸಿ ಸರ್ಕಾರ ಮಾಡಿ ಆನಂತ್ರ ಅವರೇ ಮುಂಬಯಿಗೆ ಕಳಿಸಿದ್ರು. ಕರ್ನಾಟಕದಲ್ಲಿ ಪ್ರಾದೇಶಿಕ ಶಕ್ತಿಗೆ ಜನ ಮಣೆ ಹಾಕ್ತಾರೆ. ಕರ್ನಾಟಕದಲ್ಲಿ ಮೋದಿ ಮ್ಯಾಜಿಕ್​​​ ನಡೆಯಲ್ಲ, ದೇವೇಗೌಡರ ದೊಡ್ಡ ಮ್ಯಾಜಿಕ್​​ ನಡೆಯುತ್ತೆ ಎಂದು ಇಬ್ರಾಹಿಂ ಹೇಳಿದ್ದಾರೆ.

Read More »

ಮುತಗಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಹೇಮಲತಾ ಕಿವಡಸಣ್ಣವರ ವರ್ಗಾವಣೆ ಕೋರಿ ಪ್ರತಿಭಟನೆ

ಮುತಗಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಹೇಮಲತಾ ಕಿವಡಸಣ್ಣವರ ಅವರನ್ನು ವರ್ಗಾವಣೆ ಮಾಡಲು ಕೋರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎದುರು ಪ್ರತಿಭಟನೆ ನಡೆಸಲಾಯಿತು. ಮುತಗಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಹೇಮಲತಾ ಕಿವಡಸಣ್ಣವರ ಅವರು ಸಮಯಕ್ಕೆ ಸರಿಯಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವುದಿಲ್ಲ. ಮತ್ತು ಕಾಳಜಿ ಪೂರ್ವಕವಾಗಿ ರೋಗಿಗಳೊಂದಿಗೆ ವ್ಯವಹರಿಸುವದಿಲ್ಲ ಜೊತೆಗೆ ಆಸ್ಪತ್ರೆಯಲ್ಲಿ ಯಾವದೇ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ ಎಂದು ಸತೀಶ್ ಶಹಾಪುರಕರ …

Read More »

ಗಡಿ ವಿವಾದ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಗಳ ಟಾರ್ಗೆಟ್

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಗಳ ಟಾರ್ಗೆಟ್ ಮಾಡಲಾಗುತ್ತಿರುವದನ್ನು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ಖಂಡಿಸಿದೆ. ರಾಜ್ಯ ರಸ್ತೆ ಸಾರಿಗೆ ಬಸ್ ಗಳಿಗೆ ಕಪ್ಪು ಬಣ್ಣ ಬಳಿದು ವಿರೋಧಿಸಿ ಮಹಾರಾಷ್ಟ್ರ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಲಾಗಿದೆ. ಮಹಾರಾಷ್ಟ್ರ ಪುಂಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಮಹಾರಾಷ್ಟ್ರ ನವ ನಿರ್ಮಾಣ …

Read More »