Breaking News

ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ನಿಧನಕ್ಕೆ ಕಂಬನಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಂತಾಪ

ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ನಿಧನಕ್ಕೆ ಕಂಬನಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಂತಾಪ ಸೂಚಿಸಿದ್ದಾರೆ. ಸವದತ್ತಿ ತಾಲೂಕು ಕ್ರೀಡಾಂಗಣದಲ್ಲಿ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆನಂದ ಮಾಮನಿ ಅವರ ಅಗಲಿಕೆಯಿಂದ ನಾವೆಲ್ಲರೂ ಬಡವರಾಗಿದ್ದೇವೆ. ಸಹಕಾರ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಆನಂದ ಮಾಮನಿ ಅವರನ್ನ ಪ್ರೀತಿಯಿಂದ ಸವದತ್ತಿ ಮೋದಿ ಅಂತಾ ಜನರು ಕರೆಯುತ್ತಿದ್ದರು. ಆನಂದ …

Read More »

ಆನಂದ ಮಾಮನಿ ನಿಧನಕ್ಕೆ ಹುಕ್ಕೇರಿಶ್ರೀ ಸಂತಾಪ…

ಆನಂದ ಮಾಮನಿ ಅವರ ನಿಧನಕ್ಕೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕೂಡ ಸಂತಾಪ ಸೂಚಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಶಾಸಕರು, ರಾಜ್ಯ ವಿಧಾನಸಭೆಯ ಮಾನ್ಯ ಉಪ ಸಭಾಧ್ಯಕ್ಷರು ಹುಕ್ಕೇರಿ ಹಿರೇಮಠದ ಜೊತೆಗೆ ಅಭಿನಾಭಾವ ಸಂಬAಧವನ್ನಿಟ್ಟುಕೊAಡಿದ್ದ ಶ್ರೀ ಆನಂದ ಚಂದ್ರಶೇಖರ ಮಾಮನಿ ಅವರು ನಿಧನರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ …

Read More »

ಪಾಪದ ಪಿಂಡಗಳ ಬಗ್ಗೆ ಕಾಂಗ್ರೆಸ್ ನವರು ಮೊದಲು ಪಶ್ಚಾತ್ತಾಪ ಮಾಡಿಕೊಳ್ಳಲಿ. ಆ ಬಳಿಕ ಭಾರತ ಜೋಡೋ ಮಾಡಲಿ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಪಾಪದ ಪಿಂಡಗಳ ಬಗ್ಗೆ ಕಾಂಗ್ರೆಸ್ ನವರು ಮೊದಲು ಪಶ್ಚಾತ್ತಾಪ ಮಾಡಿಕೊಳ್ಳಲಿ. ಆ ಬಳಿಕ ಭಾರತ ಜೋಡೋ ಮಾಡಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದರು. ರಾಣಿ ಚೆನ್ನಮ್ಮ ಜಯಂತಿ ನಿಮ್ಮಿತ್ತ ನಗರದ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು, ಭಾರತ ಜೋಡೋ ಕಾಂಗ್ರೆಸ್ ತೋಡೋ ಯಾತ್ರೆ ಆಗತ್ತಿದೆ. ಹಲವರು ಕಾಂಗ್ರೆಸ್ ಚೋಡೋ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಮಾಡಬೇಕಿರೋದು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟಿದ್ದಕ್ಕೆ …

Read More »

ಡೆಪ್ಯುಟಿ ಸ್ಪೀಕರ್ ಮಾಮನಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

    ಗೋಕಾಕ್- ವಿಧಾನಸಭೆಯ ಉಪ ಸಭಾಪತಿ ಹಾಗೂ ಸವದತ್ತಿ ಶಾಸಕ ಆನಂದ ಮಾಮನಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಕಳೆದ ಮೂರು ಅವಧಿಯಿಂದ ಸವದತ್ತಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಮನಿ ಅವರು ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಸವದತ್ತಿ ಯಲ್ಲಮ್ಮ ದೇವಸ್ಥಾನದ ಪ್ರಗತಿಗಾಗಿಯೂ ಸಾಕಷ್ಟು ಕೊಡುಗೆ ನೀಡಿದ್ದರು. ಇವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ಹಾನಿಯಾಗಿದೆ. ಮೃತರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮಾಮನಿ …

Read More »

ರಾಜ್ಯದಲ್ಲಿ ಜನವರಿ ಬಳಿಕ ಕಾಂಗ್ರೆಸ್ ಮಾತ್ರವಲ್ಲ ಎಲ್ಲ ಪಕ್ಷಗಳಲ್ಲೂ ಪಕ್ಷಾಂತರ ಮಾಡುವ ನಾಯಕರಿದ್ದಾರೆ: ಸತೀಶ್ ಜಾರಕಿಹೊಳಿ

ರಾಯಚೂರು: ರಾಜ್ಯದಲ್ಲಿ ಜನವರಿ ಬಳಿಕ ಕಾಂಗ್ರೆಸ್ ಮಾತ್ರವಲ್ಲ ಎಲ್ಲ ಪಕ್ಷಗಳಲ್ಲೂ ಪಕ್ಷಾಂತರ ಮಾಡುವ ನಾಯಕರಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಶನಿವಾರ ಭವಿಷ್ಯ ನುಡಿದಿದ್ದಾರೆ.   ನಗರದಲ್ಲಿ ‘ಭಾರತ್ ಜೋಡೋ’ ಕಾರ್ಯಕ್ರಮ ನಿಮಿತ್ತ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದವರು ಬೇರೆ ಕಡೆ ಹೋಗುತ್ತಾರೆ. ಆ ಪಕ್ಷದವರು ನಮ್ಮಲ್ಲಿಗೆ ಬರುತ್ತಾರೆ. ಚುನಾವಣೆ ಬಂದರೆ ಇದೊಂದು ಸಾಮಾನ್ಯ ಪ್ರಕ್ರಿಯೆ. ಆದರೆ, ಯಾರು ಹೋಗುತ್ತಾರೆ, ಬರುತ್ತಾರೆ ಎಂಬದು ಗೊತ್ತಾಗಬೇಕಾದರೆ ಜನವರಿವರೆಗೂ ಕಾಯಬೇಕು …

Read More »

ಕರ್ನಾಟಕ ರಾಜ್ಯೋತ್ಸವ: 67 ಪ್ರಶಸ್ತಿಗೆ 28 ಸಾವಿರ ಅರ್ಜಿಗಳು!

ಬೆಂಗಳೂರು: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಾಗಿ ನಾಡಿನ ವಿವಿಧ ವಲಯದಿಂದ 28 ಸಾವಿರ ಅರ್ಜಿಗಳ ಸಲ್ಲಿಕೆಯಾಗಿವೆ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇಮಕ ಮಾಡಿದ್ದ ಉಪಸಮಿತಿ, ಸಲಹಾ ಸಮಿತಿ ಅರ್ಜಿ ಪ್ರಕ್ರಿಯೆಯ ಪರಿಶೀಲನೆ ಪೂರ್ಣಗೊಳಿಸಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಸಭೆ ನಡೆಯಲಿದ್ದು ಇಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.   ಈ ವರ್ಷ 67ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ವಿವಿಧ …

Read More »

ಚನ್ನಮ್ಮ ಕಿತ್ತೂರು ಉತ್ಸವ-2022ಕ್ಕೆ ವೀರರಾಣಿ ಚನ್ನಮ್ಮಾಜಿಯ ತವರೂರು ಕಾಕತಿಯಲ್ಲಿ ಅದ್ಧೂರಿಯಾಗಿ ಚಾಲನೆ

ಚನ್ನಮ್ಮ ಕಿತ್ತೂರು ಉತ್ಸವ-2022ಕ್ಕೆ ವೀರರಾಣಿ ಚನ್ನಮ್ಮಾಜಿಯ ತವರೂರು ಕಾಕತಿಯಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಹೌದು ರವಿವಾರ ಚನ್ನಮ್ಮಾಜಿಯ ತವರೂರು ಕಾಕತಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಮ್ಮ ಕಿತ್ತೂರು-ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಚನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ …

Read More »

ಪ್ರತಿಟನ್ ಕಬ್ಬಿಗೆ ೫೫೦೦/- ಬೆಲೆ ನೀಡಬೇಕೆಂದು ಕಬ್ಬು ಬೆಳೆಗಾರರು ಆರಂಭಿಸಿದ ಹೋರಾಟ ಇಂದು ಕೂಡ ಮುಂದೆವರಿದಿದೆ.

ಪ್ರತಿಟನ್ ಕಬ್ಬಿಗೆ ೫೫೦೦/- ಬೆಲೆ ನೀಡಬೇಕೆಂದು ಕಬ್ಬು ಬೆಳೆಗಾರರು ಆರಂಭಿಸಿದ ಹೋರಾಟ ಇಂದು ಕೂಡ ಮುಂದೆವರಿದಿದೆ. ವಿಧಾನಸಭೆಯ ಉಪಸಭಾಪತಿ ಆನಂದ ಮಾಮನಿ ನಿಧನ ಮತ್ತು ಕಿತ್ತೂರು ಉತ್ಸವದ ಹಿನ್ನೆಲೆ ಸಾಂಕೇತಿಕವಾಗಿ ಇಂದು ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರು.   ಭಾನುವಾರದAದು ಬೆಳಗಾವಿ ತಾಲೂಕು, ಮೂಡಲಗಿ ತಾಲೂಕು ಮತ್ತು ಗೋಕಾಕ ತಾಲೂಕಿನಿಂದ ಆಗಮಿಸಿದ ರೈತರು ಪ್ರತಿಟನ್ ಕಬ್ಬಿಗೆ ೫೫೦೦/- ಬೆಲೆ ನೀಡುವಂತೆ ಒತ್ತಾಯಿಸಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. …

Read More »

ಸರ್ವಿಸ್ ವಿದ್ಯುತ್ ವೈರ್ ತುಳಿದು 6 ಬಾಲಕ ಸಾವನ್ನಪ್ಪಿದ್ದಾನೆ.

ಸರ್ವಿಸ್ ವಿದ್ಯುತ್ ವೈರ್ ತುಳಿದು ಬಾಲಕ ಓರ್ವ ಸಾವನ್ನಪ್ಪಿರುವ ಘಟನೆ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ನಡೆದಿದೆ. 6 ವರ್ಷದ ವರುಣ ಬಸಪ್ಪ ಕೋಲಕಾರ್ ಮೃತ ದುರ್ದೈವಿ ಬಾಲಕ. ಶನಿವಾರ ಬೆಳಿಗ್ಗೆ ಈ ಬಾಲಕ ಶೌಚಕ್ಕೆ ಹೋಗುತ್ತಿದ್ದ ವೇಳೆ ಪಕ್ಕದ ಮನೆಯವರ ಹಿಂಬದಿ ಬಿದ್ದಿದ್ದ ಸರ್ವಿಸ್ ವೈರ್ ತುಳಿದು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Read More »

ಸವದತ್ತಿಗೆ ಬಂದ ಆನಂದ‌ ಮಾಮನಿ ಮೃತದೇಹ

ಇಂದು ಬೆಳಗಿನ ಜಾವ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕರು ಹಾಗೂ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ಮೃತದೇಹ‌ ಸ್ವಕ್ಷೇತ್ರ ಸವದತ್ತಿಗೆ ತರಲಾಗಿದೆ. ತಮ್ಮ ನೆಚ್ಚಿನ ನಾಯಕನ‌ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಸವದತ್ತಿ ಕ್ಷೇತ್ರ ಶೋಕ ಸಾಗರದಲ್ಲಿ ಮುಳುಗಿದೆ. ಅಭಿಮಾನಿಗಳ ದಂಡು ಆನಂದ‌ ಮಾಮನಿ ಅವರ ನಿವಾಸಕ್ಕೆ ತಂಡೋಪತಂಡವಾಗಿ ದೌಡಾಯಿಸಿದ್ದು ಕಣ್ಣೀರು ಹಾಕುತ್ತಿದ್ದಾರೆ. ಈಗಾಗಲೇ ಸಿಎಂ …

Read More »