Breaking News

ಸುವರ್ಣಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ನಿಪ್ಪಾಣಿ ಹಾಗೂ ಗೋಕಾಕ್ ರೈತ ಮುಖಂಡರು ಪೊಲೀಸರ ವಶಕ್ಕೆ

ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ನೀಡುವಂತೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ನಿಪ್ಪಾಣಿ ಹಾಗೂ ಗೋಕಾಕ್ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೌದು ಕಬ್ಬಿನ ಬೆಲೆ ನಿಗದಿ ಪಡಿಸುವಂತೆ ಸಿಎಂ ಬೊಮ್ಮಾಯಿ ವಿರುದ್ಧ ಬೆಳಗಾವಿ ಜಿಲ್ಲೆಯ ರೈತರು ಸಮರ ಸಾರಿದ್ದಾರೆ. ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಅಹೋರಾತ್ರಿ ಧರಣಿ ಆರಂಭವಾಗಿದೆ. ಮತ್ತೊಂದು …

Read More »

ಬಂಗಾರದ ಆಶೆಗೆ ದೊಡ್ಡಮನನ್ನೆ ಕೊಲೆ ಮಾಡಿ ಮಗ ಪರಾರಿ

ಬಂಗಾರದ ಆಶೆಗೆ ದೊಡ್ಡಮನನ್ನೆ ಕೊಲೆ ಮಾಡಿ ಮಗ ಪರಾರಿಯಾದ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಹೌದು,,, ಚಿನ್ನದ ಆಶೆಗಾಗಿ ತಂಗಿಯ ಮಗ ಮಾಲತೇಶ 70 ವರ್ಷದ ದೊಡ್ಡಮ್ಮ ಕಮಲಮ್ಮನ್ನ ಕೊಲೆ ಮಾಡಿ‌ ಮಗ ಮಾಲತೇಶ್ ಎಸ್ಕೇಪ್ ಆಗಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಕಮಲಮ್ಮನ ಮನೆಗೆ ಬಂದಿದ್ದ ಮಾಲತೇಶ, ಮಲಗಿದಲ್ಲೇ ಕಮಲಮ್ಮನ ಕಿವಿ ಕಟ್ ಮಾಡಿ ಕಿವಿಯೋಲೆ, ಕೊರಳಲ್ಲಿರೊ ಸರವನ್ನು ದೋಚಿ ಪರಾರಿಯಾಗಿದ್ದಾನೆ. ಇನ್ನುಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಕಮಲಮ್ಮ …

Read More »

ಗ್ರಹಣಗಳು ಸಹಜ ಪ್ರಕ್ರಿಯೆಗಳು ಜ್ಯೋತಿಷಿಗಳು ಇದನ್ನು ಮೂಢನಂಬಿಕೆಗೆ ಪರಿವರ್ತನೆ ಮಾಡುವಲ್ಲಿ ಪ್ರಯತ್ನಿಸುತ್ತಿದ್ದಾರೆ.: ಸತೀಶ ಜಾರಕಿಹೊಳಿ

ಪೃಥ್ವಿ, ಆಕಾಶದಲ್ಲಿ ಸೂರ್ಯಗ್ರಹಣಗಳು ಸಹಜ ಪ್ರಕ್ರಿಯೆಗಳು ಆದರೆ ಬಹಳಷ್ಟು ಜ್ಯೋತಿಷಿಗಳು ಇದನ್ನು ಮೂಢನಂಬಿಕೆಗೆ ಪರಿವರ್ತನೆ ಮಾಡುವಲ್ಲಿ ಪ್ರಯತ್ನಿಸುತ್ತಿದ್ದಾರೆ. ದೇವರು ಮತ್ತು ಧರ್ಮದ ಮುಖಾಂತರ ಜನರನ್ನು ಹೆದರಿಸುತ್ತಿದ್ದಾರೆ. ಹೀಗಾಗಿ ಇದರಿಂದ ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕರೆ ನೀಡಿದರು. ಗೋಕಾಕ್‍ನ ತಮ್ಮ ನಿವಾಸದಲ್ಲಿ ಮಾತನಾಡಿದ ಸತೀಶ ಜಾರಕಿಹೊಳಿ ಅವರು ಪ್ರತಿವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬವನ್ನು ರಾಜ್ಯ ಮತ್ತು ರಾಷ್ಟ್ರದ ಜನ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. …

Read More »

ಪ್ರಭಾವಿ ನಾಯಕರ ಅಗಲಿಕೆ, ಚುನಾವಣಾ ವರ್ಷದಲ್ಲಿ ಬೆಳಗಾವಿ ಬಿಜೆಪಿಗೆ ಆಘಾತ

ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಬೆಳಗಾವಿ ಮೂಲದ ಮೂವರು ಪ್ರಭಾವಿ ಭಾಜಪ ನಾಯಕರು ವಿಧಿವಶರಾಗಿದ್ದು, (Anand Mamani) ಈ ಭಾಗದದಲ್ಲಿ ಬಿಜೆಪಿಗೆ ಆಘಾತವಾದಂತಾಗಿದೆ. ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದ್ದ ಮೂವರು ನಾಯಕರು ದಿಢೀರ್‌ ಅಗಲಿದ್ದಾರೆ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ, ಅರಣ್ಯ ಸಚಿವ ಉಮೇಶ್ ಕತ್ತಿ ಬಳಿಕ ಈಗ ಆನಂದ ಮಾಮನಿ ಸಾವಿಗೀಡಾಗಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಸುರೇಶ ಅಂಗಡಿ ಚಿಕಿತ್ಸೆ ಫಲಿಸದೇ ಏಮ್ಸ್‌ನಲ್ಲಿ ಕೊನೆಯುಸಿರೆಳೆದಿದ್ದರು. ಒಂದೂವರೆ ತಿಂಗಳ ಹಿಂದೆಯಷ್ಟೇ ಬೆಂಗಳೂರು …

Read More »

‘ಕುಮಾರಸ್ವಾಮಿಗೆ ಸರ್ಕಾರ ನಡೆಸುವ ಯೋಗ್ಯತೆ ಇರಲಿಲ್ಲ ಹೀಗಾಗಿ ಸಮ್ಮಿಶ್ರ ಸರ್ಕಾರ ಬಿದ್ದೋಯ್ತು

ಜೆಡಿಎಸ್ ಮುಖಂಡ ಎಚ್ .ಡಿ ಕುಮಾರಸ್ವಾಮಿಗೆ ಸರ್ಕಾರ ನಡೆಸುವ ಯೋಗ್ಯತೆ ಇರಲಿಲ್ಲ ಹೀಗಾಗಿ ಸಮ್ಮಿಶ್ರ ಸರ್ಕಾರ ಪತನವಾಯಿತು. ಹತಾಶೆಯಿಂದ ಅವರಿವರ ಮೇಲೆ ಆರೋಪ ಮಾಡುತ್ತಿದ್ದಾರೆ, ಇದು ಮೂರ್ಖತನ ಎಂದು ಮಾಜಿ ಸಚಿವ ಬಿಜೆಪಿ ಎಂಎಲ್ ಸಿ ಸಿ.ಪಿ ಯೋಗೇಶ್ವರ್ ಟಾಂಗ್ ನೀಡಿದ್ದಾರೆ. ರಾಮನಗರ: ಜೆಡಿಎಸ್ ಮುಖಂಡ ಎಚ್ .ಡಿ ಕುಮಾರಸ್ವಾಮಿಗೆ ಸರ್ಕಾರ ನಡೆಸುವ ಯೋಗ್ಯತೆ ಇರಲಿಲ್ಲ ಹೀಗಾಗಿ ಸಮ್ಮಿಶ್ರ ಸರ್ಕಾರ ಪತನವಾಯಿತು. ಹತಾಶೆಯಿಂದ ಅವರಿವರ ಮೇಲೆ ಆರೋಪ ಮಾಡುತ್ತಿದ್ದಾರೆ, ಇದು …

Read More »

ವಿಧಾನಸಭೆ ಚುನಾವಣೆ ಮೊದಲೇ ಬಿಜೆಪಿಯಲ್ಲಿ‌ ಭಿನ್ನಮತ ಸ್ಫೋಟ: 14 ಪದಾಧಿಕಾರಿಗಳ ಉಚ್ಛಾಟನೆ

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ‌ಭಿನ್ನಮತ ಭುಗಿಲೆದ್ದಿದ್ದು, ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯದ ಬಾವುಟ ಹಾರಿಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದ್ದು, ಬಂಡಾಯ ಹಾಗೂ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಅಂತಹ ಬಂಡಾಯ ಅಭ್ಯರ್ಥಿಗಳನ್ನ ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದೆ. ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕೂಚಬಾಳ ಅವರು ಪಕ್ಷ ವಿರೋಧಿ ಚಟುಟವಿಕೆ ಮಾಡಿದ್ದಾರೆಂಬ ಆರೋಪದಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ಒಟ್ಟು 14 …

Read More »

ಎಸ್​ಸಿ, ಎಸ್​ಟಿ, ಓಬಿಸಿ ಸಮುದಾಯದ ವಿಶ್ವಾಸ ಗಳಿಸಲು ಕಾಂಗ್ರೆಸ್ ಚಿಂತನೆ; ಮೂರು ಸಮಾವೇಶಗಳ ಆಯೋಜನೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ಧತೆ ನಡೆಸುತ್ತಿದ್ದು, ಎರಡೂ ಪಕ್ಷಗಳು ತಂತ್ರ-ಪ್ರತಿತಂತ್ರಗಳನ್ನು ರೂಪಿಸುತ್ತಿವೆ. ಇದೀಗ ಬಿಜೆಪಿಯ ಎಸ್​ಟಿ ಸಮಾವೇಶಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ಎಸ್​ಸಿ, ಎಸ್​ಟಿ ಮತ್ತು ಒಬಿಸಿ ಸಮುದಾಯಗಳನ್ನು ಗುರಿಯಾಗಿಸಿ ಸಮಾವೇಶಗಳನ್ನು ನಡೆಸಲು ಮುಂದಾಗಿದೆ. ಈ ಮೂರು ಸಮಯದಾಯದ ಮತ ಗಟ್ಟಿಗೊಳಿಸಲು ಯೋಜನೆ ರೂಪಿಸಿದ ಕಾಂಗ್ರೆಸ್, ಸಮಾವೇಶ ಆಯೋಜನೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ. ದಲಿತ ಸಮಾವೇಶ ಆಯೋಜನೆಗೂ ಭರದ ಸಿದ್ಧತೆ ನಡೆಯುತ್ತಿದೆ. ಮೀಸಲಾತಿ ಹೆಚ್ಚಳಕ್ಕೆ …

Read More »

ಬೆಳಗಾವಿಯ ಶಿವಾಜಿ ನಗರದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯ ಬರ್ಬರ ಹತ್ಯೆ ಕೇಸ್‍ಗೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ

ಬೆಳಗಾವಿಯ ಶಿವಾಜಿ ನಗರದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯ ಬರ್ಬರ ಹತ್ಯೆ ಕೇಸ್‍ಗೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು ಇದೇ ಅಕ್ಟೋಬರ್ 19ರಂದು ಬೆಳಗಾವಿಯ ಶಿವಾಜಿ ನಗರದ 5ನೇ ಕ್ರಾಸ್‍ನ ಪ್ರಜ್ವಲ್ ಶಿವಾನಂದ ಕರಿಗಾರ ಎಂಬ 16 ವರ್ಷದ ಬಾಲಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿ ಶವವನ್ನು ಮುಚ್ಚಂಡಿ ಗ್ರಾಮದ ಬಳಿ ಹಂತಕರು ಎಸೆದು ಹೋಗಿದ್ದರು. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ …

Read More »

ಹಳಿ ತಪ್ಪಿದ ಗೂಡ್ಸ್ ರೈಲಿನಿಂದ ಭಾರೀ ಅನಾಹುತ ತಪ್ಪಿದೆ.

ಹಳಿ ತಪ್ಪಿದ ಗೂಡ್ಸ್ ರೈಲಿನಿಂದ ಭಾರೀ ಅನಾಹುತ ತಪ್ಪಿದೆ. ರೈಲ್ವೆ ಗೂಡ್ಸ್‌ ಬೋಗಿಗಳು ಕಟ್ ಆದ ಪರಿಣಾನ ಆರು ಬೋಗಿಗಳು ಉರುಳಿಬಿದ್ದಿವೆ. ಚಲಿಸುತ್ತಿದ್ದ ವೇಳೆ ಏಕಾಏಕಿ ರೈಲ್ವೆಯ ಆರು ಬೋಗಿಗಳು ಕಟ್ ಆಗಿದ್ದು ಅದೃಷ್ಠ ವಶಾತ್ ಹೆಚ್ಚಿನ ಹಾನಿಯಾಗಿಲ್ಲ, ಯಾವುದೇ ಪ್ರಾಣ ಹಾನಿಯಾಗಿಲ್ಲ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಮುಳವಾಡ ರೈಲು ‌ನಿಲ್ದಾಣ ಬಳಿ ಘಟನೆ ನಡೆದಿದ್ದು ಆರು ಬೋಗಿಗಳು ಟ್ರ್ಯಾಕ್ ನಿಂದ ಕಟ್‌ ಆಗಿ ಹೊರಗಡೆಗೆ ಬಿದ್ದಿವೆ. ವಿಜಯಪುರ …

Read More »

ವೀರರಾಣಿ ಚನ್ನಮ್ಮ ಕಿತ್ತೂರು ಉತ್ಸವ-2022ಕ್ಕೆ ವಿದ್ಯುಕ್ತ ಚಾಲನೆ

ವೀರರಾಣಿ ಚನ್ನಮ್ಮ ಕಿತ್ತೂರು ಉತ್ಸವ-2022ಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ವೀರಜ್ಯೋತಿಯ ಸ್ವಾಗತ, ಆನೆಯ ಮೇಲೆ ವೀರಮಾತೆ ಚನ್ನಮ್ಮಾಜಿಯ ಭವ್ಯ ಮರವಣಿಗೆಗೆ ಕಿತ್ತೂರು ಕಲ್ಮಠದ ರಾಜಯೋಗಿಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಈ ಅದ್ಭುತ ಕ್ಷಣಕ್ಕೆ ಹಲವು ಗಣ್ಯರು, ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು. ಹೌದು ಬೆಂಗಳೂರಿನಿಂದ ಆರಂಭವಾಗಿ ಇಡೀ ರಾಜ್ಯ ಸಂಚರಿಸಿ ಬೈಲಹೊಂಗಲದ ಚನ್ನಮ್ಮಾಜಿ ಸಮಾಧಿಯಿಂದ ಆಗಮಿಸಿದ ವೀರಜ್ಯೋತಿಯನ್ನು ಕಿತ್ತೂರು ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಸ್ವಾಗತಿಸಲಾಯಿತು. …

Read More »