ಸಂತೋಷ್ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಗೋಕಾಕ್ ತಾಲ್ಲೂಕಿನ ರಡ್ಡೇರಟ್ಟಿ ಗ್ರಾಮದ ಕರಿಸಿದ್ದೆಶ್ವರ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ! ರಡ್ಡೇರಟ್ಟಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಡ್ಡೇರಟ್ಟಿ ಗ್ರಾಮದ ಕರಿಸಿದ್ದೇಶ್ವರ …
Read More »ಟಿಕ್‌ಟಾಕ್ ನಲ್ಲಿ ಅರಳಿದ ಪ್ರೇಮ : ಪ್ರಿಯತಮೆಜೊತೆ ಪತಿಯ ಮದುವೆ ಮಾಡಿಸಿದ ಪತ್ನಿ
ತಿರುಪತಿ: ಕಟ್ಟಿಕೊಂಡ ಗಂಡನನ್ನು ಹಂಚಿಕೊಳ್ಳಲು ಯಾವ ಹೆಂಡತಿಯೂ ಸಿದ್ಧಳಿರುವುದಿಲ್ಲ. ತನ್ನ ಗಂಡ ತನ್ನನ್ನು ಮಾತ್ರ ಪ್ರೀತಿಸಬೇಕು. ತನ್ನ ಕಷ್ಟಸುಖಕ್ಕೆ ಸದಾ ಜೊತೆಯಾಗಿರಬೇಕು ಎಂದು ಹೆಂಡತಿ ಬಯಸುತ್ತಾಳೆ. ಕೆಲವರಂತು ಎಷ್ಟು ಪೊಸೆಸಿವ್ ಎಂದರೆ ಗಂಡ ಬೇರೆ ಮಹಿಳೆಯರ ಜೊತೆ ಸಹಜವಾಗಿ ಮಾತನಾಡಿದರೂ ಸಿಡಿಮಿಡಿಗೊಳ್ಳುತ್ತಾರೆ. ಪೂರ್ತಿ ಚಡಪಡಿಸುತ್ತಾರೆ. ಆದರೆ ಇಲ್ಲೊಂದು ಕಡೆ ಪತ್ನಿ ಹೃದಯ ಶ್ರೀಮಂತಿಕೆ ತೋರಿದ್ದಾಳೆ. ಮದುವೆಗೆ ಮೊದಲು ತನ್ನ ಗಂಡ ಪ್ರೀತಿಸಿದ್ದ ಯುವತಿಯ ಜೊತೆ ಗಂಡನ ಮದುವೆ ಮಾಡಿದ್ದಾಳೆ. ಆಂಧ್ರಪ್ರದೇಶದ ತಿರುಪತಿಯಲ್ಲಿ …
Read More »ಕೋಟ್ಯಾಂತರ ಜನರಿಗೆ ಸಿಹಿ ಸುದ್ದಿ: ಮುಂದಿನ 6 ತಿಂಗಳವರೆಗೆ ಉಚಿತ ಪಡಿತರ ಲಭ್ಯ!
ಕೇಂದ್ರ ಸರ್ಕಾರ ಸದ್ಯದಲ್ಲೇ ಜನ ಸಾಮಾನ್ಯರಿಗೆ ಭರ್ಜರಿ ಗಿಫ್ಟ್ ನೀಡಲು ಹೊರಟಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ (PMGKAY) ಫಲಾನುಭವಿಗಳಿಗೆ ಮುಂದಿನ 6 ತಿಂಗಳವರೆಗೆ ಉಚಿತ ಪಡಿತರ ಪ್ರಯೋಜನವನ್ನು ಸರ್ಕಾರ ನೀಡಬಹುದು, ಅಂದರೆ, ಉಚಿತ ಪಡಿತರ ಸೌಲಭ್ಯವನ್ನು ಮುಂಬರುವ 6 ತಿಂಗಳವರೆಗೆ ವಿಸ್ತರಿಸಬಹುದು. ಉಚಿತ ಪಡಿತರವನ್ನು ನೀಡುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಸೆಪ್ಟೆಂಬರ್ 30 ರಿಂದ ವಿಸ್ತರಿಸಲು ಸರ್ಕಾರ ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ. …
Read More »15,000 ಶಿಕ್ಷಕರ ನೇಮಕಾತಿಗೆ 1:2 ಆಧಾರದಲ್ಲಿ ಅಭ್ಯರ್ಥಿಗಳ ಪರಿಶೀಲನ ಪಟ್ಟಿ ಪ್ರಕಟ
ಬೆಂಗಳೂರು: 15,000 ಶಿಕ್ಷಕರ ನೇಮಕಾತಿ ಪರೀಕ್ಷೆ ಫಲಿತಾಂಶ ಆಧರಿಸಿ ಮುಂದಿನ ವಾರಾಂತ್ಯದೊಳಗೆ 1:2 ಆಧಾರದಲ್ಲಿ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿ ಪ್ರಕಟಿಸಲಾಗುತ್ತದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರತಿ ಹುದ್ದೆಗೆ ಇಬ್ಬರು ಅಭ್ಯರ್ಥಿಗಳ ಆಯ್ಕೆಯಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ನಂತರ ಒಂದು ಹುದ್ದೆಗೆ ಒಬ್ಬರಂತೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು. ಶೀಘ್ರವೇ ಹೊಸ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಲಾಗುವುದು …
Read More »ರಾಜ್ಯ ಸರ್ಕಾರಿ ನೌಕರ’ರಿಗೆ ದಸರಾ ಗಿಫ್ಟ್: ಮೂಲವೇತನಕ್ಕಿಂತ ಶೇ.15ರಷ್ಟು ಅಧಿಕ ‘ಪ್ರಭಾರ ಭತ್ಯೆ ಹೆಚ್ಚಳ’
ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವಂತ ಪ್ರಭಾರ ಭತ್ಯೆಗಳನ್ನು ( In-charge Allowance Rate ), ಇದೀಗ ರಾಜ್ಯ ಸರ್ಕಾರ ಪರಿಷ್ಕರಿಸಿ ಆದೇಶಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ( Karnataka Government Employees ) ದಸರಾ ಗಿಫ್ಟ್ ಆಗಿ ಸರ್ಕಾರ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ಸರ್ಕಾರಿ ನೌಕರರನ್ನು ಸ್ವತಂತ್ರ ಪ್ರಭಾರದಲ್ಲಾಗಲೀ ಅಥವಾ ತಮ್ಮ ಹುದ್ದೆಯ ಕರ್ತವ್ಯದ …
Read More »ದುಡ್ಡು ಕೊಟ್ಟರೆ ನಮ್ಮ ಸಾಹೇಬರು ಗಾಡಿ ಹಿಡಿಯೋದಿಲ್ಲ! ಲೋಕಾ ದಾಳಿ ಬಳಿಕ ಪೇದೆಗಳಿಬ್ಬರ ಆಡಿಯೋ ವೈರಲ್
ಕಲಬುರಗಿ: ಲೋಕಾಯುಕ್ತ ಬಲೆಗೆ ಬಿದ್ದ ಕಾನ್ಸ್ಟೇಬಲ್ ಮತ್ತು ಸಿಪಿಐ ಜೀಪ್ ಚಾಲಕನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಳು ದಂಧೆಕೋರನಿಂದ ಹಣಕ್ಕೆ ಬೇಡಿಕೆ ಇಟ್ಟ ಆಡಿಯೋವೊಂದು ವೈರಲ್ ಆಗಿದೆ. ನಿನ್ನೆ (ಸೆ.23) ಮರಳು ಸಾಗಾಣಿಕೆ ಸಂಬಂಧ 30 ಸಾವಿರ ರೂಪಾಯಿ ಲಂಚ ಪಡೆಯುವಾಗ ಜೇವರ್ಗಿಯ ಕಾನ್ಸ್ಟೇಬಲ್ ಶಿವರಾಯ್ ಮತ್ತು ಸಿಪಿಐ ಜೀಪ್ ಚಾಲಕ ಅವ್ವಣ್ಣ ಲೋಕಾಯುಕ್ತ ಪೊಲೀಸ್ ಬಲೆ ಬಿದ್ದಿದ್ದರು. ಇದೀಗ ಮರಳು ದಂಧೆಕೋರನಿಂದ ಹಣಕ್ಕೆ ಬೇಡಿಕೆ ಇಟ್ಟ ಆಡಿಯೋ ವೈರಲ್ ಆಗಿದ್ದು, …
Read More »ಮುರುಘಾ ಶ್ರೀಗಳ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್
ಚಿತ್ರದುರ್ಗ: ಮುರುಘಾ ಮಠದ ಡಾ. ಶಿವಮೂರ್ತಿ ಶರಣರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು, ಈ ಹಿಂದಿನ ಆದೇಶದಂತೆ ಸೆ. 27ರವರೆಗೆ ಶ್ರೀಗಳಿಗೆ ನ್ಯಾಯಾಂಗ ಬಂಧನ ಅವಧಿ ಮುಂದುವರೆಯಲಿದೆ. ಈ ಹಿಂದೆ ಸೆ.14ರಂದು ಸ್ವಾಮೀಜಿಯ ನ್ಯಾಯಾಂಗ ಬಂಧನ ಅಂತ್ಯ ಹಿನ್ನೆಲೆಯಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಆಗ ನ್ಯಾಯಾಲಯವು ನ್ಯಾಯಾಂಗ ಬಂಧನದ ಅವಧಿಯನ್ನು …
Read More »7 ಸಾಹಿತಿಗಳ ಪಠ್ಯಗಳನ್ನು ಕೈಬಿಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ
ಬೆಂಗಳೂರು: ರೋಹಿತ್ ಚಕ್ರತೀರ್ಥ (Rohit Chakratirtha) ಸಮಿತಿ ಮಾಡಿಕೊಟ್ಟಿದ್ದ ಪಠ್ಯ ಪರಿಷ್ಕರಣೆಯನ್ನು ಖಂಡಿಸಿ ನಾಡಿನ ಹಲವು ಪ್ರಗತಿಪರ ಚಿಂತಕರು ಪಠ್ಯವಾಪ್ಸಿ ಚಳುವಳಿ ನಡೆಸಿದ್ದರು. ಸರ್ಕಾರಕ್ಕೆ ಪತ್ರ ಬರೆದು ತಮ್ಮ ಪಠ್ಯ/ಪದ್ಯವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಇದಕ್ಕೆ ಸರ್ಕಾರ ಇದೀಗ ತಡವಾಗಿ ಸ್ಪಂದಿಸಿದೆ. ಶೈಕ್ಷಣಿಕ ವರ್ಷದಲ್ಲಿ (Academic Year) ಅರ್ಧ ಭಾಗ ಮುಗಿದ ಬಳಿಕ ಇದೀಗ 7 ಸಾಹಿತಿಗಳ ಪಠ್ಯಗಳನ್ನು ಹಿಂಪಡೆದಿರುವುದಾಗಿ ಪ್ರಕಟಿಸಿದೆ. 10ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿದ್ದ ದೇವನೂರು ಮಹಾದೇವ …
Read More »ಅಕ್ಟೋಬರ್‌ನಿಂದ ಕರೆಂಟ್ ಶಾಕ್ – ಅಕ್ಟೋಬರ್‌ನಿಂದ 43 ಪೈಸೆ ಏರಿಕೆ
ಬೆಂಗಳೂರು: ಕಲ್ಲಿದ್ದಲು ಖರೀದಿ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಅಕ್ಟೋಬರ್‌ನಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಆದೇಶ ಹೊರಡಿಸಿದೆ. ಕೆಇಆರ್‌ಸಿ, 2022ರ ಸೆಪ್ಟೆಂಬರ್ 19 ರಂದು ಹೊರಡಿಸಿದ ಆದೇಶದನ್ವಯ ಇಂಧನ ಹೊಂದಾಣಿಕೆ ಶುಲ್ಕ 43 ಪೈಸೆಯನ್ನು ಮುಂದಿನ 6 ತಿಂಗಳ ಅವಧಿಗೆ ಗ್ರಾಹಕರಿಂದ ಸಂಗ್ರಹಿಸಲು ಬೆಸ್ಕಾಂಗೆ ಅನುಮತಿ ನೀಡಿದೆ. ಕೆಇಆರ್‌ಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕಗಳು ನಿಯಮಗಳು, 2013 …
Read More »ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದ ಆವರಣದಲ್ಲಿ ಸ್ವಚ್ಛತೆ ಮಂಗಮಾಯ
ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದ ಆವರಣದಲ್ಲಿ ಸ್ವಚ್ಛತೆ ಮಂಗಮಾಯವಾಗಿದೆ. ಜಿಲ್ಲೆಗೆ ಮಾದರಿ ಪಾಠ ಹೇಳಬೇಕಿದ್ದ ಜಿಲ್ಲಾಧಿಕಾರಿಗಳ ಕಚೇರಿ ಆವರಣವೇ ಈಗ ಕಸ ತುಂಬಿಕೊಂಡು ರೋಗಗ್ರಸ್ತವಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯ ಎಂದರೆ ಅದಕ್ಕೆ ಅದರದ್ದೇ ಆದ ಗೌರವವಿದೆ. ಅಲ್ಲಿ ಜಿಲ್ಲೆಯ ಅನೇಕ ಜನರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅಲ್ಲಿಗೆ ಬರುತ್ತಾರೆ. ಹಾಗಾಗಿ ಅದು ಜಿಲ್ಲೆಗೇ ಮಾದರಿಯಾಗಿರಬೇಕಾದದ್ದು ಸ್ವಾಭಾವಿಕ. ಆದರೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗ ಅಕ್ಷರಶಃ ಅವ್ಯವಸ್ಥೆಯ ಗೂಡಾಗಿದೆ. ಎಲ್ಲಂದರಲ್ಲಿ ಕಸವನ್ನು ಹಾಕಲಾಗಿದ್ದು ಸಾರ್ವಜನಿಕರ …
Read More »