Breaking News

ರಾಷ್ಟ್ರಪತಿಗೆ ಸ್ವಾಗತ ಕೋರುವ ಬ್ಯಾನರ್‌ನಲ್ಲಿ ಎಡವಟ್ಟು ಮಾಡಿಕೊಂಡ ಶಾಸಕ

ಧಾರವಾಡ: ರಾಷ್ಟ್ರಪತಿಗೆ ಸ್ವಾಗತ ಕೋರುವ ತರಾತುರಿಯಲ್ಲಿ ನಗರದ ಶಾಸಕರೊಬ್ಬರು ಎಡವಟ್ಟು ಮಾಡಿಕೊಂಡಿದ್ದಾರೆ. ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಎಂದು ಬ್ಯಾನರ್‌ನಲ್ಲಿ ಬರೆಸಿರುವುದು ಟೀಕೆಗೆ ಕಾರಣವಾಗಿದೆ. ಸೆ.26ರಂದು ದಸರಾ ಉದ್ಘಾಟನೆಗೆ ಮೈಸೂರಿಗೆ ಆಗಮಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಬಳಿಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಆಯೋಜಿಸಿರುವ ʼಪೌರ ಸನ್ಮಾನʼ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆದರೆ, ರಾಷ್ಟ್ರಪತಿ ಸ್ವಾಗತದ ಕೋರುವ ತರಾತುರಿಯಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಅವರು, …

Read More »

ವೈಭವದ ನಾಡಹಬ್ಬಕ್ಕೆ ಇಂದು ರಾಷ್ಟ್ರಪತಿ ಚಾಲನೆ: ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟಿಸಲಿರುವ ದ್ರೌಪದಿ ಮುರ್ಮು

ಮೈಸೂರು: ಸಾಂಸ್ಕೃತಿಕ ಸಿರಿ ಮತ್ತು ಧಾರ್ವಿುಕ ಐಸಿರಿಯ ಸಮ್ಮಿಲನವಾದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವೊಂದು ಸುಂದರ ದೃಶ್ಯಕಾವ್ಯ. ವರ್ಷಕ್ಕೊಮ್ಮೆ ಬರುವ ಈ ರಮಣೀಯ ಘಳಿಗೆಗೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೋವಿಡ್ ಸಂಕ್ರಮಣದಿಂದ ಕಳೆದ 2 ವರ್ಷ ಸರಳವಾಗಿ ನಡೆದಿದ್ದ ಉತ್ಸವದಲ್ಲಿ ಈ ಬಾರಿ ಸಡಗರ ಮೇಳೈಸಲಿದೆ. ಸೆ. 26ರಂದು ನಾಡಹಬ್ಬದ ಅಂಕದ ಪರದೆ ಗರಿ ಬಿಚ್ಚಲಿದೆ. ಮೊದಲ ಬಾರಿಗೆ ರಾಷ್ಟ್ರಪತಿಯಿಂದ ಚಾಲನೆ: ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ …

Read More »

ಜಮ್ಮು ಕಾಶ್ಮೀರದಲ್ಲಿ ಕರ್ನಾಟಕದ ‘ಯೋಧ’ ಹುತಾತ್ಮ

ಜಮ್ಮು ಕಾಶ್ಮೀರದ ಗುರೇಜ್ ನಲ್ಲಿ ರಾಜ್ಯದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಬೇಡಕುಂದಾ ಗ್ರಾಮದ ಯೋಧ ರಾಮ್ ದಾಸ್ ಚಂದಾಪುರ ಹುತಾತ್ಮರಾಗಿದ್ದು, ಕರ್ತವ್ಯದ ವೇಳೆ ಆಮ್ಲಜನಕ ಕೊರತೆಯಿಂದ ಯೋಧ ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 15 ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.

Read More »

ರಾಜ್ಯ ಸರ್ಕಾರ’ದಿಂದ ಬಿಗ್ ಆರ್ಡರ್: ‘ಸರ್ಕಾರಿ ಕಚೇರಿ ಲಂಚ ಮುಕ್ತ’ಕ್ಕೆ ಖಡಕ್ ಕ್ರಮ

ಬೆಂಗಳೂರು: ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂಬ ಶೀರ್ಷಿಕೆಯ ನಾಮಫಲಕವನ್ನು ಅಳವಡಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಮೂಲಕ ಪೇ ಸಿಎಂ ಪೋಸ್ಟರ್ ಕಾಂಗ್ರೆಸ್ ಅಭಿಯಾನಕ್ಕೆ ರಾಜ್ಯ ಸರ್ಕಾರದಿಂದ ಟಕ್ಕರ್ ಕೊಡಲಾಗಿದೆ.     ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಅಳವಡಿಸಲು ಅದೇಶ ಮತ್ತು ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಸರಣಿ ಭ್ರಷ್ಟಾಚಾರ ಆರೋಪ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ …

Read More »

ವಿಜಯಪುರ: ಮಕ್ಕಳ ಕಳ್ಳರ ವದಂತಿ; ಮಹಿಳೆಯರು ಸೇರಿ ನಾಲ್ವರಿಗೆ ಸಾರ್ವಜನಿಕರಿಂದ ಥಳಿತ

ವಿಜಯಪುರ: ರಾಜ್ಯದಲ್ಲಿ ಮಕ್ಕಳ ಕಳ್ಳರ ಹಾವಳಿಯ ವದಂತಿ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಹಿಡಿದ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ನಗರದಲ್ಲಿ ನಡೆದಿದೆ.   ನಗರದ ಗ್ಯಾಂಗ್ ಬಾವಡಿ ಪರಿಸರದಲ್ಲಿ ಅಪರಿಚಿತ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಉತ್ತರ ಭಾರತದ ಶೈಲಿಯಲ್ಲಿ ಮಾತನಾಡಿದ್ದು, ಅನುಮಾನದ ಬಂದ ಸ್ಥಳೀಯರು, ಮಕ್ಕಳ ಕಳ್ಳರೆಂದು ಶಂಕಿಸಿ, ಸಾರ್ವಜನಿಕರ ಸಹಕಾರದಿಂದ ನಾಲ್ವರನ್ನೂ ಹಿಡಿದು ಥಳಿಸಿದ್ದಾರೆ. ನಗರಕ್ಕೆ ಉತ್ತರ ಭಾರತದಿಂದ …

Read More »

ಶಿವಾಜಿ ನಾಡಿನಲ್ಲಿ ಪಾಕಿಸ್ಥಾನ ಜಿಂದಾಬಾದ್ ಕೂಗುವ ಹಕ್ಕು ಯಾರಿಗೂ ಇಲ್ಲ: ಶಿಂಧೆ

ಮುಂಬಯಿ: “ಇದು ಛತ್ರಪತಿ ಶಿವಾಜಿ ಮಹಾರಾಜರ ನಾಡು ಮತ್ತು ಪಾಕಿಸ್ಥಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ಹಕ್ಕು ಯಾರಿಗೂ ಇಲ್ಲ” ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಗುಡುಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ,ಇದು ದೇಶಭಕ್ತರ ರಾಜ್ಯ. ನಮ್ಮ ಸರಕಾರ ಪುಣೆಯಲ್ಲಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ. ವಿವಾದಿತ ಇಸ್ಲಾಮಿಕ್ ಸಂಘಟನೆಯ ಪಿಎಫ್‌ಐ ಮುಖಂಡರ ಮೇಲಿಂದ ದಾಳಿ ಮತ್ತು ಬಂಧನದ ನಂತರ ಪುಣೆಯ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದು, …

Read More »

ಕಮಲದ ಸುತ್ತಲಿರುವ ಕೆಸರನ್ನು “ಕೈ” ಯಿಂದ ಸ್ವಚ್ಛಗೊಳಿಸಲು ಸಾಧ್ಯವಿಲ್ಲ: ಕೇಜ್ರಿವಾಲ್

ಅಹಮದಾಬಾದ್‌ : ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಗುಜರಾತ್‌ನಲ್ಲಿ 80% ಖಾಸಗಿ ಉದ್ಯೋಗಗಳು ಗುಜರಾತ್‌ನ ಜನರಿಗೆ ಮೀಸಲಾಗಿರುತ್ತವೆ ಎಂದು ಆಪ್ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ್ದಾರೆ.   ಟೌನ್‌ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಜರಾತ್‌ನ ಯುವ ಸಮುದಾಯದೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಜ್ರಿವಾಲ್, ‘ಕಮಲ’ದ ಸುತ್ತ ಸಾಕಷ್ಟು ‘ಕೆಸರು’ ಬಿದ್ದಿದೆ. ಆ ಕೆಸರನ್ನು “ಕೈ” ಯಿಂದ ಸ್ವಚ್ಛಗೊಳಿಸಲು ಸಾಧ್ಯವಿಲ್ಲ, ಅದನ್ನು “ಪೊರಕೆ ” ಯಿಂದ ಸ್ವಚ್ಛಗೊಳಿಸಬೇಕಾಗುತ್ತದೆ …

Read More »

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದು, ವೈದ್ಯರ ತಂಡ ಆರೈಕೆ ಮಾಡ್ತಿದೆ: ಎಸ್‍ಎಂಕೆ ಹೆಲ್ತ್ ಬುಲೆಟಿನ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ (S.M Krishna) ಅವರು ಸದ್ಯ ಐಸಿಯು (ICU) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ತಂಡ ಆರೈಕೆ ಮಾಡುತ್ತಿದೆ ಎಂದು ಮಣಿಪಾಲ್‌ ಆಸ್ಪತ್ರೆಯಿಂದ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಲಾಗಿದೆ. ಶ್ವಾಸಕೋಶದ (Lungs) ಸೊಂಕಿನಿಂದ ಬಳಲುತ್ತಿರುವ ಎಸ್‍ಎಂಕೆಗೆ ಡಾ ಸತ್ಯನಾರಾಯಣ್ ಮತ್ತು ಡಾ ಸುನೀಲ್ ಕಾರಂತ್ ರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದು ವೈದ್ಯರ ತಂಡ ಆರೈಕೆ ಮಾಡ್ತಾ ಇದೆ. ಶ್ವಾಸಕೋಶದ ಒಳಗಡೆ ಆಕ್ಸಿಜನ್ …

Read More »

ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ

ಬೆಳಗಾವಿ: ಜಿಲ್ಲೆಯ ಬೆಳಗಾವಿ (Belgavi) ತಾಲೂಕಿನ ಜಾನುವಾರುಗಳಲ್ಲಿ ಚರ್ಮಗಂಟು ರೋಗ (Lumpy Skin Disease) (ಲಂಪಿ ಸ್ಕಿನ್ ಡಿಸೀಜ್)ಸಾಂಕ್ರಾಮಿಕ ಕಾಯಿಲೆ ಕಂಡು ಬಂದಿದ್ದು, ಇದು ಕ್ಯಾಪ್ರಿಸಾಕ್ಸ್ ಎಂಬ ವೈರಾಣುವಿನಿಂದ ಬರುತ್ತದೆ. ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷ್ಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ದನಗಳಿಗೆ ಕಚ್ಚುವ ಕೀಟಗಳಿಂದ (ಸೊಳ್ಳೆ, ನೊಣ, ಉಣ್ಣೆ) ಇತ್ಯಾದಿಗಳಿಂದ ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ (Rainy Season) ಮತ್ತು ನಂತರದ ದಿನಗಳಲ್ಲಿ …

Read More »

ಉಮೇಶ್ ಕತ್ತಿ ನಿಧನ ಹಿನ್ನೆಲೆ ಅದ್ದೂರಿ ದಸರಾ ಆಚರಣೆ ಇಲ್ಲ : ಹುಕ್ಕೇರಿ ಹಿರೇಮಠ ಶ್ರೀ

ಚಿಕ್ಕೋಡಿ: ಹುಕ್ಕೇರಿ ಮತಕ್ಷೇತ್ರದ ಶಾಸಕ ಹಾಗೂ ಸಚಿವರಾಗಿದ್ದ ಉಮೇಶ್ ಕತ್ತಿ (Umesh Katthi) ಅವರು ಅಕಾಲಿಕ ನಿಧನರಾದ ಹಿನ್ನೆಲೆ ಹುಕ್ಕೇರಿ ಹಿರೇಮಠದ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹುಕ್ಕೇರಿ ಹಿರೇಮಠದ (Hukkeri Hiremath) ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು (Chandrasekhar Shivacharya Mahaswami) ತಿಳಿಸಿದರು. ಹುಕ್ಕೇರಿ ಹಿರೇಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು (Mysuru) ನಂತರದಲ್ಲಿ ಹುಕ್ಕೇರಿ ಹಿರೇಮಠ ದಸರಾ ಉತ್ಸವ ಉತ್ತರ ಕರ್ನಾಟಕ (UttarKarnataka) ಭಾಗದಲ್ಲಿ ಹೆಸರಾಗಿದೆ. …

Read More »