ಧಾರವಾಡ; ಮಳೆ, ರೋಗದಿಂದ ಭೂಮಿಯಿಂದ ದೇಶಕ್ಕೆ ತೊಂದರೆಯಾಗುತ್ತದೆ. ವಿಶೇಷವಾಗಿ ಹಿಂದೆ ಹೇಳಿದಂತೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ. ಇದು ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣ ಇದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯಲ್ಲಿಂದು ಮಾತನಾಡಿದ ಅವರು, ಪ್ರಾರಂಭದಲ್ಲೇ ನಾನು ಹೇಳಿದಂತೆ ಮಳೆ, ಬೆಂಕಿಯಿಂದ ಕಾಟ, ಮತಾಂಧತೆ ಹೆಚ್ಚಳ, ಸಾವು ನೋವುಗಳಾಗುತ್ತವೆ. ಭೂಮಿ ನಡುಗುತ್ತದೆ, ಕುಸಿಯುತ್ತದೆ ಕೊರೊನಾ ರೋಗ ಹೆಚ್ಚಾಗುತ್ತವೆ. ಜನ ಅಶಾಂತಿಯಿಂದ ಇರುತ್ತಾರೆ ಎಂದು ಹೇಳಿದ್ದೆ ಇದೆಲ್ಲಾ …
Read More »ರಾಜ್ಯದ ಜನತೆಗೆ ನೆಮ್ಮದಿಯ ಸುದ್ದಿ : ವಿದ್ಯುತ್ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್?
ಬೆಂಗಳೂರು: ಇಂಧನ ದರ ಹೊಂದಾಣಿಕೆ ಹಿನ್ನೆಲೆಯಲ್ಲಿ ವಿದ್ಯುತ್ ದರವನ್ನು ಏರಿಕೆ ಮಾಡಿದ್ದ ಸರ್ಕಾರ ಪರಿಷ್ಕೃತ ಆದೇಶವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲು ಚಿಂತನೆ ನಡೆಸಿದೆ. ವಿದ್ಯುತ್ ದರ ಏರಿಕೆ ನಿಯಮ ವಾಪಸ್ ಪಡೆಯುವ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಅಗತ್ಯವಾದರೆ ವಿದ್ಯುತ್ ದರ ಏರಿಕೆ ನಿಯಾಮಾವಳಿ ಹಿಂಪಡೆಯಲಾಗುವುದು. ವಿದ್ಯುತ್ ದರ ಏರಿಕೆಗೆ ನಮ್ಮ ಸರ್ಕಾರ ಹೊಸ ನಿಯಮಾವಳಿ ರೂಪಿಸಿಲ್ಲ. 2014 ರಲ್ಲಿ ಕಲ್ಲಿದ್ದಲು ಬೆಲೆ ಹೊಂದಾಣಿಕೆಗೆ ರೂಪಿಸಲಾಗಿದ್ದ …
Read More »ಮಸೀದಿ ಪಕ್ಕದಲ್ಲಿ ಆಕಸ್ಮಿಕವಾಗಿ ಸತ್ತು ಬಿದ್ದಿದ್ದ ಮಂಗಕ್ಕೆ ಗ್ರಾಮಸ್ಥರಿಂದ ಅರ್ಥಪೂರ್ಣ ಅಂತ್ಯಸಂಸ್ಕಾರ
ಅಥಣಿ: ಮಸೀದಿ ಪಕ್ಕದಲ್ಲಿ ಆಕಸ್ಮಿಕವಾಗಿ ಸತ್ತು ಬಿದ್ದಿದ್ದ ಮಂಗಕ್ಕೆ ಗ್ರಾಮಸ್ಥರಿಂದ ಅರ್ಥಪೂರ್ಣ ಅಂತ್ಯಸಂಸ್ಕಾರ ನೆರವೇರಿಸಿ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಕೋತಿಗೆ ಗ್ರಾಮಸ್ಥರು ಮನುಷ್ಯರಿಗೆ ಮಾಡುವ ಅಂತ್ಯಸಂಸ್ಕಾರ ಕ್ರಿಯೆ ಮಾಡಿದ್ದಾರೆ. ಮೃತ ಮಂಗನ ದೇಹವನ್ನು ಲಕ್ಷ್ಮಿ ದೇವಸ್ಥಾನದ ಎದುರು ಇಟ್ಟು ಸತತ 5ಗಂಟೆಗಳ ಕಾಲ ಭಜನೆ ಮಾಡಿದ್ದಾರೆ. ನಂತರ ಮೆರವಣಿಗೆ ಮಾಡಿ ಮಾಡಿ ಉತ್ತರ ಕ್ರಿಯೆ ನೆರವೆರಿಸಿದ್ದಾರೆ. ಈ ಕಾರ್ಯವನ್ನು ಹಿಂದೂ ಮುಸ್ಲಿಮರು …
Read More »ದಸರಾ ಹಬ್ಬಕ್ಕೆಂದು ಊರಿಗೆ ವಾಪಸ್ ಆಗುವಾಗ ಬೈಕ್ ಟೈರ್ ಪಂಕ್ಚರ್ ಆಗಿ ಬೈಕ್ ಅಪಘಾತ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮತ್ತಿಬ್ಬರು ಗಂಭೀರ ಗಾಯ ,
ಬೆಳಗಾವಿ : ದಸರಾ ಹಬ್ಬಕ್ಕೆಂದು ಊರಿಗೆ ಹಿಂತಿರುತ್ತಿದ್ದಾಗ ಬೈಕ್ ಟೈರ್ ಪಂಕ್ಚರ್ ಆಗಿ ಬೈಕ್ ಅಪಘಾತಕ್ಕೀಡಾಗಿದ್ದು, ಮಹಿಳೆ ಮತ್ತು ಬಾಲಕಿ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಿಪ್ಪಾಣಿ ತಾಲೂಕಿನ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುರ್ಲಿ ಗ್ರಾಮದ ಬಳಿ ನಡೆದಿದೆ. ಜಿಲ್ಲೆಯ ಸವದತ್ತಿ ತಾಲೂಕಿನ ಮುಗುಳಿಹಾಳ ಗ್ರಾಮದ ಲಕ್ಷ್ಮೀ ಕೊಪ್ಪದ (25) ಹಾಗೂ ಭಾಗ್ಯಶ್ರೀ ವಕಮಿ (13) ಅಪಘಾತದಲ್ಲಿ ಮೃತಪಟ್ಟಿದ್ದು, ರಾಮದರ್ಗು ತಾಲೂಕಿನ ಕಟಕೋಳ ಗ್ರಾಮದ ಹಣಮಂತ ಸಕ್ರಿ …
Read More »ಮುಜರಾಯಿ ಇಲಾಖೆ ಅನುದಾನ ನಮ್ಮ ರಾಜ್ಯದ ದೇವಸ್ಥಾನಕ್ಕೆ ನೀಡದೇ ಬೇರೆ ರಾಜ್ಯದ ದೇವಸ್ಥಾನಗಳಿಗೆ ಬಿಡುಗಡೆ: ಮಾಜಿ ಶಾಸಕ ರಾಜು ಕಾಗೆ ಆರೋಪ
ಚಿಕ್ಕೋಡಿ: ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಅನುದಾನವನ್ನು ಬೇರೆ ರಾಜ್ಯಗಳ ದೇವಸ್ಥಾನಕ್ಕೆ ನೀಡುತ್ತಿದ್ದಾರೆ. ಆದ್ರೆ, ನಮ್ಮ ಗ್ರಾಮದ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಮಾಜಿ ಶಾಸಕ ರಾಜು ಕಾಗೆ, ಜೊಲ್ಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಐನಾಪೂರ ಪಟ್ಟಣದಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆಗೆ ಸಂಬಂಧಿಸಿ ಅನುದಾನವನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ಕಾಶಿ ದೇವಸ್ಥಾನಗಳಿಗೆ ನೀಡಲಾಗುತ್ತಿದೆ. ಆದರೆ, ನಮಗೆ ಸರಿಯಾಗಿ ಅನುದಾನ …
Read More »ಕುಸ್ತಿ ಗೆದ್ದ ಒಂದೇ ಗಂಟೆಯಲ್ಲಿ ಯುವ ಕುಸ್ತಿಪಟು ಸಾವು
ಸೊಲ್ಲಾಪುರ/ಮಹಾರಾಷ್ಟ್ರ: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಕುಸ್ತಿಯಲ್ಲಿ ಗೆದ್ದು ಸಂಭ್ರಮದ ಗುಂಗಿನಲ್ಲಿರುವಾಗಲೇ ಹೃದಯಾಘಾತದಿಂದ ಯುವ ಕುಸ್ತಿಪಟು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಂಢರಪುರ ತಾಲೂಕಿನಲ್ಲಿ ನಡೆದಿದೆ. ವಖ್ರಿಯ ಕುಸ್ತಿಪಟು ಮಾರುತಿ ಸುರವಾಸೆ (22) ಮೃತ ಯುವಕ. ಕಳೆದ ರಾತ್ರಿ ಕೊಲ್ಲಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಕುಸ್ತಿ ಪಂದ್ಯವನ್ನು ಮಾರುತಿ ಗೆದ್ದಿದ್ದರು. ಬಳಿಕ ಖುಷಿಯಿಂದ ಹಿಂದಿರುಗಿದ ಸ್ವಲ್ಪ ಸಮಯದ ನಂತರ ಹೃದಯಾಘಾತವಾಗಿದೆ. ಮಾರುತಿಗೆ ಬಾಲ್ಯದಿಂದಲೂ ಕುಸ್ತಿಯೆಂದರೆ ಹೆಚ್ಚಿನ ಒಲವು. …
Read More »ಪುಂಜಾಲಕಟ್ಟೆ: ಆರೆಸ್ಸೆಸ್ ವಿರುದ್ಧ ಆಕ್ಷೇಪಾರ್ಹ ರಸ್ತೆ ಬರಹ; ತಪ್ಪಿತಸ್ಥರ ಬಂಧನಕ್ಕೆ ಆಗ್ರಹ
ಪುಂಜಾಲಕಟ್ಟೆ: ಆರೆಸ್ಸೆಸ್ ವಿರುದ್ಧ ರಸ್ತೆ ಮೇಲೆ ಆಕ್ಷೇಪಾರ್ಹ ಬರಹ ಬರೆದ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನಯನಾಡು ಸಮೀಪದ ಸ್ನೇಹ ಗಿರಿ ಎಂಬಲ್ಲಿ ಮಂಗಳವಾರ ಬೆಳಗ್ಗೆ ಕಂಡು ಬಂದಿದೆ. ಯಾರೋ ಅಪರಿಚಿತರು ರಸ್ತೆಯಲ್ಲಿ ಆರೆಸ್ಸೆಸ್ ವಿರುದ್ಧ ಬಹಿರಂಗ ಬೆದರಿಕೆ ಹಾಕಿದ್ದು, ಚಡ್ಡಿಗಳೇ ಎಚ್ಚರ, ನಾವು ಪಿಎಫ್ ಐ ಮರಳಿ ಬರುತ್ತೇವೆ ಎಂದು ಬರೆದಿದ್ದಾರೆ. ಈ ಬಗ್ಗೆ ಸ್ಥಳೀಯರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿ ತತ್ …
Read More »ರಾಜ್ಯ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಬೃಹತ್ ಸಮಾವೇಶಕ್ಕೆ ಸಿದ್ಧತೆ
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಕೊಡವಿಕೊಂಡು ಸಿದ್ದತೆ ನಡೆಸಲು ಈಗ ರಾಜ್ಯ ಬಿಜೆಪಿ ಘಟಕ ಮುಂದಾಗಿದ್ದು,ಘಟಾನುಘಟಿ ನಾಯಕರುಗಳನ್ನು ಆಹ್ವಾನಿಸಿ ಸಮಾವೇಶ ನಡೆಸಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಕೇಂದ್ರ ಸಚಿವರು ಸೇರಿದಂತೆ ಹಲವು ನಾಯಕರನ್ನು ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಆಹ್ವಾನಿಸಲಾಗುತ್ತಿದೆ. ಒಂದು ಕಡೆ ಕಾಂಗ್ರೆಸ್ ತನ್ನ ಸಂಘಟನಾತ್ಮಕ …
Read More »ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತ ಸಾಗರ
ಸವದತ್ತಿ: ಜಗನ್ಮಾತೆ ನಿತ್ಯ ಪೂಜಿತೆ ಏಳುಕೊಳ್ಳದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಸಡಗರ ಅದ್ದೂರಿಯಿಂದ ವಿಜ್ರಂಭಿಸುತ್ತಿದೆ. 7 ನೇ ದಿನ ರವಿವಾರ ರಾಜ್ಯ ಸೇರಿ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನಾಶೀರ್ವಾದ ಪಡೆದು ಪುನೀತರಾದರು. ಏಳುಕೊಳ್ಳಗಳ ನಾಡಿನಲ್ಲಿ ನೆಲೆ ನಿಂತ ಯಲ್ಲಮ್ಮ ದೇವಿ ದರ್ಶನಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಘಟಸ್ಥಾಪನೆಯ 5 ನೇ ದಿನ ಶುಕ್ರವಾರ ಭಕ್ತರ ಆಗಮನ ಗಣನೀಯವಾಗಿ ಏರಿಕೆ ಕಂಡಿತ್ತು. 7 ನೇ ದಿನ ರವಿವಾರ …
Read More »ಮತ್ತೆ ಕಬ್ಬಿಗರ ದರ ಸಂಘರ್ಷ; ಹೆಚ್ಚುವರಿ ದರ ನೀಡಲು ಅನ್ನದಾತರ ಒತ್ತಾಯ
ಬೆಳಗಾವಿ: ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭ, ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಎಫ್‌ಆರ್‌ಪಿ ಪ್ರಕಾರ ದರ ನಿಗದಿ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಮತ್ತೆ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಗಳ ಮಧ್ಯೆ ದರ ಸಂಘರ್ಷ’ ಉಂಟಾಗುವ ಲಕ್ಷಣಗಳು ಕಾಣುತ್ತಿವೆ. ಸರ್ಕಾರ ದರ ನಿಗದಿ ಮಾಡಿ ಹೊರಡಿಸಿರುವ ಆದೇಶವನ್ನು ರಾಜ್ಯದ ಕಬ್ಬು ಬೆಳೆಗಾರರು ಒಪ್ಪುತ್ತಾರೆಯೇ ಎಂಬ ಅನುಮಾನ ಕಾಡುತ್ತಿದೆ. ಈ ಆದೇಶದ ಹಿಂದೆ ಸಕ್ಕರೆ ಕಾರ್ಖಾನೆಗಳ ಲಾಬಿ ಇದೆ. …
Read More »