ಬೆಳಗಾವಿ: 2012-13ನೇ ಸಾಲಿನಲ್ಲಿ ನಡೆದ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ನೇಮಕಾತಿ ವಂಚಿತ ಅಭ್ಯರ್ಥಿ ಮಹಾಂತೇಶ ರುದ್ರಪ್ಪ ಬೆಣ್ಣಿ ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2012 ಜುಲೈ 15ರಂದು ಜನರಲ್, 17ರಂದು ಕನ್ನಡ ಭಾಷಾ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಪ್ರತಿಶತ 71. 26 ಅಂಕ 89 ರ‍್ಯಾಂಕ್ ಪಡೆದಿದ್ದೇನೆ. 89 ರ್ಯಾಂಕ್ ಪಡೆದು ಆಯ್ಕೆ ಆದರೂ ನಾನು ನೇಮಕಗೊಂಡಿಲ್ಲ. ಆದರೆ, 70.93 ಅಂಕಗಳೊಂದಿಗೆ 97 …
Read More »ಮೂರು ವಿಧೇಯಕಗಳಿಗೆ ಅನುಮೋದನೆ ನೀಡಿದ ರಾಜ್ಯಪಾಲರು.. ರಾಜಪತ್ರ ಹೊರಡಿಸಿದ ಸರ್ಕಾರ
ಬೆಂಗಳೂರು : ವಿಧಾನಮಂಡಲದಲ್ಲಿ ಅಂಗೀಕಾರಗೊಂಡ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ ಸೇರಿ ಮೂರು ವಿಧೇಯಕಗಳಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಎರಡು ಪರೀಕ್ಷಾ ಮಂಡಳಿ ವಿಲೀನ: ರಾಜ್ಯ ಸರ್ಕಾರ ಈ ಸಂಬಂಧ ರಾಜಪತ್ರ ಹೊರಡಿಸಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯನ್ನು …
Read More »ಒಂದೇ ಬಾತ್‍ರೂಂನಲ್ಲಿ ಎರಡು ಕಮೋಡ್ – ಸ್ಟಾಲಿನ್ ಉದ್ಘಾಟಿಸಿದ ಕಟ್ಟಡ ಟ್ರೋಲ್
ಚೆನ್ನೈ: ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಅವರು ಸೋಮವಾರವಷ್ಟೇ ಶ್ರೀಪೆರಂಬದೂರಿನಲ್ಲಿರುವ (Sriperumbudur) ಕಚೇರಿಯ ಕಟ್ಟಡವನ್ನು ಉದ್ಘಾಟಿಸಿದ್ದರು. ಈ ಕಟ್ಟಡದಲ್ಲಿ ಒಂದೇ ಬಾತ್‍ರೂಂನಲ್ಲಿ ಎರಡು ಕಮೋಡ್‍ಗಳನ್ನು ನಿರ್ಮಿಸಲಾಗಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶ್ರೀಪೆರಂಬದೂರಿನಲ್ಲಿ ತಮಿಳುನಾಡು ರಾಜ್ಯ ಕೈಗಾರಿಕೆಗಳ ಉತ್ತೇಜನ ನಿಗಮ (SIPCOT) 1.80 ಕೋಟಿ ರೂಪಾಯಿ ಬಜೆಟ್‍ನಲ್ಲಿ ಹೊಸದಾಗಿ ನಿರ್ಮಿಸಲಾದ ಕಟ್ಟಡದಲ್ಲಿ ಒಂದೇ ಬಾತ್‍ರೂಂನಲ್ಲಿ ಎರಡು ಕಮೋಡ್‍ಗಳಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ …
Read More »ಊಟ, ತಿಂಡಿ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿ ಮೇಲೆ 63ರ ವೃದ್ಧನಿಂದ ಅತ್ಯಾಚಾರ
ಮಂಡ್ಯ: ಊಟ ತಿಂಡಿ ಆಮಿಷ ತೋರಿಸಿ ಅಪ್ರಾಪ್ತ ಬಾಲಕಿಯ ಮೇಲೆ 63 ವರ್ಷದ ವೃದ್ಧ ಬಲವಂತವಾಗಿ ಅತ್ಯಾಚಾರವೆಸಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನ ವ್ಯಾಪ್ತಿಯ ಗ್ರಾಮವೊಂದರಲ್ಲಿ 63 ವರ್ಷದ ವಯೋವೃದ್ಧ ಗ್ರಾಮದ ಹದಿನೈದು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಹಲಗೂರು ಪಟ್ಟಣಕ್ಕೆ ಕರೆದುಕೊಂಡು ಬಂದಿದ್ದನು. ಈ ವೇಳೆ ಬಾಲಕಿಗೆ ಊಟ ತಿಂಡಿ ಕೊಡಿಸಿ ನಂತರ ಬಲವಂತವಾಗಿ ಆಕೆಯ …
Read More »ರಾಯಚೂರಿಗೆ ಬರಲಿದೆ ಏಮ್ಸ್, ಮಂತ್ರಾಲಯ ಸೇತುವೆಗೆ ಬಿಎಸ್‌ವೈ ಹೆಸರು: ಬೊಮ್ಮಾಯಿ
ರಾಯಚೂರು: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಏಮ್ಸ್ ಸಂಸ್ಥೆಯನ್ನು ರಾಯಚೂರಿಗೆ ತರಲು ಎಲ್ಲಾ ಪ್ರಯತ್ನಗಳು ನಡೆದಿವೆ. ನರೇಂದ್ರ ಮೋದಿಯವರ ಆಶೀರ್ವಾದದಿಂದ ಏಮ್ಸ್ ರಾಯಚೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗಿಲ್ಲೆಸುಗೂರಿನಲ್ಲಿ ನಡೆದ ಜನ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಬೊಮ್ಮಾಯಿ, ಈಗಾಗಲೇ ಕೇಂದ್ರ ಆರೋಗ್ಯ ಸಚಿವರ ಬಳಿ ಮಾತನಾಡಿದ್ದೇನೆ. ಮುಂದಿನ ವಾರ ದೆಹಲಿಗೆ ಹೋಗಿ ಏಮ್ಸ್ ಕುರಿತಾಗಿ ಮಾತನಾಡಲಿದ್ದೇನೆ. ಮಂತ್ರಾಲಯದ ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ …
Read More »ಕಾಂಗ್ರೆಸ್‍ನ ರಾಹುಲ್ ಗಾಂಧಿ ತಮ್ಮ ಆಸ್ತಿತ್ವಕ್ಕಾಗಿ ಜೋಡೋ ಯಾತ್ರೆ ಮಾಡುತ್ತಿದ್ದಾರೆ: ಭಾರತ್ ಜೋಡೋ ಯಾತ್ರೆ ಬಗ್ಗೆ ಲೇವಡಿ ಮಾಡಿದ C.M.
ಕಾಂಗ್ರೆಸ್‍ನ ರಾಹುಲ್ ಗಾಂಧಿ ತಮ್ಮ ಆಸ್ತಿತ್ವಕ್ಕಾಗಿ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆ ಬಗ್ಗೆ ಲೇವಡಿ ಮಾಡಿದ್ದಾರೆ. ರಾಯಚೂರು ತಾಲೂಕಿನ ಗಿಲ್ಲೆಸೂಗೂರು ಗ್ರಾಮದಲ್ಲಿ ಬಿಜೆಪಿಯಿಂದ ಆಯೋಜಿಸಿರುವ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ರಾಹುಲ್ ಗಾಂಧಿ ಅವರಿಗೆ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಭಾರತ್ ಜೋಡೋ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯಿಂದ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಗೂ, …
Read More »ಸಿದ್ದರಾಮಯ್ಯ ಸುಳ್ಳಿನ ನಾಯಕ,ಅವರು ಸಮಾಜವಾದಿಯನ್ನು ಯಾವಾಗಲೋ ಮಡಚಿ ಮನೆಯಲ್ಲಿ ಇಟ್ಟಿದ್ದಾರೆ.:C.M. ಬೊಮ್ಮಾಯಿ
ಕಾಂಗ್ರೆಸ್ ನಾಯಕ ಸಿದರಾಮಣ್ಣ ಅವರು ಸಮಾಜವಾದಿಯನ್ನು ಯಾವಾಗಲೋ ಮಡಚಿ ಮನೆಯಲ್ಲಿ ಇಟ್ಟಿದ್ದಾರೆ. ಈಗ ಅವರು ಒಬ್ಬ ಸಣ್ಣ ಹುಡುಗನ ಕೈ ಕೆಳಗೆ ಕೆಲಸ ಮಾಡುತ್ತಿದ್ದಾರೆ. ಅವನು ಓಡಿ ಅಂದ್ರೆ ಓಡುತ್ತಾರೆ. ಕೂರು ಅಂದ್ರೆ ಕೂರುತ್ತಾರೆ. ಅವರು ಸ್ವಾಭಿಮಾನ ಕಳೆದುಕೊಂಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದರು. ರಾಯಚೂರು ತಾಲೂಕಿನ ಗಿಲ್ಲೆಸೂಗೂರು ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ ಬೊಮ್ಮಾಯಿ ಸಿದ್ದರಾಮಯ್ಯ ಅವರು ಸುಳ್ಳಿನ ಅಗ್ರಗಣ್ಯ ನಾಯಕ. ಅಹಿಂದ …
Read More »ಬೆಳಗಾವಿ ಜಿಲ್ಲಾ ಶಿವಸೇನೆ ವತಿಯಿಂದ ಜ್ಯೋತಿ ಚಿಹ್ನೆಗೆ ಸ್ವಾಗತ,
ಮಹಾರಾಷ್ಟ್ರದಲ್ಲಿ ಒಡೆದು ಎರಡು ಹೋಳಾಗಿರುವ ಶಿವಸೇನೆ ಪಕ್ಷದಲ್ಲಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಗುಂಪಿಗೆ ಜ್ಯೋತಿಯ ಚಿಹ್ನೆಯನ್ನು ಕೇಂದ್ರ ಚುನಾವಣಾ ಆಯೋಗ ನೀಡಿರುವ ಹಿನ್ನೆಲೆ ಬೆಳಗಾವಿಯಲ್ಲಿ ಶಿವಸೇನೆ ಜಿಲ್ಲಾ ಘಟಕದ ವತಿಯಿಂದ ವಿಜಯೋತ್ಸವ ಅಚರಿಸಲಾಯಿತು. ರಾಮಲಿಂಗಖಿಂಡ ಗಲ್ಲಿಯಲ್ಲಿರುವ ಶಿವಸೇನೆ ಕಚೇರಿ ಮುಂದೆ ಛತ್ರಪತಿ ಶಿವಾಜಿ ಮಹಾರಾಜ್‍ರ ಪುತ್ಥಳಿಗೆ ಪೂಜೆ, ಮಾಲಾರ್ಪಣೆ ಮಾಡಿದರು. ಬಳಿಕ ಉದ್ಧವ್ ಠಾಕ್ರೆ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿ ಶಿವಸೇನೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಇದೇ …
Read More »ಬೈಕ್ ಗೆ ಸರಕಾರಿ ಬಸ್ ಡಿಕ್ಕಿ ಮಹಿಳೆ ಸಾವು
ವಿಜಯಪುರ… ಬೈಕ್‌ಗೆ ಸರ್ಕಾರಿ ಬಸ್ ಹಿಂಬದಿಯಿಂದ ಡಿಕ್ಕಿ, ಹಿಂಬದಿಯ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಯಕ್ಕುಂಡಿ ರಸ್ತೆಯಲ್ಲಿ ನಡೆದಿದೆ. ಮುತ್ತವ್ವ ಗಸ್ತಿ ಮೃತಪಟ್ಟಿರುವ ಮಹಿಳೆಯಾಗಿದ್ದು ಅಪಘಾತದ ಬಳಿಕ ಬಸ್ ಸ್ಥಳದಲ್ಲಿಯೇ ಬಿಟ್ಟು ಕಂಡಕ್ಟರ್, ಚಾಲಕ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »ನಕಲಿ ದಾಖಲೆ ನೀಡಿ ಶ್ಯೂರಿಟಿ : ಆನ್ಲೈನ್ ಮೂಲಕ ದಾಖಲೆಗಳ ಪರಿಶೀಲನೆಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಜಾಮೀನು ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿ ಶ್ಯೂರಿಟಿ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಜಾಮೀನಿಗಾಗಿ ಶ್ಯೂರಿಟಿ ನೀಡುವವರ ಸಂಪೂರ್ಣ ವಿವರವನ್ನು ಪರಿಶೀಲನೆಗೊಳಪಡಿಸಿ ಖಾತರಿಪಡಿಸಿಕೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ಅಲ್ಲದೆ, ಈ ಸಂಬಂಧ ಅಗತ್ಯವಿರುವ ತಾಂತ್ರಿಕ ನೆರವನ್ನು ಕಂದಾಯ ಇಲಾಖೆ ಹಾಗೂ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ಕ್ಕೆ ಸೂಚನೆ ನೀಡಿದೆ. ಮೃತಪಟ್ಟ ವ್ಯಕ್ತಿಯ ಹೆಸರು, ಆಧಾರ್ ಕಾರ್ಡ್ ಹಾಗೂ …
Read More »