Breaking News

ಬಿಜೆಪಿಯವರದ್ದು ಸುಳ್ಳು ಹೇಳುವ ಸಂಕಲ್ಪ ಯಾತ್ರೆ: ಸಿದ್ದರಾಮಯ್ಯ ಟೀಕೆ

ಬೆಂಗಳೂರು: ಬಿಜೆಪಿಯವರದು ಜನಸಂಕಲ್ಪ ಯಾತ್ರೆಯಲ್ಲ, ಸುಳ್ಳು ಹೇಳುವ ಸಂಕಲ್ಪದ ಯಾತ್ರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬಿಜೆಪಿಯವರು ಅವರ ಯಾತ್ರೆಗಳಲ್ಲಿ ನನ್ನನ್ನು ಗುರಿಯಾಗಿಸಿಕೊಂಡು ಸುಳ್ಳುಗಳನ್ನು ಹೇಳಿದ್ದಾರೆ. ನೀವು ಏನು ಹೇಳುವುದಿದ್ದರೂ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾತನಾಡಿದರೆ ಬೊಮ್ಮಾಯಿ ಮತ್ತು ಯಡಿಯೂರಪ್ಪ ಇಬ್ಬರಿಗೂ ಒಂದಿಷ್ಟು ತೂಕ ಬರುತ್ತದೆ. ತಮ್ಮ ಸ್ಥಾನದ ಘನತೆಗಳನ್ನು ನಿರ್ಲಕ್ಷಿಸಿ ಮಾತನಾಡುತ್ತಾ ಹೋದರೆ ರಾಜ್ಯದ ಜನ ಬಿಜೆಪಿಯವರನ್ನು ವಿದೂಷಕರು ಎನ್ನುತ್ತಾರೆ ಎಂದರು. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ಸಿಗೆ …

Read More »

ಕಾಂಗ್ರೆಸ್ ಪಾದಯಾತ್ರೆ ಎಂಬ ಶಬ್ದ ಕಲಿತದ್ದೇ ಬಿಜೆಪಿಯಿಂದ: ನಳಿನ್ ಕಟೀಲ್

ಧಾರವಾಡ: ಬಿ.ಎಸ್.ಯಡಿಯೂರಪ್ಪನವರು ಮಾಡಿದಷ್ಟು ಪಾದಯಾತ್ರೆಯನ್ನು ಯಾರೂ ಮಾಡಿಲ್ಲ. ಅವರು ಮಾಡಿದಷ್ಟು ಸೈಕಲ್ ಯಾತ್ರೆಯನ್ನು ಯಾರೂ ಮಾಡಲಿಕ್ಕಾಗದು. ಪಾದಯಾತ್ರೆಯನ್ನು ಬಿಜೆಪಿಯಿಂದಲೇ ಕಾಂಗ್ರೆಸ್ ಕಲಿತುಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.   ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಪಾದಯಾತ್ರೆ ಈಗ ಆರಂಭವಾಗಿದೆ. ಬಿಜೆಪಿ ಬೆಳೆದಿದ್ದೇ ಪಾದಯಾತ್ರೆಯಿಂದ. ನಾವು ಅಧಿಕಾರಕ್ಕೆ ಬಂದಿರುವುದೇ ಯಾತ್ರೆಯಿಂದ. ಯಡಿಯೂರಪ್ಪ ಎರಡು ಕಿಲೋ ಮೀಟರ್ ನಡೆಯಲಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಯಡಿಯೂಪ್ಪನವರು …

Read More »

ಪೆನ್ನಿನ ಮೇಲೆ ಬರೆದು ಪರೀಕ್ಷೆಗೆ ನಕಲು ಮಾಡಿದ ಕಾನೂನು ವಿದ್ಯಾರ್ಥಿ

ಕ್ರಿಮಿನಲ್ ಕಾರ್ಯವಿಧಾನದ ಕಾನೂನನ್ನು ಅಧ್ಯಯನ (criminal procedural law) ಅಷ್ಟುಸುಲಭವಲ್ಲ. ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಉತ್ತೀರ್ಣರಾಗಲು ಹೆಚ್ಚಿನ ಶ್ರದ್ಧೆ, ಶ್ರಮ ಬೇಕಾಗುತ್ತದೆ. ಆದರೆ ಸ್ಪೇನ್‌ನಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ನಕಲು ಹೊಡೆಯುವುದಕ್ಕಾಗಿ ತನ್ನ ಸಂಪೂರ್ಣ ಪಠ್ಯಕ್ರಮವನ್ನು ಕೇವಲ 11 ಪೆನ್ನುಗಳಲ್ಲಿ ಕೆತ್ತಿದ್ದಾನೆ.     ಈ ಪೆನ್ನುಗಳ ಚಿತ್ರಗಳು ಟ್ವಿಟರ್ ನಲ್ಲಿ ವೈರಲ್ ಆಗಿವೆ. ವಿದ್ಯಾರ್ಥಿಯು ನೀಲಿ ಬಿಕ್ ಪೆನ್ನುಗಳ ಮೇಲೆ ಸಣ್ಣ ಅಕ್ಷರಗಳನ್ನು ಕೆತ್ತಿದ್ದಾನೆ. ನಕಲು ಮಾಡುತ್ತಿದ್ದಾಗ ಆತ ಸಿಕ್ಕಿ ಬಿದ್ದಿದ್ದು, …

Read More »

ಅ.15ರಂದು ಡಾ.ಪ್ರಭಾಕರ ಕೋರೆ ಅಮೃತ ಮಹೋತ್ಸವ

ಬೆಳಗಾವಿ: ಇಲ್ಲಿನ ನೆಹರೂ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಅ.15ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಅಮೃತ ಮಹೋತ್ಸವ ಸಮಾರಂಭಕ್ಕೆ ಭರದ ಸಿದ್ಧತೆಗಳು ನಡೆದಿವೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ 75 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ.   ಈ ಬಗ್ಗೆ ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ, ‘ಅಮೃತ ಮಹೋತ್ಸವದಲ್ಲಿ ಭಾಗವಹಿಸಲು …

Read More »

ಬೆಳಗಾವಿ | ಯುವತಿ ಅನುಮಾನಾಸ್ಪದ ಸಾವು: ಅತ್ಯಾಚಾರ ಎಸಗಿ ಕೊಲೆ; ಪೋಷಕರ ಹೇಳಿಕೆ

ಬೆಳಗಾವಿ: ಜಿಲ್ಲೆಯ 19 ಯುವತಿಯೊಬ್ಬರು, ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಅನುಮಾನಾಸ್ಪದವಾಗಿ ಕೊನೆಯುಸಿರೆಳೆದಿದ್ದಾರೆ. ಈ ಯುವತಿ ಬೆಂಗಳೂರಿನ ಕಾಲ್‌ ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಿತ್ರಾಣಗೊಂಡಿದ್ದ ಯುವತಿಯನ್ನು ಬುಧವಾರ ರಾತ್ರಿ ಯುವಕನೊಬ್ಬ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಹೋಗಿದ್ದ. ಅವರ ಸ್ಥಿತಿ ಗಂಭೀರವಾದ್ದರಿಂದ ಕುಟುಂಬದವರು ನಗರದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಯುವತಿ ತಿಂಗಳ ಹಿಂದಷ್ಟೇ ಬೆಂಗಳೂರಿನ ಕಾಲ್‌ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿದ್ದರು ಎಂದು ಮೂಲಗಳು ತಿಳಿಸಿವೆ. …

Read More »

ಉದ್ಘಾಟನೆ ಆದ ಕೆಲವೇ ಗಂಟೆ ಗಳಲ್ಲಿ ತಗ್ಗು ಬಿದ್ದಿರುವ 38 ಕೋಟಿ ರೂಪಾಯಿ ಮೇಲ್ಸೇತುವೆ

ನಿನ್ನೆ ಲೋಕಾರ್ಪಣೆಗೊಂಡ ಬೆಳಗಾವಿಯ ಟಿಳಕವಾಡಿ 3ನೇ ರೈಲ್ವೇ ಗೇಟ್‍ನ ಮೇಲ್ಸೇತುವೆಯಲ್ಲಿ ತಗ್ಗು ಬಿದ್ದಿರುವ ಘಟನೆ ನಡೆದಿದೆ. ಹೌದು ನಿನ್ನೆಯಷ್ಟೇ ಸಂಸದೆ ಮಂಗಲಾ ಅಂಗಡಿ ಅವರು 3ನೇ ರೈಲ್ವೇ ಗೇಟ್‍ನಲ್ಲಿ ಮೇಲ್ಸೇತುವೆಯನ್ನು ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಎಂಎಲ್‍ಸಿ ಪ್ರಕಾಶ ಹುಕ್ಕೇರಿ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ರೈಲ್ವೇ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟನೆ ಮಾಡಿದ್ದರು. ಆದರೆ ಇಂದು ನೋಡಿದ್ರೆ ಈ ಮೇಲ್ಸೇತುವೆಯಲ್ಲಿ ಒಂದು ತೆಗ್ಗು ಕಾಣಿಸಿಕೊಂಡಿದೆ. ಸಧ್ಯ ಗುಂಡಿ ಬಿದ್ದಿರುವ …

Read More »

ಬೆಳಗಾವಿ: ಕೈಕೊಟ್ಟ ಬೆಳೆ, ಸಾಲಬಾಧೆಯಿಂದ ಯುವ ರೈತ ಆತ್ಮಹತ್ಯೆ

ಬೆಳಗಾವಿ: ಸಾಲಬಾಧೆ ತಾಳಲಾರದೇ ಯುವ ರೈತನೊಬ್ಬ ತನ್ನ ಒಂದು ವರ್ಷದ ಮಗನ ಜನ್ಮದಿನ ಆಚರಿಸಿದ ಮರುದಿನವೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ವಿನಾಯಕ ನಗರದಲ್ಲಿ ನಡೆದಿದೆ. ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊಸೂರ ಗ್ರಾಮದ ಯುವ ರೈತ ರಾಜಶೇಖರ ಬೋಳೆತ್ತಿನ (34) ಮೃತ ರೈತ. ಮೃತಪಟ್ಟ ರೈತ ಕೃಷಿ ಚುಟುವಟಿಕೆಗಳಿಗೆ‌ ಮಾಡಿಕೊಂಡು ಸಾಲ ತಿರಿಸಲಾಗದೇ ಮನೆಯಲ್ಲಿ ಮಗುವನ್ನು ತೂಗಲು ಕಟ್ಟಿದ್ದ ಜೋಳಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ …

Read More »

ಬೆಳಗಾವಿಯಲ್ಲಿ 2,575 ರಾಸುಗಳಲ್ಲಿ ಚರ್ಮ ಗಂಟು ರೋಗ: 21.67 ಲಕ್ಷ ರೂ ಪರಿಹಾರ

ಬೆಳಗಾವಿ: ಜಿಲ್ಲೆಯ 317 ಗ್ರಾಮಗಳಲ್ಲಿ ಒಟ್ಟು 2,575 ರಾಸುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ. 33 ಲಕ್ಷ ರೂ. ಪರಿಹಾರ ನೀಡಲು ಹಣದ ಬೇಡಿಕೆ ಇದ್ದು, ಈಗಾಗಲೇ 21.67 ಲಕ್ಷ ರೂ. ಬಿಡುಗಡೆಯಾಗಿದೆ. ಇನ್ನುಳಿದ ಪರಿಹಾರದ ಹಣ ಶೀಘ್ರದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಶಶಿಧರ ನಾಡಗೌಡ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಒಂದು ತಿಂಗಳಿಂದ ಚರ್ಮ ಗಂಟು ರೋಗ …

Read More »

ಕರ್ನಾಟಕವನ್ನು ಕಾಂಗ್ರೆಸ್​​​​ನವರು ಎಟಿಎಂ ಮಾಡಿಕೊಂಡಿದ್ದರು : ಸಿಎಂ ಬೊಮ್ಮಾಯಿ ವಾಗ್ದಾಳಿ

ವಿಜಯನಗರ : ಬಿಜೆಪಿಯವರು ಕಪ್ಪ ಕಾಣಿಕೆ ಕೊಡುತ್ತಾರೆಂದು ಕಾಂಗ್ರೆಸ್ ಹೇಳುತ್ತದೆ. ಆದರೆ, ಕಾಂಗ್ರೆಸ್ಸಿಗೆ ಕಪ್ಪ ಕಾಣಿಕೆ ಕೊಟ್ಟು ಅಭ್ಯಾಸವಾಗಿದೆ. ಕಪ್ಪು ಕಾಣಿಕೆ ಕೊಡುವ ಸಂಪ್ರದಾಯ, ಇತಿಹಾಸ ಕಾಂಗ್ರೆಸ್ ಗೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಕರ್ನಾಟಕವನ್ನು ಕಾಂಗ್ರೆಸ್ಸಿನವರು ಎಟಿಎಂ ಮಾಡಿಕೊಂಡಿದ್ದರು : ಹೂವಿನಹಡಗಲಿಯಲ್ಲಿ ಜಿ.ಬಿ.ಆರ್. ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ಗೆ ಕರ್ನಾಟಕ ಐದು ವರ್ಷ ಕಪ್ಪ ಕಾಣಿಕೆ ಕೊಡುವ ಎಟಿಎಂ …

Read More »

ಡಾ. ಪ್ರಭಾಕರ ಕೋರೆಯವರ ಅಮೃತ ಮಹೋತ್ಸವ ; ೧ ಲಕ್ಷಕ್ಕಿಂತ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ;ಮಹಾಂತೇಶ ಕವಟಗಿಮಠ

ಅಕ್ಟೋಬರ 15 ರಂದು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಡಾ! ಪ್ರಭಾಕರ ಕೋರೆಯವರ ಅಮೃತಮಹೋತ್ಸವ ಕಾರ್ಯಕ್ರಮಕ್ಕೆ 1 ಲಕ್ಷಕ್ಕಿಂತ ಅಧಿಕ ಜನರು ಭಾಗಿಯಾಗಲಿದ್ದಾರೆ ಎಂದು ಮಾಜಿ ವಿಧಾನಪರಿಷತ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.. ಚಿಕ್ಕೋಡಿ ತಾಲೂಕಿನ ನಣದಿಯ ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಶಿಕ್ಷಣ,ವೈದ್ಯಕೀಯ,ಉದ್ಯಮ,ರಾಜಕೀಯ, ಸಾಮಾಜಿಕ, ಧಾರ್ಮಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಗಾಧವಾದ ಸಾಧನೆ ಮಾಡಿರುವ ಡಾ! ಪ್ರಭಾಕರ ಕೋರೆಯವರ ಕಾರ್ಯ ಶ್ಲಾಘನೀಯ. ನಾವು ಡಾ! …

Read More »