Breaking News

ಅಕ್ರಮ ಭೂ ಡಿನೋಟಿಫಿಕೇಶನ್‌ ಪ್ರಕರಣ: ಬಿಎಸ್‌ವೈ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ

ಬೆಂಗಳೂರು: ಅಕ್ರಮ ಭೂ ನೋಟಿಫಿಕೇಶನ್‌ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾ| ಯು.ಯು. ಲಲಿತ್‌ ಹಿಂದೆ ಸರಿದಿದ್ದಾರೆ. ಶುಕ್ರವಾರ ಅರ್ಜಿ ವಿಚಾರಣೆಗೆ ಬಂದೊಡನೆ ಹಿಂದೆ ಸರಿದ ಸಿಜೆಐ, “ದೀಪಾವಳಿ ಹಬ್ಬದ ಬಳಿಕ ಬೇರೊಂದು ನ್ಯಾಯಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಲಿದೆ’ ಎಂದಿದ್ದಾರೆ. 2021ರ ಜ.27ರಂದು ಇದೇ ಪ್ರಕರಣ ಸಂಬಂಧ ಬಿಎಸ್‌ವೈ ಹಾಗೂ ಸಚಿವ ಮುರುಗೇಶ್‌ ನಿರಾಣಿ ಅವರಿಗೆ …

Read More »

ಸಂಪುಟ ವಿಸ್ತರಣೆ; ಸದ್ಯದಲ್ಲಿಯೇ ದೆಹಲಿಗೆ ಭೇಟಿ: ಸಿಎಂ ಬೊಮ್ಮಾಯಿ

ಬೆಳಗಾವಿ: ಜನಸಂಕಲ್ಪ ಯಾತ್ರೆಯ ಸಂದರ್ಭದಲ್ಲಿಯೇ ನವದೆಹಲಿಗೆ ಭೇಟಿ ನೀಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು ಎಂದರು.     ಶನಿವಾರ ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬೆಳಗಾವಿಗೆ ಶುಭ ಸುದ್ದಿ ಇದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ನಿರ್ಣಯ ಕೈಗೊಂಡಾಗ ಎಲ್ಲರಿಗೂ ತಿಳಿಸಲಾಗುವುದು …

Read More »

ಹಲಾಲ್‌ ಮುಕ್ತ ದೀಪಾವಳಿ: ಪ್ರಮೋದ್‌ ಮುತಾಲಿಕ್‌ ಕರೆ

ಹುಬ್ಬಳ್ಳಿ: ಹಲಾಲ್‌ ಮುಕ್ತ ದೀಪಾವಳಿ ಆಚರಿಸುವ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಂದ ಹಬ್ಬದ ಸಾಮಗ್ರಿ ಖರೀದಿಸ ಬಾರದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.   ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಸ್ಲಿಮರಿಂದ ಹಬ್ಬದ ಸಾಮಗ್ರಿ ಖರೀದಿಸಿ ದರೆ ಅದು ಶಾಸ್ತ್ರೋಕ್ತ ಎನ್ನಿಸುವುದಿಲ್ಲ. ಇದರೊಂದಿಗೆ ಹಲಾಲ್‌ ಗುರುತು ಇರುವ ವಸ್ತುಗಳನ್ನು ಕಡೆಗಣಿಸಬೇಕು. ಈ ಗುರುತಿಗೆ ಸರಕಾರದಿಂದ ಯಾವುದೇ ಮಾನ್ಯತೆ ಇಲ್ಲ ಎಂದು ಅವರು ಹೇಳಿದರು.

Read More »

ವೀರಪ್ಪನ್‌ ಹತ್ಯೆ ಸೂತ್ರಧಾರಿ ಕೆ.ವಿಜಯ್‌ ಕುಮಾರ್‌ ರಾಜೀನಾಮೆ

ಹೊಸದಿಲ್ಲಿ: ಕೇಂದ್ರ ಗೃಹ ಸಚಿವಾಲಯದ ಹಿರಿಯ ಭದ್ರತಾ ಸಲಹೆಗಾರ ಕೆ.ವಿಜಯ್‌ ಕುಮಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕುಖ್ಯಾತ ದಂತಚೋರ, ಕಾಡುಗಳ್ಳ ವೀರಪ್ಪನ್‌ ಹತ್ಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿಜಯ್‌ ಕುಮಾರ್‌ ಪ್ರಸ್ತುತ ತಮ್ಮ ವಾಸ್ತವ್ಯವನ್ನು ದಿಲ್ಲಿಯಿಂದ ಚೆನ್ನೈಗೆ ಬದಲಾಯಿಸಿಕೊಂಡಿದ್ದಾರೆ.   ನಿವೃತ್ತಿಗೆ ಖಾಸಗಿ ವಿಚಾರಗಳನ್ನು ಕಾರಣವಾಗಿ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವಿಜಯ್‌ …

Read More »

ಪುಣ್ಯಕ್ಷೇತ್ರಗಳಿಂದ ಬರುತ್ತಿದ್ದರು.; 9 ಜೀವ ಬಲಿಪಡೆದ ಅಪಘಾತ!:

ಬೆಂಗಳೂರು: ಹಾಸನ ಜಿಲ್ಲೆ ಅರಸೀಕೆರೆ ಸಮೀಪದ ಬಾಣಾವರ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ದಾರುಣ ಅಂತ್ಯ ಕಂಡಿದ್ದಾರೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ದುಃಖ ವ್ಯಕ್ತಪಡಿಸಿದ್ದಾರೆ.   ಶನಿವಾರ ತಡರಾತ್ರಿ ಬಾಣವರ ಹಾಲಿನ ಟ್ಯಾಂಕರ್‌, ಟಿಟಿ ವಾಹನ, ಕೆಎಸ್‌ ಆರ್‌ ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳೂ ಸೇರಿ …

Read More »

ಮೀಡಿಯಾ-ಸೋಷಿಯಲ್ ಮೀಡಿಯಾ, ಊರು-ಕೇರಿ ತುಂಬೆಲ್ಲ ಕಾಂತಾರ ಸಮಾಚಾರ.

ಕಾಂತಾರ.. ಒಂದು ದಂತಕತೆ! ಮೀಡಿಯಾ-ಸೋಷಿಯಲ್ ಮೀಡಿಯಾ, ಊರು-ಕೇರಿ ತುಂಬೆಲ್ಲ ಇದರದ್ದೇ ಕಥೆ-ಕಾಲಕ್ಷೇಪ. ರಿಷಬ್ ವೈಯಕ್ತಿಕ ಇಷ್ಟಾನಿಷ್ಟಗಳ ಕಾರಣ ಅಲ್ಲಲ್ಲಿ ಆಕ್ಷೇಪ-ಹಸ್ತಕ್ಷೇಪವೂ ಎದ್ದಿದೆ, ಅದು ಬೇರೆ ಮಾತು ಬಿಡಿ. ಆದರೆ ಒಬ್ಬ ಪ್ರೇಕ್ಷಕನಾಗಿ ಚಿತ್ರದೊಳಗೆ ಹೊಕ್ಕಿ ಬಂದಂತಹ ಅನುಭವವಂತು ಆಗಿದೆ ಅನ್ನೋದು ಬಹುಜನರ ಲೈಕ್, ಕಮೆಂಟ್, ಶೇರ್ ಗಳಲ್ಲಿ ಕಾಣುತ್ತಿರುವ ಸಹಜ ಸಾಮಾನ್ಯ ಸಮಾಚಾರ. ಚಿತ್ರವನ್ನು ನೋಡಿದ ಕೂಡಲೇ ಅನಾಮತ್ತು 35 ವರ್ಷಗಳ ಹಿಂದಿನ ದಂತಕತೆಯೊಂದು ನೆನಪಾಗುತ್ತಿದೆ. ಅದುವೇ ಒಂದು ಮುತ್ತಿನ …

Read More »

ಪ್ರಭಾಕರ ಕೋರೆ ಜೀವಂತ ಶಿಕ್ಷಣ ಸಂಸ್ಥೆ: ಧರ್ಮೇಂದ್ರ ಪ್ರಧಾನ್‌

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಅವರೊಬ್ಬ ಜೀವಂತ ಶಿಕ್ಷಣ ಸಂಸ್ಥೆ ಎಂದು ಕೇಂದ್ರ ಶಿಕ್ಷಣ, ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದರು. ನಗರದಲ್ಲಿ ಶನಿವಾರ ಜರಗಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದೇ ಮಾತಿನಲ್ಲಿ ಹೇಳುವುದಾದರೆ ಕೋರೆ ಅವರು ಮಾಡದ ಸಾಮಾಜಿಕ ಕೆಲಸ ಇಲ್ಲ. ಬಿಡದ ಕ್ಷೇತ್ರ ಇಲ್ಲ ಎಂದರು. ಬದಲಾಗುತ್ತಿರುವ …

Read More »

ವಿಜಯಪುರ; ಜನರ ಎದೆಯಲ್ಲಿ ಭೂಕಂಪದ ಕಂಪನ

ವಿಜಯಪುರ: ಕಳೆದ ಎರಡು ವರ್ಷದಿಂದ ನಿರಂತರವಾಗಿ ಬಸವನಾಡನ್ನು ಕಾಡುತ್ತಿರುವ ಭೂಕಂಪ, ಕಳೆದ ಒಂದು ವಾರದಿಂದ ಅದರಲ್ಲೂ ಎರಡು ದಿನಗಳಿಂದ ಪದೇ ಪದೇ ಕಂಪಿಸುತ್ತಿದ್ದು ವಿಜಯಪುರ ಜಿಲ್ಲೆಯ ಜನರಲ್ಲಿ ವಸುಂಧರೆ ನಡುಕ ಸೃಷ್ಟಿಸಿದ್ದಾಳೆ. ವಿಜಯಪುರ ನಗರದಲ್ಲಿ ಬುಧವಾರ ಮಧ್ಯರಾತ್ರಿ, ಗುರುವಾರ ಬೆಳಗ್ಗೆ ಹಾಗೂ ಶುಕ್ರವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಮಹಾನಗರ ಪಾಲಿಕೆ ಚುನಾವಣೆ ತುರಿಸಿನಲ್ಲಿರುವ ನಗರದ ಜನತೆಗಂತೂ ಪದೇ ಪದೇ ಸಂಭವಿಸುತ್ತಿರುವ ಭೂಕಂಪನ ಆತಂಕದಲ್ಲಿ ಮುಳುಗುವಂತೆ ಮಾಡಿದೆ. ಭೂಮಿಯ ಆಳದಲ್ಲಿ ಪದೇ ಪದೇ …

Read More »

ಆಹಾರ ಭದ್ರತೆಗೆ ಶಾಸಕ ಶ್ರೀಮಂತ ಪಾಟೀಲ ಕೊಡುಗೆ ಅಪಾರ

ಸಂಬರಗಿ/ಕಾಗವಾಡ: ಕೃಷಿ, ನೀರಾವರಿಗಾಗಿ ಇಸ್ರೇಲ್‌ ಹಾಗೂ ಇತರ ದೇಶಗಳಿಗೆ ಅಧ್ಯಯನಕ್ಕೆ ತೆರಳುವ ಬದಲು ರಾಜ್ಯದ ರೈತರು ಶಾಸಕ ಶ್ರೀಮಂತ ಪಾಟೀಲರ ಕ್ಷೇತ್ರಕ್ಕೆ ಅಧ್ಯಯನಕ್ಕೆ ಬರಬೇಕು ಎಂದು ವಿಧಾನ ಸಭೆಯ ಭರವಸೆ ಸಮಿತಿ ಅಧ್ಯಕ್ಷ ಹಾಗೂ ಉಡುಪಿ ಶಾಸಕ ರಘುಪತಿ ಭಟ್‌ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿ ಮಾತನಾಡಿದರು.   ನಂತರ ಸಂಬರಗಿಯಲ್ಲಿ ಶ್ರೀಮಂತ ಪಾಟೀಲ ಫೌಂಡೇಶನ್‌ ವತಿಯಿಂದ ಅಗ್ರಾಣಿ ನದಿಯಲ್ಲಿ ಸಂಚಾರಕ್ಕೆ ನೂತನ ಬೋಟ್‌ ಹಸ್ತಾಂತರಿಸಿ ಮಾತನಾಡಿದ ಅವರು, ಗಡಿ …

Read More »

ಸದ್ದು ಮಾಡಿದ ಬೆಳೆ-ಮನೆ ಹಾನಿ, ಭೂಸ್ವಾಧೀನ

ಸವದತ್ತಿ: ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಸಾರ್ವಜನಿಕರ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಬೆಳೆ ಹಾನಿ, ಮನೆ ಹಾನಿ, ಭೂಸ್ವಾಧೀನ ವಿಷಯಗಳು ಭಾರೀ ಸದ್ದು ಮಾಡಿದವು. ಮೂರು ವರ್ಷ ಕಳೆದರೂ ಬೆಳೆ ಹಾನಿ ಪರಿಹಾರ ಸಿಕ್ಕಿಲ್ಲ. ಜಮೀನು ವಾಟ್ನಿ ಕುರಿತು ತಲಾಠಿಗಳು ಸೂಕ್ತ ಕ್ರಮ ವಹಿಸುತ್ತಿಲ್ಲ. ರೈತರ ಪಹಣಿಯಲ್ಲಿ ನೀರಾವರಿ ನಿಗಮದ ಹೆಸರು, ರೈತರ ಕಡೆಗಣನೆ. ಕಾರ್ಖಾನೆಯಲ್ಲಿ ತೂಕ ಮಾಡಿದ ಹಾಗೂ ಪ್ರತ್ಯೇಕವಾಗಿ ಮಾಡಿದ ಕಬ್ಬು ಬೆಳೆ ತೂಕದಲ್ಲಿ ಅತೀವ ವ್ಯತ್ಯಾಸ ಬರುತ್ತಿದೆ …

Read More »