Breaking News

ಸೂರ್ಯಗ್ರಹಣ: ಹಲವೆಡೆ ದೇವರ ದರ್ಶನ ಬಂದ್‌

ಬೆಳಗಾವಿ: ಕೇತುಗ್ರಸ್ಥ ಖಂಡಗ್ರಾಸ (ಖಗ್ರಾಸ) ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಮಂಗಳವಾರ ಮಧ್ಯಾಹ್ನದಿಂದ ಮೂರ್ತಿಗಳ ದರ್ಶನ ಬಂದ್‌ ಮಾಡಲಾಯಿತು. ದೀಪಾವಳಿ ಹಬ್ಬದ ಕಾರಣ ದೇವಸ್ಥಾನಗಳನ್ನು ಮುಚ್ಚಲಿಲ್ಲ. ಆದರೆ, ಮೂರ್ತಿಗಳ ಮೇಲೆ ಬಿಲ್ವಪತ್ರಿ, ಶಾಲುಗಳನ್ನು ಹೊದಿಸಿ ಮರೆ ಮಾಟಲಾಯಿತು. ಸಂಜೆ 4.30ಕ್ಕೆ ಸರಿಯಾಗಿ ಬೆಳಗಾವಿಯಲ್ಲಿ ಸೂರ್ಯಗ್ರಹಣ ಗೋಚರವಾಗಲಿದೆ ಎಂದು ಅರ್ಚಕರು ಮಾಹಿತಿ ನೀಡಿದರು. ಸೋಮವಾರವೇ ಹಲವು ದೇವಸ್ಥಾನಗಳಲ್ಲಿ ಗ್ರಹಣ ಮಾಹಿತಿ ಹಾಗೂ ದೋಷ ನಿವಾರಣಾ ವಿಧಾನಗಳ ಬಗ್ಗೆ ವಿವರ …

Read More »

ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು: ಕಾಂಗ್ರೆಸ್ ಟೀಕೆ

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ವಪಕ್ಷದ ನಾಯಕರ ವಿರುದ್ಧವೇ ನಡೆಸುವ ಟೀಕೆಗಳನ್ನು ಕಾಂಗ್ರೆಸ್ ಅಸ್ತ್ರ ಮಾಡಿಕೊಳ್ಳುತ್ತಿದೆ. ಇದೀಗ ‘ನನ್ನ ತಂಟೆಗೆ ಬಂದರೆ ಹಾವು ಬಿಡುತ್ತೇನೆ’ ಎಂದು ಯತ್ನಾಳ್ ಹೇಳಿಕೆ ಬಳಸಿಕೊಂಡು ಕಾಂಗ್ರೆಸ್ ವ್ಯಂಗ್ಯವಾಡಿದೆ.   ಕಾಂಗ್ರೆಸ್ ಕಿಟಿಕಿ ಇಣುಕುವುದರಲ್ಲೇ ನಿರತರಾಗಿದ್ದ ಬಿಜೆಪಿಗೆ ತಮ್ಮಲ್ಲಿನ ಬಿಜೆಪಿ ವರ್ಸಸ್ ಬಿಜೆಪಿ ಕದನದಲ್ಲಿ ಬಿಜೆಪಿಗರೆಲ್ಲ ಈಗ ಹಾವಾಡಿಗರಾಗಿದ್ದಾರೆ, ಅವರ ಹಾವುಗಳು ಎಲ್ಲೆಲ್ಲಿರುತ್ತವೆ, ಎಲ್ಲೆಲ್ಲಿ ಹೆಡೆ ಎತ್ತುತ್ತವೆ ಎಂಬುದು ಸ್ವತಃ ಬಿಜೆಪಿಗೇ ತಿಳಿಯುತ್ತಿಲ್ಲ! …

Read More »

ದೀಪಾವಳಿ ಹಬ್ಬದ ಪ್ರಯುಕ್ತ ಹಚ್ಚಿದ ಪಟಾಕಿ ಕಿಡಿ ಸಿಡಿದು ಕುಶನ್ ಅಂಗಡಿಗೆ ಬೆಂಕಿ

ದೀಪಾವಳಿ ಹಬ್ಬದ ಪ್ರಯುಕ್ತ ಹಚ್ಚಿದ ಪಟಾಕಿ ಕಿಡಿ ಸಿಡಿದು ಕುಶನ್ ಅಂಗಡಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ತಡರಾತ್ರಿ ನಡೆದಿದೆ. ಹೌದು ಕಿತ್ತೂರು ಪಟ್ಟಣದ ಶಬ್ಬೀರ ಬೀಡಿ ಎಂಬುವವರಿಗೆ ಸೇರಿದ ಕುಶನ್ ಅಂಗಡಿಗೆ ನಿನ್ನೆ ತಡರಾತ್ರಿ ಬೆಂಕಿ ತಗುಲಿದೆ. ಪಟಾಕಿ ಕಿಡಿ ಸಿಡಿಯುತ್ತಿದ್ದಂತೆ ಧಗಧಗನೇ ಕುಶನ್ ಅಂಗಡಿ ಹೊತ್ತಿ ಉರಿದಿದೆ. ಅಂದಾಜು 3 ಲಕ್ಷ ಮೌಲ್ಯದ ಸಿದ್ಧಗೊಂಡಿದ್ದ ಕುಶನ್, ಪೀಠೋಪಕರಣ ಬೆಂಕಿಗಾಹುತಿಯಾಗಿವೆ. ಶಬ್ಬೀರ …

Read More »

ಕೇತುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆ ಬಿಲ್ವಪತ್ರೆಗಳಿಂದ ಮುಚ್ಚಲ್ಪಟ್ಟ ಕಪಿಲೇಶ್ವರ ..!

ಕೇತುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿಯ ಶ್ರೀ ಕಪಿಲೇಶ್ವರ ಮಂದಿರದಲ್ಲಿ ಬೆಳಿಗ್ಗೆ 8 ಗಂಟೆಗೆ ಎಲ್ಲ ಪೂಜಾ ಕಾರ್ಯಗಳನ್ನು ಮುಗಿಸಲಾಯಿತು. ವಾ.ಓ: ಹೌದು ಕೇತುಗ್ರಸ್ತ ಸೂರ್ಯ ಗ್ರಹಣ ಹಿನ್ನೆಲೆ ಪ್ರತಿದಿನದಂತೆ ನಡೆಯುವ ಅಭಿಷೇಕ, ರುದ್ರಾಭಿಷೇಕ ಸೇರಿ ಎಲ್ಲಾ ಕ್ರಿಯೆಗಳನ್ನು ಬೆಳಿಗ್ಗೆ 8 ಗಂಟೆಯೊಳಗೆ ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಅರ್ಚಕರು ಪೂರ್ಣಗೊಳಿಸಿದರು. ಬಳಿಕ ಮಧ್ಯಾಹ್ನ ವೇದ ಶುರುವಾಗುವ ಮುಂಚೆ ಶಿವಲಿಂಗವನ್ನು ಪೂರ್ಣವಾಗಿ ಬಿಲ್ವಪತ್ರೆಗಳಿಂದ ಮುಚ್ಚಲಾಯಿತು. ಇದು …

Read More »

ಸ್ತಗಿತ ಹೊಂದಿದ್ದ ವಾಟ್ಸ್ ಆ್ಯಪ್ ಪುನರ್ ಆರಂಭ ಗ್ರಹಣ ಹಿಡಿದಿತ್ತು ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳ ಸುರಿಮಳೆ

lಮುಂಬೈ: ಪ್ರಸಿದ್ಧ ಸಾಮಾಜಿಕ ಜಾಲತಾಣ ವಾಟ್ಸಪ್ ಸರ್ವರ್ ನಲ್ಲಿ ಸಮಸ್ಯೆ ತಲೆದೋರಿದೆ. ಹೀಗಾಗಿ ವಿಶ್ವದಾದ್ಯಂತ ವಾಟ್ಸಪ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಈ ಬಗ್ಗೆ ಇದುವರೆಗೂ ವಾಟ್ಸಪ್ ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ವಿಶ್ವದಾದ್ಯಂತ ಮಧ್ಯಾಹ್ನ ಸುಮಾರು 12.30ರಿಂದ ವಾಟ್ಸಪ್ ಕಾರ್ಯ ನಿರ್ವಹಿಸುತ್ತಿಲ್ಲ. ವಾಟ್ಸಪ್ ನಲ್ಲಿ ಮೆಸೇಜ್ ಗಳು ಕಳುಹಿಸಲು ಸಾಧ್ಯವಾಗದ ಕಾರಣಕ್ಕೆ ತಾವು ಮೊಬೈಲ್ ರಿ ಸ್ಟಾರ್ಟ್ ಮಾಡಿರುವುದಾಗಿ …

Read More »

ಮುಂದಿನ ಚುನಾವಣೆ ಕ್ಷೇತ್ರ ಘೋಷಿಸಿದ ಶ್ರೀರಾಮುಲು, ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧೆ

ಚಿತ್ರದುರ್ಗ: ದೀಪಾವಳಿ ದಿನದಂದೇ ಮೀಸಲಾತಿ ಜಾರಿಯಾಗಿದ್ದು, ಇದೇ ದಿನ ವಾಲ್ಮೀಕಿ ಪುತ್ಥಳಿ ಅನಾವರಣವಾಗುತ್ತಿರುವುದು ಸಂತೋಷ ತಂದಿದೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, 2023 ರ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಘೋಷಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಎಂದು ಕೂಡ ಹಿಂದೆ ಸರಿಯಲಿಲ್ಲ. …

Read More »

ವಿಧಾನಪರಿಷತ್‌ ಸದಸ್ಯ, ಮಾಜಿ ಸಚಿವ ಎಚ್‌.ವಿಶ್ವನಾಥ್‌ ಕಾಂಗ್ರೆಸ್‌ಗೆ?

ವಿಧಾನಪರಿಷತ್‌ ಸದಸ್ಯ, ಮಾಜಿ ಸಚಿವ ಎಚ್‌.ವಿಶ್ವನಾಥ್‌ ಕಾಂಗ್ರೆಸ್‌ಗೆ? ಮೈಸೂರು: ವಿಧಾನಪರಿಷತ್‌ ಸದಸ್ಯ, ಮಾಜಿ ಸಚಿವ ಅಡಗೂರು ಎಚ್‌. ವಿಶ್ವನಾಥ್‌ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವ ಸಾಧ್ಯತೆ ದಟ್ಟವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಭಿನಂದಿಸಿರುವ ವಿಶ್ವನಾಥ್‌, ಸದ್ಯದಲ್ಲೇ ಬೆಂಗಳೂರಿನಲ್ಲಿ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.   ಈಗ ಬಿಜೆಪಿಯಲ್ಲಿರುವ ವಿಶ್ವನಾಥ್‌ ಆ ಪಕ್ಷದಿಂದಲೂ ದೂರ …

Read More »

ಸ್ಥಾನ ಹೋದರೂ ಅಡ್ಡಿಯಿಲ್ಲ,ಕಿತ್ತೂರಿಗೆ ಎರಡು ಸಲ ಬಂದೆ: ಸಿಎಂ

ಬೆಳಗಾವಿ (ಚನ್ನಮ್ಮನ ಕಿತ್ತೂರು): ಮುಖ್ಯಮಂತ್ರಿ ಸ್ಥಾನ ಹೋದರೂ ಅಡ್ಡಿಯಿಲ್ಲ. ಕಿತ್ತೂರು ಚನ್ನಮ್ಮನ ಪವಿತ್ರ ಭೂಮಿಗೆ ಸತತ ಎರಡು ಸಲ ಬಂದು ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಕಿತ್ತೂರು ಉತ್ಸವಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬ ಮೂಢನಂಬಿಕೆ ಇದೆ. ಸ್ಥಾನ ಕಳೆದುಕೊಳ್ಳುವ ಭಯ ದಿಂದ ಬಹಳಷ್ಟು ಮುಖ್ಯಮಂತ್ರಿಗಳು ಕಿತ್ತೂರಿಗೆ …

Read More »

ಮೀಸಲು ಅಧ್ಯಾದೇಶಕ್ಕೆ ಅಧಿವೇಶನದಲ್ಲಿ ಒಪ್ಪಿಗೆ: ಮುಖ್ಯಮಂತ್ರಿ

ಹುಬ್ಬಳ್ಳಿ: ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ಅಧ್ಯಾದೇಶಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಮೀಸಲಾತಿ ಜಾರಿ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಜಾರಿಗಾಗಿ ಕಾನೂನು ರಕ್ಷಣೆ ಕೊಡಲು ಎಲ್ಲ ಸಾಧ್ಯತೆಗಳನ್ನು ಮಾಡಲಾಗುವುದು. ಅಧ್ಯಾದೇಶಕ್ಕೆ ಮುಂಬರುವ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲಾಗುವುದು. ಪಂಚಮಸಾಲಿ ಸಹಿತ ಎಲ್ಲ ಮೀಸಲಾತಿ ಕುರಿತು ಬೇರೆ ಬೇರೆ ಹಂತಗಳಲ್ಲಿ ಹಿಂದುಳಿದ ವರ್ಗಗಳ …

Read More »

ಸ್ಥಿರತೆ ಮತ್ತು ಏಕತೆಯೇ ನನ್ನ ಆದ್ಯತೆ; ಯುಕೆಗೆ ಹೊಸ ಭರವಸೆ ಮೂಡಿಸಿದ ರಿಷಿ ಸುನಕ್‌

ಲಂಡನ್‌: “ಯುನೈಟೆಡ್‌ ಕಿಂಗ್‌ಡಮ್‌(ಯುಕೆ) ಒಂದು ಶ್ರೇಷ್ಠ ರಾಷ್ಟ್ರ. ಆದರೆ ನಾವು ದೊಡ್ಡಮಟ್ಟಿನ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎನ್ನುವುದೂ ಅಷ್ಟೇ ಸತ್ಯ. ನಮಗೆ ಈಗ ಬೇಕಾಗಿರುವುದು ಸ್ಥಿರತೆ ಮತ್ತು ಏಕತೆ. ನಮ್ಮ ಪಕ್ಷವನ್ನು ಮತ್ತು ದೇಶವನ್ನು ಒಗ್ಗೂಡಿಸುವುದೇ ನನ್ನ ಆದ್ಯತೆಯಾಗಿದೆ. ಆಗ ಮಾತ್ರ ನಾವು ಎಂತಹ ಸವಾಲನ್ನು ಬೇಕಿದ್ದರೂ ಸುಲಭವಾಗಿ ಎದುರಿಸಿ ಗೆಲ್ಲಲು ಸಾಧ್ಯ.’ ಇದು ಬ್ರಿಟನ್‌ನ 57ನೇ ಪ್ರಧಾನಿಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ರಿಷಿ ಸುನಕ್‌ ಅವರ ಮಾತುಗಳು. ಕಳೆದ 200 …

Read More »