ವಿಜಯಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಪುಟ ವಿಸ್ತರಣೆ ಆಗಲಿ, ಬಿಡಲಿ ಅದರಲ್ಲಿ ನಾನಂತೂ ಇಲ್ಲ ಎಂದು ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನನಗೆ ಕರೆ ಮಾಡಿದ್ದರು. ಡಿಸೆಂಬರ್ ನಲ್ಲಿ ಟೆಕ್ಸ್ ಟೈಲ್ ಪಾರ್ಕ್ ಉದ್ಘಾಟನೆ ಮಾಡಲು ಬರುತ್ತಿದ್ದಾರೆ. ಈ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಲಾಗುತ್ತದೆ. ವಿಜಯಪುರ ಮಹಾನಗರ ಪಾಲಿಕೆಗೆ ಹೆಚ್ಚುವರಿ 100 ಕೋಟಿ …
Read More »ಧೂಳಖೇಡ ಬಳಿ ಭೀಕರ ಅಪಘಾತ: ಯಾತ್ರೆಗೆ ತೆರಳುತ್ತಿದ್ದ ದಂಪತಿ ಸಾವು
ವಿಜಯಪುರ : ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ಧೂಳಖೇಡ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂಬದಿಯಿಂದ ಕ್ರೂಸರ್ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟು, ಒಂಬತ್ತು ಜನರು ಗಾಯಗೊಂಡ ದುರ್ಘಟನೆ ಸಂಭವಿಸಿದೆ. ಜಿಲ್ಲೆಯ ಧೂಳಖೇಡ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸಂಭವಿಸಿದ ಭೀಕರ ಅಪಾಯದಲ್ಲಿ ಮೃತಪಟ್ಟವರನ್ನು ಕ್ರೂಸರ್ ನಲ್ಲಿದ್ದ ಬೆಳಗಾವಿ ಜಿಲ್ಲೆ ಅಥಣಿ ಮೂಲದ ಪತಿ-ಪತ್ನಿ ಭಯ್ಯಾಜಿ ಶಿಂಧೆ (50) ಸುಮಿತ್ರಾ ಶಿಂಧೆ (45) ಎಂದು …
Read More »ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 150 ಅಭ್ಯರ್ಥಿಗಳ ಪಟ್ಟಿ ಪ್ರಕಟ ಬಗ್ಗೆ ನಾಯಕರ ಮಹತ್ವದ ಚರ್ಚೆ
ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ಸಭೆ ನಡೆದಿದೆ. ಸುನಿಲ್ ಕನಗೋಲು ವರದಿ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ. ಆದಷ್ಟು ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಸಲಹೆ ನೀಡಲಾಗಿದೆ. ಸುನಿಲ್ ಟೀಂ ನೀಡಿರುವ ವರದಿ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ನಾಯಕರು ಚರ್ಚೆ ನಡೆಸಿದ್ದು, ಡಿಸೆಂಬರ್ ಒಳಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ 150 ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು …
Read More »ತೂಕ ಇಳಿಸೋಕೆ ವಾಕಿಂಗ್ ಸಾಕಾಗಲ್ಲ, ತಜ್ಞರು ಹೇಳೋ ಈ ಟಿಪ್ಸ್ ಕೇಳಿ
ದಿನಂಪ್ರತಿ 10,000 ಹೆಜ್ಜೆಗಳಷ್ಟು ನಡೆಯುವುದು ಉತ್ತಮ ಆರೋಗ್ಯಕರ ಜೀವನದ ಬುನಾದಿ ಎಂದೆನಿಸಿದೆ. ಹಲವಾರು ವರ್ಷಗಳಿಂದ ಇದೇ ಸೂತ್ರವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಬಂದಿದ್ದಾರೆ. ಜನರು ಕೂಡ ತಮ್ಮ ಫಿಟ್‌ನೆಸ್ ಟ್ರ್ಯಾಕರ್‌ಗಳಲ್ಲಿ ಈ ಮೈಲುಗಲ್ಲನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಹಾಗಿದ್ದರೆ ಇಲ್ಲಿ ವಿಚಾರ ಮಾಡಬೇಕಾದ ಪ್ರಶ್ನೆಯೆಂದರೆ ದಿನವೂ ಹತ್ತುಸಾವಿರ ಹೆಜ್ಜೆಗಳ ನಡಿಗೆಯು ಸ್ಥೂಲಕಾಯತೆ ಮತ್ತು ಮಧುಮೇಹದಂತಹ ದೀರ್ಘಕಾಲದ ಪರಿಸ್ಥಿತಿಗಳನ್ನು ತಡೆಯಲು ಸಹಾಯ ಮಾಡುತ್ತದೆಯೇ ಎಂಬುದಾಗಿದೆ. ಆರೋಗ್ಯಕರ ತೂಕಕ್ಕೆ ಎಷ್ಟು ಹೆಜ್ಜೆಗಳನ್ನು ಹಾಕಬೇಕು? ಈ ಕುರಿತು …
Read More »ಶಾಸಕರಿಗೆ ತಲಾ 100 ಕೋಟಿ ರೂ. ಕೊಟ್ಟು ಆಪರೇಷನ್ ಕಮಲ ಆರೋಪ: ಹೈಡ್ರಾಮಾ
ಹೈದರಾಬಾದ್: ತೆಲಂಗಾಣದಲ್ಲಿ ಟಿ.ಆರ್.ಎಸ್. ಶಾಸಕರಿಗೆ ತಲಾ 100 ಕೋಟಿ ರೂ. ಕೊಟ್ಟು ಬಿಜೆಪಿ ಖರೀದಿಗೆ ಯತ್ನಿಸಿದೆ ಎಂದು ಆರೋಪಿಸಿ ಸಚಿವರು ಮತ್ತು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ನಾಯಕರು ಬುಧವಾರ ರಾತ್ರಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದರು, ಟಿ.ಆರ್.ಎಸ್. ಶಾಸಕರನ್ನು ಖರೀದಿಸಲು ಬಿಜೆಪಿಯ ಯತ್ನಿಸಿದೆ ಎಂದು ದೂರಿದ ಪ್ರತಿಭಟನಾಕಾರರು ವಿಜಯವಾಡ ಹೆದ್ದಾರಿಯ ಹೈದರಾಬಾದ್ ಬಳಿಯ ಚೌಟುಪ್ಪಲ್ ನಲ್ಲಿ ಧರಣಿ ನಡೆಸಿದರು. ಪ್ರತಿಭಟನೆಯಲ್ಲಿ ಸಚಿವರಾದ ಗಂಗೂಲ ಕಮಲಾಕರ್ ಮತ್ತು ಇಂದ್ರಕರನ್ ರೆಡ್ಡಿ …
Read More »ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ದೀಪಾವಳಿ ಗಿಫ್ಟ್ ನೀಡಿದೆ. ಹೌದು, ರಾಜ್ಯ ಸರ್ಕಾರವು ಒಂದು ಸರ್ಕಾರವು ಒಂದು ಸಾವಿರ ಗೌರವ ಧನವನ್ನು ಹೆಚ್ಚಳ ಮಾಡಿದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶದ ಪ್ರಕಾರ ಸೆಪ್ಟಂಬರ್, ಆಕ್ಟೋಬರ್, ನವೆಂಬರ್ ತಿಂಗಳ ತನಕ ಮೂರು ತಿಂಗಳ ಗೌರವ ಧನವನ್ನು ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಿದೆ. ಆಶಾ ಕಾರ್ಯಕರ್ತೆಯರ ಸಂಖ್ಯೆಗೆ ಅನುಗುಣವಾಗಿ ಅದೇಶವನ್ನು ಹೊರಡಿಸಿದ್ದು, ಈ ಮೂಲಕ ದೀಪಾವಳಿ ಗಿಫ್ಟ್ ಸಿಕ್ಕಿದೆ. …
Read More »ಅಪ್ಪು ಗಂಧದಗುಡಿ ರಿಲೀಸ್‍ಗೆ ಕೌಂಟ್‍ಡೌನ್- ಮೊದಲ ಬಾರಿಗೆ ಅಶ್ವಿನಿ ವಿಶೇಷ ಸಂದರ್ಶನ
ಬೆಂಗಳೂರು: ಇಡೀ ಕರುನಾಡೇ ಕಾಯುತ್ತಿರೋ ಅಪ್ಪು ಕನಸಿನ ಕೊನೆಯ ಚಿತ್ರ ಗಂಧದಗುಡಿ (Gandhadagudi) ನಾಳೆ ತೆರೆಗೆ ಬರುತ್ತಿದೆ. ಇದರಲ್ಲಿ ಪುನೀತ್ ಅಭಿನಯಿಸಿದ್ದಾರೆ ಅನ್ನೋದಕ್ಕಿಂತ ಅಪ್ಪು ಅಪ್ಪುವಾಗಿಯೇ ಇದ್ರು ಅನ್ನೋದು ಸತ್ಯ. ಗಂಧದಗುಡಿ, ಪುನೀತ ಪರ್ವ (Puneetha Parva) ಕಾರ್ಯಕ್ರಮದ ಬಗ್ಗೆ ಇದೀಗ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಾತನಾಡಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್‍ರಾಮ್ (Santhosh Ananddram) ಸಂದರ್ಶನದಲ್ಲಿ ಅಶ್ವಿನಿ ಮಾತನಾಡಿದ್ದು, ಶೂಟಿಂಗ್ ಸಂದರ್ಭದ ಕೆಲ ಘಟನೆಗಳನ್ನ ಹಂಚಿಕೊಂಡಿದ್ದಾರೆ ಪುನೀತ್ ಪರ್ವ ಮಾಡಿದ್ದೇ ಅಭಿಮಾನಿಗಳು. …
Read More »ಲಿವಿಂಗ್ ಟುಗೆದರ್ ಟೆನ್ಶನ್- ಮಹಿಳಾ ಆಯೋಗಕ್ಕೆ ದೂರುಗಳ ಸುರಿಮಳೆ
ಬೆಂಗಳೂರು: ಪತಿ-ಪತ್ನಿ ಕಲಹ, ವರದಕ್ಷಿಣೆ ಕಿರುಕುಳ, ಮದುವೆಯಾಗೋದಾಗಿ ನಂಬಿಸಿ ಮೋಸ ಹೀಗೆ ನಾನಾ ಕೇಸ್‍ಗಳನ್ನು ಆಟೆಂಡ್ ಮಾಡ್ತಿರುವ ಮಹಿಳಾ ಆಯೋಗಕ್ಕೆ ಈಗ ಹೊಸ ತಲೆನೋವು ಶುರುವಾಗಿದೆ ಅದೇ ಲಿವಿಂಗ್ ಟುಗೆದರ್ (Living Together) ಕಂಟಕ. ಬೆಂಗಳೂರಿನಲ್ಲಿ ಈಗ ಲಿವಿಂಗ್ ಟುಗೆದರ್ ಕಲಹ ಹೆಚ್ಚಾಗ್ತಿದೆಯಂತೆ. ಅದರಲ್ಲೂ ಲಿವಿಂಗ್ ಟುಗೆದರ್ ಜೋಡಿಗಳಲ್ಲಿ ಕಲಹ ಉಂಟಾಗಿ ಅನೇಕ ಹೆಣ್ಣುಮಕ್ಕಳು ಮಹಿಳಾ ಆಯೋಗ (Women Commission) ದ ಮೆಟ್ಟಿಲೇರುತ್ತಿದ್ದಾರಂತೆ. ಕಾಲೇಜ್, ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿ ಲಿವಿಂಗ್ …
Read More »ಬೆಳಗಾವಿ: ಕಾರ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವು
ಬೆಳಗಾವಿ: ಚನ್ನಮ್ಮನ ಕಿತ್ತೂರಿನಲ್ಲಿ ಮಂಗಳವಾರ ರಾತ್ರಿ ಕಿತ್ತೂರು ಉತ್ಸವದ ಕಾರ್ಯಕ್ರಮ ನೋಡಿಕೊಂಡು ಮರಳುತ್ತಿದ್ದ ಇಬ್ಬರು ಪಾದಚಾರಿಗಳ ಮೇಲೆ ಕಾರ್ ಹರಿದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಖಾನಾಪುರ ತಾಲ್ಲೂಕಿನ ಕೊರವಿಕೊಪ್ಪ ಗ್ರಾಮದ ಬಾಳಪ್ಪ ತಳವಾರ (33) ಹಾಗೂ ಕರೆಪ್ಪ ತಳವಾರ (36) ಮೃತಪಟ್ಟವರು. ಮಂಗಳವಾರ ರಾತ್ರಿ ಗಾಯಕ ರಘು ದೀಕ್ಷಿತ್ ಅವರ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಬಂದಿದ್ದ ಇಬ್ಬರೂ ಊರಿಗೆ ಮರಳಲು ವಾಹನಕ್ಕೆ ಕಾಯುತ್ತಿದ್ದರು. ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ …
Read More »‘ಕಿತ್ತೂರು ಕೇಸರಿ’ ಪಟ್ಟಕ್ಕಾಗಿ ಪಟ್ಟುಬಿಡದ ಜಟ್ಟಿಗಳು
ಕಿತ್ತೂರು (ಬೆಳಗಾವಿ ಜಿಲ್ಲೆ): ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಎರಡನೇ ದಿನವಾದ ಮಂಗಳವಾರ ನಡೆದ ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನೋಡಲು ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳು ಸೇರಿದರು. ಮಹಿಳಾ ಹಾಗೂ ಪುರುಷ ವಿಭಾಗ ಸೇರಿ ಒಟ್ಟು 234 ಪೈಲ್ವಾನರು ಇಲ್ಲಿ ಮುಖಾಮುಖಿಯಾಗಿದ್ದಾರೆ. ಪ್ರತಿವರ್ಷ ಜಂಗಿ ನಿಕಾಲಿ ಕುಸ್ತಿ ನಡೆಯುತ್ತಿದ್ದವು. ಇದೇ ಮೊದಲ ಬಾರಿ ಪಾಯಿಂಟ್ ಆಧರಿತ ಕುಸ್ತಿ ಆಯೋಜಿಸಲಾಗಿತ್ತು. ಎರಡು ದಿನಗಳ ಟೂರ್ನಿಯಲ್ಲಿ ನಡೆದ ಬಹುತೇಕ ಪಂದ್ಯಗಳು ಪೈಪೋಟಿಯಿಂದ …
Read More »