Breaking News

ಭಾರೀ ಕುತೂಹಲ ಕೆರಳಿಸಿದೆ. ಬಾಲಚಂದ್ರ ಜಾರಕೊಹೊಳಿ ಮತ್ತು ಹೆಚ್.ಡಿ.ಕುಮಾರಸ್ವಾಮಿ ಮಾತುಕತೆ

ಬೆಂಗಳೂರು,ನ.9- ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಆಡಳಿತಾರೂಢ ಬಿಜೆಪಿಯ ಶಾಸಕ ಬಾಲಚಂದ್ರ ಜಾರಕೊಹೊಳಿ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.   KMF ಅಧ್ಯಕ್ಷರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಕುಮಾರಸ್ವಾಮಿ ಅವರು ಈಗಾಗಲೇ ಎರಡು-ಮೂರು ಸುತ್ತಿನ ಮಾತುಕತೆ ನಡೆಸಿದ್ದು, ಯಾವ ರಾಜಕೀಯ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿ ಉಳಿದಿದೆ. ಬಾಲಚಂದ್ರ ಜಾರಕಿಹೊಳಿ ಮರಳಿ ಜೆಡಿಎಸ್‍ಗೆ ಬರುತ್ತಾರೆಯೇ ಅಥವಾ ಬಿಜೆಪಿಯಲ್ಲೆ ಉಳಿಯಲಿದ್ದಾರೆಯೇ …

Read More »

ಕಾಂಗ್ರೆಸ್‌ನ ‘ಭಾರತ್‌ ಜೋಡೊ ಯಾತ್ರೆ’ಯಲ್ಲಿ ಶರದ್ ಪವಾರ್, ಆದಿತ್ಯ ಠಾಕ್ರೆ ಭಾಗಿ

ಮುಂಬೈ: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ ಯಾತ್ರೆ’ಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹಾಗೂ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಭಾಗಿಯಾಗಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಅಶೋಕ್‌ ಚವಾಣ್‌ ಮಾಹಿತಿ ನೀಡಿದ್ದಾರೆ.   ನವೆಂಬರ್‌ 11 ರಂದು ಈ ಇಬ್ಬರು ಭಾರತ್‌ ಜೋಡೊ ಯಾತ್ರೆಯಲ್ಲಿ ಪಾಲು ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿಯ ಜಯಂತ್‌ ಪಾಟೀಲ್‌, ಸಂಸದೆ ಸುಪ್ರಿಯಾ ಸುಳೆ ಹಾಗೂ …

Read More »

ಅಪನಗದೀಕರಣಕ್ಕೆ 6 ವರ್ಷ, ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದು ಹೀಗೆ!

ಕೇಂದ್ರ ಸರ್ಕಾರವು ಐನ್ನೂರು ರೂಪಾಯಿ ಹಾಗೂ ಒಂದು ಸಾವಿರ ರೂಪಾಯಿಯ ನೋಟುಗಳನ್ನು ದೇಶದಲ್ಲಿ ಅಮಾನ್ಯೀಕರಣ ಮಾಡಿ ನಿನ್ನೆಗೆ 6 ವರ್ಷಗಳು ಆಗಿದೆ. 2016 ರ ನವೆಂಬರ್‌ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ರೂಪಾಯಿ ಹಾಗೂ 1,000 ರೂಪಾಯಿಯ ನೋಟುಗಳನ್ನು ದೇಶದಲ್ಲಿ ಇನ್ನು ಮುಂದೆ ಬರೀ ಪೇಪರ್ ಹಾಳೆ ಎಂದು ಘೋಷಣೆ ಮಾಡಿದ್ದಾರೆ.   ಈ ನೋಟು ಅಪನಗದೀಕರಣ ನಡೆದು ಆರು ವರ್ಷಗಳು ಆಗಿದೆ. ಆದರೆ ಇಂದಿಗೂ …

Read More »

ಚಂದ್ರು ಅಪಹರಿಸಿ, ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ : ರೇಣುಕಾಚಾರ್ಯ ಆರೋಪ

ದಾವಣಗೆರೆ : ನನ್ನ ತಮ್ಮನ ಮಗ ಚಂದ್ರುವನ್ನು ಅಪರಿಹರಿಸಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.   ಇಂದು ಶಾಸಕ ರೇಣುಕಾಚಾರ್ಯ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಚಂದ್ರುವನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಶಿಖಂಡಿಗಳು ನನ್ನ ಮೇಲೆ ಸೇಡಿನಿಂದ ಚಂದ್ರು ಕೊಂದಿದ್ದಾರೆ ಎಂದು ಹೇಳಿದ್ದಾರೆ. ತುಳು ಮಿಶ್ರಿತ ಕನ್ನಡದಲ್ಲಿ ಕರೆ ಮಾಡಿ ಕೊಲೆ ಬೆದರಿಕೆ …

Read More »

ಜನರು ಬಿದ್ದು ಸತ್ತಾಗ ಸರ್ಕಾರಕ್ಕೆ ಗುಂಡಿ ಮುಚ್ಚುವ ಮನಸಾಗಲಿಲ್ಲ, ಈಗ ಮೋದಿಗಾಗಿ ತೇಪೆ ಹಾಕುತ್ತಿದೆ : ಕಾಂಗ್ರೆಸ್ ಟ್ವೀಟ್

ಬೆಂಗಳೂರು : ಜನರು ಬಿದ್ದು ಸತ್ತಾಗ ಗುಂಡಿ ಮುಚ್ಚುವ ಮನಸಾಗಲಿಲ್ಲ, ಮೋದಿಗಾಗಿ ತೇಪೆ ಹಾಕುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ. ಪ್ರಧಾನಿ ಮೋದಿ ಅವರು ಹೋದ ನಂತರ ಮತ್ತೆ ಕಿತ್ತುಹೋಗಲಿದೆಯೇ ಸಿಎಂ ಬೊಮ್ಮಾಯಿ ಅವರೇ, ಸಿನ್ ಸಿಟಿ, ಗಾರ್ಬೇಜ್ ಸಿಟಿ ಎಂದು ಅವಮಾನಿಸಿದ್ದ ನರೇಂದ್ರ ಮೋದಿ ಅವರು ಈಗ ಒಮ್ಮೆ ಬೆಂಗಳೂರಿನ ಎಲ್ಲಾ ರಸ್ತೆಗಳಲ್ಲೂ ಓಡಾಡುವ ಧೈರ್ಯ ತೋರಿಸಲಿ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ …

Read More »

ತಾಯಿ, ಹಸುಗೂಸುಗಳ ʻ ಮರಣ ಮೃದಂಗ ʼ : ಶಾಕಿಂಗ್‌ ಮಾಹಿತಿ ಬಿಚ್ಚಿಟ್ಟʼ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆ ʼ | ಇಲ್ಲಿದೆ ಓದಿ

ಹುಬ್ಬಳ್ಳಿ : ತುಮಕೂರು ಜಿಲ್ಲಾಸ್ಪತ್ರೆ ನಿರ್ಲಕ್ಷ್ಯದಿಂದ ನಡೆದ ಬಾಣಂತಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಕರಣ ರಾಜ್ಯಾದ್ಯಂತ ಎಲ್ಲರನ್ನೂ ದಂಗು ಬಡಿಸಿತ್ತು. ಈ ಪ್ರಕರಣ ರಾಜ್ಯ ಸರ್ಕಾರ ಹಾಗೂ ರಾಜ್ಯ ಆರೋಗ್ಯ ಇಲಾಖೆಗೆ ಎಚ್ಚರಿಕೆ ಗಂಟೆ ನೀಡಿತ್ತು. ಈ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಆಘಾತಕಾರಿ ವಿಷಯವನ್ನು ಬಹಿರಂಗ ಪಡಿಸಿದೆ. ಕರ್ನಾಟಕದಲ್ಲಿ ಬಾಣಂತಿಯರು ಹಾಗೂ ನವಜಾತ ಮಕ್ಕಳ ಮರಣ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ಕಿಮ್ಸ್ ಆಸ್ಪತ್ರೆ ತಿಳಿಸಿದೆ. …

Read More »

ಸರ್ಕಾರ ಮೋದಿ ಸಮಾವೇಶಕ್ಕೆ ವಿದ್ಯಾರ್ಥಿಗಳನ್ನು ಬಲವಂತವಾಗಿ ಕರೆಸಿಕೊಳ್ಳಲು ಪ್ರಯತ್ನಿಸಿದ್ದು ನಾಚಿಕೆಗೇಡು : ಕಾಂಗ್ರೆಸ್ ವಾಗ್ಧಾಳಿ

ಬೆಂಗಳೂರು : ‘ಸರ್ಕಾರ ಮೋದಿ ಸಮಾವೇಶಕ್ಕೆ ವಿದ್ಯಾರ್ಥಿಗಳನ್ನು ಬಲವಂತವಾಗಿ ಕರೆಸಿಕೊಳ್ಳಲು ಪ್ರಯತ್ನಿಸಿದ್ದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ. ಬೊಮ್ಮಾಯಿ ಅವರೇ ನಿಮ್ಮ ಸರ್ಕಾರಕ್ಕೆ ಯೂಟರ್ನ್ ಸರ್ಕಾರ ಎಂದು ಹೆಸರಿಟ್ಟುಕೊಳ್ಳಿ! ಜನ ಬೆಂಬಲ ಕಳೆದುಕೊಂಡು, ಖಾಲಿ ಕುರ್ಚಿಗಳ ದರ್ಶನ ಪಡೆಯುತ್ತಿರುವ ಸರ್ಕಾರ ಈಗ ವಿದ್ಯಾರ್ಥಿಗಳನ್ನು ಬಲವಂತವಾಗಿ ಕರೆಸಿಕೊಳ್ಳಲು ಪ್ರಯತ್ನಿಸಿದ್ದು ನಾಚಿಕೆಗೇಡು. ವಿದ್ಯಾರ್ಥಿಗಳನ್ನು ಕರೆಸುವಂತೆ ಅಧಿಕಾರಿಗಳಿಗೆ ಹೇಳಿದವರಾರು ಮುಖ್ಯಮಂತ್ರಿಗಳೇ? ಎಂದು ಪ್ರಶ್ನಿಸಿದೆ. ಕೆಂಪೇಗೌಡ ಪ್ರತಿಮೆ ಉದ್ಘಾಟನೆ ದಿನ …

Read More »

BJP ಸರ್ಕಾರ ಜಾತಿ, ಧರ್ಮಗಳ ಹೆಸರಲ್ಲಿ ದ್ವೇಷ ಬಿತ್ತಿ ಸಮಾಜ ಒಡೆಯುತ್ತಿರುವುದು : ರಾಮಲಿಂಗಾರೆಡ್ಡಿ

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಈ ನಗರ ಕಟ್ಟುವಾಗ ಎಲ್ಲಾ ಸಮುದಾಯದವರಿಗೂ ಅನುಕೂಲ ಆಗಲೆಂದು 52 ಸಮುದಾಯಗಳ ಪೇಟೆಗಳನ್ನು ನಿರ್ಮಿಸಿದ್ದರು. ಅದು ನಿಜವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್. ಆದರೆ ನಿಮ್ಮ ಡಬಲ್ ಇಂಜಿನ್ ಸರ್ಕಾರ ಜಾತಿ, ಧರ್ಮಗಳ ಹೆಸರಲ್ಲಿ ದ್ವೇಷ ಬಿತ್ತಿ ಸಮಾಜ ಒಡೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ? ಎಂಬುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ( KPCC working president Ramalinga Reddy ) ಅವರು ಗುಡುಗಿದ್ದಾರೆ.   …

Read More »

ನ.20 ರಿಂದ ನ.28 ರವರೆಗೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗೋವಾದ ಪಣಜಿಯಲ್ಲಿ ನಡೆಯಲಿದೆ.

ಪಣಜಿ: ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ನವೆಂಬರ್ 20 ರಿಂದ ನವೆಂಬರ್ 28 ರವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿದೆ. ಅಂತರಾಷ್ಟ್ರೀಯ ಸ್ಪರ್ಧಾತ್ಮಕ ವಿಭಾಗದಲ್ಲಿ 15 ಚಲನಚಿತ್ರಗಳು ಪ್ರತಿಷ್ಠಿತ ಸುವರ್ಣ ಮಯೂರ್ ಪ್ರಶಸ್ತಿ ಸ್ಫರ್ಧೆಯಲ್ಲಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಆಸ್ಟ್ರಿಯನ್ ನಿರ್ದೇಶಕ ಡೈಟರ್ ಬರ್ನರ್ ಅವರ ಚಲನಚಿತ್ರದೊಂದಿಗೆ ಪ್ರಾರಂಭವಾಗಲಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವು ಆಸ್ಟ್ರಿಯಾದ ನಿರ್ದೇಶಕ ಡೈಟರ್ ಬರ್ನರ್ ಅವರ ‘ಅಲ್ಮಾ ಮತ್ತು ಆಸ್ಕರ್’ ಚಿತ್ರದೊಂದಿಗೆ ಪ್ರಾರಂಭವಾಗಲಿದೆ. ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಜ್ಯೂರಿಯಲ್ಲಿ …

Read More »

ಮೂರು ತಿಂಗಳ ಬಳಿಕ ಸಂಜಯ್ ರಾವತ್ ಗೆ ಜಾಮೀನು ಮಂಜೂರು

ಮುಂಬಯಿ: ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಹಿರಿಯ ಮುಖಂಡ, ಉದ್ಧವ್ ಠಾಕ್ರೆ ಆಪ್ತ ಸಂಜಯ್ ರಾವತ್ ಗೆ ಮೂರು ತಿಂಗಳ ಬಳಿಕ ವಿಶೇಷ ನ್ಯಾಯಾಲಯ ಬುಧವಾರ (ನವೆಂಬರ್ 09) ಜಾಮೀನು ಮಂಜೂರು ಮಾಡಿದೆ.   ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಶಿವಸೇನಾ ಮುಖಂಡ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಕಳೆದ ಮೂರುವರೆ ತಿಂಗಳಿನಿಂದ ಜೈಲಿನಲ್ಲಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿಯ ವಿಚಾರಣೆಯ ವಾದ, ಪ್ರತಿವಾದ ಆಲಿಸಿದ ನಂತರ ಕೋರ್ಟ್ ಅಕ್ಟೋಬರ್ …

Read More »