Breaking News

ಮಹಾರಾಷ್ಟ್ರ ಸರ್ಕಾರ ಉಭಯ ರಾಜ್ಯಗಳ ಮಧ್ಯೆ ಕಿಡಿ ಹೊತ್ತಿಸಬಾರದು – ಸಿಎಂ ಬಸವರಾಜ ಬೊಮ್ಮಾಯಿ‌ ಖಡಕ್ ಸಲಹೆ

ಬೆಂಗಳೂರು: ಕನ್ನಡಿಗರು ಹಾಗೂ ಮರಾಠಿಗರು‌ ಪರಸ್ಪರ ಸೌಹಾರ್ದದಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಉಭಯ ರಾಜ್ಯಗಳ ಮಧ್ಯೆ ಕಿಡಿ ಹೊತ್ತಿಸುವ ಕೆಲಸ ಮಹಾರಾಷ್ಟ್ರ ಸರ್ಕಾರ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಖಡಕ್ ಸಲಹೆ ನೀಡಿದ್ದಾರೆ.   ಕಾವೇರಿ ನಿವಾಸದ ಬಳಿ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು‌, ಸ್ವಾತಂತ್ರ್ಯ ಚಳವಳಿ , ಕರ್ನಾಟಕ ಏಕೀಕರಣ, ಗೋವಾ ವಿಮೋಚನೆಗೆ ಹೋರಾಡಿದ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಮಾಸಾಶನ ನೀಡಲು ನಿರ್ಧರಿಸಿದ್ದು, ಕೂಡಲೇ ಅಗತ್ಯ ದಾಖಲೆಗಳನ್ನು ಪಡೆದು ಕ್ರಮ ಕೈಗೊಳ್ಳಲಾಗುವುದು …

Read More »

ಅಂತರ್​ ರಾಜ್ಯ ವಂಚಕರನ್ನು ಬಂಧಿಸಿದ ಕರ್ನಾಟಕ ಪೊಲೀಸರು.

ಬೆಂಗಳೂರು: ಹೋಲ್‌ಸೇಲ್ ದರದಲ್ಲಿ ಕೋಟ್ಯಂತರ ರೂ. ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಪೋಸ್ಟ್ ಡೇಟೆಡ್ ಚೆಕ್ ನೀಡಿ ವಂಚಿಸುತ್ತಿದ್ದ ಇಬ್ಬರು ಅಂತರಾಜ್ಯ ವಂಚಕರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಉತ್ತರ ಭಾರತ ಮೂಲದ ಪದಮ್ ಸಿಂಗ್, ವಿಮಲ್ ಬಂಧಿತರು. ಆರೋಪಿಗಳಿಂದ ೩೦ ಲಕ್ಷ ರೂ. ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ೨೦೨೧ ಮಾರ್ಚ್ ೬ ರಂದು ಜಯನಗರದ ಐಕಾನ್ ಫ್ಯಾಷನ್ ಗಾರ್ಮೆಂಟ್ಸ್‌ಗೆ ತೆರಳಿ ತಮ್ಮನ್ನು ಸಿದ್ಧಿ ವಿನಾಯಕ ಟ್ರೇಡರ್ಸ್ ಮಾಲೀಕರೆಂದು ಪರಿಚಯಿಸಿಕೊಂಡಿದ್ದರು. …

Read More »

ಲೋಕಾಯುಕ್ತ ಬಲೆಗೆ ಬಿದ್ದ ಗೃಹರಕ್ಷಕ; ನಿವೃತ್ತ ಇನ್‌ಸ್ಪೆಕ್ಟರ್​​​ಗೆ ವೈದ್ಯಕೀಯ ವೆಚ್ಚ ಕೊಡಿಸಲು ಲಂಚ ಪಡೆಯುವಾಗ ಬಂಧನ

ಬೆಂಗಳೂರು: ನಿವೃತ್ತ ಇನ್‌ಸ್ಪೆಕ್ಟರ್ ಅವರ ವೈದ್ಯಕೀಯ ಬಿಲ್ ಕೊಡಿಸುವುದಾಗಿ ನಂಬಿಸಿ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ಗೃಹ ರಕ್ಷಕನನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡೆಡ್​ ಆಗಿ ಬಂಧಿಸಿದ್ದಾರೆ. ಗೃಹ ಇಲಾಖೆ ಸಚಿವಾಲಯದಲ್ಲಿ ನಿಯೋಜಿತ ಗೃಹ ರಕ್ಷಕ ಸತೀಶ್ ಬಂಧಿತ. ನಿವೃತ್ತ ಇನ್‌ಸ್ಪೆಕ್ಟರ್ ಪಿ.ಎನ್. ಗಣೇಶ್ ಅವರು ತಮ್ಮ ವೈದ್ಯಕೀಯ ವೆಚ್ಚದ ಮರುಪಾವತಿಗಾಗಿ ಗೃಹ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ವಿಷಯ ತಿಳಿದ ಗೃಹ ರಕ್ಷಕ ಸತೀಶ್, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಬಿಲ್ ಮೊತ್ತ …

Read More »

ಲೈಂಗಿಕ ದೌರ್ಜನ್ಯ ಎಸಗಿದ್ದವನಿಗೆ 40 ವರ್ಷ ಕಠಿಣ ಶಿಕ್ಷೆ

ಮೈಸೂರು: ನಗರದಲ್ಲಿರುವ ಚಲನಚಿತ್ರ ನಟರೊಬ್ಬರ ಫಾರ್ಮ್​ಹೌಸ್​ನಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಬಿಹಾರ ಮೂಲದವನಿಗೆ ನಗರದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶೈಮಾ ಖಮ್ರೋಜ್​ ಅವರು 40 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದ್ದಾರೆ.   ಬಿಹಾರ ಮೂಲದ ನಾಜೀಮ್​ ಶಿಕ್ಷೆಗೆ ಗುರಿಯಾದ ಅಪರಾಧಿ. ಶಿಕ್ಷೆ ಜತೆಗೆ 51 ಸಾವಿರ ರೂ. ದಂಡ ವಿಧಿಸಿದ್ದಾರೆ. ತಿ.ನರಸೀಪುರ ರಸ್ತೆಯ ಫಾರ್ಮ್​ಹೌಸ್​ನಲ್ಲಿ ನಾಜೀಮ್​ ಕುದುರೆಗಳಿಗೆ ಲಾಳ ಕಟ್ಟುವ ಕೆಲಸ ಮಾಡಿಕೊಂಡಿದ್ದ. ಕುಟುಂಬದೊಂದಿಗೆ …

Read More »

ಶಿಕ್ಷಕರ ಮಕ್ಕಳಿಗೆ ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಸಲು ಜ.20 ಕೊನೇ ದಿನ

ಬೆಂಗಳೂರು: ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳಿಗೆ ‘ಪ್ರತಿಭಾವಂತ ವಿದ್ಯಾರ್ಥಿ ವೇತನ’ ಮಂಜೂರು ಮಾಡಲು ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದೆ. ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವಿವರೆಗೆ ಅತಿ ಹೆಚ್ಚು ಅಂಕ ಪಡೆದಿರುವ ಶಿಕ್ಷಕರ, ಉಪನ್ಯಾಸಕರ/ಪ್ರಾಂಶುಪಾಲರ, ನಿವೃತ್ತ ಶಿಕ್ಷಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. 2021-22ನೇ ಸಾಲಿನಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಿಬಿಎಸ್​ಇ/ ಐಸಿಎಸ್​ಇ ವ್ಯಾಸಂಗ ಮಾಡುತ್ತಿರುವ ಮಕ್ಕಳು ಅರ್ಹರಾಗಿರುವುದಿಲ್ಲ. …

Read More »

ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾಗಿ ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವಿರೋಧವಾಗಿ ಆಯ್ಕೆ

ಖಾನಾಪೂರ ತಾಲೂಕಿನ ನಂದಗಡದಲ್ಲಿರುವ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾಗಿ ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ 17 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅರವಿಂದ್ ಪಾಟೀಲ್ ಅವರು ತಾಲೂಕಾ ಮಾರ್ಕೆಟಿಂಗ್ ಸೂಸೈಟಿಯ ಅಭಿವೃದ್ಧಿಗೆ ಸತತ ಪರಿಶ್ರಮ ಪಟ್ಟಿದ್ದು ಹಾಲಿ ಅಧ್ಯಕ್ಷರಾದ ಶ್ರೀಶೈಲ ಮಾಟೋಳ್ಳಿ ಅವರು ಎರಡು ವರ್ಷಗಳ ಅವಧಿಯ ನಂತರ ರಾಜೀನಾಮೆ ನೀಡಿದ್ರು. ಖಾಲಿ ಇದ್ದ ಈ ಸ್ಥಾನಕ್ಕೆ ಇನ್ನಿತರ ನಿರ್ದೇಶಕರು …

Read More »

ಕಸ ಚೆಲ್ಲುವವರನ್ನು ಪತ್ತೆ ಹಚ್ಚಲು ಸಿಸಿಟಿವಿ ಅಳವಡಿಸಲು ಮುಂದಾದ ಹಿಂಡಲಗಾ ಪಂಚಾಯತಿ

ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಚೆಲ್ಲುತ್ತಿದ್ದಾರೆ. ಹೀಗೆ ಕಸ ಚೆಲ್ಲುವವರನ್ನು ಪತ್ತೆ ಹಚ್ಚಲು ಗ್ರಾಮ ಪಂಚಾಯತಿ ವಿನೂತನ ಕ್ರಮಕ್ಕೆ ಮುಂದಾಗಿದೆ. ಹೌದು ಸಿಸಿ ಕ್ಯಾಮರಾ ಅಳವಡಿಸುವ ಕಾಮಗಾರಿಗೆ ಮಂಗಳವಾರ ಗ್ರಾ.ಪಂ.ಅಧ್ಯಕ್ಷ ನಾಗೇಶ ಮನ್ನೋಳ್ಕರ್ ಚಾಲನೆ ನೀಡಿದರು. ಅದೇ ರೀತಿ ಕಸ ಚೆಲ್ಲುವವರಿಗೆ 5 ಸಾವಿರ ರೂಪಾಯಿ ದಂಡ ವಿಧಿಸುವ ಬಗ್ಗೆ ಎಚ್ಚರಿಕೆಯನ್ನು ಗ್ರಾಮ ಪಂಚಾಯತಿ ನೀಡಿದೆ. ಈ ವೇಳೆ ಗ್ರಾ.ಪಂ.ಉಪಾಧ್ಯಕ್ಷೆ ಭಾಗ್ಯಶ್ರೀ ಕೋಕಿತ್ಕರ್, …

Read More »

ಜುಡೋ ಚಾಂಪಿಯನ್‍ಶಿಪ್‍ನಲ್ಲಿ ಬೆಳಗಾವಿಯ ಪದಕ ಬೇಟೆಯಾಡಿದ ಮುತ್ಯಾನಟ್ಟಿ ಸಿನಿಯರ್, ಜೂನಿಯರ್

ಸಿನಿಯರ್, ಜೂನಿಯರ್ ಜುಡೋ ಚಾಂಪಿಯನ್‍ಶಿಪ್‍ನಲ್ಲಿ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಭರ್ಜರಿ ಪದಕ ಬೇಟೆಯಾಡಿದ್ದಾರೆ. ಹೌದು ಇದೇ ನವೆಂಬರ್ 21ರಂದು ಶಿವಮೊಗ್ಗದ ಅನಂತಪುರದಲ್ಲಿ ನಡೆದ ಸಿನಿಯರ್, ಜೂನಿಯರ್ ಜುಡೋ ಚಾಂಪಿಯನ್‍ಶಿಪ್‍ನಲ್ಲಿ ವಿಷ್ಣು 73 ಕೆಜಿ ಚಿನ್ನದ ಪದಕ, ಚೇತನ್ 66 ಕೆಜಿ ಚಿನ್ನದ ಪದಕ, ಯೋಗೇಶ್ 30 ಕೆ.ಜಿ ಚಿನ್ನದ ಪದಕ, ಸಂದೀಪ್ 35 ಕೆ.ಜಿ ಚಿನ್ನದ ಪದಕ, ಗೌತಮ್ 40 ಕೆ.ಜಿ ಚಿನ್ನದ ಪದಕ, ಪ್ರೀತಮ್ 45 ಕೆ.ಜಿ …

Read More »

ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ತೆರವು ಮಾಡಿದ ಬುಡಾ ಅಧಿಕಾರಿಗಳು

ಬೆಳಗಾವಿ ರಾಮತೀರ್ಥ ನಗರದಲ್ಲಿ ಸಾರ್ವಜನಿಕ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ಬುಡಾ ಅಧಿಕಾರಿಗಳು ತೆರವು ಮಾಡಿದ್ದಾರೆ. ಹೌದು ಮಂಗಳವಾರ ಬೆಳಿಗ್ಗೆ ಜೆಸಿಬಿಗಳ ಸಹಾಯದಿಂದ ರಾಮತೀರ್ಥ ನಗರದಲ್ಲಿ ಯೋಜನೆ ಸಂಖ್ಯೆ 35, 40, 41ರಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು. ಈ ಸಂಬಂಧ ಮಾತನಾಡಿದ ಬುಡಾ ಎಇಇ ಮಹಾಂತೇಶ ಹಿರೇಮಠ ಅವರು ಯಾವುದೇ ಅನಧಿಕೃತ ಮನೆಗಳನ್ನು ಯಾರೂ ಕೂಡ ಕಟ್ಟಬಾರದು. ಪ್ರಾಧಿಕಾರಕ್ಕಾಗಿ ನಾವು ವಶಪಡಿಸಿಕೊಂಡಿರುವ ಅಥವಾ …

Read More »

ರೈಲು ಡಿಕ್ಕಿ ಹೊಡೆದ ಪರಿಣಾಮ ಎರಡು ಆಕಳು ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ರೈಲು ಡಿಕ್ಕಿ ಹೊಡೆದ ಪರಿಣಾಮ ಎರಡು ಆಕಳು ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಹೌದು ಸೋಮವಾರ ರಾತ್ರಿ ಬೆಳಗಾವಿ ನಗರದ 3ನೇ ಮತ್ತು 4ನೇ ರೈಲ್ವೇ ಗೇಟ್ ಬಳಿ ಈ ಅವಘಡ ಸಂಭವಿಸಿದೆ. ರೈಲು ಗುದ್ದಿದ ಪರಿಣಾಮ ಆಕಳುಗಳು ಸಾವನ್ನಪ್ಪಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸ್ಯಾನಿಟರಿ ಇನ್ಸಪೆಕ್ಟರ್ ಗಣಾಚಾರಿ ಮತ್ತು ಅವರ ತಂಡ ಆಕಳುಗಳ ಶವಗಳನ್ನು ತೆಗೆದುಕೊಂಡು ಹೋಗಿ …

Read More »