ಹೊಸದಿಲ್ಲಿ: ಸಂಸತ್‌ನ ಚಳಿಗಾಲದ ಅಧಿವೇಶನ ಇದೇ 7ರಿಂದ ಆರಂಭವಾಗಲಿದ್ದು, 16 ಹೊಸ ಮಸೂದೆೆಗಳನ್ನು ಮಂಡಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಈ ಪೈಕಿ ನಾಲ್ಕು ಮಸೂದೆ ಗಳು ಕರ್ನಾಟಕ, ತಮಿಳುನಾಡು, ಛತ್ತೀಸ್‌ಗಢ, ಹಿಮಾಚಲ ಪ್ರದೇಶಗಳಲ್ಲಿ ಪರಿಶಿಷ್ಟ ಪಂಗಡಗಳ ಪರಿಷ್ಕೃತ ಪಟ್ಟಿಗೆ ಸಂಬಂಧಿಸಿದ್ದು ಎಂದು ಹೇಳಲಾಗಿದೆ. ಡಿ. 29ರಂದು ಅಧಿವೇಶನ ಸಮಾಪ್ತಿ ಯಾ ಗಲಿದ್ದು, ಅದಕ್ಕೂ ಮೊದಲು ಒಟ್ಟಾರೆ 23 ಮಸೂದೆಗಳಿಗೆ ಅಂಗೀ ಕಾರ ಪಡೆಯುವುದು ಸರಕಾರದ ಉದ್ದೇಶವಾಗಿದೆ. 4 ಮಸೂದೆಗಳು ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿ, …
Read More »ಕೊತ್ವಾಲನ ಚಹಾ ಲೋಟ ಡಿ.ಕೆ ಶಿವಕುಮಾರ್ ಎತ್ತುತ್ತಾ ಇದ್ರು: ಬಿಜೆಪಿ
ಬೆಂಗಳೂರು: ಚುನಾವಣೆ ಸಮೀಪಿಸಿದಂತೆ ಪಕ್ಷಕ್ಕೆ ರೌಡಿಗಳ ಸೇರ್ಪಡೆ, ಬಿಬಿಎಂಪಿಯಲ್ಲಿ ಮತದಾರರ ಚೀಟಿ ಅಕ್ರಮ, ಹೀಗೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ರಾಜ್ಯ ಬಿಜೆಪಿ ಸಿಲುಕಿಕೊಂಡಿದೆ. ಆದರೂ ರಣೋತ್ಸಾದಲ್ಲೇ ಇರುವ ಬಿಜೆಪಿ ಫೇಸ್ಬುಕ್ನಲ್ಲಿ ಕಾಂಗ್ರೆಸ್ ವಿರುದ್ಧ ಫುಲ್ ಫೈರಿಂಗ್ ನಡೆಸಿದೆ. ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ, ಡಿ.ಕೆ ಶಿವಕುಮಾರ್ ರೌಡಿಗಳ ರಾಜ ಕೊತ್ವಾಲ್ನ ಚಹಾ ಲೋಟ ಎತ್ತುತ್ತಿದ್ರು ಎಂದು ಟಾಂಗ್ ನೀಡಿದೆ. ‘ಡಿಕೆಶಿಯನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿರೋ ಕಾಂಗ್ರೆಸ್‌ಗೆ ಬಿಜೆಪಿಯ ಬಗ್ಗೆ ಮಾತಾಡೋ ನೈತಿಕತೆ …
Read More »ವೀರಶೈವ ಲಿಂಗಾಯತ ಸಮುದಾಯಕ್ಕೇ 2ಎ ಮೀಸಲಾತಿ ಸಿಗಲಿದೆ :ನಿರಾಣಿ
ಕೊಪ್ಪಳ: ಸಮಸ್ತ ವೀರಶೈವ ಲಿಂಗಾಯತ ಸಮುದಾಯಕ್ಕೇ 2ಎ ಮೀಸಲಾತಿ ಸಿಗಲಿದೆ ಎಂಬುದಾಗಿ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದ್ದಾರೆ. ಕೊಪ್ಪಳದಲ್ಲಿ ಇಂದು ಈ ವಿಷಯವಾಗಿ ಮಾತನಾಡಿರುವ ಅವರು, ಸಮಸ್ತ ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಉದ್ದೇಶ, ಅದು ಈಡೇರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಸಮಸ್ತ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕೇ ಹೊರತು ಕೇವಲ ಪಂಚಮಸಾಲಿಗೆ ಮಾತ್ರ ಬೇಡ ಎಂದಿದ್ದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಅದೇ …
Read More »ಬಿಜೆಪಿಗರೇ, ನಾನು ರೌಡಿಶೀಟರ್, ನನಗೂ ನಿಮ್ಮ ಪಕ್ಷದಲ್ಲಿ ಸ್ಥಾನ ಕೊಡುವಿರಾ?
ಮೈಸೂರು: ‘ಬಿಜೆಪಿಗರೇ, ನಾನು ರೌಡಿಶೀಟರ್, ನನಗೂ ನಿಮ್ಮ ಪಕ್ಷದಲ್ಲಿ ಸ್ಥಾನ ಕೊಡುವಿರಾ?’ ಎಂದು ಬರೆದಿದ್ದ ಬ್ಯಾನರ್ ಹಿಡಿದು, ಮಂಜು ಅಲಿಯಾಸ್ ಪಾನಿಪುರಿ ಮಂಜ ಎನ್ನುವವರು ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿ ಎದುರು ಶನಿವಾರ ಸಾರ್ವಜನಿಕರ ಗಮನಸೆಳೆದರು. ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗಾ ಸ್ವಾಮೀಜಿ, ಕನಕದಾಸ, ವಾಲ್ಮೀಕಿ, ಅಂಬೇಡ್ಕರ್ ಚಿತ್ರ ಹಾಕಿದ್ದ ಬ್ಯಾನರ್ ಹಿಡಿದಿದ್ದರು. ಗಣೇಶ ನಗರದ ನಿವಾಸಿಯಾದ ಅವರು, 2013ರಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದರು ಎಂದು ತಿಳಿದುಬಂದಿದೆ. …
Read More »ಬದಲಾದೀತೇ ಗುಜರಾತ್ ಗಾದಿ? ನಾಳೆ ಮೋದಿ ತವರಿನಲ್ಲಿ 2ನೇ ಹಂತದ ಮತದಾನ
ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಗುಜರಾತ್ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಒಂದು ತಿಂಗಳಿನಿಂದ ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಜನಮನ್ನಣೆ ಗಳಿಸಿಕೊಳ್ಳುವುದಕ್ಕಾಗಿ ಇನ್ನಿಲ್ಲದ ಶ್ರಮ ಪಟ್ಟಿವೆ. ಬಿಜೆಪಿ ಪ್ರಚಾರಕ್ಕೆ ಪ್ರಧಾನಿ ಮೋದಿಯವರೇ ನೇತೃತ್ವ ವಹಿಸಿಕೊಂಡಿದ್ದರೆ, ಎಎಪಿಗೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಮುಂದಾಳತ್ವ ವಹಿಸಿದ್ದರು. ಕಾಂಗ್ರೆಸ್ ಮಾತ್ರ ದಿಲ್ಲಿ ನಾಯಕರನ್ನು ನಂಬಿಕೊಳ್ಳದೆ ಸಾಮೂಹಿಕ ನಾಯಕತ್ವದಡಿ ಪ್ರಚಾರ ನಡೆಸಿದೆ. ಹಿಂದಿನ ಸಂಖ್ಯೆ ಹೆಚ್ಚು ಮಾಡಿಕೊಂಡೀತೇ ಬಿಜೆಪಿ? …
Read More »ರೌಡಿಗಳು, ಅಪರಾಧ ಹಿನ್ನೆಲೆ ಉಳ್ಳವರಿಗೆ ಪಕ್ಷ ಸೇರಲು ಅವಕಾಶ ಇಲ್ಲ: ಅರುಣ್ ಸಿಂಗ್
ಬೆಂಗಳೂರು, ಡಿಸೆಂಬರ್ 3: ರೌಡಿಗಳು ಹಾಗೂ ಅಪರಾಧ ಹಿನ್ನೆಲೆ ಉಳ್ಳವರಿಗೆ ಯಾವುದೇ ಕಾರಣಕ್ಕೂ ಪಕ್ಷ ಸೇರಲು ಅವಕಾಶ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ಈ ಕುರಿತು ಬಿಜೆಪಿ ಕಚೇರಿಯಲ್ಲಿ ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆ ಮಾತನಾಡಲು ಬೇರೆ ವಿಷಯಗಳಿಲ್ಲ. ಹೀಗಾಗಿ ರೌಡಿ ರಾಜಕೀಯ ಪ್ರಸ್ತಾಪಿಸಿ ಬಿಜೆಪಿ ಮೇಲೆ ಕೆಸರೆರಚಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪ್ರತಿಪಕ್ಷ ಕಾಂಗ್ರೆಸ್ ಗೆ ಮಾತನಾಡಲು, ಚರ್ಚಿಸಲು …
Read More »ಸರ್ಕಾರಿ ಕೆಲಸ ಅಂತ ಸುಮ್ಮನೆ ಬೇಕಾಬಿಟ್ಟಿ ಕೆಲಸ ಮಾಡುವವರಿಗೆ ಕೇಂದ್ರ ಬಿಗ್ ಶಾಕ್
ಸರ್ಕಾರಿ ಕೆಲಸ ( Government Job) ಅಂತ ಸುಮ್ಮನೆ ಬೇಕಾಬಿಟ್ಟಿ ಕೆಲಸ ಮಾಡುವವರಿಗೆ ಕೇಂದ್ರ ಬಿಗ್ ಶಾಕ್ ನೀಡಿದೆ. ನಿರ್ಲಕ್ಷ್ಯ ತೋರಿ ಸರಿಯಾಗಿ ಕೆಲಸ ಮಾಡದಿದ್ದರೆ ನಿಮ್ಮ ನಿವೃತ್ತಿಯ ನಂತರದ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಕತ್ತರಿ ಹಾಕುವ ನಿಯಮವೊಂದರ ಬಗ್ಗೆ ಕೇಂದ್ರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ನೌಕರರಿಗೆ ಡಿಎ ಮತ್ತು ಬೋನಸ್ ಗಿಫ್ಟ್ ನೀಡಿದ ಬೆನ್ನಲ್ಲೇ ಸರ್ಕಾರವು ನೌಕರರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯೊಂದನ್ನು ನೀಡಿದೆ. ನೌಕರರು ಈ ಎಚ್ಚರಿಕೆಯನ್ನು ನಿರ್ಲಕ್ಷ್ಯಿಸಿದರೆ …
Read More »ಮುರುಘಾ ಮಠಕ್ಕೆ ನೂತನ ಪೀಠಾಧ್ಯಕ್ಷ ನೇಮಕ ವಿಚಾರ: ಕೋರ್ಟ್ ಮೊರೆಗೆ ತೀರ್ಮಾನ
ಚಿತ್ರದುರ್ಗ: ಮುರುಘಾ ಮಠಕ್ಕೆ ನೂತನ ಪೀಠಾಧ್ಯಕ್ಷ ಅಥವಾ ಆಡಳಿತಾಧಿಕಾರಿ ನೇಮಕ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಮುಂದುವರಿಸಿದರೆ ನ್ಯಾಯಾಲಯದ ಮೆಟ್ಟಿಲೇರಲು ವೀರಶೈವ ಲಿಂಗಾಯತ ಸಮಾಜದ ಸಭೆ ಶನಿವಾರ ಒಮ್ಮತದ ನಿರ್ಣಯ ಕೈಗೊಂಡಿತು. ತಾಲ್ಲೂಕಿನ ಸೀಬಾರದಲ್ಲಿರುವ ಎಸ್. ನಿಜಲಿಂಗಪ್ಪ ಸ್ಮಾರಕದಲ್ಲಿಮಾಜಿ ಸಚಿವ ಎಚ್. ಏಕಾಂತಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಮೂರು ನಿರ್ಣಯಗಳನ್ನು ಅನುಮೋದಿಸಿತು. ಸಭೆಯ ತೀರ್ಮಾನದ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು. ‘ಶಿವಮೂರ್ತಿ ಶರಣರ ಬಂಧನದ ಬಳಿಕ ಮುರುಘಾ ಮಠ ಹಾಗೂ …
Read More »ವಿಜಯಪುರ: ಅತ್ಯಾಚಾರ ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ವಿಜಯಪುರ : ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿ, ವಿಜಯಪುರ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ. ಇಲ್ಲಿನ ಗಾಂಧಿನಗರ ನಿವಾಸಿ ಸಂತೋಷ ಥಾವರು ರಾಠೋಡ್ (22) ಶಿಕ್ಷೆಗೊಳಗಾದ ಆರೋಪಿ. 2021ರ ಏಪ್ರಿಲ್ 2ರಂದು ಜಿಲ್ಲೆಯ ಗಾಂಧಿನಗರದ ಬಳಿ ದನ ಮೇಯಿಸುವಾಗ ಅಪ್ರಾಪ್ತೆ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದನು. ಈ ಕುರಿತು ವಿಜಯಪುರ ಮಹಿಳಾ ಠಾಣೆಯಲ್ಲಿ …
Read More »ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸ್ಪೋಟಕ ಟ್ವಿಸ್ಟ್: ಸಿಐಡಿ ತನಿಖೆಯಲ್ಲಿ ಮತ್ತೊಂದು ಹಗರಣ ರಿವೀಲ್
ಬೆಂಗಳೂರು: 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ( PSI Recruitment Scam ) ಸಂಬಂಧ ಮತ್ತೊಂದು ಸ್ಪೋಟಕ ಟ್ವಿಸ್ಟ್ ದೊರೆತಿದೆ. ಪರೀಕ್ಷಾ ಅಕ್ರಮದ ಬಗ್ಗೆ ಪರೀಕ್ಷಾ ಉಸ್ತುವಾರಿ ಅಮೃತ್ ಪಾಲ್ ಗೆ ಪರೀಕ್ಷೆಯ ಬಳಿಕ ಅಭ್ಯರ್ಥಿಗಳು ದೂರು ನೀಡಿದ್ದರೂ, ಗೊತ್ತಿದ್ದೂ ಗೊತ್ತಿಲ್ಲದಂತೆ ವರ್ತಿಸಿರುವಂತ ಮತ್ತೊಂದು ಸ್ಪೋಟಕ ಮಾಹಿತಿಯನ್ನು ಸಿಐಡಿ ರಿವೀಲ್ ಮಾಡಿದೆ. ಪಿಎಸ್‌ಐ ನೇಮಕಾತಿ ಅಕ್ರಮವನ್ನು ಸ್ವತಹ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದಂತ ಅಮೃತ್ ಪಾಲ್ ಅವರೇ …
Read More »