ಮೂಡಲಗಿ: ಬಹು ಅಂಗಾಂಗ ವೈಫಲ್ಯದಿಂದ ದೆಹಲಿಯಲ್ಲಿ ಮಂಗಳವಾರ ನಿಧನರಾದ ಭಾರತೀಯ ಸೇನೆಯ ಹವಾಲ್ದಾರ್ ಪ್ರಕಾಶ ಉದ್ದಪ್ಪ ಇವ್ವಕ್ಕಿ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಗುರ್ಲಾಪುರ ಗ್ರಾಮದಲ್ಲಿ ಗುರುವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ದೆಹಲಿಯಿಂದ ಬೆಳಗಾವಿಯ ವಿಮಾನನಿಲ್ದಾಣಕ್ಕೆ ಬಂದ ಯೋಧನ ಪಾರ್ಥಿವಶರೀರವನ್ನು ಭಾರತೀಯ ಸೇನಾ ವಾಹನದ ಮೂಲಕ ಮಧ್ಯಾಹ್ನ 12ಕ್ಕೆ ಮೂಡಲಗಿಗೆ ತರಲಾಯಿತು. ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಗುರ್ಲಾಪುರ ಗ್ರಾಮಕ್ಕೆ ತರಲಾಯಿತು. ದಾರಿಯುದ್ದಕ್ಕೂ ‘ಭಾರತ ಮಾತಾಕೀ ಜೈ, ಅಮರ್ …
Read More »ಶಿಕ್ಷಣಕ್ಕೆ ಮಠಗಳ ಕೊಡುಗೆ ಅಪಾರ: ಡಾ.ಎಸ್.ವಿದ್ಯಾಶಂಕರ
ಬೆಳಗಾವಿ: ‘ಶಿಕ್ಷಣ ರಂಗದಲ್ಲಿ ರಾಜ್ಯ ಸರ್ಕಾರ ಮಾಡದ ಕೆಲಸವನ್ನು ಮಠ-ಮಾನ್ಯಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಿವೆ. ಗ್ರಾಮೀಣ ಭಾಗದ ಬಡ ಮಕ್ಕಳ ಬದುಕು ರೂಪಿಸಿವೆ’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ ಶ್ಲಾಘಿಸಿದರು. ಇಲ್ಲಿನ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ನಲ್ಲಿ ಲಿಂ. ಡಾ.ಶಿವಬಸವ ಸ್ವಾಮೀಜಿ 133ನೇ ಜಯಂತಿ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಡಾ.ಶಿವಬಸವ ಸ್ವಾಮೀಜಿ ಅವರ ವಸ್ತು ಸಂಗ್ರಹಾಲಯ ಉದ್ಘಾಟನೆ ಮತ್ತು ‘ಸೇವಾ ರತ್ನ’ ಪ್ರಶಸ್ತಿ ಪ್ರದಾನ …
Read More »ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಬಗ್ಗೆ ಪ್ರಧಾನಿ ನಿಲುವು ತಿಳಿಸಲಿ: ಠಾಕ್ರೆ
(ಮಹಾರಾಷ್ಟ್ರ): ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವಿನ ಗಡಿ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನಾದ ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ. ಜಲ್ನಾ ಜಿಲ್ಲೆಯ ಸಂತ ರಾಮದಾಸ್ ಕಾಲೇಜಿನಲ್ಲಿ ನಡೆದ 42ನೇ ಮರಾಠವಾಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಅವರು ಭಾನುವಾರ ನಾಗ್ಪುರ- ಮುಂಬೈ ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೆ ಬರುತ್ತಿದ್ದಾರೆ. ಅವರನ್ನು …
Read More »ರಾಜ್ಯಕ್ಕೆ ಬಿಜೆಪಿ ವರಿಷ್ಠರ ದಂಡು: ಡಿಸೆಂಬರ್, ಜನವರಿ ಪೂರ್ಣ ಕಾರ್ಯಕ್ರಮಗಳು
ಬೆಂಗಳೂರು: ಗುಜರಾತ್ ಗೆಲುವಿನ ಬಳಿಕ ಬಿಜೆಪಿಯ ದಿಲ್ಲಿ ವರಿಷ್ಠರು ಕರುನಾಡಿನತ್ತ ದಂಡಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಇದೇ ತಿಂಗಳಿನಿಂದ ಸರಣಿ ಸಮಾವೇಶ, ಯೋಜನೆಗಳ ಉದ್ಘಾಟನೆಗಳ ಮೂಲಕ ರಾಜ್ಯ ಮತದಾರರ ಮನಸೆಳೆಯಲು ಮುಂದಾಗಿರುವ ಬಿಜೆಪಿ ರಾಜ್ಯ ಘಟಕ, ಪಕ್ಷದ ಘಟಾನುಘಟಿ ನಾಯಕರನ್ನು ಆಹ್ವಾನಿಸಿದೆ. ಮುಂದಿನ ಎಪ್ರಿಲ್, ಮೇ ವೇಳೆಗೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಎಲ್ಲ ಸಾಧ್ಯತೆಗಳಿವೆ. ಜನವರಿಯಲ್ಲಿ ಮೋದಿ ಜನವರಿ ಮೊದಲ ವಾರದಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಬರಲಿದ್ದಾರೆ. ಆರೋಗ್ಯ ಇಲಾಖೆಯ ಆಯುಷ್ಮಾನ್ …
Read More »ಗಡಿ ವಿವಾದ ಡಿ. 14 ಮತ್ತು 15ರಂದು ಎರಡೂ ರಾಜ್ಯಗಳ ಮುಖ್ಯ ಮಂತ್ರಿಗಳ ಸಭೆ
ಬೆಂಗಳೂರು: ಬೆಳಗಾವಿ ಗಡಿ ವಿವಾದ ಸಂಬಂಧ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿವರಣೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಡಿ. 14 ಮತ್ತು 15ರಂದು ಎರಡೂ ರಾಜ್ಯಗಳ ಮುಖ್ಯ ಮಂತ್ರಿಗಳ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಸೋಮವಾರ ರಾಜ್ಯದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಲಿದೆ. ಅಮಿತ್ ಶಾ ಕೂಡ ತಾವು ಹೇಳಿದಾಗ ಬರಬೇಕಾಗುತ್ತದೆ ಎಂದು ನನಗೆ ತಿಳಿಸಿದ್ದಾರೆ. ಕರ್ನಾಟಕದ ವಿಚಾರ, …
Read More »ಬೇಕರಿ ಸಿಬಂದಿಗೆ ಮನಸೋ ಇಚ್ಛೆ ಹಲ್ಲೆ ಮೂವರ ಬಂಧನ
ಬೆಂಗಳೂರು: ಚಹಾ ಹಾಗೂ ಸಿಗರೇಟ್ ಕೊಡುವ ವಿಚಾರದಲ್ಲಿ ಕುಂದಲಹಳ್ಳಿ ಗೇಟ್ ಬಳಿಯ ಬೇಕರಿ ಸಿಬಂದಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪಕ್ಕದ ಅಂಗಡಿಯ ಮಾಲಕನೇ ತನ್ನ ಸಹಚರರ ಮೂಲಕ ಕೃತ್ಯ ಎಸಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣದ ಸಂಬಂಧ ನಾಲ್ವರನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ ಬೇಕರಿಯ ಪಕ್ಕದ ಅಂಗಡಿಯ ಮಾಲಕ ಮಂಜುನಾಥ್, ಡೆಲಿವರಿ ಬಾಯ್ ಅಶ್ವತ್ಥ ನಗರದ ಕಾರ್ತಿಕ್, ಅಲ್ಯೂಮಿನಿಯಂ ಕೆಲಸ …
Read More »ಸಲಾಂ ಆರತಿ: ಪೂಜೆಯ ಹೆಸರಿನಲ್ಲಿ ಮಾತ್ರ ಬದಲಾವಣೆ; ಪೂಜೆ ರದ್ದುಪಡಿಸುವ ಯಾವುದೇ ಚಿಂತನೆ ಇಲ್ಲ
ಬೆಂಗಳೂರು: ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ “ದೀವಟಿಗೆ ಸಲಾಂ” “ಸಲಾಂ ಆರತಿ” ಮತ್ತು “ಸಲಾಂ ಮಂಗಳಾರತಿ” ಎಂಬ ಪೂಜಾಕಾರ್ಯಗಳ ಹೆಸರನ್ನು ಬದಲಾಯಿಸಿ ನಮ್ಮ ಸಂಪ್ರದಾಯದ ಹೆಸರನ್ನು ನೀಡುವ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವಿಸ್ತ್ರುತವಾಗಿ ಚರ್ಚಿಸಲಾಗಿದೆ. ಈ ಪೂಜಾಕಾರ್ಯಗಳ ಹೆಸರನ್ನ ನಮ್ಮ ಸ್ಥಳೀಯ ಭಾಷೆಯ ಪದಗಳಿಗೆ ಬದಲಿಸುವ ಬಗ್ಗೆ ಮಾತ್ರ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ, …
Read More »ಕನ್ನಡದ ಮಕ್ಕಳು ಉದ್ಯಮಿಗಳಾಗಬೇಕು: C.M. ಬೊಮ್ಮಾಯಿ
ಬೆಂಗಳೂರು, ಡಿಸೆಂಬರ್ 10 : ರುಡ್ ಸೆಟ್ ನಂತಹ ಉತ್ತಮ ತರಬೇತಿ ಕೇಂದ್ರದಿಂದ ಕರ್ನಾಟಕದ ಮಕ್ಕಳು ಲಾಭವನ್ನು ಪಡೆದು, ಉದ್ಯಮಿಗಳಾಗಿ, ಇತರರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶನಿವಾರ ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿ ಹಾಗೂ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪ್ರಯೋಜಕತ್ವದಲ್ಲಿ ಆಯೋಜಿಸಿರುವ “ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿಯ ನೂತನ ಕಟ್ಟಡ”ದ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪ್ರಧಾನ ಮಂತ್ರಿಗಳು ಕೌಶಲ್ಯ ಭಾರತದಡಿ ಶೇ 44 ರಷ್ಟಿರುವ ಯುವಕರಿಗೆ ಕೌಶಲ್ಯ …
Read More »ಬೆಳಗಾವಿ ಕನ್ನಡ ಧ್ವಜ ವಿವಾದ ತಪ್ಪಿತಸ್ಥ ಪೋಲಿಸ್ ಅಧಿಕಾರಿಗಳ ವಿರುದ್ಧ ಡಿ.ಆಯ್ .ಜಿ ಗೆ ಮನವಿ
ಬೆಳಗಾವಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ ಸೇನೆಯ ಬೆಳಗಾವಿ ಯುವ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀ ಸಂಪತ್ ಕುಮಾರ್ ದೇಸಾಯಿರವರ ಮೇಲೆ ದೌರ್ಜನ್ಯವೆಸಗಿದ ಪೋಲಿಸರ ವಿರುದ್ಧ ಮಾನ್ಯ ಗೌರವಾನ್ವಿತ ಪೊಲೀಸ್ ಮಹಾ ನಿರ್ದೇಶಕರಿಗೆ ಸಂಪತ್ರವರ ತಂದೆ ಮತ್ತು ತಾಯಿಯವರ ತೆರಳಿ ದೂರನ್ನು ಸಲ್ಲಿಸಿ ಸಂಪತ್ ರವರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಮಾನ್ಯ ಪೊಲೀಸ್ ಮಹಾ ನಿರ್ದೇಶಕರಾದ ಶ್ರೀಯುತ ಪ್ರವೀಣ್ ಸೂದ್ ಸರ್ ರವರು ಮುಂದಿನ ದಿನಗಳಲ್ಲಿ ನಿಮಗೆ …
Read More »ಒಂದು ಎಕರೆಯಲ್ಲಿ ಲಕ್ಷಾಂತರ ರೂ. ಲಾಭ; ಹೊಸೂರ ರೈತನ ಸಾಧನೆ
ರಬಕವಿ-ಬನಹಟ್ಟಿ: ಒಂದೇ ಒಂದು ಎಕರೆ ಭೂ ಪ್ರದೇಶವನ್ನು ವೈಜ್ಞಾನಿಕವಾಗಿ ಬಳಸಿಕೊಂಡು ವರ್ಷದೂದ್ದಕ್ಕೂ ವೈವಿಧ್ಯಮಯವಾದ ಬೆಳೆಗಳನ್ನು ಬೆಳೆಯುತ್ತ ಲಕ್ಷಾಂತರ ರೂ. ಲಾಭ ಗಳಿಸುತ್ತಿರುವ ಸಮೀಪದ ಹೊಸೂರಿನ ರೈತ ಹನಮಂತ ಭುಜರುಕ ಚಿಕ್ಕ ಭೂಮಿಯನ್ನು ಹೊಂದಿದ ರೈತರಿಗೆ ಮಾದರಿಯಾಗಿದ್ದಾರೆ. ಹನಮಂತ ತಮ್ಮ ಮಕ್ಕಳಾದ ಸಂಗಪ್ಪ ಮತ್ತು ಬಸವರಾಜರ ಜೊತೆಗೂಡಿ ಕಡಿಮೆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಸಂಗಪ್ಪ ಬಿ.ಎ. ಪದವಿಧರ. ಬೇರೆ ಕಡೆಗೆ ನೌಕರಿಗೆ ಹೋಗದೆ ತಂದೆಗೆ ಕೃಷಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಸಂಗಪ್ಪ ಭುಜರುಕ …
Read More »