Breaking News

ಕರ್ತವ್ಯದಲ್ಲಿರುವಾಗಲೇ ಪೊಲೀಸ್ ಸಿಬ್ಬಂದಿಯಿಂದ ಭರ್ಜರಿ ಎಣ್ಣೆ ಪಾರ್ಟಿ!

ಹೈದರಬಾದ್​: ಕರ್ತವ್ಯನಿರತ ಇಬ್ಬರು ಪೊಲೀಸ್​ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.   ಇಬ್ಬರು ಸಹ ಗಸ್ತು ವಾಹನದ ಸಿಬ್ಬಂದಿ ಎಂದು ತಿಳಿದುಬಂದಿದೆ. ವಾಹನವನ್ನು ಪಕ್ಕದಲ್ಲಿ ಪಾರ್ಕ್​ ಮಾಡಿ ಮನೆಯ ಮುಂದಿನ ಸಣ್ಣದಾಗ ಗೋಡೆಯ ಮೇಲೆ ಕುಳಿತು ಇಬ್ಬರು ಮದ್ಯ ಸೇವನೆ ಮಾಡಿದ್ದಾರೆ. ಇಬ್ಬರು ಕೂಡ ಹೈದರಾಬಾದ್​ನ ಪಂಜಗುಟ್ಟ ಠಾಣಾ ಪೊಲೀಸರು ಎಂದು …

Read More »

ಕಲಾವಿದರನ್ನೂ ಬಿಡದ ಪರ್ಸೆಂಟೇಜ್​; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಅಮಾನತು

ಬಳ್ಳಾರಿ: ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಸರ್ಕಾರದ ಶೇ. 40 ಕಮಿಷನ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಇನ್ನಷ್ಟು ಅಕ್ರಮ ಹೊರಬಿದ್ದಿದೆ. ಈ ಹಿಂದೆ ಗುತ್ತಿಗೆದಾರರ ವಿಷಯದಲ್ಲಿ ಕಮಿಷನ್ ವಿರುದ್ಧ ಕೂಗೆದ್ದಿತ್ತು, ಈಗ ಕಲಾವಿದರೂ ಕಮಿಷನ್​ ವಿರುದ್ಧ ದನಿ ಎತ್ತಿದ್ದಾರೆ. ಪರಿಣಾಮವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ‌ಇಲಾಖೆ ಅಧಿಕಾರಿಯಾಗಿರುವ ಸಿದ್ದಲಿಂಗೇಶ್ವರ್ ರಂಗಣ್ಣನವರ್ ಅಮಾನತು ಆದವರು. ಇವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ …

Read More »

ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮುಗಿದ ಮಾತ್ರೆ-ಇಂಜೆಕ್ಷನ್; ಲೋಕಾಯುಕ್ತ ಭೇಟಿ ವೇಳೆ ಬಯಲಾದ ಸಂಗತಿ

ಹುಬ್ಬಳ್ಳಿ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಅವಧಿ ಮುಗಿದ ಮಾತ್ರೆ ಹಾಗೂ ಚುಚ್ಚುಮದ್ದು ಪತ್ತೆಯಾಗಿರುವ ಆತಂಕಕಾರಿ ಸಂಗತಿಯೊಂದು ಹೊರಬಂದಿದೆ. ಲೋಕಾಯುಕ್ತ ತಂಡ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಅವಧಿ ಮುಗಿದ ಮಾತ್ರೆಗಳು ಮತ್ತು ಇಂಜೆಕ್ಷನ್​ಗಳು ಪತ್ತೆಯಾಗಿವೆ. ಈ ತಾಲೂಕಾಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾಗ ಕೆಲವು ಮಾತ್ರೆ-ಇಂಜೆಕ್ಷನ್​ಗಳ ಅವಧಿ ಮುಗಿದಿರುವುದು ಕಂಡುಬಂದಿತ್ತು. ಲೋಕಾಯುಕ್ತ ಅಧಿಕಾರಿಗಳು ಆಸ್ಪತ್ರೆ ಸಿಬ್ಬಂದಿಯನ್ನು ಪ್ರಶ್ನಿಸಿದಾಗ …

Read More »

ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ: ಕೋಡಿಮಠದ ಶ್ರೀ

ಜಮಖಂಡಿ ಫೆಬ್ರವರಿ 4: ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ತಯಾರಿ ಭರದಿಂದ ಸಾಗುತ್ತಿದೆ. ಇನ್ನೇನು ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪ್ರಬಲ ಪಕ್ಷಗಳು ಪ್ರಚಾರ ಕಾರ್ಯಯವನ್ನು ಚುರುಕುಗೊಳಿಸಲಿವೆ. ಈ ನಡುವೆ ರಾಜಕೀಯ ಭವಿಷ್ಯ ನುಡಿಯುವುದರಲ್ಲಿ ಮುಂಚುಣಿಯಲ್ಲಿರುವ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಗಳು ಮತ್ತೊಂದು ರಾಜಕೀಯ ಭವಿಷ್ಯ …

Read More »

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಾರಕ್ಕೆ 5 ದಿನ ಮೊಟ್ಟೆ..!

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯ ತಂದಿರುವ ರಾಜ್ಯ ಸರ್ಕಾರ ವಾರಕ್ಕೆ ಒಂದು ದಿನ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡಲು ಆದೇಶಿಸಿತ್ತು. ಮಕ್ಕಳು ಏನನ್ನು ಬಯಸುತ್ತಾರೋ ಅದನ್ನೇ ನೀಡಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು. ಅಲ್ಲದೆ ಸಮೀಕ್ಷೆ ಒಂದರಲ್ಲಿ ಶೇಕಡ 70ಕ್ಕೂ ಅಧಿಕ ಮಕ್ಕಳು ಮೊಟ್ಟೆ ನೀಡಲು ಬೇಡಿಕೆ ಇಟ್ಟಿದ್ದು, ಕಂಡುಬಂದಿತ್ತು. ಇದರ ಮಧ್ಯೆ ಆಡಳಿತ ಸುಧಾರಣಾ ಆಯೋಗ ಮತ್ತೊಂದು ಮಹತ್ವದ ಶಿಫಾರಸ್ಸು ಮಾಡಿದ್ದು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ವಾರಕ್ಕೆ 5 ದಿನ …

Read More »

ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಸವದತ್ತಿ ತಾಲೂಕಿನ ಸೊಪ್ಪಡ್ಲ ಗ್ರಾಮದಲ್ಲಿ

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲೂಕಿನ ಸೊಪ್ಪಡ್ಲ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. …

Read More »

ಜಾರಕಿಹೊಳಿ ಕುಟುಂಬದ ಮುಂದೆ ಮಂಡಿಯೂರಿದ ರಾಷ್ಟ್ರೀಯ ಪಕ್ಷಗಳು

ಬೆಳಗಾವಿ: ಅಣ್ಣ ಕಾಂಗ್ರೆಸ್‌ನಿಂದ ಸ್ಪರ್ಧೆ. ತಮ್ಮ ಬಿಜೆಪಿಯಿಂದ ಸಹೋದರನ ವಿರುದ್ಧವೇ ಸ್ಪರ್ಧೆ. ಅನಂತರ ಕಾಲ ಬದಲು. ಅಣ್ಣ ಬಿಜೆಪಿಯಿಂದ ಉಪಚುನಾವಣೆಯಲ್ಲಿ ಸ್ಪರ್ಧೆ. ಈ ಕಡೆ ಮತ್ತೊಬ್ಬ ಸಹೋದರ ಕಾಂಗ್ರೆಸ್‌ನಿಂದ ಅಣ್ಣನಿಗೆ ಪೈಪೋಟಿ… ಒಂದೇ ಕ್ಷೇತ್ರದಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಟಿಕೆಟ್‌ಗಳು ಒಂದೇ ಕುಟುಂಬದ ಇಬ್ಬರು ಸಹೋದರರ ನಡುವೆ ಹಂಚಿಕೆಯಾದ ಉದಾಹರಣೆ ಬಹುಶಃ ಬೇರೆ ಎಲ್ಲೂ ಇರಲಿಕ್ಕಿಲ್ಲ. ಆದರೆ ಅಂತಹ ಅಪರೂಪದ ಉದಾಹರಣೆ ಗಡಿ ಜಿಲ್ಲೆ ಬೆಳಗಾವಿಯಲ್ಲಿದೆ. ಗಡಿ ಜಿಲ್ಲೆ ಬೆಳಗಾವಿಯ …

Read More »

ಗೋಕಾಕ್, ಮೂಡಲಗಿ ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ

ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ( ರಿ )ಸಂಯೋಜಕ ಸಂಘಟನೆ ವತಿಯಿಂದ ಭೇಟಿಯಾಗಿ ಗೋಕಾಕ್, ಮೂಡಲಗಿ ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಲಾಯಿತು. ಹಾಗೂ ಖಾನಾಪುರ ತಾಲೂಕಿನ ದೇವರಾಯಿ ಗ್ರಾಮದಲ್ಲಿ ದಲಿತ ಕುಟುಂಬ ದೌರ್ಜನ್ಯ ಕೊಳಗಾಗಿದೆ ಅವರಿಗೆ ಸರ್ಕಾರದ ಪರಿಹಾರ ಹಾಗೂ ಸೂಕ್ತ ನ್ಯಾಯ ಹಾಗೂ ಭದ್ರತೆ ಒದಗಿಸುವಂತೆ ಜಿಲ್ಲಾಧಿಕಾರಿಯವರನ್ನು ಕೋರಲಾಯಿತು. ಈ ಸಂದರ್ಭದಲ್ಲಿ ವಿಠಲ ಡಿ ಸಗರಮ್ಮನವರ ಬಾಗಲಕೋಟ್ ಜಿಲ್ಲಾ …

Read More »

ಸುದೀಪ್ ಭೇಟಿಯಾದ ಡಿ.ಕೆ. ಶಿ. ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ದ?

ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಕಿಚ್ಚನ ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ದವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.   ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಿಚ್ಚ ಸುದೀಪ್ ಅವರನ್ನು ಬೆಂಗಳೂರಿನ ಅವರ ಮನೆಯಲ್ಲಿ ಭೇಟಿ ಮಾಡಿದರು. ಈ ಭೇಟಿಯ ಫೋಟೋಗಳು ಇದೀಗ ವೈರಲ್ ಆಗುತ್ತಿದೆ. ಕಿಚ್ಚ ಸುದೀಪ್ ಅವರ ರಾಜಕೀಯ ಪದಾರ್ಪಣೆ ಕುರಿತು ಅವರು ಚರ್ಚಿಸಿದ್ದಾರೆಯೇ ಎಂಬುದನ್ನು ನಟ …

Read More »

ಕುರಿಗಳ ಮೇಲೆ ತೋಳಗಳಿಂದ ದಾಳಿ

ರಾತ್ರಿ ಹೊತ್ತಿನಲ್ಲಿ ತೋಟದಲ್ಲಿ ನಿಲ್ಲಿಸಲಾಗಿದ್ದ ಕುರಿಗಳ ಮೇಲೆ ತೋಳಗಳು ದಾಳಿ ಮಾಡಿದ್ದು ಈ ದಾಳಿಯಲ್ಲಿ ಸುಮಾರು 25 ಕುರಿಗಳು ದಾರುಣ ವಾಗಿ ಸಾವನ್ನೊಪ್ಪಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬೊಮ್ಮನಾಳ ಗ್ರಾಮದ ರಬಕವಿ ಅವರ ತೋಟದಲ್ಲಿ ನಿಲ್ಲಿಸಲಾಗಿದ್ದ ಮಲ್ಲಪ್ಪ ಹೀರೆಕೂಡಿ ಅವರಿಗೆ ಸೇರಿದ ಕುರಿಗಳು ಇವಾಗಿವೆ. ಅಲ್ಲದೆ ಕುರಿಗಳ ಮಾಲಿಕ ಮಲ್ಲಪ್ಪ ಅವರು ಊಟಕ್ಕೆ ಹೋದ ಸಮಯದಲ್ಲಿ ಈ ಘಟನೆ ನಡೆದಿದೆ.

Read More »