Breaking News

ವಾಹನ ಡಿಕ್ಕಿಯಾಗಿ ಇಬ್ಬರ ಸಾವು

ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂಚಿನಾಳ ಕ್ರಾಸ್ ಬಳಿ ನಡೆದಿದೆ. ಗೋಕಾಕ ಮೂಲದ ಸಂಜುಹಿತಾರಗೌಡರ(33) ಹಾಗೂ ನಾಗರಾಜ ಯಡವಣ್ಣವರ (34) ಮೃತ ದುರ್ದೈವಿಗಳು. ಆಶಿಫ್ ಮುಲ್ಲಾ(24) ಗಾಯಗೊಂಡಿದ್ದಾನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದು ಪ್ರಕರಣ ದಾಖಲಾಗಿದೆ.

Read More »

ಎಸಿಸಿ ಸಿಮೆಂಟ್​ ಘಟಕ​ ಬಂದ್​. ಸಾವಿರಾರು ಉದ್ಯೋಗಿಗಳಿಗೆ ಬರಸಿಡಿಲ

1984ರಲ್ಲಿ ಇಲ್ಲಿ ಎಸಿಸಿ ಗಗ್ಗಲ್​ ಘಟಕವನ್ನು ಸ್ಥಾಪಿಸಲಾಯಿತು. ಕೆಲವು ವರ್ಷಗಳ ಹಿಂದೆ ವಿದೇಶಿ ಕಂಪನಿ ಹೊಲ್ಸಿಮ್​ ವಲಫರ್ಜ್​ ಇದರ ನಿರ್ವಹಣೆ ಮಾಡುತ್ತಿದ್ದು, ಇದೀಗ ಇದು ಅದಾನಿ ಗ್ರೂಪ್​ಗೆ ಸೇರಿದೆ. ಬಿಲಾಸ್ಪುರ್​ (ಹಿಮಾಚಲ ಪ್ರದೇಶ): ನಷ್ಟದ ಹಿನ್ನೆಲೆ ಇಲ್ಲಿರುವ ಎಸಿಸಿ ಸಿಮೆಂಟ್​​​ ಘಟಕಕ್ಕೆ ಬೀಗ ಹಾಕಲಾಗಿದ್ದು, ತಕ್ಷಣದಿಂದಲೇ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಎಲ್ಲಾ ನೌಕರರು ಕರ್ತವ್ಯಕ್ಕೆ ಬರದಂತೆ, ಇಲ್ಲಿ ಕೆಲಸ ಸ್ಥಗಿತಗೊಳಿಸುತ್ತಿರುವ ಕುರಿತು ನೋಟಿಸ್​ ಜಾರಿ ಮಾಡಲಾಗಿದೆ. ಘಟಕ ಬಂದ್​ ಮಾಡುತ್ತಿರುವ …

Read More »

ಮಹಿಳೆಯರು ಇನ್ನೂ 6 ತಿಂಗಳು ಗರ್ಭ ಧರಿಸ ಬಾರದಂತೆ; ಇದು ಜಿಕಾ ಎಫೆಕ್ಟ್​..!

ರಾಯಚೂರು: ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ಮೊದಲ ಜಿಕಾ ವೈರಸ್ ಪ್ರಕರಣ ನಿನ್ನೆ ವರದಿಯಾಗಿದ್ದು, ಎಲ್ಲರಲ್ಲೂ ಆಂತಕ ಸೃಷ್ಟಿಸಿದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎನ್ನುತ್ತಾರೆ ಮಕ್ಕಳ ತಜ್ಞರು. ಈ ನಡುವೆ ಆರೋಗ್ಯ ಇಲಾಖೆ, ಮುಂದಿನ ಆರು ತಿಂಗಳ ಕಾಲ ಯಾರೂ ಗರ್ಭ ಧರಿಸದಂತೆ, ಸೂಚನೆ ಪ್ರಕಟಿಸಿದೆ.   ಜಿಕಾ ವೈರಸ್ ಒಂದೇ ಮಾದರಿಯ ಆರ್‌ಎನ್‌ಎ ವೈರಸ್ ಗುಂಪಿಗೆ (ಫ್ಲೇಮಿ ವೈರಸ್ ಗುಂಪು) ಸೇರಿದ್ದಾಗಿದೆ. ಈಡಿಸ್ ಜಾತಿಯ ಸೊಳ್ಳೆ ಕಚ್ಚುವುದರಿಂದ …

Read More »

ನಮ್ಮ ಸರ್ವೇ ಕ್ಲಿಯರ್, ನಾವು 136 ಸೀಟ್ ಗೆಲ್ಲುತ್ತೇವೆ, :ಡಿ.ಕೆ ಶಿ

ಬೆಂಗಳೂರು: ನಾವು ನಡೆಸಿದಂತ ಸರ್ವೇಯಲ್ಲಿ ಕ್ಲಿಯರ್ ಆಗಿದೆ. ನಾವು 136 ಸೀಟ್ ಗೆಲ್ಲುತ್ತೇವೆ. ಬಿಜೆಪಿ ಕೇವಲ 60 ರಿಂದ 65 ಸ್ಥಾನವನ್ನು ಗೆಲ್ಲಲಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC President DK Shivakumar ) ಭವಿಷ್ಯ ನುಡಿದಿದ್ದಾರೆ.   ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾವು ಮುಂಬರುವಂತ ಚುನಾವಣೆಯಲ್ಲಿ 136 ಸ್ಥಾನ ಗೆಲ್ಲಲಿದ್ದೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 60 ರಿಂದ 65 ಸ್ಥಾನ ಗೆಲ್ಲಲಿದೆ. …

Read More »

ರಕ್ತದಲ್ಲಿ ನಾನು ಪತ್ರ ಬರೆದಿದ್ದಕ್ಕೇ ಮಹದಾಯಿ ಪ್ರಾರಂಭ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ‘ಮಹದಾಯಿ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ. ಮಹದಾಯಿ ನೀರನ್ನು ಕರ್ನಾಟಕಕ್ಕೆ ತರುವ ಕಾಲುವೆಗೆ ಗೋಡೆ ಕಟ್ಟಿರುವುದೇ ಕಾಂಗ್ರೆಸ್‌ನ ದೊಡ್ಡ ಸಾಧನೆ. ರಕ್ತದಲ್ಲಿ ನಾನು ಪತ್ರ ಬರೆದಿದ್ದಕ್ಕೇ ಮಹದಾಯಿ ಕಾಮಗಾರಿ ಪ್ರಾರಂಭವಾಗಿದ್ದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.   ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ನಾನು ನೀರಾವರಿ ಸಚಿವನಾಗಿದ್ದಾಗ 5.5 ಮೀಟರ್‌ಗಳಷ್ಟು ಕಾಲುವೆ ನಿರ್ಮಾಣವಾಯಿತು. ಆದರೆ, ಕಾಂಗ್ರೆಸ್‌ ಪುಣ್ಯಾತ್ಮರು ಏನು ಮಾಡಿದರು? ಸೋನಿಯಾ ಗಾಂಧಿ ಅವರು ಗೋವಾದಲ್ಲಿ …

Read More »

ಗದಗ ಶಿರಹಟ್ಟಿ ಕ್ಷೇತ್ರದ ಕಾಂಗ್ರೆಸ್‌ ನ ಮಾಜಿ ಶಾಸಕ ಎಸ್.ಎನ್‌ ಪಾಟೀಲ ಇನ್ನಿಲ್ಲ

ಗದಗ: ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ಎಸ್.ಎನ್‌ ಪಾಟೀಲ ಇಂದು ನಿಧನ ಹೊಂದಿದ್ದಾರೆ. ಎಸ್‌.ಎನ್.ಪಾಟೀಲ ಅವರಿಗೆ 81 ವಯಸ್ಸಾಗಿತ್ತು.   ಅನಾರೋಗ್ಯ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಸಂಜೆ 4 ಗಂಟೆಗೆ ಸ್ವಗ್ರಾಮ ಪುಟಗಾಂವ್ ಬಡ್ನಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಎಸ್. ಎನ್‌ ಪಾಟೀಲ ಸರಳ, ಸಜ್ಜನಿಕೆ, ನೇರ-ನಿಷ್ಠುರ ವ್ಯಕ್ತಿತ್ವ ಹೊಂದಿದ್ದಾರೆ. 1989-1994 ರ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಪಾಟೀಲ ಅವರು ಶಾಸಕರಾಗಿದ್ದರು. …

Read More »

ಬಿಜೆಪಿಗೆ ಬಿಗ್ ಶಾಕ್: ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಶಾಸಕ ವಿ.ಎಸ್ ಪಾಟೀಲ್

ಬೆಂಗಳೂರು: ಯಲ್ಲಾಪುರ ಮಾಜಿ ಶಾಸಕರಾದ ವಿ.ಎಸ್ ಪಾಟೀಲ್ ( Former MLC V S Patil ) ಹಾಗೂ ಶ್ರೀನಿವಾಸ್ ಭಟ್ ಅವರು ಬಿಜೆಪಿ ತೊರೆದು ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಹಿರಿಯ ಮುಖಂಡ ಆರ್.ವಿ. …

Read More »

ಸಿದ್ಧಾರೂಢರ ದರ್ಶನ ಪಡೆದ ಶಿವಣ್ಣ ದಂಪತಿ

ಹುಬ್ಬಳ್ಳಿ (ಡಿ.14) : ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್ (Shiva Rajkumar) ಅವರು ವೇದ ಚಿತ್ರದ ಪ್ರಚಾರ ಕಾರ್ಯದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇಂದು ಪತ್ನಿ ಗೀತಾ (Geetha) ಜೊತೆ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ (Siddharoodha Mutt) ಭೇಟಿ ನೀಡಿದ್ರು. ಗುರು ಸಿದ್ಧಾರೂಢರ ದರ್ಶನ ಪಡೆದು ವಿಶೇಷ ಪೂಜೆ (Pooja) ಸಲ್ಲಿಸಿದ್ದಾರೆ. 10 ನಿಮಿಷಗಳ ಸಿದ್ಧಾರೂಡರ ಗದ್ದುಗೆಯ ಬಳಿ ಶಿವಣ್ಣ ದಂಪತಿ (Couple) ಧ್ಯಾನ ಮಾಡಿದ್ರು. ವೇದ ಸಿನಿಮಾ ಪ್ರೀ ರಿಲೀಸ್ …

Read More »

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಡಿಸೆಂಬರ್ 23 ರಂದು ಸುವರ್ಣಸೌಧದವರೆಗೆ ಪಾದಯಾತ್ರೆ

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಡಿಸೆಂಬರ್ 23 ರಂದು ಯಡೂರ ವೀರಭದ್ರೇಶ್ವರ ದೇವಸ್ಥಾನದಿಂದ ಬೆಳಗಾವಿ ಸುವರ್ಣಸೌಧದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮೀತಿಯ ಅಧ್ಯಕ್ಷ ಎಸ್.ವೈ.ಹಂಜಿ ಹೇಳಿದರು. ಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್.ವೈ.ಹಂಜಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡುವಂತೆ ಕಳೆದ ಹಲವಾರು ವರ್ಷಗಳಿಂದ ಹೋರಾಟವನ್ನು ಮಾಡಿಕೊಂಡು ಬರುತ್ತಿದೇವೆ. ಆದರೆ ಇನ್ನೂವರೆಗೆ ಚಿಕ್ಕೋಡಿ ಜಿಲ್ಲೆ ಆಗದೇ ಇರುವುದು ವಿಪಯಾರ್ಪಸದ ಸಂಗತಿ. ಡಿಸೆಂಬರ್ ‌19 ರಿಂದ ಬೆಳಗಾವಿಯ …

Read More »

ವಿದ್ಯಾರ್ಥಿನಿಯರನ್ನು ಬಾರ್ ಮುಂದೆ ಇಳಿಸಿದ ಸಾರಿಗೆ ಚಾಲಕ

ಬೆಳಗಾವಿ ತಾಲೂಕಿನ ಸುಳಗಾ ಶಾಲೆಯ ಮಕ್ಕಳು ಕುದುರೆಮನೆಯ ಮಾರ್ಗವಾಗಿ ಬರುವ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವ ವೇಳೆ ಸರಿಯಾದ ಬಸ್ ನಿಲ್ದಾಣಕ್ಕೆ ನಿಲ್ಲಿಸದೆ ಚಾಲಕ ಬಾರ್ ಅಂಗಡಿ ಮುಂದೆ ನಿಲ್ಲಿಸಿದ್ದಕ್ಕೆ ಗ್ರಾಮಸ್ಥರು ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಎಂದಿನಂತೆ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಮರಳಿ ಸಾರಿಗೆ ಬಸ್ ನಲ್ಲಿ ಬರುವಾಗ ಸುಮಾರು 16 ವಿದ್ಯಾರ್ಥಿನಿಯರು ಸುಳಗಾಕ್ಕೆ ಇಳಿಸದೆ ಬಾರ್ ವೊಂದರ ಮುಂದೆ …

Read More »