ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಟ್ಟುಹಬ್ಬದ ಸಂಭ್ರಮಕ್ಕೆ ಹುಬ್ಬಳ್ಳಿಯ ಜನರು ಶಾಕ್ ನೀಡಿದ್ದಾರೆ. 30 ವರ್ಷ ಅಧಿಕಾರ ಅನುಭವಿಸಿ, ಮುಖ್ಯಮಂತ್ರಿ, ಸಚಿವರಾಗಿದ್ದ ಶೆಟ್ಟರ್ ಅವರಿಗೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಇರುವ ಸಾಲು ಸಾಲು ಸಮಸ್ಯೆಗೆ ಪರಿಹಾರ ನೀಡುವಂತೆ ಜನತೆ ಒತ್ತಾಯಿಸಿದ್ದಾರೆ. ಹುಟ್ಟು ಹಬ್ಬದ ಶುಭಾಶಯ ಕೋರಿ ತಮ್ಮ ಬೇಡಿಕೆ ಈಡೇರಿಸಿ ಉಡುಗೊರೆ ನೀಡುವಂತೆ ಮನವಿ ಮಾಡಿದ್ದಾರೆ. ಸ್ವ ಹಿತಾಸಕ್ತಿಗೆ ಬಿ.ಆರ್.ಟಿ.ಎಸ್ ಯೋಜನೆ ತಂದು ನಮ್ಮ ಜೀವ ತೆಗೆಯುತ್ತಿದ್ದಾರೆ. ಕಸದ ನಿರ್ವಹಣೆ …
Read More »ವಾಹನ ಸವಾರರೇ ಎಚ್ಚರ! ಇನ್ಮುಂದೆ ಫುಟ್ ಪಾತ್ ನಲ್ಲಿ ವಾಹನ ಚಲಾಯಿಸಿದ್ರೆ `ಡ್ರೈವಿಂಗ್ ಲೈಸೆನ್ಸ್’ ಅಮಾನತು!
ಬೆಂಗಳೂರು : ಫುಟ್ ಪಾತ್ ಗಳಲ್ಲಿ ತಮ್ಮ ವಾಹನಗಳನ್ನು ಚಲಾಯಿಸುವವರ ಮೇಲೆ ಬೆಂಗಳೂರು ನಗರ ಸಂಚಾರ ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, ಇನ್ಮುಂದೆ ವಾಹನಗಳನ್ನು ಫುಟ್ ಪಾತ್ ಮೇಲೆ ಚಲಾಯಿಸುವವರ ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸಲು ಪೊಲೀಸ್ ಇಲಾಖೆ ಸಿದ್ದತೆ ನಡೆಸಿದೆ. ವಾಹನ ಸವಾರರು ಫುಟ್ ಪಾತ್ ಮೇಲೆ ವಾಹನ ಚಲಾಯಿಸಿದರೆ, ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವುದರ ಜೊತೆಗೆ ಅವರ ವಾಹನವನ್ನು ವಶಪಡಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ವಾಹನ …
Read More »ಬೆಳಗಾವಿಯಲ್ಲಿ ಡಿ. 19ರಿಂದ ಚಳಿಗಾಲ ಅಧಿವೇಶನ; ಸುವರ್ಣ ಸೌಧ ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಬೆಳಗಾವಿ: ಸುವರ್ಣ ಸೌಧದಲ್ಲಿ 10 ದಿನಗಳ ಕಾಲ ಚಳಿಗಾಲ ಅಧಿವೇಶ ನಡೆಯಲಿದೆ. ಡಿಸೆಂಬರ್ 19ರಿಂದ ಡಿ.30ರವರೆಗೆ ಚಳಿಗಾಲ ಅಧಿವೇಶನ ನಡೆಯಲಿದೆ. ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಡಿ.30ರವರೆಗೆ ಸುವರ್ಣಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಹೇಳಿದ್ದಾರೆ.ನಗರದಲ್ಲಿ ಯಾವುದೇ ಪ್ರತಿಭಟನೆ, ಗುಂಪು ಕಟ್ಟಿಕೊಂಡು ಓಡಾಡಲು ನಿಷೇಧಿಸಲಾಗಿದೆ. 10 ದಿನಗಳ ಕಾಲ ನಡೆಯುವ ಚಳಿಗಾಲದ ಅಧಿವೇಶನಕ್ಕೆ ನಗರದಲ್ಲಿ ಭರದ ಸಿದ್ಧತೆಗಳು …
Read More »ಗಂಡ ಊಟಕ್ಕೆ ಬರಲಿಲ್ಲವೆಂದು ಬೇಸರಗೊಂಡು ಆತ್ಮಹತ್ಯೆಗೆ ಶರಣಾದ ಟೆಕ್ಕಿ ಪತ್ನಿ
ಬೆಂಗಳೂರು: ಗಂಡ ಊಟಕ್ಕೆ ಬರಲಿಲ್ಲವೆಂದು ಬೇಸರಗೊಂಡು ಟೆಕ್ಕಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನೇಣಿಗೆ ಶರಣಾಗಿರುವ ಮಹಿಳೆಯನ್ನು ಸ್ವಾತಿ ಅಂತ ತಿಳಿದು ಬಂದಿದ್ದು, ಸ್ವಾತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಆಕೆ ತನ್ನ ಬಾಲ್ಯದ ಗೆಳೆಯನ ಜೊತೆಗೆ ಕಳೆದೆರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು, ಅವರ ಮದುವೆಗೆ ಇಬ್ಬರ ಮನೆಯವರು ಕೂಡ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ. ಈ ನಡುವೆ ಎರಡು ದಿನದ ಹಿಂದೆ ಮನೆಯಲ್ಲಿ ಸ್ವಾತಿಗೆ …
Read More »ಸರ್ಕಾರಿ ವಾಹನ ಮೇಲೆ ಕಲ್ಲು ತೂರಾಟ ಎಂಬ ಕಥೆ ಕಟ್ಟಿದ್ದ ಚಾಲಕನ ಬಣ್ಣ ಬಯಲು
ಬೆಳಗಾವಿ: ಇಲ್ಲಿಯ ಸುವರ್ಣ ವಿಧಾನಸೌಧ ಎದುರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವಾಗ ಮರಾಠಿ ಭಾಷಿಕರು ಕಲ್ಲು ತುರಾಟ ನಡೆಸಿದ್ದಾರೆ ಎಂಬ ಸುಳ್ಳು ಕಥೆ ಕಟ್ಟಿದ್ದ ಸರ್ಕಾರಿ ವಾಹನ ಚಾಲಕನ ಬಣ್ಣ ಬಯಲಾಗಿದ್ದು, ಕುಡಿದ ನಶೆಯಲ್ಲಿ ವಾಹನ ಅಪಘಾತಗೊಳಪಡಿಸಿ ನೈಜ ಘಟನೆಯನ್ನು ಮುಚ್ಚಿ ಹಾಕಿ ಸುಳ್ಳು ದೂರು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ಸಂಬಂಧಿಸಿದ ವಾಹನ ಚಳಿಗಾಲ ಅಧಿವೇಶನಕ್ಕಾಗಿ ಚೇತನ ಎನ್.ವಿ. ಎಂಬ ಚಾಲಕ …
Read More »SI ಪೋಸ್ಟ್ ಗೆ ಅಮ್ಮ-ಮಗಳ ಪೈಪೋಟಿ: ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ
ತೆಲಂಗಾಣ: ತೆಲಂಗಾಣದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸುವ ರೀತಿಯಲ್ಲಿ 37 ವರ್ಷದ ಮಹಿಳೆ ಮತ್ತು ಆಕೆಯ 21 ವರ್ಷದ ಮಗಳು ಪೊಲೀಸ್ ಆಯ್ಕೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರಸ್ಪರ ಪೈಪೋಟಿ ನಡೆಸಿದ್ದಾರೆ. ದರೆಲ್ಲಿ ನಾಗಮಣಿ ಅವರು ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬದವರಾಗಿದ್ದು, ಆರ್ಥಿಕವಾಗಿ ಶ್ರೀಮಂತರಲ್ಲ. ಈಕೆ ರಾಜ್ಯದ ಖಮ್ಮಂ ಜಿಲ್ಲೆಯ ನೆಲಕೊಂಡಪಲ್ಲಿ ಮಂಡಲದ ಚೆನ್ನಾರಂ ಗ್ರಾಮದವರು. ಅವರು 1999 ರಲ್ಲಿ ತೋಳ್ಳ ವೆಂಕಣ್ಣ ಎಂಬ ಕೃಷಿ ಕಾರ್ಮಿಕರನ್ನು ವಿವಾಹವಾದರು. 2005 ರಿಂದ 2006 ರ …
Read More »ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ದೇಶದ್ರೋಹಿಗಳ ರಕ್ಷಣೆ ಮಾಡುತ್ತಿದ್ದಾರೆ-ಬಿ.ಸಿ ಪಾಟೀಲ್
ಚಿತ್ರದುರ್ಗ, ಡಿಸೆಂಬರ್ 17: ಬಿಜೆಪಿ ಸರ್ಕಾರ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ದೊಡ್ಡದಾಗಿ ಮಾಡಿದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಕೃಷಿ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ. ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಮೂಲ ಕರ್ತೃಗಳು ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ತವರು ಮನೆ. ಇನ್ನು ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ …
Read More »ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಮೂಡಲಗಿ ತಾಲೂಕಿನ ತಿಗಡಿ ಗ್ರಾಮದಲ್ಲಿ ಅನ್ನಸಂತರ್ಪಣೆ
ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯ ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಮೂಡಲಗಿ ತಾಲೂಕಿನ ತಿಗಡಿ ಗ್ರಾಮದಲ್ಲಿ ಶ್ರೀ ಹನುಮಾನ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ …
Read More »ಸದ್ಯದಲ್ಲೇ ಹೊಸ ರೂಪದಲ್ಲಿ ಬರಲಿದೆ ಬೈಕ್ ಪ್ರಿಯರಯಮಹಾ RX100
ಯಮಹಾ RX100 ಮೋಟಾರ್ ಸೈಕಲ್‌ಗಳು ಸಾಕಷ್ಟು ಜನಪ್ರಿಯತೆ ಗಳಿಸಿದ್ದವು. ಬೈಕ್ ಪ್ರಿಯರಿಗೆಲ್ಲ ಈ ಮೋಟಾರ್ ಸೈಕಲ್ ಬಗ್ಗೆ ತಿಳಿದಿದೆ. ಆದರೆ ಈ ಬೈಕ್‌ಗಳ ಮಾರಾಟ ಬಹಳ ಹಿಂದೆಯೇ ಅಂದ್ರೆ ಸುಮಾರು 25 ವರ್ಷಗಳ ಹಿಂದೆ ಸ್ಥಗಿತಗೊಂಡಿದೆ. ಇದೀಗ ಅದೇ ಐಕಾನಿಕ್ ಬೈಕ್ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಹೊಸ RX100 ಲಾಂಚ್ ಅನ್ನು ಯಮಹಾ ಇಂಡಿಯಾ ಖಚಿತಪಡಿಸಿದೆ. ಕಂಪನಿಯು ಉದ್ದೇಶಪೂರ್ವಕವಾಗಿ RX100 ಹೆಸರನ್ನು ಬೇರೆ ಬೈಕ್‌ಗಳಿಗೆ ನೀಡಿಲ್ಲ. ಮತ್ತೆ …
Read More »ಕಾಲೇಜಿಗೆ ಹೋಗಿದ್ದ ಯುವತಿ; 3 ದಿನ ನಂತ್ರ ಸೇತುವೆ ಬಳಿ ಶವ ಪತ್ತೆ
ಕಲಬುರಗಿ ಜಿಲ್ಲೆಯ ಕಮಲಾಪುರ(Kamalapura, Kalaburagi) ತಾಲೂಕಿನ ಕುರಿಕೋಟಾ ಸೇತುವೆ ಬಳಿ ಯುವತಿ ಶವ ಪತ್ತೆಯಾಗಿದೆ. ಸೃಷ್ಟಿ ಮಾರುತಿ (21) ಮೃತ ಯುವತಿ. ಸೃಷ್ಟಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಡಿಸೆಂಬರ್ 13ರಿಂದ ಕಾಣೆಯಾಗಿದ್ದಳು. ಡಿಸೆಂಬರ್ 13ರಂದು ಕಾಲೇಜ್ಗೆ ಹೇಳಿ ಹೋಗಿದ್ದ ಸೃಷ್ಟಿ ಸಂಜೆಯಾದ್ರೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆ ಪೋಷಕರು ಹುಡುಕಾಟ ನಡೆಸಿದ್ದರು. ಮೃತ ಸೃಷ್ಟಿ ಮಾರುತಿ ಕಮಲಾಪುರ ತಾಲ್ಲೂಕಿನ ನಾವದಗಿ ಗ್ರಾಮದ ನಿವಾಸಿಯಾಗಿದ್ದಳು. ಇದೀಗ ಸೃಷ್ಟಿ ಸಾವಿನ ಬಗ್ಗೆ …
Read More »