ಪ್ರಸಕ್ತ(2022-23) ಸಾಲಿನ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ(ಪಿ.ಎಂ.ಇ.ಜಿ.ಪಿ) ಕಾರ್ಯಕ್ರಮದಡಿಯಲ್ಲಿ ಉತ್ಪಾದನ/ ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಎಲ್ಲಾ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ವಉದ್ಯೋಗ ಮಾಡಿಕೊಳ್ಳುವವರಿಗೆ ಪಟ್ಟಣ, ನಗರ, ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ 50. ಲಕ್ಷ ರೂ.ವರೆಗೆ ಸಾಲವನ್ನು ನೀಡಿ ಗರಿಷ್ಟ ಶೇ.25 ರಿಂದ 35 ವರೆಗೆ ಸಹಾಯಧನವನ್ನು ನೀಡಲಾಗುವುದು. ಈ ವರ್ಷದಲ್ಲಿ …
Read More »ಶಾಮನೂರು ಶಿವಶಂಕರಪ್ಪ, ಖಂಡ್ರೆಗೆ ತುರ್ತು ನೋಟಿಸ್
ಬೆಂಗಳೂರು: ‘ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎನ್.ತಿಪ್ಪಣ್ಣ ಮಹಾಸಭಾದ ಸ್ಥಾನಗಳನ್ನು ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಅವರನ್ನು ಪದಚ್ಯುತಗೊಳಿಸಬೇಕು ಮತ್ತು ಮಹಾಸಭಾದಲ್ಲಿ ಲಿಂಗಾಯತ ಪದ ಸೇರ್ಪಡೆಗೆ ತಡೆ ನೀಡಬೇಕು’ ಎಂದು ಕೋರಲಾದ ಸಿವಿಲ್ ದಾವೆಗೆ ಸಂಬಂಧಿಸಿ ಮೂರು ಜನರಿಗೆ ತುರ್ತು ನೋಟಿಸ್ ಜಾರಿ ಗೊಳಿಸಲು ಬೆಂಗಳೂರು ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. …
Read More »ಸನ್‍ಬರ್ನ್ ಫೆಸ್ಟಿವಲ್’ಗೆ ಕೊನೆಗೂ ಅನುಮತಿ ನೀಡಿದ ಗೋವಾ ಸರಕಾರ
ಪಣಜಿ: ಗೋವಾದಲ್ಲಿ ನಡೆಯಲಿರುವ ವಿಶ್ವ ಪ್ರಸಿದ್ಧ ‘ಸನ್‍ಬರ್ನ್ ಫೆಸ್ಟಿವಲ್’ಗೆ ಗೋವಾದ ಪ್ರವಾಸೋದ್ಯಮ ಇಲಾಖೆ ಅಂತಿಮವಾಗಿ ಅನುಮತಿ ನೀಡಿದೆ. ಸಂಗೀತೋತ್ಸವವು ಡಿಸೆಂಬರ್ 28 ರಿಂದ 30 ರವರೆಗೆ ಗೋವಾದ ವಾಗಾತೋರ್‍ನಲ್ಲಿ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಈ ಉತ್ಸವವನ್ನು ನಡೆಸಲು ಸಾಧ್ಯವಾಗಲಿಲ್ಲ. ಪ್ರಸಕ್ತ ವರ್ಷ ಈ ಸಂಗೀತ ಮಹೋತ್ಸವದಲ್ಲಿ ದೇಶ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಪಾಲ್ಗೊಳ್ಳುವ ಇರೀಕ್ಷೆಯಿದೆ ಎಂದೇ ಹೇಳಲಾಗಿದೆ. ಗೋವಾ ಪ್ರವಾಸೋದ್ಯಮ ಇಲಾಖೆಯು ಸನ್‍ಬರ್ನ್ ಉತ್ಸವಕ್ಕೆ …
Read More »ಗೋವಾದ ಬೆಸಿಲಿಕಾ, ಚರ್ಚ್‍ಗಳ ಜೀರ್ಣೋದ್ಧಾರಕ್ಕಾಗಿ ಕೇಂದ್ರದಿಂದ 41 ಕೋಟಿ ರೂ.ಅನುದಾನ
ಪಣಜಿ: ಓಲ್ಡ್ ಗೋವಾದ ಬೆಸಿಲಿಕಾ ಆಫ್ ಜೀಸಸ್ ಕ್ರೈಸ್ಟ್ ಮತ್ತು ಇತರ ಕೆಲವು ಚರ್ಚ್‍ಗಳ ಜೀರ್ಣೋದ್ಧಾರಕ್ಕಾಗಿ ತೀರ್ಥಯಾತ್ರೆ ಮತ್ತು ಆಧ್ಯಾತ್ಮಿಕ ಮಿಷನ್ ಯೋಜನೆಯಡಿ ಕೇಂದ್ರದಿಂದ 41.49 ಕೋಟಿ ರೂ.ಗಳ ನಿಧಿಯನ್ನು ಮಂಜೂರು ಮಾಡಲಾಗಿದೆ. ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿಯೇ ಪ್ರಸಿದ್ಧವಾಗಿರುವ ಓಲ್ಡ್ ಗೋವಾ ಚರ್ಚ್‍ಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. 2024ರಲ್ಲಿ ಓಲ್ಡ್ ಗೋವಾದಲ್ಲಿ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರ ದೇಹವನ್ನು ಪ್ರದರ್ಶಿಸಲಾಗುವುದು ಮತ್ತು ಅದಕ್ಕೂ ಮೊದಲು ಸಂಬಂಧಿತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು …
Read More »ಸಭಾಪತಿಗೆ ನನ್ನ ಹೆಸರು ಫೈನಲ್: ಬಸವರಾಜ ಹೊರಟ್ಟಿ
ಧಾರವಾಡ: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಆಡಳಿತರೂಢ ಬಿಜೆಪಿ ಪಕ್ಷದಿಂದ ನನ್ನ ಹೆಸರು ಅಂತಿಮಗೊಂಡಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸಭಾಪತಿ ಸ್ಥಾನದ ಅಭ್ಯರ್ಥಿಯಾದ ಬಗ್ಗೆ ಬಿಜೆಪಿ ಮುಖಂಡರಾದ ರವಿಕುಮಾರ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಶೀಘ್ರ ಅಧಿಕೃತ ಅಭ್ಯರ್ಥಿಯಾಗಿಯೂ ಪ್ರಕಟಣೆ ಹೊರ ಬೀಳಲಿದೆ. ಈ ಸಿಹಿ ಸುದ್ದಿ ನೀಡಿದ ರವಿಕುಮಾರ ಅವರಿಗೆ ಧನ್ಯವಾದ ತಿಳಿಸಿದ್ದೇನೆ. ಉತ್ತರ ಕರ್ನಾಟಕದ ನಮ್ಮ ಸಮಸ್ಯೆಗಳಿಗೆ ಪ್ರತಿಫಲ ಬೇಕಷ್ಟೇ. ಹೀಗಾಗಿ …
Read More »ನಮ್ಮದೆಂಬ ಭಾವ ಮೂಡಿಸುತ್ತಿದೆ ಕ್ಲಿನಿಕ್; 12 ಬಗೆಯ ಆರೋಗ್ಯ ಸೇವೆ
ಬೆಳಗಾವಿ: ನಗರ ಪ್ರದೇಶದ ಬಡ ವರ್ಗದ ಜನರಿಗೆ ವಿಶೇಷವಾಗಿ ಕಾರ್ಮಿಕ ವರ್ಗಕ್ಕೆ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ದೊರೆಯಲಿ ಎಂಬ ಉದ್ದೇಶದಿಂದ ಆರಂಭ ಮಾಡಿರುವ ನಮ್ಮ ಕ್ಲಿನಿಕ್‌ಗೆ ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನರಲ್ಲಿ ಸಹ ಇದು ನಮ್ಮ ಕ್ಲಿನಿಕ್ ಎಂಬ ಭಾವನೆ ಬರುತ್ತಿದೆ. ಈ ನಮ್ಮ ಕ್ಲಿನಿಕ್‌ನಲ್ಲಿ 12 ಬಗೆಯ ಆರೋಗ್ಯ ಸೇವೆಗಳು ದೊರೆಯಲಿವೆ. ಗರ್ಭಿಣಿ-ಶಿಶು ಆರೈಕೆ, ಮಕ್ಕಳ ಚಿಕಿತ್ಸೆ, ಕುಟುಂಬ ಕಲ್ಯಾಣ ಸೇವೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, …
Read More »ರಾಮನಗರ ಜೆಡಿಎಸ್ ಅಭ್ಯರ್ಥಿಯಾಗಿ ‘ನಿಖಿಲ್ ಕುಮಾರಸ್ವಾಮಿ’ ಘೋಷಣೆ
ಬೆಂಗಳೂರು: ರಾಮನಗರದಲ್ಲಿ ನಡೆಯುತ್ತಿರುವಂತ ಶ್ರೀನಿವಾಸ ಕಲ್ಯಾಣದ ಬಳಿಕ, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದರು. ಈ ಬೆನ್ನಲ್ಲೇ ರಾಮನಗರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರ ಹೆಸರನ್ನು ಘೋಷಿಸಲಾಗಿದೆ. ಇಂದು ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವಂತ ಶಾಸಕ ಅನಿತಾ ಕುಮಾರಸ್ವಾಮಿಯವರು ( MLA Anitha Kumaraswamy ), ರಾಮನಗರದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯಲಿದ್ದಾರೆ. ನಮ್ಮ …
Read More »ನೇಕಾರರಿಗೆ ಮಗ್ಗ ನಡೆಸಲು ಸಿಗುತ್ತೆ ಉಚಿತ ವಿದ್ಯುತ್; ಸಿಎಂ
ಬೆಂಗಳೂರು: ಪವರ್ ಲೂಮ್ ನಲ್ಲಿ ಕಾರ್ಯನಿರ್ವಹಿಸುವ ಕೂಲಿಕಾರರಿಗೆ ನೇಕಾರ ಸಮ್ಮಾನ್ ಯೋಜನೆಯನ್ನು ವಿಸ್ತರಿಸಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ನೇಕಾರರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭ, ನೇಕಾರರ ವಿವಿಧ ಬೇಡಿಕೆಗಳ ಕುರಿತು ಚರ್ಚೆ ನಡೆಸಿ ಹಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ನೇಕಾರರ ಜನವಸತಿ ಪ್ರದೇಶದಲ್ಲಿರುವ ನೇಕಾರರಿಗೆ Occupancy certificate ನೀಡಲು ತೀರ್ಮಾನಿಸಲಾಗಿದೆ. ಮನೆಯಲ್ಲಿಯೇ ಉದ್ಯೋಗ ನಡೆಸುತ್ತಿರುವ ನೇಕಾರರಿಕೆಯನ್ನು ‘ಗುಡಿ ಕೈಗಾರಿಕೆ’ …
Read More »143 ಅಂಗಾಂಗ ದಾನ ಮಾಡಿದ ಕರ್ನಾಟಕಕ್ಕೆ 2ನೇ ಸ್ಧಾನ
ಬೆಂಗಳೂರು : 143 ಅಂಗಾಂಗ ದಾನ ಮಾಡಿದ ಕರ್ನಾಟಕಕ್ಕೆ 2ನೇ ಸ್ಧಾನ ಪಡೆದಿದ್ದು, ನಿಜಕ್ಕೂ ರಾಜ್ಯಕ್ಕೆ ಹೆಮ್ಮೆಯ ವಿಷಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ ತೆಲಂಗಾಣ ನಂತರ ದಕ್ಷಿಣದ ರಾಜ್ಯಗಳಲ್ಲಿ ಅಂಗಾಂಗ ದಾನದಲ್ಲಿ2022 ಡಿಸೆಂಬರ್ 14 ವರೆಗಿನ ದಾಖಲೆ ಸಂಖ್ಯೆಯ ಆಧಾರದ ಮೇಲೆ 143 ಅಂಗಾಂಗಗಳೊಂದಿಗೆ ಎರಡನೇ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ. ಇದು ನಮ್ಮ ರಾಜ್ಯಕ್ಕೆ ಹೆಮ್ಮೆಯ ವಿಷಯ ಎಂದು ಆರೋಗ್ಯ …
Read More »ಗಡಿ ವಿವಾದ: ನಾಗ್ಪುರ ಅಧಿವೇಶನದ ಬಳಿಕ ಬೆಳಗಾವಿಗೆ ಭೇಟಿ ನೀಡುತ್ತೇವೆ: ಮಹಾರಾಷ್ಟ್ರ ಸಚಿವರು
ಕರ್ನಾಟಕದ ಬೆಳಗಾವಿಯಲ್ಲಿ ಮತ್ತು ಮಹಾರಾಷ್ಟ್ರದ ನಾಗ್ಪುರದಲ್ಲಿ ಚಳಿಗಾಲದ ಅಧಿವೇಶನಗಳು ಪೂರ್ಣಗೊಂಡ ನಂತರ ಬೆಳಗಾವಿಗೆ ಭೇಟಿ ನೀಡುತ್ತೇವೆಂದು ಮಹಾರಾಷ್ಟ್ರ ಸಚಿವರು ಹೇಳಿದ್ದಾರೆ. ಬೆಳಗಾವಿ: ಕರ್ನಾಟಕದ ಬೆಳಗಾವಿಯಲ್ಲಿ ಮತ್ತು ಮಹಾರಾಷ್ಟ್ರದ ನಾಗ್ಪುರದಲ್ಲಿ ಚಳಿಗಾಲದ ಅಧಿವೇಶನಗಳು ಪೂರ್ಣಗೊಂಡ ನಂತರ ಬೆಳಗಾವಿಗೆ ಭೇಟಿ ನೀಡುತ್ತೇವೆಂದು ಮಹಾರಾಷ್ಟ್ರ ಸಚಿವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ ಅವರು, ಉಭಯ ರಾಜ್ಯಗಳ ಅಧಿವೇಶನದ ಬಳಿಕ ಬೆಳಗಾವಿಗೆ ಭೇಟಿ ನೀಡಿ ಮಹಾರಾಷ್ಟ್ರ ಪರ ನಾಯಕರನ್ನು ಭೇಟಿ ಮಾಡುತ್ತೇವೆಂದು …
Read More »