ಗೋಕಾಕ: ದೇಶಾದ್ಯಂತ ರಾಜಕೀಯ ಚರ್ಚೆ ಜೋರಾಗಿದೆ ಇನ್ನು ಹಲವು ಜನ ಅಭಿಮಾನಿಗಳು ಅವರ ಅವರ ಅಭಿಮಾನಿ ಬಳಗದ ಫೋಟೋ ಗಳನ್ನಾ ಹಿಡಿದು ಜಾತ್ರೆ ಗಳಲ್ಲಿ ಪೂಜೆ ಸಲ್ಲಿಸುವುದು ಹಾಗೂ ಅನೇಕ ಹರಕೆ ಗಳನ್ನ ಹೊತ್ತಿರುವ ವಿಡಿಯೋ ಹಾಗೂ ಫೋಟೋ ಗಳನ್ನ ನೀವು ನೋಡಿರ್ತಿರಿ ಆದ್ರೆ ಇಲ್ಲೊಬ್ಬ ಗೋಕಾಕ ತಾಲೂಕಿನ ಸುದ್ದಿ ಕುಳ್ಳರ ಸ್ವಾಮಿ ಎಂಬ ಅಯ್ಯಪ್ಪ ಸ್ವಾಮಿ ಮಾಲಧಾರಿ ಭಕ್ತ ಜಾರಕಿಹೊಳಿ ಕುಟುಂಬದ ಎಲ್ಲ ಸದಸ್ಯರು ಇರುವ ಫೋಟೋ …
Read More »ಎಸ್‌ಸಿ- ಎಸ್‌ಟಿ ಸಮುದಾಯಗಳಿಗೆ ಮೀಸ ಲಾತಿ ಪ್ರಮಾಣ ಹೆಚ್ಚಳಕ್ಕೆ ಸರಕಾರಿ ಆದೇಶದ ಬಳಿಕ ಈಗ ಉಭಯ ಸದನಗಳಲ್ಲಿ ಮಸೂದೆ ಮಂಡಿಸಲು ಸರಕಾರ ಮುಂದಾಗಿದೆ
ಬೆಳಗಾವಿ ಎಸ್‌ಸಿ- ಎಸ್‌ಟಿ ಸಮುದಾಯಗಳಿಗೆ ಮೀಸ ಲಾತಿ ಪ್ರಮಾಣ ಹೆಚ್ಚಳಕ್ಕೆ ಸರಕಾರಿ ಆದೇಶದ ಬಳಿಕ ಈಗ ಉಭಯ ಸದನಗಳಲ್ಲಿ ಮಸೂದೆ ಮಂಡಿಸಲು ಸರಕಾರ ಮುಂದಾಗಿದೆ. ಸೋಮವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಂಡಿದ್ದು, ಎಸ್‌ಸಿ-ಎಸ್‌ಟಿ ಮೀಸಲಾತಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಸಹಿತ ಮೂರು ಪ್ರಮುಖ ಮಸೂದೆಗಳನ್ನು ಈ ವಾರದಲ್ಲೇ ಮಂಡಿಸಲು ನಿರ್ಧರಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಮೊದಲ …
Read More »ಇಂದು ಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ
ಬೆಳಗಾವಿ: ವಿಧಾನ ಪರಿಷತ್ ಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸೋಮವಾರ ಪರಿಷತ್ ಬಿಜೆಪಿ ಸದಸ್ಯರು ಸಭೆ ನಡೆಸಿದರು. ಪರಿಷತ್ ಸಭಾಂಗಣದ ಪಕ್ಕದ ಕೊಠಡಿಯಲ್ಲಿ ಸಭೆ ನಡೆಸಿದ ಸದಸ್ಯರು, ಬುಧವಾರ ನಡೆಯಲಿರುವ ಸಭಾಪತಿ ಚುನಾವಣೆ ಹಾಗೂ ಮಂಗಳವಾರ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಕುರಿತಂತೆ ಚರ್ಚೆ ನಡೆಸಿದರು. ಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಬಸವರಾಜ ಹೊರಟ್ಟಿ ಮಂಗಳವಾರ ಬೆಳಗ್ಗೆ 11 ಗಂಟೆಯೊಳಗೆ ನಾಮಪತ್ರ ಸಲ್ಲಿಕೆ ಮಾಡುವ ಕುರಿತು ನಿರ್ಧರಿಸಲಾಯಿತು. …
Read More »40%ಭ್ರಷ್ಟಾಚಾರ, ಬೆಳಗಾವಿ, ಅಂತಾರಾಜ್ಯ ಗಡಿ ವಿವಾದ, ವೋಟರ್ ಐಡಿ ಹಗರಣ, ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ತೀರ್ಮಾನ
ಬೆಳಗಾವಿ: ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಸ್ತ್ರವಾಗಿರಿಸಿಕೊಂಡು ವಿಧಾನ ಮಂಡಲದ ಉಭಯ ಸದನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ಶಾಸಕಾಂಗ ಪಕ್ಷ ತೀರ್ಮಾನಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಲವತ್ತು ಪರ್ಸೆಂಟ್ ಭ್ರಷ್ಟಾಚಾರ, ಬೆಳಗಾವಿ ಗಡಿ ವಿವಾದ, ವೋಟರ್ ಐಡಿ ಹಗರಣ, ಅಂತಾರಾಜ್ಯ ಗಡಿ ವಿವಾದ ಮತ್ತಿತರ ವಿಚಾರಗಳನ್ನು ಪ್ರಮುಖವಾಗಿ ಕೈಗೆತ್ತಿಕೊಳ್ಳಲು …
Read More »ಹತ್ತಿ ಕಟಾವಿಗೂ ಕೊಡಬೇಕು ಪೊಲೀಸರ ರಕ್ಷಣೆ!
ರಾಯಚೂರು: ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾದುದು. ಸಾರ್ವಜನಿಕವಾಗಿ ಎಷ್ಟೇ ಟೀಕೆ ವ್ಯಕ್ತಪಡಿಸಿದರೂ, ಪೊಲೀಸರಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವಿವಿಧ ಸಂದರ್ಭಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಿ, ಭದ್ರತೆ ಒದಗಿಸುವ ಕೆಲಸ ಮಾಡುತ್ತಾರೆ. ಗಣ್ಯ ವ್ಯಕ್ತಿಗಳ ಭೇಟಿ, ಸಮಾವೇಶ, ಗಲಭೆ ಮುಂತಾದ ಸಂದರ್ಭದಲ್ಲಿ ಅಗತ್ಯಕ್ಕನುಗುಣವಾಗಿ ಅಗತ್ಯವಿದ್ದಾಗ ಸೂಕ್ತ ಭದ್ರತೆ ಪೊಲೀಸ್ ಇಲಾಖೆಯಿಂದ ಲಭಿಸುತ್ತದೆ. ಆದರೆ ಇದೀಗ ರಾಯಚೂರಿ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರೊಬ್ಬರು ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಿ …
Read More »2ರಡೂವರೆ ತಿಂಗಳು ಹಸುಗೂಸಿನೊಂದಿಗೆ ಅಧಿವೇಶನಕ್ಕೆ ಬಂದ ಶಾಸಕಿ!
ಮಹಾರಾಷ್ಟ್ರ: ತನ್ನ ಎರಡೂವರೆ ತಿಂಗಳು ಹಸುಗೂಸಿನೊಂದಿಗೆ ಎನ್‌ಸಿಪಿ ಶಾಸಕಿ ಸರೋಜ್ ಬಾಬುಲಾಲ್ ಅಹಿರ್ ಅವರು ನಾಗಪುರದಲ್ಲಿ ವಿಧಾನಮಂಡಳದ ಅಧಿವೇಶನಕ್ಕೆ ಹಾಜರಾದ ಪ್ರಸಂಗ ನಡೆಯಿತು. ಎನ್‌ಸಿಪಿ ಶಾಸಕಿ ಸರೋಜ್ ಬಾಬುಲಾಲ್ ಅಹಿರ್ ಅವರು ಸೆ.30ರಂದು ಮಗುವಿಗೆ ಜನ್ಮ ನೀಡಿದ್ದರು. ಇಂದಿನಿಂದ(ಸೋಮವಾರ) ಅಧಿವೇಶನ ಶುರುವಾಗಿದ್ದು, ಪುಟ್ಟ ಮಗುವಿನ ಜತೆ ಆಗಮಿಸುವ ಮೂಲಕ ಗಮನ ಸೆಳದರು. ಈ ಕುರಿತು ಪ್ರತಿಕ್ರಿಯಿಸಿದ ಶಾಸಕಿ, ‘ಕರೊನಾ ಹಿನ್ನೆಲೆ ಕಳೆದ ಎರಡೂವರೆ ವರ್ಷಗಳಿಂದ ನಾಗ್ಪುರದಲ್ಲಿ ಯಾವುದೇ ಅಧಿವೇಶನ ನಡೆದಿರಲಿಲ್ಲ. ನಾನೀಗ …
Read More »ಶಿಕ್ಷಕನಿಂದ ಹಲ್ಲೆ, ವಿದ್ಯಾರ್ಥಿ ಸಾವು
ಗದಗ, ಡಿಸೆಂಬರ್, 19: ಅತಿಥಿ ಶಿಕ್ಷಕನೊಬ್ಬ 10 ವರ್ಷದ ವಿದ್ಯಾರ್ಥಿಯ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ. ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಎಂಬಾತ 10 ವರ್ಷದ ವಿದ್ಯಾರ್ಥಿ ಭರತ್ ಮೇಲೆ ಹಲ್ಲೆ ನಡೆಸಿದ್ದಾನೆ. ಶಿಕ್ಷಕನಿಂದ ಏಟು ತಿಂದ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದ. ನಂತರ ಆತನನ್ನು …
Read More »ರಾಯಣ್ಣನ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿದ ಸಿದ್ದರಾಮಯ್ಯನವರು
ಅಥಣಿಯ ಹಿರಿಯ ಮುಖಂಡ ಎಸ್ ಕೆ ಬುಟಾಳಿ ಅವರು ಕೊಡುಗೆಯಾಗಿ ನೀಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾರ್ಪಣೆಗೊಳಿಸಿದರು. ಪಟ್ಟಣದ ವಿಜಯಪೂರ ರಸ್ತೆಗೆ ಹೊಂದಿಕೊಂಡ ಮೂರ್ತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿದ್ದರಾಮಯ್ಯನವರು ರಾಯಣ್ಣನ ದೇಶಪ್ರೇಮ, ರಾಜನಿಷ್ಠೆಯನ್ನು ನಮ್ಮ ಯುವಜನತೆ ಮೈಗೂಡಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಕೊಡುಗೆಯನ್ನಾಗಿ ನೀಡಿದ ಬುಟಾಳಿ ಅವರ ಕೊಡುಗೆ ಈ ನಾಡಿಗೆ ದೊಡ್ಡದು ಎಂದರು. ಅವರು ಮುಂದೆ ಮಾತನಾಡುತ್ತಾ, ಮಹಾಜನ ವರದಿ ಪ್ರಕಾರ ಬೆಳಗಾವಿ …
Read More »ಸರಕಾರದ ವಿರುದ್ಧ ಗುಡುಗಿದ ಸಾರಿಗೆ ನೌಕರರು
ಉತ್ತರ ಕರ್ನಾಟಕದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿವೃತ್ತ ನೌಕರರ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಒತ್ತಾಯಿಸಿ ಸೋಮವಾರ ಸುವರ್ಣ ವಿಧಾನಸೌಧದ ಎದುರಿನ ಬಸ್ತವಾಡ ಗ್ರಾಮದಲ್ಲಿ ಸಾರಿಗೆ ಸಂಸ್ಥೆ ನೌಕರರು ಮತ್ತು ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿ ಮಹಾ ಮಂಡಳ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ವೇಳೆಯಲ್ಲಿ ಮಾಸಿಕ 10 ಸಾವಿರ ರೂ. ಪೆನಶನ್ ಮಂಜೂರು ಮಾಡುವುದಾಗಿ ಹೇಳಿ ಇಲ್ಲಿಯವರಗೆ ಮಂಜೂರು ಮಾಡಿಲ್ಲ. ಕೂಡಲೇ ಅದನ್ನು ಮಂಜೂರು …
Read More »ಮಹೇಶ್ ಕುಮಟಳ್ಳಿ ಪುತ್ರ ರಜತ್ ಹಾಗೂ ಮೃಣಾಲಿ ಮದುವೆ ಸಮಾರಂಭದಲ್ಲಿ ಭಾಗಿಯಾದ ರಾಜಕೀಯ ಮುಖಂಡರು
ಸಿ ಎಂ ಬೊಮ್ಮಾಯಿ, ಮಾಜಿ ಸಿ ಎಂ ಯಡಿಯೂರಪ್ಪ, ಸಚಿವ ಆರ್ ಅಶೋಕ್, ಗೋವಿಂದ ಕಾರಜೋಳ, ಸಿಸಿ ಪಾಟೀಲ್, ವಚನಾನಂದ ಸ್ವಾಮೀಜಿ ಭಾಗಿಯಾಗಿ ಅಥಣಿಯ ಪಟ್ಟಣದ ಹೊರವಲಯದಲ್ಲಿರುವ ಕುಮಟಳ್ಳಿ ಫಾರ್ಮ್ ಹೌಸ್ ನಲ್ಲಿ ಆರತಕ್ಷತೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದರು. ಶಾಸಕ ಮಹೇಶ್ ಕುಮಟಳ್ಳಿ ಪುತ್ರ ರಜತ್ ಹಾಗೂ ಮೃಣಾಲಿ ಮದುವೆ ಸಮಾರಂಭದಲ್ಲಿ ಭಾಗಿಯಾದ ರಾಜಕೀಯ ಮುಖಂಡರು
Read More »