Breaking News

ನಮ್ಮ ತಾಲೂಕಾ ಆಡಳಿತಕ್ಕೆ ನಾಚಿಗೆ ಆಗಬೇಕು, ತಹಶೀಲ್ದಾರರ ಏನು ಕಣ್ಮುಚ್ಚಿ ಕುಳಿತಿದಿರಾ: ಬಸನಗೌಡ ಪಾಟೀಲ

ಖಾನಾಪೂರ ತಾಲೂಕಿನ ತೋಲಗಿ ಗ್ರಾಮದಲ್ಲಿ ಗಂಟು ರೋಗ ಬಾಧೆಯಿಂದ ಮತ್ತೊಂದು ಜಾನುವಾರು ಬಲಿ, ಶಂಕರ್ ದೊಡ್ಡಪ್ಪನವರ ಎಂಬುವರ 70000 ರೂಪಾಯಿ ಕಿಮ್ಮತ್ತಿನ ಆಕಳು ಗಂಟು ರೋಗ ಬಾಧೆಯಿಂದ ಮರಣಹೊಂದಿತ್ತು. ಹೌದು ಖಾನಾಪೂರ ತಾಲೂಕಿನಲ್ಲಿ ಇತ್ತಿಚಿನ ದಿನಗಳಲ್ಲಿ ಗಂಟು ರೋಗ ಬಾಧೆಯಿಂದ ಜಾನುವಾರು ಮರಣಹೊಂದುತ್ತಿವೆ. ಸರಿಯಾದ ಚಿಕಿತ್ಸೆ ಕಾಣದೇ ಜಾನುವಾರು ಮರಣ ಹೊಂದುತ್ತಿವೆ ಅದರಲ್ಲಿ ಪಶು ವೈದ್ಯರ ಕೊರತೆ ಕೂಡ ಎದ್ದು ಕಾಣುತ್ತಿದ್ದು ಕೇವಲ ಸಹಾಯಕ ಅಧಿಕಾರಿ ಇಲ್ಲಿ ವೈದ್ಯನಂತೆ ಚಿಕಿತ್ಸೆ …

Read More »

ಇಂದು  ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆ: ಆರ್ ಅಶೋಕ

ಇಂದು  ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆ ನಡೆಯಲಿದೆ, ನಾನು ಹಾಗು ಸುಧಾಕರ್ ನೇತೃತ್ವದಲ್ಲಿ ಸಭೆ ಜರುಗಿಸಲಾಗುವದು ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು. ಅವರು ಇಂದು ಸುವರ್ಣಸೌಧ ಮುಂಭಾಗದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ವಿದೇಶದಲ್ಲಿ ಕೊರೊನಾ ಹೆಚ್ಚಳವಾಗಿದ್ದರಿಂದ ರಾಜ್ಯದಲ್ಲೂ ಸಹ ಮುನ್ನೆಚ್ಚರಿಕೆ ಕ್ರಮ ಜರುಗಿಸಲು ಆರೋಗ್ಯ ಸಚಿವ ಕೆ ಸುಧಾಕರ ಒಳಗೊಂಡು ಅಧಿಕಾರಿಗಳು ಮತ್ತು ಎಕ್ಸಪರ್ಟ ಜೋತೆ ಸಭೆ ಜರುಗಿಸಿ ಮುಂದಿನ ಕ್ರಮ ಕೈಕೋಳ್ಳಲಾಗುವದು ಎಂದರು. ಜನರು ಯಾವುದೇ …

Read More »

ಇಬ್ಬರು ಯುವಕರನ್ನು‌ ಕೊಚ್ಚಿ ಕೊಲೆ

ಬೆಳಗಾವಿ: ರಾತ್ರಿ ಕ್ರಿಕೆಟ್ ಆಟ ಆಡಿ ಹೋಗುವಾಗ ಇಬ್ಬರು ಯುವಕರನ್ನು‌ ಕೊಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಶಿಂಧೋಳ್ಳಿ ಗ್ರಾಮದಲ್ಲಿ ರವಿವಾರ(ಡಿ. 25) ರಾತ್ರಿ ನಡೆದಿದೆ. ಶಿಂಧೋಳ್ಳಿ ಗ್ರಾಮದ ಬಸವರಾಜ ಮಾರುತಿ ಬೆಳಗಾಂವಕರ(24) ಹಾಗೂ ಗಿರೀಶ ಯಲ್ಲಪ್ಪ ನಾಗುನ್ನವರ(24) ಮೃತಪಟ್ಟ ಯುವಕರು.   ರವಿವಾರ ರಾತ್ರಿ ಕ್ರಿಕೆಟ್ ಆಡಿ ಹೊರಟ ಯುವಕರನ್ನು ಅಪರಿಚಿತರು ಬಂದು ಹೊಡೆದಿದ್ದು, ಈ ಪರಿಣಾಮ ಬಸವರಾಜ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಿರೀಶನನ್ನು ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ …

Read More »

ಉಪವಾಸ ಸತ್ಯಾಗ್ರಹ ನಿರತ ಸಾರಿಗೆ ನೌಕರರನ್ನು ರಾತ್ರಿ ಸಮಯ ಏಕಾಏಕಿ ಹೊತ್ತೊಯ್ದ ಪೊಲೀಸರು

ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುವರ್ಣ ವಿಧಾನಸೌಧ ಬಳಿಯ ಬಸ್ತವಾಡ ಗ್ರಾಮದಲ್ಲಿ ಸಾರಿಗೆ ನೌಕರರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ವೇಳೆ ರವಿವಾರ ಪೊಲೀಸರು ಏಕಾಏಕಿ ಬಂದು‌ ಉಪವಾಸ ನಿರತ 14 ಜನರನ್ನು ಬಲವಂತವಾಗಿ ಅಲ್ಲಿಂದ ಕರೆದೊಯ್ದಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.   ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ರವಿವಾರ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಮುಷ್ಕರ ಮೊಟಕುಗೊಳಿಸುವಂತೆ ಪೊಲೀಸರು ಹೇಳಿದ್ದಾರೆ. ಆದರೆ …

Read More »

ರಾಹುಲ್‌ ಯಾತ್ರೆ ತಡೆಗೆ ಕೋವಿಡ್ ನೆಪ: ಸತೀಶ್‌ ಜಾರಕಿಹೊಳಿ

ಬೆಳಗಾವಿ: ದೇಶದಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ “ಭಾರತ್‌ ಜೋಡೋ ಯಾತ್ರೆ’ ತಡೆಯಲು ಬಿಜೆಪಿ ಮತ್ತೆ ಕೊರೊನಾ ಬಳಕೆ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಆರೋಪಿಸಿದರು.   ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್‌ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದರಲ್ಲಿ ಮುಖ್ಯವಾಗಿ “ಭಾರತ ಜೋಡೋ ಯಾತ್ರೆ’ ಅಭೂತಪೂರ್ವವಾಗಿ ಮುನ್ನುಗ್ಗುತ್ತಿದೆ. ಇದನ್ನು ಸಹಿಸಿಕೊಳ್ಳದ ಬಿಜೆಪಿ ಅದನ್ನು ತಡೆಯಲು ಕೊರೊನಾ ನೆಪ ಹೇಳುತ್ತಿದೆ …

Read More »

ಬೊಮ್ಮಾಯಿ ಸೋಮವಾರ ದಿಢೀರ್‌ ದಿಲ್ಲಿಗೆ, ವಿಸ್ತರಣೆಯೋ, ಸೇರ್ಪಡೆಯೋ?

ಬೆಂಗಳೂರು: ವರಿಷ್ಠರ ಬುಲಾವ್‌ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನದ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ದಿಢೀರ್‌ ದಿಲ್ಲಿಗೆ ತೆರಳುತ್ತಿದ್ದು, ಸಂಪುಟ ವಿಸ್ತರಣೆ ಸುದ್ದಿಗೆ ರೆಕ್ಕೆಪುಕ್ಕ ಸಿಕ್ಕಂತಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 6 ಮಂದಿ ಸಂಕ್ರ ಮಣದ ವೇಳೆಗೆ ಸಚಿವರಾಗಲಿದ್ದಾರೆ ಎನ್ನಲಾಗಿದೆ. ಅಧಿವೇಶನ ಮುಗಿದ ಬಳಿಕ ಜ. 2 ಅಥವಾ 3ರಂದು ಮುಖ್ಯಮಂತ್ರಿ ದಿಲ್ಲಿಗೆ ಹೋಗುವ ನಿರೀಕ್ಷೆಯಿತ್ತು. ಈಗ ದಿಢೀರ್‌ ಬುಲಾವ್‌ ಬಂದಿರುವ ಹಿನ್ನೆಲೆಯಲ್ಲಿ ತುರ್ತಾಗಿ ದಿಲ್ಲಿಗೆ ತೆರಳುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ …

Read More »

ಉರುಳಿದ ಗಾಲಿಗೆ ಸಿಲುಕುವವರು ಯಾರು?

ಗಾಲಿ ಒಂದು ಸುತ್ತು ಉರುಳಿದೆ. ಗಾಲಿ ರಭಸ ಪಡೆದು ಎದುರಾಳಿಗಳನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ! ನಿರೀಕ್ಷೆಯಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಿಸಿದ್ದಾರೆ. ಅವರ ಈ ಉದ್ದೇಶದಲ್ಲೇ ಎದುರಾಳಿಗಳ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬುದು ಅಡಗಿದಂತಿದೆ. ಬಿಜೆಪಿಯನ್ನು ಅಧಿಕಾರದಲ್ಲಿ ಕೂರಿಸಲು ಅಷ್ಟೆಲ್ಲ ದುಡಿದರೂ ಪಕ್ಷದ ಸರಕಾರದಿಂದಲೇ ತಮಗೆ ಅನ್ಯಾಯ ವಾಗಿದೆ. ಸರಕಾರದ ಏಜೆನ್ಸಿಗ ಳಿಂದ ತಮಗೆ ಸಂಕಷ್ಟ ತಪ್ಪಲಿಲ್ಲ ಎಂಬ ರೆಡ್ಡಿ ಅವರ ಆಕ್ರೋಶ ಬಿಜೆಪಿ …

Read More »

ಸರಕಾರದ ವಿವಿಧ 44 ಇಲಾಖೆಗಳಲ್ಲಿ 2.58 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ

ಬೆಂಗಳೂರು: ಸರಕಾರದ ವಿವಿಧ 44 ಇಲಾಖೆಗಳಲ್ಲಿ 2.58 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷದಲ್ಲಿ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿರುವುದಾಗಿ ಹೇಳಿರುವುದು ಹೊಸ ಭರವಸೆ ಮೂಡಿಸಿದೆ.   ಗಮನಾರ್ಹ ವಿಚಾರವೆಂದರೆ ಪ್ರತಿನಿತ್ಯ ಜನರೊಂದಿಗೆ ಹೆಚ್ಚು ಒಡನಾಡಬೇಕಾದ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಕಂದಾಯ, ಗೃಹ ಇಲಾಖೆಗಳಲ್ಲೇ ಹೆಚ್ಚು ಹುದ್ದೆಗಳು ಖಾಲಿ ಇವೆ. ಕೆಲವು ತಿಂಗಳಲ್ಲಿ ಒಂದಿಷ್ಟು ನೇಮಕಾತಿ ಪ್ರಕ್ರಿಯೆಗಳು ನಡೆದಿದ್ದರೂ, …

Read More »

ಬೆಳಗಾವಿ: ಸರ್ಕಾರಿ ನೌಕರರ ನಿಯೋಜನೆ ನಿಯಮಗಳು ಇನ್ನಷ್ಟು ಕಠಿಣ- ಸಿಎಂ ಬೊಮ್ಮಾಯಿ

ಬೆಳಗಾವಿ, : ಸರ್ಕಾರಿ ಅಧಿಕಾರಿಗಳು ಮತ್ತು ನೌಕರರನ್ನು ಅನ್ಯ ಇಲಾಖೆಗಳಿಗೆ ನಿಯೋಜಿಸುವ ಸರ್ಕಾರದ ಕ್ರಮವನ್ನು ಅಧಿಕಾರಿ ಹಾಗೂ ನೌಕರರು ಪ್ರಭಾವ ಬಳಸಿ ಅನಗತ್ಯವಾಗಿ ಇತರೆ ಇಲಾಖೆಗಳಿಗೆ ನಿಯೋಜನೆಗೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ನಿಯೋಜನೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಸಿಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.   ವಿಧಾನ ಪರಿಷತ್‍ನಲ್ಲಿ ಶಾಸಕ ಮಂಜುನಾಥ ಭಂಡಾರಿಯವರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು. ಸರ್ಕಾರಿ ನೌಕರರು ನಿಯೋಜನೆ ಮೇರೆಗೆ ಅನ್ಯ ಇಲಾಖೆ ತೆರಳವುದರಿಂದ ಅನೇಕ ತೊಂದರೆಗಳು …

Read More »

ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆ ಜಗದೀಶ್ ಶೆಟ್ಟರ್ ಹೇಳಿದ್ದೇನು?

ಧಾರರವಾಡ: ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ ಬಗ್ಗೆ ನಮ್ಮ ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೋ ಎಂಬುದನ್ನು ಕಾದು ನೋಡಬೇಕಾಗಿದೆ ಎಂಬುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಪಕ್ಷ ಈ ಬಗ್ಗೆ ಏನು ತೀರ್ಮಾನ ಕೈಗೊಳ್ಳುತ್ತದೋ ಗೊತ್ತಿಲ್ಲ. ಈ ಬಗ್ಗೆ ಪಕ್ಷದ ವೇದಿಕೆಯಲ್ಲೇ ನಾವು ಚರ್ಚೆ ಮಾಡುತ್ತೇವೆ ಎಂದರು. ನಮ್ಮ …

Read More »