ನಡೆಯುವ ಅಧಿವೇಶನದ ಸಮಯವನ್ನು ಇಂದೆ ಚರ್ಚೆಗೆ ತಗೆದುಕೋಳ್ಳಲಾಗುವದು ಎಂದು ಶಾಸಕ ಎ ಎಸ್ ನಡಹಳ್ಳಿ ಹೇಳಿದರು. ಅವರು ಇಂದು ಸುವರ್ಣಸೌಧದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ನಾಳೆ ಒಂದು ದಿನ ಅಧಿವೇಶನ ಮೊಟಕು ಆಗಲಿದೆ, ಅಮಿತ್ ಶಾ ಬರುವಿಕೆಗಾಗಿ ಅಲ್ಲಾ ಹಾಗಾದರೆ ನಾಳೆ ವಿಜಯಪುರದಲ್ಲಿ ಕಾಂಗ್ರೆಸ್ ಸಮಾವೇಶವಿದೆ. ನಾಳಿನ ಸಮಯ ಇವತ್ತೇ ಚರ್ಚೆಗೆ ತೆಗೆದುಕೊಳ್ತಾರೆ ನಾಳಿನ ಸಮಯ ಇವತ್ತು ಯುಟಿಲೈಸ್ ಮಾಡಿಕೊಳ್ತೇವೆ ಎಂದುಬಿಜೆಪಿ ಶಾಸಕ ನಡಹಳ್ಳಿ ಹೇಳಿದರು. ನಿನ್ನೆ ಉತ್ತರಕರ್ನಾಟಕದ ಸಮಸ್ಯೆ ಆಗಬೇಕಿತ್ತು, …
Read More »ಮುಂಬಯಿ ಯಾರಪ್ಪನದ್ದೂ ಅಲ್ಲ, ಮಹಾರಾಷ್ಟ್ರದ್ದು.; ಫಡ್ನವಿಸ್ ಕಿಡಿ
ನಾಗಪುರ : ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮುಂಬೈ ರಾಜ್ಯಕ್ಕೆ ಸೇರಿದ್ದು ಮತ್ತು ಯಾರಪ್ಪನದ್ದೂ ಅಲ್ಲ ಎಂದು ಬುಧವಾರ ಹೇಳಿ, ಎರಡು ರಾಜ್ಯಗಳ ನಡುವಿನ ಗಡಿ ವಿವಾದದ ನಡುವೆ ಕರ್ನಾಟಕದ ಕೆಲ ನಾಯಕರ ಟೀಕೆಗಳನ್ನು ಬಲವಾಗಿ ಖಂಡಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಫಡ್ನವಿಸ್, ರಾಜ್ಯದ ಭಾವನೆಗಳನ್ನು ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಲಾಗುವುದು ಎಂದರು. ಸದನದಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ …
Read More »ಕ್ರಷರ್ ಬಂದ್: ಉದ್ಯಮ, ಕಾರ್ಮಿಕರಿಗೆ ತಟ್ಟಿದ ಬಿಸಿ!
ಕಾರ್ಕಳ/ಉಡುಪಿ: ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಂಬಂಧಿಸಿದ ನಿಯಮ ಗಳಿಗೆ ತಿದ್ದುಪಡಿ ಆಗ್ರಹಿಸಿ ರಾಜ್ಯದೆಲ್ಲೆಡೆ ಕ್ರಷರ್ ಘಟಕಗಳು ವಾರದಿಂದ ಚಟುವಟಿಕೆ ಸ್ಥಗಿತಗೊಳಿಸಿವೆ. ಜಲ್ಲಿ, ಎಂಸ್ಯಾಂಡ್ ಕೊರತೆಯ ನೇರ ಪರಿಣಾಮ ಇತರೆಲ್ಲ ಕ್ಷೇತ್ರಗಳ ಮಾರಾಟಗಾರ ಮೇಲಾಗಿದ್ದು, ಉದ್ಯಮ ಕೋಟ್ಯಂತರ ರೂ. ನಷ್ಟದ ಜತೆಗೆ ಲಕ್ಷಾಂತರ ಕಾರ್ಮಿಕರು ಅತಂತ್ರರಾಗಿದ್ದಾರೆ. ಜಲ್ಲಿ, ಎಂಸ್ಯಾಂಡ್ ಕೊರತೆಯ ನೇರ ಪರಿಣಾಮ ಹೋಲೋಬ್ಲಾಕ್, ಇಂಟರ್‌ಲಾಕ್ ನಿರ್ಮಾಣ ಘಟಕಗಳು, ಸಿಮೆಂಟ್, ಕಬ್ಬಿಣ ಖರೀದಿ, ವಿದ್ಯುತ್, ಕಲ್ಲು, ಮರಳು, ಬಡಗಿ, ಗಾರೆ, …
Read More »ವಸತಿ ಶಾಲೆಗಳಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಸೂಚನೆ: ಕಾರಜೋಳ
ಸುವರ್ಣ ವಿಧಾನಸೌಧ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿನ ವಿದ್ಯುತ್ ತಂತಿ ಸೇರಿ ಉಳಿದ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಹದೇವನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 7 ವರ್ಷದ ಬಾಲಕ ಅದೇ ಶಾಲೆಯ ಕುಡಿಯುವ ನೀರಿಕ ಘಟಕದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. …
Read More »ಬೆಳಗಾವಿಗೆ ಗಡಿ ಸಂರಕ್ಷಣ ಆಯೋಗ ಕಚೇರಿ ಕೂಗು
ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಗಡಿ ವಿವಾದ ಮತ್ತೆ ಸದ್ದು ಮಾಡುತ್ತಿರುವುದು ಗಡಿ ಭಾಗದಲ್ಲಿ ಹಲವು ಹೊಸ ಚಟುವಟಿಕೆಗಳಿಗೆ ಜೀವ ನೀಡಿದೆ. ಗಡಿ ಅಭಿವೃದ್ಧಿಗಾಗಿರುವ ಕಚೇರಿಗಳ ಸ್ಥಾಪನೆ ವಿಷಯ ಪ್ರಧಾನವಾಗಿ ಮುನ್ನೆಲೆಗೆ ಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಲವು ದಿನಗಳ ಹಿಂದೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸಿಎಂಗಳ ಸಭೆ ನಡೆಸಿ ಎರಡೂ ರಾಜ್ಯಗಳ ಗಡಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವ ವಿಷಯ ಪ್ರಸ್ತಾವಿಸಿದ ಬಳಿಕ ಸುವರ್ಣ …
Read More »ಟಾಪ್ಲೆಸ್ ಆಗಿ ಬಂದ ಉರ್ಫಿ! ತಿಂಡಿ ಪ್ಲೇಟ್-ಜ್ಯೂಸ್ ಗ್ಲಾಸ್ ಹಿಡಿದು ಮೈಮಾಟ ಪ್ರದರ್ಶಿಸುತ್ತಾ ಬ್ರೇಕ್ಫಾಸ್ಟ್ ಎಂದ ನಟಿ.
ಮುಂಬೈ: ವಿಚಿತ್ರ ಫ್ಯಾಷನ್ ಸೆನ್ಸ್ನಿಂದ ಬಹಳಷ್ಟು ಜನಪ್ರಿಯತೆ ಪಡೆದ ನಟಿ ಊರ್ಫಿ ಜಾವೇದ್, ತಾವು ಧರಿಸುವ ಬಟ್ಟೆಯಿಂದಲೇ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈಕೆ ಯಾವ ಬಟ್ಟೆ ತೊಟ್ಟರೂ ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಉರ್ಫಿ ಅಂದಾಕ್ಷಣ ಅರೆಬರೆ ಮೈಮಾಟ ಪ್ರದರ್ಶನವೇ ಕಣ್ಮುಂದೆ ಬರುತ್ತದೆ. ಸದಾ ಕನಿಷ್ಠ ಬಟ್ಟೆ ತೊಟ್ಟು ಸಖತ್ ಹಾಟ್ ಕಾಣಿಸಿಕೊಳ್ಳುವ ಉರ್ಫಿಯನ್ನು ಕಳೆದ ಮಂಗಳವಾರ (ಡಿ.20) ದುಬೈ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಸುದ್ದಿ …
Read More »ಸಿದ್ದೇಶ್ವರ ಸ್ವಾಮೀಜಿ ಯೋಗಕ್ಷೇಮ ವಿಚಾರಿಸಿದ ಯತಿಗಳು
ಬಿಜಾಪುರ: ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರನ್ನು ವಿವಿಧ ಯತಿಗಳು ಇಂದು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಸ್ವಾಮೀಜಿ ವಿಜಯಾನಂದಜಿ, ಸ್ವಾಮೀಜಿ ಸ್ವಾಮಿ ಸುಮೇಧಾನಂದಜಿ, ಸ್ವಾಮೀಜಿ ಸ್ವಾಮಿ ನರೇಶಾನಂದಜಿ, ಸ್ವಾಮೀಜಿ ಶಾರದೇಶಾನಂದಜಿ, ಸ್ವಾಮೀಜಿ ಸುಖದೇವಾನಂದಜಿ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಅನಾರೋಗ್ಯದ ನಡುವೆಯೂ ಭಜನೆ ಮಾಡಲು ಆದೇಶ ನೀಡಿದರು. ಅದರಂತೆ ಸ್ಥಳದಲ್ಲೇ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಯತಿಗಳು ಭಜನೆ ಮಾಡಿ ಆಶಯ ಪೂರೈಸಿದರು.
Read More »ಕುಮ್ಕಿ ಜಮೀನು ಸಮಸ್ಯೆಗೆ ಪರಿಹಾರ: ಸಚಿವ ಆರ್. ಅಶೋಕ್
ಸುವರ್ಣವಿಧಾನಸೌಧ: ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ರಾಜ್ಯದ ಐದಾರು ಜಿಲ್ಲೆಗಳಲ್ಲಿರುವ ಕುಮ್ಕಿ ಜಮೀನು ಸಮಸ್ಯೆ ಕುರಿತಾಗಿ ಸಾಧಕ-ಬಾಧಕಗಳು, ಕಾನೂನು ಪರಿಣಾಮಗಳನ್ನು ಕೂಲಂಕುಷವಾಗಿ ಚರ್ಚಿಸಿ ಪರಿಹಾರ ರೂಪದಲ್ಲಿ ಹೊಸ ಕಾಯ್ದೆ ತರುವ ಚಿಂತನೆ ಸರ್ಕಾರದ್ದಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಪರಿಷತ್‌ನಲ್ಲಿ ಬುಧವಾರ ಬಿಜೆಪಿ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕ ಚಿಂತನೆ ಹೊಂದಿದೆ ಎಂದು ತಿಳಿಸಿದರು. ಕನ್ನಡ, …
Read More »ಮಿತಿಮೀರಿದ ಅಡಿಕೆ ಬೆಳೆಯಿಂದ ಅಸಮತೋಲನ: ಸದನ ಆತಂಕ
ಬೆಳಗಾವಿ: ಬೇಕಾಬಿಟ್ಟಿಯಾಗಿ ಅಡಿಕೆ ಬೆಳೆಯನ್ನು ಬಯಲುಸೀಮೆ ಸಹಿತ ಹಲವು ಜಿಲ್ಲೆಗಳಲ್ಲಿ ವಿಸ್ತರಣೆ ಮಾಡುತ್ತಿರುವುದು ಅಪಾಯಕಾರಿ. ಇದರಿಂದ ಮುಂದೆ ಬೆಳೆಗಳ ಅಸಮತೋಲನ ಉಂಟಾಗುವ ಭೀತಿ ಇದೆ ಎಂಬ ಕಳವಳ ಬುಧವಾರ ವಿಧಾನಸಭೆಯಲ್ಲಿ ವ್ಯಕ್ತವಾಯಿತು. ಕೃಷಿ ಎದುರಿಸುತ್ತಿರುವ ಅತಿವೃಷ್ಟಿ ಮತ್ತಿತರ ಸಮಸ್ಯೆಗಳಿಂದ ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ನಡೆಯುತ್ತಿದ್ದ ಚರ್ಚೆ ವೇಳೆ ಗೃಹಸಚಿವ ಆರಗ ಜ್ಞಾನೇಂದ್ರ ವಿಷಯ ಪ್ರಸ್ತಾವಿಸಿ, ಅಡಿಕೆ ಬೆಳೆ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವುದನ್ನು ನೋಡಿದರೆ ಅದುವೇ ರೈತರಿಗೆ ಮಾರಕವಾಗುವ ದಿನಗಳು …
Read More »ವಿಧಾನಪರಿಷತ್ ನಲ್ಲಿ `ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ವಿಧೇಯಕ’ ಅಂಗೀಕಾರ
ಬೆಳಗಾವಿ : ವಿಧಾನಪರಿಷತ್ ನಲ್ಲಿ ಸುದೀರ್ಘ ಚರ್ಚೆ ಬಳಿಕ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕ-2022 ಕ್ಕೆ ಅಂಗೀಕಾರ ದೊರೆಯಿತು. ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಈ ಕುರಿತು ಮಾತನಾಡಿದ್ದು, 2005 ಕ್ಕಿಂತ ಪೂರ್ವದಲ್ಲಿ ಕೃಷಿ ಮಾಡಿಕೊಂಡು ಬಂದಿರುವವರಿಗೆ 25 ಎಕರೆ ಭೂಮಿಯನ್ನು 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡುವ ಪ್ರಸ್ತಾಪ ಇದರಲ್ಲಿದೆ. ಆದರೆ ಇದ್ದವರಿಗೆ ಕೊಡುವ ಬದಲು ಇಲ್ಲದ ರೈತರಿಗೆ ಭೂಮಿ ನೀಡಿದರೆ ಅವರ ಜೀವನ …
Read More »