Breaking News

ಮೋದಿ ಬಳಿ ನಾಯಿಮರಿಯಂತೆ ಇರ್ತಾರೆ’ : ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

ಬಳ್ಳಾರಿ : ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಎದುರು ನಾಯಿಯಂತೆ ಇರ್ತಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ವಿಪಕ್ಷ ನಾಯಕ ಸಿದ್ದರಾಮಯ್ಯರ ವ್ಯಕ್ತಿತ್ವ ತೋರಿಸುತ್ತೆ. ನಾಯಿ ನಿಯತ್ತಿನ ಪ್ರಾಣಿ ಎಂಬುದು ಅವರಿಗೆ ಗೊತ್ತಿಲ್ಲ ಅನಿಸುತ್ತೆ. ಸಿದ್ದರಾಮಯ್ಯ ಹೇಳಿಕೆಗೆ ನಾಡಿನ ಜನರು ಉತ್ತರ ಕೊಡುತ್ತಾರೆ. ನಾನು ನಿಯತ್ತಾಗಿ ಸರ್ಕಾರ ನಡೆಸುತ್ತಿದ್ದೇನೆ. ಸಿದ್ದರಾಮಯ್ಯ ರೀತಿ ಸುಳ್ಳು ಹೇಳಿಕೊಂಡು …

Read More »

83 ವರ್ಷದ ಹಿಂದಿನ ಕರೆಂಟ್‌ ಬಿಲ್ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್

ಸಾಮಾನ್ಯವಾಗಿ ಮನೆಯ ಕರೆಂಟ್‌ ಬಿಲ್‌ ಎಷ್ಟು ಬರುತ್ತೆ ಗಮನಿಸಿದ್ದಿರಾ? 500, ಸಾವಿರ ರೂಪಾಯಿ ಬರುತ್ತೆ. ಆದರೆ ಈ ಬಿಲ್ ನೋಡಿ, ಜಸ್ 5 ರೂಪಾಯಿ ಅಷ್ಟೆ. ಅಷ್ಟು ಕಡಿಮೆ ಕರೆಂಟ್‌ ಬಿಲ್ ಯಾರದಪ್ಪಾ ಅಂತ ಕನ್ಫ್ಯೂಸ್ ಆದ್ರೋ ಹೇಗೆ. ಇದು 1940ರ ಕಾಲದ ಕರೆಂಟ್‌ಬಿಲ್ ಇದೇ ಕರೆಂಟ್ ಬಿಲ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.   ಅಸಲಿಗೆ ಇದು ಸ್ವಾತಂತ್ರ್ಯ ಪೂರ್ವದ ವಿದ್ಯುತ್‌ಬಿಲ್, ಅಂದರೆ ಸುಮಾರು 83 ವರ್ಷದ …

Read More »

ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಎಸ್.ಎಂ ಕೃಷ್ಣ

ಬೆಂಗಳೂರು : ಮಾಜಿ ಸಿಎಂ ಎಸ್.ಎಂ ಕೃಷ್ಣ ( S.M Krishna) ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಎಸ್ ಎಂ ಕೃಷ್ಣ ನಾನು ಹೆಚ್ಚಾಗಿ ರಾಜಕೀಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. 90 ವರ್ಷದ ವಯಸ್ಸಿನಲ್ಲಿ 50 ವರ್ಷದ ವ್ಯಕ್ತಿ ಹಾಗೆ ನಟಿಸೋಕೆ ಆಗುತ್ತಾ..? ಆದ್ದರಿಂದ ರಾಜಕೀಯ ಜೀವನಕ್ಕೆ ಗುಡ್ ಬೈ ಹೇಳುವ ಬಗ್ಗೆ ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ವಯಸ್ಸಿನ ಕಾರಣದಿಂದ ಸಾರ್ವಜನಿಕ ಜೀವನದಿಂದ ದೂರ ಇದ್ದೇನೆ, …

Read More »

ರಾಜ್ಯದಲ್ಲಿ ಮತ್ತೆ ಐಟಿ ಸದ್ದು; ಮಾಜಿ ಸಚಿವರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

ಚಿತ್ರದುರ್ಗ: ರಾಜ್ಯದಲ್ಲಿ ಆಗಾಗ ಕೇಳಿ ಬರುತ್ತಿರುವ ಐಟಿ ಸದ್ದು ಮತ್ತೊಮ್ಮೆ ಮೊಳಗಿದೆ. ಅರ್ಥಾತ್, ರಾಜ್ಯದ ಮಾಜಿ ಸಚಿವರೊಬ್ಬರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಐಟಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.   ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಪಾಡಿಗಟ್ಟೆ ಗ್ರಾಮದಲ್ಲಿನ ಜಿಲ್ಲಾ ಕಾಂಗ್ರೆಸ್​ ಕಾರ್ಯದರ್ಶಿ ಪಾಡಿಗಟ್ಟೆ ಸುರೇಶ್ ಮತ್ತು ಆತನ ಸಹೋದರ, ಗುತ್ತಿಗೆದಾರನೂ ಆಗಿರುವ ತಿಪ್ಪೇಸ್ವಾಮಿ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು …

Read More »

ಬಿಜೆಪಿ ಉತ್ತರ ಕರ್ನಾಟಕ ಗೆದ್ದಾಯಿತೆ? : ಸಿದ್ದರಾಮಯ್ಯ ಪ್ರಶ್ನೆ

ತುಮಕೂರು: ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಹಳೆ ಮೈಸೂರು ಪ್ರದೇಶವನ್ನು ಕೇಂದ್ರೀಕರಿಸಿರುವ ಬಿಜೆಪಿಯವರು, ಉತ್ತರ ಕರ್ನಾಟಕದ ಎಲ್ಲಾ ಪ್ರದೇಶಗಳನ್ನು ಗೆದ್ದಾಯಿತೆ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ತುರುವೇಕೆರೆಯಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಹಳೆ ಮೈಸೂರು ಪ್ರದೇಶಗಳನ್ನು ಗೆಲ್ಲುತ್ತೇವೆ ಎಂದು ಬೀಗುತ್ತಿದ್ದಾರೆ. ಇಲ್ಲಿನ ಜನರು ಬಿಜೆಪಿ ಮಾತಿಗೆ ಮಣೆ ಹಾಕುವುದಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರೇ …

Read More »

ಜ.11ರಿಂದ ಕಾಂಗ್ರೆಸ್‌ ‘ಪ್ರಜಾಧ್ವನಿ’ ಬಸ್‌ ಯಾತ್ರೆ

ಬೆಳಗಾವಿ: ‘ಜನರಿಗೆ ಉತ್ತಮ ಆಡಳಿತ ಒದಗಿಸುವಲ್ಲಿ ವಿಫಲವಾದ ಉಭಯ ಸರ್ಕಾರಗಳ ವಿರುದ್ಧ ಆಂದೋಲನ ಮಾದರಿಯಲ್ಲಿ ‘ಪ್ರಜಾಧ್ವನಿ’ ಬಸ್‌ ಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಸವರಾಜ ರಾಯರೆಡ್ಡಿ ಹೇಳಿದರು.   ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ.11ರಂದು ಇಲ್ಲಿನ ವೀರಸೌಧದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಯಾತ್ರೆಗೆ ಚಾಲನೆ ನೀಡಲಾಗುವುದು. ಅಂದು ಬೆಳಿಗ್ಗೆ ಚಿಕ್ಕೋಡಿ ಮತ್ತು ಮಧ್ಯಾಹ್ನ ಬೆಳಗಾವಿಯ ಅಂಜುಮನ್‌-ಎ-ಇಸ್ಲಾಂ ಸಂಸ್ಥೆಯ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ಜ.27ರವರೆಗೆ ನಡೆಯಲಿರುವ …

Read More »

ಕೆಪಿಟಿಸಿಎಲ್‌ ಅಕ್ರಮ: ಮತ್ತೆ ಮೂವರ ಬಂಧನ

ಬೆಳಗಾವಿ: ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ, ಪೊಲೀಸರು ಬುಧವಾರ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈವರೆಗೆ ಬಂಧಿತರಾದವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಗೋಕಾಕ ತಾಲ್ಲೂಕಿನ ಮಲ್ಲಾಪುರ ಪಿ.ಜಿ. ಗ್ರಾಮದ ಅಣ್ಣಪ್ಪ ಕೆಂಪಣ್ಣ ಮಾರವಾಡಿ(31), ಶಿವಾಪುರದ ಜಾನ್‌ರಾಬರ್ಟ್ ಯಶವಂತ ಬಂಗೆನ್ನವರ(26), ಮೂಡಲಗಿ ತಾಲ್ಲೂಕಿನ ರಾಜಾಪುರದ ಚಿದಾನಂದ ಚಿನ್ನಪ್ಪ ಮಾಡಲಗಿ(27) ಬಂಧಿತರು. ‘ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ಬಳಸಿ, ಮೂವರು ಆರೋಪಿಗಳು ಪರೀಕ್ಷೆ ಬರೆದಿದ್ದರು. ಅವರಿಂದ ಅಕ್ರಮಕ್ಕೆ …

Read More »

ಮಧ್ಯ, ಕಿತ್ತೂರು ಕರ್ನಾಟಕ ಗೆಲುವಿಗೆ ಕಾರ್ಯತಂತ್ರ

ಬೆಂಗಳೂರು: ರಾಜ್ಯದಲ್ಲಿ ಸ್ವಂತ ಶಕ್ತಿಯ ಮೇಲೆ ಅಧಿಕಾರ ಹಿಡಿಯಲು ಹಳೇ ಮೈಸೂರು ಒಳಗೊಂಡ ಮಧ್ಯ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಮಧ್ಯ ಕರ್ನಾಟಕ ಭಾಗದಲ್ಲಿ ಒಕ್ಕಲಿಗ ನಾಯಕರಿಗೆ ಕಿತ್ತೂರು ಕರ್ನಾಟಕ ಭಾಗದಲ್ಲಿ ಲಿಂಗಾಯಿತ ನಾಯಕರಿಗೆ ಹೆಚ್ಚು ಸ್ಥಾನ ಗೆಲ್ಲುವ ಗುರಿ ನೀಡಿದ್ದು, ತತ್‌ಕ್ಷಣದಿಂದ ಕಾರ್ಯಪ್ರವೃತ್ತರಾಗಲು ಸೂಚಿಸಲಾಗಿದೆ.   ಮಧ್ಯ ಕರ್ನಾಟಕ ಭಾಗದಲ್ಲಿ ಒಕ್ಕಲಿಗ ನಾಯಕರಿಗೆ ಕಿತ್ತೂರು ಕರ್ನಾಟಕ ಭಾಗದಲ್ಲಿ …

Read More »

2.95 ಲಕ್ಷ ಜನ್‌-ಧನ್‌ ಖಾತೆ ಸ್ತಬ್ಧ:

ಮಂಗಳೂರು: ಬಹುನಿರೀಕ್ಷಿತ ಪ್ರಧಾನಮಂತ್ರಿ ಜನ್‌-ಧನ್‌ ಯೋಜನೆ (ಪಿಎಂಜೆಡಿವೈ)ಯಲ್ಲಿ ಕರಾವಳಿಯಲ್ಲಿ ತೆರೆದ ಖಾತೆಗಳ ಪೈಕಿ 2.95 ಲಕ್ಷ ಖಾತೆಗಳು ಸ್ತಬ್ಧವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ 5,18,496 ಖಾತೆ ಗಳಲ್ಲಿ 2,08,602 ಹಾಗೂ ಉಡುಪಿ ಜಿಲ್ಲೆಯ 2,64,704ರಲ್ಲಿ 86,487 ಬಳಕೆ ಯಾಗದೇ ನಿಷ್ಕ್ರಿಯವಾಗಿವೆ. ಈ ಖಾತೆ ಆರಂಭಿಸಿ 18 ತಿಂಗಳ ವರೆಗೆ ಬಳಸದಿದ್ದರೆ ಅದು ನಿಷ್ಕ್ರಿಯವಾಗುತ್ತದೆ. ಬಹುತೇಕರು ಖಾತೆ ತೆರೆದ ಬಳಿಕ ಸಕ್ರಿಯಗೊಳಿಸಿಲ್ಲ. ಅಲ್ಲದೆ ಸರಕಾರದ ವಿವಿಧ ಯೋಜನೆಗಳ ಹಣ ಪಡೆಯಲು ಬಹುತೇಕರು ಪ್ರತ್ಯೇಕ …

Read More »

ಆರೋಗ್ಯ ಕವಚಕ್ಕೆ ಹುಸಿ ಕರೆಯೇ ಸವಾಲು: ಅರ್ಧಕ್ಕರ್ಧ ನಿರುಪಯೋಗಿ

ಬೆಂಗಳೂರು: ಸುಮ್ಮನೆ ಫೋನ್‌ ಮಾಡಿ ಉಪದ್ರವ ನೀಡುವುದು, ಹುಸಿ ಮತ್ತು ಸೈಲೆಂಟ್‌ ಕರೆಗಳು, ಮಕ್ಕಳು ಆಟ ಆಡುತ್ತ ಮಾಡುವ ಫೋನ್‌ ಕರೆಗಳು…! -ಇವು ‘ಆರೋಗ್ಯ ಕವಚ- 108′ ಕಾಲ್‌ಸೆಂಟರ್‌ಗೆ ಬರುವ ಕರೆಗಳು. ತುರ್ತು ಆರೋಗ್ಯ ಸೇವೆಗಾಗಿ ರಾಜ್ಯದ ನಾನಾ ಭಾಗಗಳಿಂದ ‘108′ ಆಯಂಬುಲೆನ್ಸ್‌ ಗೆ ನಿತ್ಯವೂ ಬರುವ ಕರೆಗಳಲ್ಲಿ ಇಂತಹ ಅನುಪಯುಕ್ತ ಕರೆಗಳ ಕಿರಿಕಿರಿ ತಲೆನೋವಾಗಿದೆ. ಪ್ರತಿದಿನ ಬರುವ ನೂರಾರು ಕರೆಗಳ ಪೈಕಿ ಅರ್ಧಕ್ಕರ್ಧ ಕರೆಗಳು ತುರ್ತು ಅಲ್ಲದ ಅಥವಾ ನಿರುಪ ಯೋಗಿ …

Read More »