ಬೆಳಗಾವಿ: ವಾಕರಸಾ ಸಂಸ್ಥೆ, ಬೆಳಗಾವಿ ವಿಭಾಗದಿಂದ ಬೆಳಗಾವಿ ಸಿಬಿಟಿ-ಮಜಗಾಂವ, ಸಿಬಿಟಿ-ವಡಗಾಂವ, ಸಿಬಿಟಿ-ಅನಗೋಳ ಮಾರ್ಗಗಳಲ್ಲಿ ‘ಪಿಂಕ್ ಬಸ್’ (ಮಹಿಳಾ ವಿಶೇಷ ವಾಹನ)ಗಳನ್ನು ಪ್ರಾರಂಭಿಸಲಾಗಿದೆ. ಬೆಳಗಾವಿ ಉತ್ತರ ಮತಕ್ಷೆತ್ರ ಶಾಸಕ ಅನಿಲ ಬೆನಕೆ, ಅವರು ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಮಹಿಳಾ ಕ್ಲಬ್‌ನ ಪ್ರೆಸಿಡೆಂಟ್ ಶಾಲಿನಿ ಚೌಗಲಾ, ಕಾರ್ಯದರ್ಶಿ ಪುಷ್ಪಾಂಜಲಿ ಹಾಗೂ ಚೇರ್ ಪರ್ಸನ್ ಸುನಂದಾ ಕರಲಿಂಗನ್ನವರ ಉಪಸ್ಥಿತರಿದ್ದರು. ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಾಕರಸಾ …
Read More »ವಿದ್ಯಾರ್ಥಿ ನಿಲಯದಿಂದ 25 ವಿದ್ಯಾರ್ಥಿಗಳು ಹೊರಕ್ಕೆ: ಕೈ ಚೆಲ್ಲಿದ ಶ್ರೀರಾಮುಲು
ಬಳ್ಳಾರಿ:ಇಲ್ಲಿನ ಕೌಲ್‌ಬಜಾರ್ ಪ್ರದೇಶದ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯದಲ್ಲಿ ‘ಕಳಪೆ ಊಟ’ದ ವಿರುದ್ಧ ದನಿ ಎತ್ತಿದ 25 ವಿದ್ಯಾರ್ಥಿಗಳನ್ನು ಗುರುವಾರ ಹಾಸ್ಟೆಲ್‌ನಿಂದ ಹೊರಹಾಕಲಾಗಿದೆ. ಬುಧವಾರ ರಾತ್ರಿ ಕೋಳಿ ಸಾರು ಮಾಡಲಾಗಿತ್ತು. ಸಾರು ಕಳಪೆಯಾಗಿದ್ದನ್ನು ಕೆಲವು ವಿದ್ಯಾರ್ಥಿಗಳು ಪ್ರಶ್ನಿಸಿದರು. ವಾರ್ಡನ್, ಕಿರಿಯ ವಾರ್ಡನ್ ಹಾಗೂ ತಾಲ್ಲೂಕು ಅಧಿಕಾರಿ ಊಟ ಮಾಡಿ, ‘ಸಾರು ಚೆನ್ನಾಗಿಲ್ಲ’ ಎಂದು ಒಪ್ಪಿಕೊಂಡರು. ಆನಂತರ ವಿದ್ಯಾರ್ಥಿಗಳು ಎರಡು ಬಕೆಟ್‌ಗಳಲ್ಲಿ ಸಾರು ಹಿಡಿದುಕೊಂಡು ರಾತ್ರಿ 10 ಗಂಟೆಗೆ ಜಿಲ್ಲಾಧಿಕಾರಿ ಮನೆಗೆ ಹೋಗಿ …
Read More »ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪಟ್ಟಿ: ಫೆ.2ರಂದು ಸಭೆ
ಬೆಂಗಳೂರು: ರಾಜ್ಯದಲ್ಲಿ ಇನ್ನೇನು ಮೂರು ತಿಂಗಳಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆಗೆ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಕೆಪಿಸಿಸಿ ಚುನಾವಣಾ ಸಮಿತಿಯ ಸಭೆ ಫೆ.2ರಂದು ನಡೆಯಲಿದೆ. ಕನಿಷ್ಠ 100 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ, ಹೈಕಮಾಂಡ್‌ಗೆ ರವಾನಿಸುವ ಬಗ್ಗೆ ಕಾಂಗ್ರೆಸ್ ನಾಯಕರು ಈ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ‘ಕೆಲವು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಸ್ಥಳೀಯ ನಾಯಕರ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿದೆ. ಅಂಥ ಕ್ಷೇತ್ರಗಳನ್ನು ಹೊರತುಪಡಿಸಿ, ಇತರ ಕ್ಷೇತ್ರಗಳಿಗೆ 2-3 …
Read More »ವಸತಿ ಯೋಜನೆಗೆ ನೀಡಿದ್ದ ₹ 300 ಕೋಟಿ ವಾಪಸ್
ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದಲ್ಲಿನ (ಎಸ್‌ಟಿ) ಅಲೆಮಾರಿ ಸಮುದಾಯಗಳ ಜನರ ವಸತಿ ಯೋಜನೆಗೆ ಮೀಸಲಿಟ್ಟಿದ್ದ ₹ 300 ಕೋಟಿ ಅನುದಾನವನ್ನು ಇತರ ವಸತಿ ಯೋಜನೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೇ ಯೋಜನೆಯಡಿ 2021- 22ನೇ ಸಾಲಿನಲ್ಲಿ ಮೀಸಲಿಟ್ಟಿದ್ದ ₹ 250 ಕೋಟಿಯನ್ನು ಈ ಹಿಂದೆಯೂ ಸರ್ಕಾರ ವಾಪಸ್ ಪಡೆದಿತ್ತು. ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಆದ್ಯತೆ ಮೇರೆಗೆ ಮನೆ ನಿರ್ಮಿಸಿ ಕೊಡುವುದಾಗಿ 2022-23ನೇ …
Read More »ಕೃಷ್ಣಾ ಮೇಲ್ದಂಡೆ ಯೋಜನೆ ಶೀಘ್ರ ನನಸು:ಕಾರಜೋಳ
ಬೆಳಗಾವಿ: ‘ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ವಾದಗಳು ಮುಗಿದಿವೆ. ಆಂಧ್ರದ ವಾದ ಮಾತ್ರ ಬಾಕಿ ಇದೆ. ಕೆಲವೇ ದಿನಗಳಲ್ಲಿ ಇದೂ ಬಗೆಹರಿಯಲಿದೆ’ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು. ‘ಎರಡನೇ ನ್ಯಾಯಾಧೀಕರಣವು 2013ರಲ್ಲಿ ನಮಗೆ 130 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಅನುಮತಿ ನೀಡಿತ್ತು. ಆದರೆ, ಬಳಸಿಕೊಳ್ಳಲು ಆಗಿಲ್ಲ. ಸದ್ಯ ನಾಲ್ಕೂ ರಾಜ್ಯಗಳಿಂದ ಸುಪ್ರೀಂಕೋರ್ಟ್‌ನಲ್ಲಿ ದಾವೆಗಳಿವೆ. ಮೇಲಾಗಿ, …
Read More »ಆಪರೇಷನ್ ಹಸ್ತದತ್ತ ಕಾಂಗ್ರೆಸ್ ಚಿತ್ತ: ಸಮರ್ಥರಿಲ್ಲದ ಕಡೆ ತೀವ್ರ ಹುಡುಕಾಟ
ಆಪರೇಷನ್ ಹಸ್ತದತ್ತ ಕಾಂಗ್ರೆಸ್ ಚಿತ್ತ: ಸಮರ್ಥರಿಲ್ಲದ ಕಡೆ ತೀವ್ರ ಹುಡುಕಾಟ ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್ ಎದುರಾಳಿಯ ಅಸಮಾಧಾನಿತರಿಗೆ ಬಲೆ ಬೀಸಿದ್ದು, ಎರಡು ಲೆಕ್ಕಾಚಾರದಲ್ಲಿ ಎದುರಾಳಿ ಟಿಕೆಟ್ ಆಕಾಂಗಳನ್ನು ಸೆಳೆಯುವ ಕಾರ್ಯಕ್ಕೆ ಪದ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ. ಚುನಾವಣೆ ಕಾವು ಹೆಚ್ಚಾದ ವೇಳೆ ಯಾವ ಪಕ್ಕೆ ಹೆಚ್ಚೆಚ್ಚು ಮಂದಿ ಸೇರ್ಪಡೆಯಾಗುತ್ತಾರೋ ಆ ಪದ ಪರ ಟ್ರೆಂಡ್ ಸೃಷ್ಟಿಯಾಗುತ್ತಿದೆ ಎಂಬ ರಾಜಕೀಯ ವಾದವೊಂದಿದೆ. ಇದಕ್ಕೆ ಪೂರಕವಾಗಿ ಹೆಚ್ಚು ಮಂದಿಯನ್ನು ಸೇರಿಸಿಕೊಳ್ಳಲು ಪಗಳು …
Read More »ಕಾಂತಾರದ ಬುಲ್ಲಾಗೆ ಶಾಕ್! ‘ಶಬಾಷ್ ಬಡ್ಡಿ ಮಗನೇ’ ನಿರ್ಮಾಪಕ ಅಂದರ್.
ಬೆಂಗಳೂರು: ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿಗೆ ದೊಡ್ಡ ಶಾಕ್ ಆಗಿದ್ದು ‘ಶಬಾಷ್ ಬಡಡಿ ಮಗನೇ’ ಚಿತ್ರದ ನಿರ್ಮಾಪಕ ಅರೆಸ್ಟ್ ಆಗಿದ್ದಾರೆ. ನಿರ್ಮಾಪಕ ಅರೆಸ್ಟ್ ಆಗುತ್ತಿದ್ದಂತೆಯೇ ಶಬಾಷ್ ಬಡ್ಡಿ ಮಗನೇ ಸಿನಿಮಾ ನಿಂತು ಹೋಗಿದೆ. ಕಳೆದ ವರ್ಷ ಅಕ್ಟೋಬರ್ 2022 ರ ದಸರಾ ವೇಳೆಗೆ ಮುಹೂರ್ತ ಇಟ್ಟು ಶುರು ಮಾಡಿದ್ದ ಶಬಾಷ್ ಬಡ್ಡಿ ಮಗನೇ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ನಾಯಕ ನಟನಾಗಿ ಅಭಿನಸುತ್ತಿರುವ ಮೊದಲ ಸಿನಿಮಾ …
Read More »ಬಿಜೆಪಿ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸೈಲೆಂಟ್ ಆದ ಶಾಸಕ ಯತ್ನಾಳ್: ಯಡಿಯೂರಪ್ಪ ಬಗ್ಗೆ ಮಾತನಾಡದಂತೆ ಸೂಚನೆ
ವಿಜಯಪುರ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Yediyurappa) ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ. ನಮ್ಮ ಹೈಕಮಾಂಡ್ ಹೇಳಿದ ತಕ್ಷಣ ನಾನು ಸಾಫ್ಟ್ ಆಗಲೇಬೇಕಲ್ಲ. ಇನ್ಮುಂದೆ ಯಡಿಯೂರಪ್ಪ ಬಗ್ಗೆ ನನಗೆ ಪ್ರಶ್ನೆ ಕೇಳಬೇಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮನವಿ ಮಾಡಿದರು. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಯತ್ನಾಳ್ ಸೈಲೆಂಟ್ ಆಗಿದ್ದಾರೆ. ಯಡಿಯೂರಪ್ಪ ಬಗ್ಗೆ ನನಗೆ ಗೌರವವಿದೆ, ಅವರ ಬಗ್ಗೆ ಮಾತನಾಡಲ್ಲ. ಯಡಿಯೂರಪ್ಪ ಹಿರಿಯರಿದ್ದಾರೆ ಬೈಯ್ಯೋದು ಬೇಡ ಅಂದಿದ್ದಾರೆ. ಇನ್ಮುಂದೆ ಬಿಎಸ್ವೈ …
Read More »ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚ ಹಾವಳಿಗೆ ಬ್ರೇಕ್,ಕಾವೇರಿ 2.0: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪಾಸ್ಪೋರ್ಟ್ ಮಾದರಿ ಸೇವೆ
ಸಬ್ ರಿಜಿಸ್ಟ್ರಾರ್ ಕಚೇರಿಗಳ ಸೇವೆಗೆ ವೇಗ, ಲಂಚದ ಆರೋಪದಿಂದ ಮುಕ್ತಿ, ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಲು ಕಾವೇರಿ 2.0 ತಂತ್ರಾಂಶ ಬಳಕೆಗೆ ಬರಲಿದೆ. ಪಾಸ್ಪೋರ್ಟ್ ಮಾದರಿ ಸೇವೆ ಒದಗಿಸಲು ಉಪ ನೋಂದಣಿ ಕಚೇರಿಗಳಲ್ಲಿ ಹೊಸ ಸ್ಟ್ಾವೇರ್ ಅಳವಡಿಸಲು ಕಂದಾಯ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ 260 ಸಬ್ ರಿಜಿಸ್ಟ್ರಾರ್ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ದಿನಕ್ಕೆ ಅಂದಾಜು 10 ಸಾವಿರ ದಾಖಲೆ ಪತ್ರಗಳ ನೋಂದಣಿ, ದೃಢೀಕರಣ ಪತ್ರಗಳ ಸೇವೆ ಒದಗಿಸುತ್ತಿವೆ. ಸರ್ಕಾರದ ಬೊಕ್ಕಸ …
Read More »ಸೋಮಾಲಿಯಾದಲ್ಲಿ ಐಸಿಸ್ ನಾಯಕ ಸೇರಿ 10 ಮಂದಿ ಭಯೋತ್ಪಾದಕರ ಹತ್ಯೆ
ಸೋಮಾಲಿಯಾದಲ್ಲಿ ಐಸಿಸ್ ನಾಯಕ ಬಿಲಾಲ್ ಸೇರಿ ಒಟ್ಟು 10 ಮಂದಿ ಭಯೋತ್ಪಾದಕರನ್ನು ಅಮೆರಿಕ ಮಿಲಿಟರಿ ಹೊಡೆದುರುಳಿಸಿದೆ. ಈ ಕುರಿತು ಅಮೆರಿಕ ಸರ್ಕಾರ ಮಾಹಿತಿ ನೀಡಿದೆ. ಸೋಮಾಲಿಯಾದಲ್ಲಿ ಐಸಿಸ್ ನಾಯಕ ಬಿಲಾಲ್ ಸೇರಿ ಒಟ್ಟು 10 ಮಂದಿ ಭಯೋತ್ಪಾದಕರನ್ನು ಅಮೆರಿಕ ಮಿಲಿಟರಿ ಹೊಡೆದುರುಳಿಸಿದೆ. ಈ ಕುರಿತು ಅಮೆರಿಕ ಸರ್ಕಾರ ಮಾಹಿತಿ ನೀಡಿದೆ. ಬಿಲಾಲ್ ಈ ಸಂಘಟನೆಯ ಪ್ರಮುಖ ಹಣಕಾಸು ಸಹಾಯಕನಾಗಿದ್ದ. ಅಧಿಕಾರಿಗಳ ಪ್ರಕಾರ ಬಿಲಾಲ್-ಅಲ್ ಸುದಾನಿ ಆಫ್ರಿಕಾದ್ಯಂತ ಐಸಿಸ್ ಅನ್ನು ವಿಸ್ತರಿಸಲು ಹಾಗೂ ಇತರೆ ಚಟುವಟಿಕೆಗಳನ್ನು …
Read More »