ಡಿಟಿಎಚ್, ಕೇಬಲ್ ಟಿವಿ ದರ ದುಬಾರಿ ಟಿವಿ ಚಾನೆಲ್‌ಗಳ ದರ ನಿಗದಿಗೆ ಸಂಬಂಧಿಸಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ದ ಹೊಸ ಆದೇಶ ಇಂದಿನಿಂದ ಚಾಲ್ತಿಗೆ ಬರಲಿದೆ. ಅದರಂತೆ ಗ್ರಾಹಕರು ಟಿವಿ ಚಾನೆಲ್‌ಗಳಿಗೆ ಸುಮಾರು ಶೇ.30ರಷ್ಟು ಹೆಚ್ಚು ಶುಲ್ಕ ತೆರಬೇಕಾಗುತ್ತದೆ ಎಂದು ಡಿಟಿಎಚ್ ಮತ್ತು ಕೇಬಲ್ ಆಪರೇಟರ್‌ಗಳು ಸುಳಿವು ನೀಡಿದ್ದಾರೆ. ದರ ಹೆಚ್ಚಳದಿಂದ ಗ್ರಾಹಕರನ್ನು ಕಳೆದುಕೊಳ್ಳುತ್ತೇವೆಂಬ ಭೀತಿಯನ್ನೂ ಅವರು ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ಶುಲ್ಕ ಕ್ರೆಡಿಟ್ ಕಾರ್ಡ್ ಮೂಲಕ ನೀವು ಬಾಡಿಗೆ ಪಾವತಿಸುತ್ತಿದ್ದರೆ ಇನ್ನು …
Read More »ಸೋಮಶೇಖರ ರೆಡ್ಡಿ ವಿರುದ್ಧ ಅತ್ತಿಗೆ ಸ್ಪರ್ಧೆ
ಗಂಗಾವತಿ: ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸಂಸ್ಥಾಪಕ ಜನಾರ್ದನ ರೆಡ್ಡಿ ಮಂಗಳವಾರ ಗಂಗಾವತಿಯಲ್ಲಿ ಘೋಷಣೆ ಮಾಡಿ, ಸವಾಲು ಹಾಕಿದ್ದಾರೆ. ಇತಿಹಾಸ ಪ್ರಸಿದ್ಧ ಆನೆಗೊಂದಿಯಿಂದ ಪಕ್ಷ ದ ಪ್ರಚಾರ ರಥಯಾತ್ರೆಗೆ ಕುಟುಂಬ ಸಮೇತರಾಗಿ ಚಾಲನೆ ನೀಡಿದ ಅವರು, ಸೋದರನ ವಿರುದ್ಧ ತೊಡೆ ತಟ್ಟಿದರು. ಶ್ರೀರಾಮಚಂದ್ರನಿಗೆ ಆತ್ಮಸ್ಥೈರ್ಯ ತುಂಬಿದ …
Read More »ಚುನಾವಣೆ ಸಮೀಪಿಸುತ್ತಿದ್ದಂತೆ ವೈಯಕ್ತಿಕ ಟೀಕೆ ಟಿಪ್ಪಣಿ ಮಾಡುವುದು ಬೇಡ.: ಬಾಲಚಂದ್ರ ಜಾರಕಿ
ಬೆಳಗಾವಿ: ಮೂರೂ ಕುಟುಂಬಗಳು ರಾಜಕೀಯವಾಗಿ ಬೆಳೆದಿವೆ. ಚುನಾವಣೆ ಸಮೀಪಿಸುತ್ತಿರುವುದರಿಂದ ರಮೇಶ ಜಾರಕಿಹೊಳಿ, ಡಿ.ಕೆ. ಶಿವಕುಮಾರ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವೈಯಕ್ತಿಕ ದ್ವೇಷ, ನಿಂದನೆ ಮಾಡುವುದು ಬೇಡ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೈಮುಗಿದು ಮನವಿ ಮಾಡಿದರು. ಗೋಕಾಕ ತಾಲೂಕಿನ ಖಂಡ್ರಟ್ಟಿ ಗ್ರಾಮದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ವೈಯಕ್ತಿಕ ಟೀಕೆ ಟಿಪ್ಪಣಿ ಮಾಡುವುದು ಬೇಡ. ರಾಜಕೀಯವಾಗಿ ಎಲ್ಲರೂ ಬೆಳೆದಿದ್ದೀರಿ, ಬಹಿರಂಗ ಹೇಳಿಕೆ ನೀಡುವುದು ಬೇಡ. …
Read More »ಸಿದ್ದರಾಮಯ್ಯ ಈ ಬಾರಿ ಎಲ್ಲೇ ಸ್ಪರ್ಧಿಸಿದರೂ ಸೋಲುವುದು ಮಾತ್ರ ಖಚಿತ: .ಶ್ರೀರಾಮುಲು
ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಎಲ್ಲೇ ಸ್ಪರ್ಧಿಸಿದರೂ ಸೋಲುವುದು ಮಾತ್ರ ಖಚಿತ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಮೊದಲು ಬಾದಾಮಿಯಿಂದ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಈಗ ಕೋಲಾರ, ವರುಣಾದಿಂದ ಸ್ಪರ್ಧೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಅವರಿಗೆ ಕ್ಷೇತ್ರ ಯಾವುದು ಎಂಬುದೇ ಸ್ಥಿರವಾಗಿಲ್ಲ. ಈ ಬಾರಿ ಅವರು ಎಲ್ಲೇ ಸ್ಪರ್ಧಿಸಿದರೂ ಸೋಲುವುದು ನಿಶ್ಚಿತ ಎಂದರು. ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಯಾತ್ರೆ ಮಾಡುತ್ತಿವೆ. …
Read More »ರಾಜ್ಯದ 2023-24ನೇ ಸಾಲಿನ ಬಜೆಟ್ ರೈತ ಪರ ಆಗಿರಲಿದೆ ಎಂದ ಬೊಮ್ಮಾಯಿ
ಧಾರವಾಡ: ರಾಜ್ಯದ 2023-24ನೇ ಸಾಲಿನ ಬಜೆಟ್ ರೈತ ಪರ ಆಗಿರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರ ದ ಕೃಷಿ ವಿವಿ ಆವರಣದಲ್ಲಿ ಮಂಗಳವಾರ ಕೃಷಿ ಇಲಾಖೆ, ಕೃಷಿ ವಿವಿಯ ನೂತನ ಯೋಜನೆಗಳ ಚಾಲನಾ ಕಾರ್ಯಕ್ರಮ ಹಾಗೂ ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರೆಗೂ ರೈತರ ಪರ ಕೆಲಸ ಮಾಡುತ್ತೇನೆ. ರೈತರ ಮಕ್ಕಳು ವಿದ್ಯಾಭ್ಯಾಸ ಮಾಡಲೆಂದೇ “ವಿದ್ಯಾಸಿರಿ’ ಯೋಜನೆ ಆರಂಭಿಸಿದೆ. …
Read More »ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ:B.S.Y.
ಶಿವಮೊಗ್ಗ: ಬಿಜೆಪಿಯ ರಾಷ್ಟ್ರೀಯ ವರಿಷ್ಠರು ರಾಜ್ಯದ ಬಗ್ಗೆ ಹೆಚ್ಚಿನ ಗಮನ ನೀಡಿದ್ದು, ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಡಿಜಿಟಲ್ ವಾಲ್ ಪೇಂಟಿಂಗ್ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೋದಿಯವರಂತಹ ನಾಯಕ ಸಿಕ್ಕಿರುವುದು ನಮ್ಮ ಪುಣ್ಯ. ಅವರ ನಾಯಕತ್ವದಲ್ಲಿ ರಾಜ್ಯದ ಮತದಾರರು ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು. ಪ್ರಧಾನಿ …
Read More »ಡಿ.ಕೆ.ಶಿವಕುಮಾರ್ ಅವರೇ ಸಿಡಿ ಷಡ್ಯಂತ್ರದ ರೂವಾರಿ, CD ಕೇಸ್ ಸಿಬಿಐಗೆ ವಹಿಸುವಂತೆ ಮನವಿ*
ಬೆಂಗಳೂರು: ಸಿಡಿ ಷಡ್ಯಂತ್ರದ ಮೂಲಕ ನನ್ನ ತೇಜೋವಧೆ ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ಅವರೇ ಸಿಡಿ ಷಡ್ಯಂತ್ರದ ರೂವಾರಿ, ಎಲ್ಲ ರಾಜಕಾರಣಿಗಳ ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ, ಸಿಡಿ ಕೇಸ್ ಸಿಬಿಐಗೆ …
Read More »ಗ್ರಾಹಕರೇ ಗಮನಿಸಿ : ನಾಳೆಯಿಂದ ಬದಲಾಗಲಿವೆ ಈ ನಿಯಮಗಳು
ನವದೆಹಲಿ : 2023 ರ ವರ್ಷದ ಮೊದಲ ತಿಂಗಳು ಕೊನೆಗೊಳ್ಳಲಿದೆ. ನಂತರ ಹೊಸ ತಿಂಗಳು ಹೊಸ ಬದಲಾವಣೆಗಳೊಂದಿಗೆ ಪ್ರಾರಂಭವಾಗುತ್ತದೆ. ಫೆಬ್ರವರಿ 1 ರಿಂದ ಅನೇಕ ನಿಯಮಗಳು ಬದಲಾಗಲಿವೆ. ಅವುಗಳ ಪರಿಣಾಮವು ಸಾಮಾನ್ಯ ಜನರ ಮೇಲೂ ಪರಿಣಾಮ ಬೀರಲಿವೆ. ವರದಿಯ ಪ್ರಕಾರ. ಸಂಚಾರ, ಪ್ಯಾಕೇಜಿಂಗ್, ಗೇಮಿಂಗ್, ಆದಾಯ ತೆರಿಗೆ ಇಲಾಖೆ ಮತ್ತು ಸಂಬಳಕ್ಕೆ ಸಂಬಂಧಿಸಿದ ಹೊಸ ನಿಯಮಗಳು ಫೆಬ್ರವರಿ 1 ರಿಂದ ಪ್ರಾರಂಭವಾಗಲಿವೆ. ಹೀಗಾಗಿ ಹೊಸ ನಿಯಮಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವುದು …
Read More »ಬೆಳಗಾವಿಯಲ್ಲಿ ಕಾಂಗ್ರೆಸ್ 12 ಸೀಟು ಗೆಲ್ಲುವುದು ಖಚಿತ ಎಂದ ಎಂ.ಬಿ.ಪಾಟೀಲ್
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಗಳ ಬಗ್ಗೆ, ಅವರ ಮಾತಿನ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡಲ್ಲ. ಅದಕ್ಕೆ ಉತ್ತರ ಕೊಡಬೇಕಾದದ್ದು ಅಧ್ಯಕ್ಷರು. ಅವರೇ ಉತ್ತರ ಕೊಡುತ್ತಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ಯಾರನ್ನೂ ಯಾರೂ ಮುಗಿಸಲು ಆಗಲ್ಲ. ಎಲ್ಲವನ್ನೂ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಇದೇ ವೇಳೆ ಬೆಳಗಾವಿಯಲ್ಲಿ ನಾವು 12 ಸ್ಥಾನ ಗೆಲ್ಲುವುದು ಖಚಿತ. ಮುಂಬೈ ಕರ್ನಾಟಕದಲ್ಲಿ ಹೆಚ್ಚಿನ ಸೀಟು …
Read More »ಧಾರ್ಮಿಕ ಕೃತಿಗಳನ್ನು ಪ್ರತಿಯೊಬ್ಬರೂ ಓದಿ
ಹಂದಿಗುಂದ: ‘ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪುಸ್ತಕಗಳು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಸಹಕಾರಿ. ಪ್ರತಿಯೊಬ್ಬರೂ ಈ ಗ್ರಂಥಗಳನ್ನು ಓದುವ ರೂಢಿ ಬೆಳೆಸಿಕೊಳ್ಳಿ’ ಎಂದು ಸಾಹಿತಿ ವಿ.ಎಸ್.ಮಾಳಿ ಹೇಳಿದರು. ಹಂದಿಗುಂದ ಗ್ರಾಮದಲ್ಲಿ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ಸಿದ್ದೇಶ್ವರ ಶಿವಯೋಗಿಗಳವರ ನೂತನ ಮಠದ ಲೋಕಾರ್ಪಣಾ ಕಾರ್ಯಕ್ರಮದ ಎರಡನೆಯ ದಿನವಾದ ಸೋಮವಾರ, ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವಹಿಸಿ ಮಾತನಾಡಿದರು. ‘ಬಾಗೇನಾಡಿನ ಹಾಲುಮತದ ಪ್ರಮುಖ ಐದು ದೈವಗಳಾದ ಆಲಖನೂರಿನ …
Read More »