Breaking News

ಅಲ ಮಹದಿ ಟ್ರೋಫಿ ವಿಜೇತರಾದ ಗೋಕಾಕ ಫುಟ್ಬಾಲ್ ಕ್ಲಬ್

ಗೋಕಾಕ: ಬೆಳಗಾವಿಯ ಅನಗೊಳ ಪ್ರದೇಶದಲ್ಲಿ ಅಲ ಮಹದಿ ಟ್ರೋಫಿ ಎಂಬ ಫುಟ್ ಬಾಲ್ ಪಂದ್ಯ ದವರು ಆಯೋಜನೆ ಮಾಡಿದ್ದ ಟೂರ್ನಮೆಂಟ್ ನಲ್ಲಿ ಗೋಕಾಕ ತಂಡ ವಿಜೇತರಾ ಗಿದ್ದಾರೆ U22 ಫೂಟ ಬಾಲ ಟೂರ್ನಮೆಂಟ್ ನಲ್ಲಿ ಗೋಕಾಕ ತಂಡ ವಿಜೇತರಾಗಿ ಮೊದಲನೆಯ ಬಾರಿಗೆ ಈ ಒಂದು ಟ್ರೋಫಿ ತನ್ನ ಮಡಿಲಿಗೆ ಗೋಕಾಕ ತಂಡ ಸೇರ್ಪಡೆ ಮಾಡಿಕೊಂಡಿದೆ . ಇದರ ನಾಯಕತ್ವ ವಹಿಸಿದಿ ಅರ್ಯನ ಸಾಯ ನ್ನವರ ಅವರು ತಮ್ಮ ತಂಡದ ಬಗ್ಗೆ …

Read More »

ವಿಧಾನಸಭಾ ಚುನಾವಣೆ ತಂತ್ರ; ಬೆಳಗಾವಿ ಪಾಲಿಕೆ ಮತ್ತೆ ಮರಾಠಿ ಭಾಷಿಗರ ಉಡಿಗೆ

ಬೆಳಗಾವಿ: ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರ ತಂತ್ರದಿಂದಾಗಿ ಮಹಾನಗರ ಪಾಲಿಕೆ ಮತ್ತೆ ಮರಾಠಿ ಭಾಷಿಗರ ಪರವಾಯಿತು. ವಿಧಾನಸಭಾ ಚುನಾವಣೆಯಲ್ಲಿ ಮರಾಠಿ ಮತಗಳನ್ನು ಸೆಳೆಯುವ ಉದ್ದೇಶದಿಂದಲೇ ಮೇಯರ್‌, ಉಪ ಮೇಯರ್ ಸ್ಥಾನಗಳನ್ನು ಮರಾಠಿಗರಿಗೆ ‘ಉಡುಗೊರೆ’ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.   ಪಾಲಿಕೆಯಲ್ಲಿ ಇಷ್ಟು ವರ್ಷಗಳೂ ಭಾಷೆ ಆಧಾರಿತ ಚುನಾವಣೆ ನಡೆಯು ತ್ತಿತ್ತು. ಎಲ್ಲ ಸದಸ್ಯರು ಪಕ್ಷೇತರರೇ ಆಗಿರುತ್ತಿದ್ದರು. …

Read More »

ವಿಧಾನಸಭೆ ಚುನಾವಣೆ: ಶೀಘ್ರದಲ್ಲಿ ವರಿಷ್ಠರ ‘ಕೈ’ ಸೇರಲಿದೆ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲು ರಾಜ್ಯ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಈ ಪಟ್ಟಿಯು ಶೀಘ್ರದಲ್ಲಿ ವರಿಷ್ಠರ ಕೈ ಸೇರಲಿದೆ. 120ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಹುತೇಕ ಪೂರ್ಣಗೊಂಡಿದೆ. ಸೋಮವಾರ ನಗರಕ್ಕೆ ಬಂದ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪಟ್ಟಿಯನ್ನು ಅಂತಿಮಗೊಳಿಸುವ ಕುರಿತಂತೆ ಕೆಲವು ನಾಯಕರ ಜೊತೆ ಚರ್ಚೆ ನಡೆಸಿದರು. ಮೊದಲ ಹಂತದ ಪಟ್ಟಿ ಸಿದ್ಧಪಡಿಸುವ …

Read More »

ರಾಜ್ಯದ ಕನ್ನಡಿಗರಿಗೆ ಮೋಸ ಮಾಡಿದ ಬಿಜೆಪಿ- ಕರವೇ ಆರೋಪ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪಕ್ಷ ಆಧಾರಿತ ಚುನಾವಣೆ ನಡೆಸಿ ಅಧಿಕಾರದ ಗದ್ದುಗೆ ಏರಿದ ಬಿಜೆಪಿ ಮಹಾಪೌರ,ಮತ್ತು ಉಪ ಮಹಾಪೌರ ಎರಡೂ ಸ್ಥಾನಗಳನ್ನು ಮರಾಠಿ ಭಾಷಿಕರಿಗೆ ನೀಡುವ ಮೂಲಕ ಈ ರಾಜ್ಯದ ಕನ್ನಡಿಗರಿಗೆ ಮೋಸ ಮಾಡಿದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಆರೋಪಿಸಿದ್ದಾರೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮರಾಠಿ ಭಾಷಿಕರಿಗೆ ನೀಡಿರುವ ಬೆಳಗಾವಿ ನಗರದ ಬಿಜೆಪಿ ನಾಯಕರು ಈಗ ಬೆಳಗಾವಿ ಪಾಲಿಕೆ ಮಹಾಪೌರ ಉಪ ಮಹಾಪೌರ …

Read More »

ಹೊಂದಾಣಿಕೆ, ಕೋಟಾಕ್ಕೆ ಕಾಂಗ್ರೆಸ್‌ ತಿಲಾಂಜಲಿ

ಬೆಂಗಳೂರು: ಈ ಬಾರಿ ಚುನಾವಣೆಗೆ ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಹೊಂದಾಣಿಕೆಯ ರಾಜಕೀಯ ಹಾಗೂ ಕೋಟಾ ವ್ಯವಸ್ಥೆಗೆ ತಿಲಾಂಜಲಿ ನೀಡಲು ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನಿಸಿದೆ. ಕಳೆದ ಚುನಾವಣೆಯಲ್ಲಿ ಇದರಿಂದಾಗಿಯೇ ಕೆಲವು ಕ್ಷೇತ್ರಗಳಲ್ಲಿ ಸೋಲು ಅನುಭವಿಸಿ ಪಾಠ ಕಲಿತಿದ್ದು, ಹೀಗಾಗಿ ಈ ಬಾರಿ ಸಮೀಕ್ಷೆ ಆಧರಿಸಿಯೇ ಟಿಕೆಟ್‌ ನೀಡಲು ನಿರ್ಧರಿಸಲಾಗಿದೆ.   ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮೈಸೂರು ಕಡೆ ಹೊಂದಾಣಿಕೆ ನಡೆಯಬಹುದು ಎಂಬ ದೂರು ಹೈಕಮಾಂಡ್‌ ಅಂಗಳಕ್ಕೆ ತಲುಪಿದ್ದು, ಎಚ್ಚರಿಕೆಯಿಂದ ಟಿಕೆಟ್‌ ನೀಡಲು ತೀರ್ಮಾನಿ …

Read More »

8-10 ಬಿಜೆಪಿ ಸಂಸದರು ಚುನಾವಣೆಗೆ ಸ್ಪರ್ಧಿಸಲ್ಲ: ಡಿಕೆಶಿ

ಕನಕಪುರ: ಸರ್ಕಾರದಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಲು ಸಾಧ್ಯವಾಗದ ಬಿಜೆಪಿಯ ಸಂಸದರು ಒಳಗೊಳಗೆ ಭಾರಿ ಅವಮಾನ ಎದುರಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಎಂಟರಿಂದ ಹತ್ತು ಬಿಜೆಪಿ ಸಂಸದರು ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.   ‘ಈ ಸರ್ಕಾರದಲ್ಲಿ ಮಾತನಾಡಲು ನಮಗೆ ಧ್ವನಿ ಇಲ್ಲ ಎಂದು ಬಿಜೆಪಿ ಸಂಸದರು ನನ್ನ ಬಳಿ ನೋವು ತೋಡಿಕೊಂಡಿದ್ದಾರೆ. ಸದ್ಯಕ್ಕೆ ಅವರ ಹೆಸರು ಬೇಡ. ಆ ಸಂಸದರ ಯಾರು …

Read More »

20 ಎಕರೆ ಬೆಳೆದು ನಿಂತ ಕಬ್ಬು ಬೆಂಕಿಗೆ ಆಹುತಿ

ಆಕಸ್ಮೀಕವಾಗಿ ಹತ್ತಿದ ಬೆಂಕಿಗೆ ಅಂದಾಜು 20 ಎಕರೆ ಬೆಳೆದು ನಿಂತ ಕಬ್ಬು ಆಹುತಿಯಾದ ಘಟನೆ ಗೋಕಾಕ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ನಡೆದಿದೆ ಉಪ್ಪಾರಟ್ಟಿಯ ಗ್ರಾಮದ ರೈತರಾದ ವಿಠ್ಠಲ ಚುನ್ನನವರ,ನಾರಾಯಣ ನಂದಿ, ಪುಂಡಲಿಕ್ ದರೆನ್ನವರ್, ರುದ್ರಪ್ಪ ಮುರ್ಕಿ ಭಾವಿ, ಗಂಗಪ್ಪ ಕೊಳವಿ, ಇವರು ತಮ್ಮ ಹೊಲದಲ್ಲಿನ ಕಬ್ಬು ಇನ್ನೆನು ಕೆಲವೆ ದಿನಗಳಲ್ಲಿ ಕಟಾವು ಮಾಡಿ ಕಾರ್ಖಾನೆಗೆ ಕಳಿಸುವ ವಿಚಾರದಲ್ಲಿದ್ದಾಗ ಇವತ್ತು ಅಪರಾಹ್ನ 12 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದ ಪರಿಣಾಮ ಮೊದಲು …

Read More »

‘ಸ್ಕಾಲರ್‌ಷಿಪ್‌ಗೆ ಕನ್ನ’ ಪ್ರಕರಣ: ತನಿಖೆಗೆ ಹಿನ್ನಡೆ

ಹಾವೇರಿ: ತಾಲ್ಲೂಕಿನ ದೇವಗಿರಿ ಸಮೀಪದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 2019ರಿಂದ ಇಲ್ಲಿಯವರೆಗೆ ‘ಅಕೌಂಟೆಂಟ್‌ ಜನರಲ್‌ ಆಡಿಟ್‌’ ನಡೆಯದ ಕಾರಣ ‘ಸ್ಕಾಲರ್‌ಶಿಪ್‌ಗೆ ಕನ್ನ’ ಪ್ರಕರಣದ ತನಿಖೆಯ ಮೇಲೆ ಕಾರ್ಮೋಡ ಕವಿದಿದೆ.   ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ವಿದ್ಯಾಭ್ಯಾಸ ಸಾಲದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು 2022ರ ಜೂನ್‌ನಲ್ಲಿ ಬೆಳಕಿಗೆ ಬಂದಿತ್ತು. ನಂತರ ಕಾಲೇಜಿನ ಆಂತರಿಕ ತನಿಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ತನಿಖೆ ಆಧರಿಸಿ, ಇಬ್ಬರು ಅಧೀಕ್ಷಕರು ಸೇರಿ ಐವರು …

Read More »

ಬೆಳಗಾವಿ| ಮೇಯರ್‌, ಉಪಮೇಯರ್‌; ಕೊನೆಕ್ಷಣದ ಕಸರತ್ತು

ಬೆಳಗಾವಿ: ಬೆಳಗಾವಿ ಮೇಯರ್‌, ಉಪಮೇಯರ್‌ ಆಯ್ಕೆ ಚುನಾವಣೆಗೆ ಸಂಬಂಧಿಸಿದಂತೆ ನಗರದಲ್ಲಿ ಭಾನುವಾರ ಇಡೀ ದಿನ ತುರುಸಿನ ಚಟುವಟಿಕೆಗಳು ನಡೆದವು. ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಆಕಾಂಕ್ಷಿಗಳು ಒಬ್ಬರಿಗಿಂತ ಒಬ್ಬರು ಉಮೇದಿನಲ್ಲಿದ್ದಾರೆ. ಉಪ ಮೇಯರ್‌ ಸ್ಥಾನಕ್ಕೂ ಬಿಜೆಪಿ, ಕಾಂಗ್ರೆಸ್‌ ಹಾಗೂ ಎಂಇಎಸ್‌ಗಳಲ್ಲಿ ಇನ್ನಿಲ್ಲದ ಕಸರತ್ತು ನಡೆದವು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನಾ ನೇತೃತ್ವದಲ್ಲಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಹಾಗೂ ಬಿಜೆಪಿ ಜಿಲ್ಲಾ ಘಟಕದ ಮುಖಂಡರು …

Read More »

ರೇಣುಕಾ ಸನ್ನಿಧಿಯಲ್ಲಿ ಭಕ್ತಿ ಹೊಳೆ- ಮುಗಿಲು ಮುಟ್ಟಿದ ಜೈಕಾರ

ಸವದತ್ತಿ: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಭಾನುವಾರ ಭಕ್ತಿಯ ಹೊಳೆ ಹರಿಯಿತು. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಜಗದಂಬಾ ಸನ್ನಿಧಿಯಲ್ಲಿ ಭಾರತ ಹುಣ್ಣಿಮೆ ಸಂಕ್ಷಿಪ್ತವಾಗಿ ಆಚರಿಸಲಾಗಿತ್ತು. ಈ ಬಾರಿ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಅಪಾರ ಜನ ಸೇರಿದರು.   ರೇಣುಕಾದೇವಿ ಸನ್ನಿಧಿಗೆ ಬಂದು ಪರಡಿ ತುಂಬುವುದು ಭಾರತ ಹುಣ್ಣಿಮೆಯ ಸಂಪ್ರದಾಯಗಳಲ್ಲಿ ಒಂದು. ಅದರಂತೆ, ಭಾನುವಾರ ಕೂಡ ಅಪಾರ ಭಕ್ತರು ಬೆಟ್ಟದಲ್ಲೇ ಪುಣ್ಯಸ್ನಾನ ಮಾಡಿ, ನೈವೇದ್ಯ ಸಿದ್ಧಪಡಿಸಿ ಪರಡಿ ತುಂಬಿದರು. ಕರಿಗಡಬು, …

Read More »