ಬೆಳಗಾವಿ: ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಗೆ ಕರ್ನಾಟಕದ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿ ಲಭಿಸಿದೆ. ಭಾರತ ಸರಕಾರದ ಗೃಹ ಸಚಿವಾಲಯ ಪ್ರತಿ ವರ್ಷ ಉತ್ತಮ ಪೊಲೀಸ್ ಠಾಣೆಗಳನ್ನು ನಿರ್ಧರಿಸುತ್ತಿದ್ದು ಕಳೆದ ವರ್ಷದಲ್ಲಿನ ಉತ್ತಮ ನಿರ್ವಹಣೆ ಹಾಗೂ ಕಾರ್ಯನಿರ್ವಹಣೆ ಪರಿಗಣಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ. ದೇಶಾದ್ಯಂತ ಪೊಲೀಸ್ ಠಾಣೆಗಳ ಶ್ರೇಯಾಂಕ ನಿರ್ಧಾರ ಗೃಹ ವ್ಯವಹಾರಗಳ ಸಚಿವಾಲಯದ ವಾರ್ಷಿಕ ಪ್ರಕ್ರಿಯೆಯಾಗಿದೆ. ಅಪರಾಧ ದರ, ತನಿಖೆ, ಪ್ರಕರಣಗಳ ವಿಲೇವಾರಿ, ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವೆಯ ವಿತರಣೆ ಸೇರಿದಂತೆ 165 …
Read More »4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ; ಅಮಿತ್ ಶಾ
ನವದೆಹಲಿ: ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಾಕ್ಯ ಅಮಿತ್ ಶಾ ತಿಳಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲಿದೆ. ಕರ್ನಾಟಕದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು. ಕರ್ನಾಟಕದ ಜೊತೆಗೆ ಇತರ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಪೂರ್ಣ …
Read More »ಪರವಾನಿಗೆ ಪಡೆಯದೆ ಕಳಸಾ-ಬಂಡೂರಿ ಕಾಮಗಾರಿ ಆರಂಭಿಸಬಾರದು: ಸುಪ್ರೀಂ ಕೋರ್ಟ್
ಪಣಜಿ: ಆಯೋಗ ನೀಡಿರುವ ಡಿಪಿಆರ್ ಅನುಮೋದನೆಯನ್ನು ಹಿಂಪಡೆಯುವಂತೆ ಹಾಗೂ ಕೂಡಲೇ ಜಲ ನಿರ್ವಹಣಾ ಪ್ರಾಧಿಕಾರ ರಚಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಿದ್ದು,”ಅಗತ್ಯ ಪರವಾನಿಗೆ ಪಡೆಯದೆ ಕರ್ನಾಟಕ ಕಳಸಾ-ಬಂಡೂರಿ ಕಾಮಗಾರಿ ಆರಂಭಿಸಬಾರದು ಹಾಗೂ ಜಲ ಆಯೋಗವು ಡಿಪಿಆರ್ ಪ್ರತಿಯನ್ನು ಗೋವಾ ಸರ್ಕಾರಕ್ಕೆ ಸಲ್ಲಿಸಬೇಕು” ಎಂದು ತೀರ್ಪು ನೀಡಿದೆ. ಕರ್ನಾಟಕಕ್ಕೆ ಕಳುಹಿಸಿದ ಶೋಕಾಸ್ ನೋಟಿಸ್ ಕುರಿತು ತೀರ್ಮಾನಿಸುವಂತೆ ಗೋವಾದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸುಪ್ರೀಂ …
Read More »ಬಜೆಟ್ ಅಧಿವೇಶನದ ಭಾಗ 1 ಮುಕ್ತಾಯ : ಮಾರ್ಚ್ 13 ರಿಂದ ಮತ್ತೆ ಲೋಕಸಭೆಯ ಕಲಾಪ
ನವದೆಹಲಿ: ಲೋಕಸಭೆಯ ಕಲಾಪನ್ನು ಸೋಮವಾರ ಒಂದು ತಿಂಗಳ ಅವಧಿಗೆ ಮುಂದೂಡಲಾಗಿದ್ದು, ಮಾರ್ಚ್ 13 ರಂದು ಮತ್ತೆ ಸಭೆ ಸೇರಲಿದೆ. ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 31 ರಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದೊಂದಿಗೆ ಪ್ರಾರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ‘ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ’ದ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ …
Read More »ಪುಲ್ವಾಮಾ ದುರಂತಕ್ಕೆ 4 ವರ್ಷ
ಹೊಸದಿಲ್ಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ನಡೆದ ಘೋರ ದುರಂತದಲ್ಲಿ ಮಡಿದ ವೀರ ಯೋಧರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೆನೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಪುಲ್ವಾಮಾದಲ್ಲಿ ಈ ದಿನ ನಾವು ಕಳೆದುಕೊಂಡ ನಮ್ಮ ಪರಾಕ್ರಮಿಗಳನ್ನು ನೆನಪಿಸಿಕೊಳ್ಳುತ್ತೇನೆ. ಅವರ ಅತ್ಯುನ್ನತ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಧೈರ್ಯವು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಮ್ಮನ್ನು ಪ್ರೇರೇಪಿಸುತ್ತದೆ’ …
Read More »ಸಿದ್ದರಾಮಯ್ಯ ರಾಜಕಾರಣ ಬಿಟ್ಟು ಜ್ಯೋತಿಷಿಯಾಗಲಿ: ನಳಿನ್ ಕುಮಾರ
ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜಕಾರಣ ಬಿಟ್ಟು ಜ್ಯೋತಿಷ್ಯ ಹೇಳಲಿ. ಅವರು ಇನ್ನು ಮುಂದೆ ನಿರುದ್ಯೋಗಿಗಳಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಹೇಳಿದರು. ಕೊಪ್ಪಳ ತಾಲೂಕಿನ ಹಲಗೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹಿಂದೆ ಅವರು ಹೇಳಿದ ಜ್ಯೋತಿಷ್ಯ ಸುಳ್ಳಾಗಿದೆ. ಅಪ್ಪನಾಣೆಗೂ ನರೇಂದ್ರ ಮೋದಿ ಪ್ರಧಾನಿ ಆಗಲ್ಲ ಎಂದರು, ಮೋದಿ ಅವರು ಎರಡೆರಡು ಬಾರಿ ಪ್ರಧಾನ ಮಂತ್ರಿಯಾದರು. ಕಳೆದ ಬಾರಿಯೂ ನನ್ನಪ್ಪನಾಣೆ ಯಡಿಯೂರಪ್ಪ ಸಿಎಂ ಆಗಲ್ಲ ಎಂದರು. …
Read More »ಏರ್ ಶೋದಿಂದ ಬಡವರ ಹೊಟ್ಟೆ ತುಂಬ್ತಾ? ಪ್ರಧಾನಿ ಮೋದಿಗೆ ಪ್ರಶ್ನೆಯಿಟ್ಟ ಎಚ್‌ಡಿಕೆ
ಅದ್ಧೂರಿಯಾಗಿ ಏರ್‌ಶೋ ಮಾಡಿದ್ರಲ್ಲಾ ಇದರಿಂದ ಬಡವರ ಹೊಟ್ಟೆ ತುಂಬ್ತಾ? ಎಂದು ಪ್ರಧಾನಿ ಮೋದಿ ಅವರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಅದ್ಧೂರಿಯಾದ ಏರ್‌ಶೋ ಮಾಡಿದ್ದೀರಿ, ಇದರಿಂದ ಬಡತನ ನಿವಾರಣೆಯಾಯ್ತಾ? ಬಡವರಿಗೆ ಆರ್ಥಿಕ ಸಹಾಯ ಆಗದ ಏರ್‌ಶೋ ಏಕೆ ಬೇಕು ಎಂದಿದ್ದಾರೆ. ಏರ್‌ಶೋ ಆಗ್ತಾ ಇರೋದು ಇದೇ ಮೊದಲಲ್ಲ, ಇಷ್ಟು ವರ್ಷದಿಂದ ನಡೆಯುತ್ತಿರೋ ಏರ್‌ಶೋದಿಂದ ಬಡವರಿಗೇನು ಲಾಭ ಆಗಿದೆ, ಆಗಸದಲ್ಲಿ ಏರ್‌ಶೋ ಅಂದ ನೋಡಿ ಹೊಟ್ಟೆ ತುಂಬಿಸ್ಕೋಬೇಕಾ ಎಂದು …
Read More »ಪಿಡಿಒ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ ನೀಡಿದ ರಾಜ್ಯ ಸರಕಾರ
ಕರ್ನಾಟಕ ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿ (PDO Recruitment 2023 ) ಖಾಲಿ ಇರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ದ್ವಿತೀಯ ದರ್ಜೆ ಸಹಾಯಕರು, ಗ್ರೇಡ್ 1, ಗ್ರೇಡ್ 2 ಹುದ್ದೆಗಳನ್ನು 3 ರಿಂದ 4 ತಿಂಗಳೊಳಗೆ ಭರ್ತಿ ಮಾಡುವ ಎಲ್ಲಾ ಸಾಧ್ಯತೆ ಇದೆ. ಈ ಕುರಿತು ನೇಮಕಾತಿ ಶೀಘ್ರದಲ್ಲಿ ನಡೆಸಲಾಗುವುದು ಎಂದು ವಿಧಾನ ಪರಿಷತ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯದ ಗ್ರಾಮ ಪಂಚಾಯತ್ ನೇಮಕಾತಿಯ ಸಂಪೂರ್ಣ ವಿವರ : …
Read More »ಕಾಂಗ್ರೆಸ್ ಪಕ್ಷ ಸೇರದ ಕಾರಣ ಸಿಬಿಐ ನನ್ನನ್ನು ಬಂಧಿಸಿತ್ತು ಎಂದು ಹೊಸ ಬಾಂಬ್ ಸಿಡಿಸಿದಜನಾರ್ದನ ರೆಡ್ಡಿ
ಕೊಪ್ಪಳ: ಹೊಸ ರಾಜಕೀಯ ಪಕ್ಷ ಸ್ಥಾಪಿಸಿ ವಿಧಾನಸಭೆ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಈ ಹಿಂದೆ ಸಿಬಿಐ ತಮ್ಮನ್ನು ಬಂಧಿಸಿದ ರಹಸ್ಯ ಬಿಚ್ಚಿಟ್ಟಿದ್ದಾರೆ. ಸಿಬಿಐ ಮೂಲಕ ಕಾಂಗ್ರೆಸ್ ಸೇರಲು ತಮಗೆ ಆಹ್ವಾನ ನೀಡಲಾಗಿತ್ತು ಎಂದು ಹೇಳಿದ್ದಾರೆ. ಗಂಗಾವತಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಸಿಬಿಐ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ್ದು, ಆದರೆ, ಸುಷ್ಮಾ ಸ್ವರಾಜ್ ಅವರು ನನ್ನ ಮೇಲೆ ಇಟ್ಟಿದ್ದ …
Read More »ಪುರುಷ’ರು ಈ ಸಮಯದಲ್ಲಿ ‘ಏಲಕ್ಕಿ’ ಸೇವಿಸುವುದರಿಂದ ಶಕ್ತಿ ಹೆಚ್ಚಾಗುತ್ತೆ, ಈ ಸಮಸ್ಯೆಗಳು ದೂರವಾಗ್ತವೆ!
ಮನೆಗಳಲ್ಲಿ ಸಿಗುವ ಸಾಂಬಾರ ಪದಾರ್ಥಗಳು ಔಷಧೀಯವಾಗಿಯೂ ತುಂಬಾ ಪರಿಣಾಮಕಾರಿ. ಅರಿಶಿನ, ಲವಂಗ ಮತ್ತು ಕರಿಮೆಣಸು, ರುಚಿಯ ಜೊತೆಗೆ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತವೆ. ಈ ಮಸಾಲೆಗಳಲ್ಲಿ ಒಂದು ಏಲಕ್ಕಿ. ಇದನ್ನು ನಿತ್ಯ ಸೇವಿಸುವುದರಿಂದ ಗ್ಯಾಸ್, ಅಸಿಡಿಟಿ, ಮಲಬದ್ಧತೆ, ಹೊಟ್ಟೆ ಸೆಳೆತ ಸಮಸ್ಯೆ ದೂರವಾಗುತ್ತದೆ. ಪುರುಷರ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಈ ಸಣ್ಣ ಏಲಕ್ಕಿ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು, ಆಹಾರದ ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣ …
Read More »