ಯಾದಗಿರಿ: ಈ ಪ್ರೇಮಿಗಳು ಶಿವರಾತ್ರಿ ಹಬ್ಬದಂದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಯಾದಗಿರಿ ಜಿಲ್ಲೆಯ ಶಹಾಪರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ನಡೆದಿದ್ದು ಮೃತರನ್ನು ಸುವರ್ಣ(20), ಈಶಪ್ಪ(22) ಎಂದು ಗುರುತಿಸಲಾಗಿದೆ. ಇಬ್ಬರೂ ಶಹಾಪುರದ ಉರುಸಗುಂಡಗಿ ಗ್ರಾಮದವರಾಗಿದ್ದು ಐದಾರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. 2 ವರ್ಷದ ಹಿಂದೆ ಪ್ರೀಯತಮೆ ಮದುವೆಯಾಗಿದ್ದ ಸುವರ್ಣ, ಬೆಂಗಳೂರಿನಲ್ಲಿ ತನ್ನ ಗಂಡನ ಜೊತೆ ವಾಸವಿದ್ದಳು. ನಿನ್ನೆ ಗಂಡನಿಗೆ ಹೇಳದೇ ಬೆಂಗಳೂರಿನಿಂದ ಹುರುಸಗುಂಡಗಿ ಗ್ರಾಮಕ್ಕೆ ಈಕೆ ಬಂದಿದ್ದಳು. ಇಡೀ ರಾತ್ರಿ ಒಂದೆಡೆ …
Read More »ದೇವಾಲಯದಲ್ಲಿ ಭಕ್ತರಿಗೆ ಕೊಡುವ ಲಡ್ಡು ಪೊಟ್ಟಣಗಳ ಮೇಲೂ ರೌಡಿ ಸುನೀಲನ ಚಿತ್ರ!
ಕೆಲವು ದಿನಗಳ ಹಿಂದೆ ರಕ್ತದಾನ ಶಿಬಿರದಲ್ಲಿ ಬಿಜೆಪಿಯ ಶಾಸಕರು, ಸಂಸದರೊಂದಿಗೆ ವೇದಿಕೆ ಹಂಚಿಕೊಂಡು ಸುದ್ದಿಯಾಗಿದ್ದ ನಗರದ ಕುಖ್ಯಾತ ರೌಡಿ ಶೀಟರ್ ಸೈಲೆಂಟ್ ಸುನೀಲ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ದೇವಾಲಯಗಳಲ್ಲಿ ಭಕ್ತರಿಗೆ ಸೈಲೆಂಟ್ ಸುನಿಲನ ಕಡೆಯಿಂದ ಲಡ್ಡು ವಿತರಣೆ ಜೋರಾಗಿ ನಡೆದಿದೆ. ಸದ್ಯ ರೌಡಿಸಂ ಬಿಟ್ಟಿರುವುದಾಗಿ ಹೇಳುತ್ತಲೇ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವ ಸೈಲೆಂಟ್ ಸುನೀಲ ಭಕ್ತರಿಗೆ ಲಡ್ಡು ಪ್ರಸಾದ ಹಂಚಿದ್ದಾನೆ. ಲಡ್ಡು ಪ್ರಸಾದದ ಕವರ್ ಮೇಲೆ ಸೈಲೆಂಟ್ ಸುನೀಲನ …
Read More »ಉದ್ಧವ್ ಠಾಕ್ರೆ ಕುಟುಂಬದಿಂದ ಕೈಜಾರಿದ ಶಿವಸೇನೆ; ಸಿಎಂ ಶಿಂಧೆ ಬಣ ಮೇಲುಗೈ
ನವದೆಹಲಿ ಶೀವಸೇನೆಯ ಬಿಲ್ಲು ಮತ್ತು ಬಾಣ ಚಿಹ್ನೆಯ ನಿಜವಾದ ವಾರಸುದಾರ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬಣ ಎಂದು ಕೇಂದ್ರ ಚುನಾವಣಾ ಆಯೋಗ ಆದೇಶಿಸುವ ಮೂಲಕ ಬಾಳಾ ಸಾಹೇಬ್ ಠಾಕ್ರೆ ಸ್ಥಾಪಿಸಿದ್ದ ಶಿವಸೇನೆ ಪಕ್ಷ ಠಾಕ್ರೆ ಕುಟುಂಬದಿಂದ ಅಧಿಕೃತವಾಗಿ ಕೈಜಾರಿದಂತಾಗಿದೆ. ಬಾಳಾ ಸಾಹೇಬ್ ಠಾಕ್ರೆ ರಾಜಕೀಯ ಬಳುವಳಿ ಮುಂದುವರಿಸುವ ಜವಾಬ್ದಾರಿ ಹೊತ್ತರೂ ಬಿಜೆಪಿ ಜತೆ ಮುನಿಸಿಕೊಂಡು ಕಾಂಗ್ರೆಸ್-ಎನ್ಸಿಪಿ ಜತೆ ಮೈತ್ರಿ ಮಾಡಿಕೊಂಡು ಸಿಎಂ ಕುರ್ಚಿಗೇರಿದ್ದ ಉದ್ಧವ್ ಠಾಕ್ರೆ, ಎರಡೇ …
Read More »ಹಗಲು ಶಿವನಾಮ ಜಪ, ರಾತ್ರಿ ಜಾಗರಣೆ
ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶನಿವಾರ ಮಹಾಶಿವರಾತ್ರಿಯ ಸಡಗರ ಮನೆ ಮಾಡಿತು. ನಸುಕಿನಿಂದಲೇ ಹಲವು ಭಕ್ತರು ಶಿವಾಲಯಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ನಗರದ ಕಪಿಲೇಶ್ವರ ಮಂದಿರ, ಮಿಲಿಟರಿ ಮಹಾದೇವ ಗುಂಡಿ, ಕೆಎಲ್‌ಇ ಶಿವಾಲಯ, ಕಣಬರಗಿಯ ಸಿದ್ಧೇಶ್ವರ ದೇವಾಲಯ, ಶಿವಾಜಿನಗರದ ವೀರಭದ್ರೇಶ್ವರ ದೇವಸ್ಥಾನ, ಪೊಲೀಸ್ ಕೇಂದ್ರ ಸ್ಥಾನದಲ್ಲಿರುವ ವೀರಭದ್ರೇಶ್ವರ ದೇವಸ್ಥಾನ, ಶಹಾಪುರದ ಮಹಾದೇವ, ಶಾಹುನಗರ ಶಿವ ಮಂದಿರ, ಮಹಾಂತೇಶ ನಗರದ ಶಿವಾಲಯ, ಶಿವಶಕ್ತಿ ಕಾಲೊನಿ, ಸದಾಶಿವ …
Read More »ಶಿಂಧೆ ಬಣಕ್ಕೆ ಬಿಲ್ಲುಬಾಣ ಉದ್ಧವ್ಗೆ ಮುಖಭಂಗ: ಬಂಡಾಯ ಗುಂಪೇ ನಿಜವಾದ ಶಿವಸೇನೆ, ಚುನಾವಣಾ ಆಯೋಗ ಆದೇಶ
ನವದೆಹಲಿ: ಮಹಾರಾಷ್ಟ್ರದಲ್ಲಿ ಶಿವಸೇನೆ ಎರಡು ಬಣಗಳಾಗಿ ಒಡೆದ ನಂತರ ಪಕ್ಷದ ಹೆಸರು ಮತ್ತು ಚಿಹ್ನೆ ಬಗ್ಗೆ ಎದ್ದಿದ್ದ ತಕರಾರಿಗೆ ಚುನಾವಣಾ ಆಯೋಗ ಶುಕ್ರವಾರ ಅಂತ್ಯಹಾಡಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ಶಿವಸೇನೆ ಎಂಬ ಪಕ್ಷದ ಹೆಸರು, ಪಕ್ಷದ ಮೂಲ ಚಿಹ್ನೆಯಾದ ಬಿಲ್ಲು ಬಾಣವನ್ನು ನೀಡಿ, ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿದೆ. ಇದರಿಂದ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ. 2022 ರ ಜೂನ್ನಲ್ಲಿ ಏಕನಾಥ …
Read More »ಬೇರೆ ಜಿಲ್ಲೆ ಬಗ್ಗೆ ಅಷ್ಟೊಂದು ಕಾಳಜಿ ವಹಿಸದೇ ತವರು ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದ ಬೊಮ್ಮಾಯಿ
ಹಾವೇರಿ: ಕಳೆದ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕೊಟ್ಟಂತೆಯೇ, ಈ ಬಾರಿಯ ಬಜೆಟ್‌ನಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಜಿಲ್ಲೆ ಹಾವೇರಿಗೆ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಹೊಸದಾಗಿ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರ ಸ್ಥಾಪನೆ, ಸವಣೂರಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ, ಹಾವೇರಿಯಲ್ಲಿ ಆಧುನಿಕ ತಂತ್ರಜ್ಞಾನ ಆಧರಿತ ಹೂವಿನ ಚಿಲ್ಲರೆ ಮಾರುಕಟ್ಟೆ ನಿರ್ಮಾಣ, ಬಂಕಾಪುರದ ನಗರೇಶ್ವರ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಲಾಗಿದೆ. …
Read More »ಬೆಳಗಾವಿ: ಅತ್ಯಾಚಾರವೆಸಗಿದ ಪಿಎಸ್‌ಐ- ವಿದ್ಯಾರ್ಥಿನಿಯಿಂದ ದೂರು ದಾಖಲು
ಬೆಳಗಾವಿ: ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಗೆ ಬರುವ ವೈರ್‌ಲೆಸ್ ಠಾಣೆಯ ಪಿಎಸ್‌ಐ ಲಾಲ್‌ಸಾಬ್ ಅಲ್ಲಿಸಾಬ್ ನದಾಫ (28) ಅವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ, ಕಾಲೇಜು ವಿದ್ಯಾರ್ಥಿನಿಯೊಬ್ಬರು ಗುರುವಾರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲಾಲ್‌ಸಾಬ್ ಅವರಿಗೆ ಫೆ. 10ರಂದು ಬೇರೊಬ್ಬ ಯುವತಿ ಜತೆಗೆ ಮದುವೆಯಾಗಿದೆ. ವಿಷಯ ಗೊತ್ತಾದ ಬಳಿಕ ವಿದ್ಯಾರ್ಥಿನಿ ದೂರು ದಾಖಲಿಸಿದ್ದಾರೆ. ‘2020ರ ಜೂನ್ 16ರಂದು ಪಿಎಸ್‌ಐ ಲಾಲ್‌ಸಾಬ್ ಫೇಸ್‌ಬುಕ್ ಮೆಸೆಂಜರ್ ಮೂಲಕ ಪರಿಚಯವಾಗಿದ್ದರು. …
Read More »ಬಜೆಟ್ ಗದಗ ಜಿಲ್ಲೆ ‘ಶೂನ್ಯ ಸಂಪಾದನೆ’: ಜನತೆ ಆಕ್ರೋಶ
ಗದಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ಜಿಲ್ಲೆಯ ಜನತೆಗೆ ನಿರಾಸೆ ಮೂಡಿಸಿದೆ. ತವರು ಜಿಲ್ಲೆ ಹಾವೇರಿಗೆ ಭರಪೂರ ಯೋಜನೆಗಳನ್ನು ಪ್ರಕಟಿಸಿರುವ ಅವರು ಪಕ್ಕದ ಗದಗ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತೋರಿದ್ದಾರೆ. ಕೈಗಾರಿಕೆ, ಕೃಷಿ, ನೀರಾವರಿ, ಪ್ರವಾಸೋದ್ಯಮ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಸಾಕಷ್ಟು ಅನುದಾನ ಮತ್ತು ಹೊಸ ಯೋಜನೆಗಳು ಘೋಷಣೆ ಆಗಬಹುದು ಎಂಬ ಜಿಲ್ಲೆಯ ಜನರ ನಿರೀಕ್ಷೆಗಳು ಹುಸಿಯಾಗಿವೆ. ಕಳಸಾ ಮತ್ತು …
Read More »ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಗೆ ಕೊನೆ ಮೊಳೆ
ಶಿವಮೊಗ್ಗ: ವಿಐಎಸ್‌ಎಲ್ ಮುಚ್ಚುವುದಿಲ್ಲ, ಉಳಿಸಿಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಇತ್ತ ಭರವಸೆ ನೀಡುತ್ತಿದ್ದರೆ; ಅತ್ತ ಕೇಂದ್ರ ಸರಕಾರ ಕಾರ್ಖಾನೆ ಮುಚ್ಚುವುದು ಶತಸ್ಸಿದ್ಧ ಎಂದು ರಾಜ್ಯಸಭೆಯಲ್ಲೇ ಸ್ಪಷ್ಟ ಪಡಿಸುವ ಮೂಲಕ ಶತ ಮಾ ನಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ರಾಜ್ಯದ ಏಕೈಕ ಸಾರ್ವಜನಿಕ ಉಕ್ಕಿನ ಕಾರ್ಖಾನೆ ವಿಐಎಸ್‌ಎಲ್‌ಗೆ ಚರಮ ಗೀತೆ ಬರೆದಿದೆ. ಇಲ್ಲಿಗೆ ಕೈಗಾರಿಕಾ ನಗರದ ಇತಿಹಾಸವೂ ಕೊನೆಯಾಗಲಿದೆ. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ದೂರದೃಷ್ಟಿ ಫಲವಾಗಿ …
Read More »ಇಂದು ವಿಠಲಾಪೂರದಲ್ಲಿ ರಸಲಿಂಗಕ್ಕೆ ವಿಶೇಷ ಪೂಜೆ
ಮುಂಡರಗಿ: ತಾಲೂಕಿನ ವಿಠಲಾಪೂರ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಪರೂಪದ ಪಂಚಲೋಹದ ರಸಲಿಂಗ(ಶಿವಲಿಂಗ)ಇದ್ದು, ಮಹಾಶಿವರಾತ್ರಿಯಂದು ವಿಶೇಷವಾಗಿ ರಸಲಿಂಗ ಪೂಜೆ ನಡೆಯುತ್ತದೆ. ಶಿವರಾತ್ರಿ ದಿನ ರಸಲಿಂಗವನ್ನು ತೊಳೆದು ಸಕಲ ಹೂಗಳು, ಬಿಲ್ವಪತ್ರಿಗಳಿಂದ ಮಹಾಪುರುಷರ ಕುಟುಂಬದವರು ಪೂಜೆ ನೆರವೇರಿಸುತ್ತಾರೆ. ದಕ್ಷಿಣ ಭಾರತದಲ್ಲಿಯೇ ವಿಶೇಷವಾಗಿರುವ ರಸಲಿಂಗ ಹಲವು ಕುತೂಹಲಕರ ಸಂಗತಿಗಳಿಂದ ಒಡಗೂಡಿದೆ. ರಸಶಾಸ್ತ್ರ ಅಧ್ಯಯನ ಮಾಡಿದ್ದ ಯೋಗಗುರುಗಳು ರಸಲಿಂಗವನ್ನು ರಚನೆ ಮಾಡಿದ್ದರು ಎನ್ನುವ ಮಾತು ಜನಜನಿತವಾಗಿದೆ. ವಿಠಲಾಪೂರದ ಮಹಾಪುರುಷರ ಕುಟುಂಬದ ಮೂಲ ಪುರುಷರಾದ ಬಿಷ್ಟಪ್ಪಯ್ಯ …
Read More »