Breaking News

ಯುವತಿಯ ಸೀಟಿನ ಮೇಲೆ ಸಹ ಪ್ರಯಾಣಿಕನಿಂದ ಮೂತ್ರ ವಿಸರ್ಜನೆ

ಹುಬ್ಬಳ್ಳಿ: ಮಹಿಳಾ ಪ್ರಯಾಣಿಕಳ ಸೀಟಿನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆ ವಿಜಯಪುರ ಮತ್ತು ಮಂಗಳೂರು ನಡುವೆ ಸಂಚರಿಸುವ ನಾನ್ ಎಸಿ ಸ್ಲೀಪರ್ ಬಸ್​ನಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಹುಬ್ಬಳ್ಳಿ ತಾಲೂಕಿನ ಕಿರೇಸೂರ್ ಡಾಬಾ ಬಳಿ ಮಂಗಳೂರು-2ನೇ ಘಟಕಕ್ಕೆ‌ ಸೇರಿದ್ದ ನಾನ್ ಎಸಿ ಸ್ಲೀಪರ್ ಬಸ್​ನಲ್ಲಿ ನಡೆದಿದೆ. ಪ್ರಯಾಣಿಕರ ಊಟ, ತಿಂಡಿಗಾಗಿ ಡಾಬಾ ಬಳಿ ಬಸ್​ ನಿಲ್ಲಿಸಿದಾಗ ಎಲ್ಲ ಪ್ರಯಾಣಿಕರು ಕೆಳಗೆ ಇಳಿದಿದ್ದರು. ಈ ವೇಳೆ 30 ವರ್ಷದ ವ್ಯಕ್ತಿ ಮೂತ್ರ …

Read More »

ತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ: ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಸರಣಿ ಟ್ವೀಟ್​ ಮೂಲಕ ವಾಗ್ದಾಳಿ ನಡೆಸಿದ್ದಾರೆ.   ಮಾಂಸ ತಿನ್ನುವುದು ತಿನ್ನದಿರುವುದು, ದೇವಸ್ಥಾನಗಳಿಗೆ ಹೋಗುವುದು ಹೋಗದಿರುವುದು ಅವರವರ ವೈಯಕ್ತಿಕ ಆಯ್ಕೆಗಳಾಗಿವೆ. ಇದು ರಾಜಕೀಯ ಚರ್ಚೆಯ ವಸ್ತು ಆಗಬಾರದು. ರಾಜಕೀಯ ನಾಯಕರು ಜನತೆಯ ಕಲ್ಯಾಣ, ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚಿಸಬೇಕು. ಪರದೂಷಣೆಯಲ್ಲಿ ನಿರತರಾಗಿರುವ …

Read More »

ರೈಲಿಗೆ ತಲೆಕೊಟ್ಟ ಅನುದಾನಿತ ಶಾಲಾ ಶಿಕ್ಷಕ..!

ಬೆಂಗಳೂರು: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರಿಂದ ಪಿಂಚನಿಗಾಗಿ ನಡೆಯುತ್ತಿರುವ ಅನಿರ್ದಿಷ್ಟವಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಿಕ್ಷಕ ಈಗ ಏಕಾಏಕಿ ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾನೆ. ಮೃತಪಟ್ಟಿರುವ ಶಿಕ್ಷನನನ್ನು ಮೂಲತಃ ರಾಯಚೂರು ಜಿಲ್ಲೆಯ ಸಿಂಧೂನೂರು ಪಟ್ಟಣದ ಶಂಕರಪ್ಪ ಬೋರಡ್ಡಿ (47) ಎನ್ನಲಾಗಿದೆ.ಅವರು ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. . ಮಂಗಳವಾರದಂದು ಅವರು ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರಶಿಕ್ಷಕರ ಸದನದಲ್ಲಿ ತಂದಿದ್ದರು.ಬಳಿಕ ರೂಂ ನಲ್ಲೆ ಬ್ಯಾಗ್ ಇಟ್ಟು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ …

Read More »

ಹ್ಯಾಪಿ ಎಂಡಿಂಗ್ʼ ಬೇಕು ಅಂತ ಯುವತಿ ಮೇಲೆ ʼಅತ್ಯಾಚಾʼರವೆಸಗಿದ ಕಾಮುಕ..!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಸಾಜ್ ಪಾರ್ಲರ್‌ಗಳ ಹಾವಳಿ ಹೆಚ್ಚಾಗಿದೆ. ಸಾವಿರಾರು ಪಾರ್ಲರ್ ಗಳು ತಲೆ ಎತ್ತಿವೆ. ಇಂತಹ ಪಾರ್ಲರ್ ಗಳಲ್ಲಿ ‌ಕೆಲಸ ಮಾಡುವ ಯುವತಿಯರು ಎಷ್ಟರ ಮಟ್ಟಿಗೆ‌ ಸೇಫ್ ಅನ್ನೋದೆ ಈಗಿನ ಪ್ರಶ್ನೆಯಾಗಿದೆ. ಜಯನಗರ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿನ ಮ್ಯಾಜಿಕ್ ಟೆಚ್ ಯೂನಿಸೆಕ್ಸ್ ಸೆಲೂನ್ ಪಾರ್ಲರ್ ಒಂದರಲ್ಲಿ ಇದೀಗ ಅತ್ಯಾಚಾರದ ಆರೋಪವೊಂದು ಕೇಳಿ ಬಂದಿದೆ.‌ಕಾಮಕ ರವೀಂದ್ರ ಶೆಟ್ಟಿ ಎಂಬಾತ ಯುವತಿಯ ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾನೆ.   ಮಸಾಜ್ ಪಾರ್ಲರ್‌ನಲ್ಲಿ …

Read More »

ಭಾರತದಲ್ಲೂ ಶೀಘ್ರದಲ್ಲೇ ಭಾರಿ ಭೂಕಂಪ ಸಾಧ್ಯತೆ!; ತಜ್ಞರ ಎಚ್ಚರಿಕೆ

ನವದೆಹಲಿ: ಕಳೆದ ಎರಡು ಮೂರು ವಾರಗಳಲ್ಲಿ ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ ಭೀಕರ ಸರಣಿ ಭೂಕಂಪದಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಅಲ್ಲದೆ ಭಾರಿ ಆಸ್ತಿ-ಪಾಸ್ತಿ ಹಾನಿಗೀಡಾಗಿದ್ದು, ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದರ ನಡುವೆ ಭಾರತದಲ್ಲೂ ಸದ್ಯದಲ್ಲೇ ಭಾರಿ ಭೂಕಂಪ ಸಂಭವಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ನ್ಯಾಷನಲ್​ ಜಿಯೋಫಿಸಿಕಲ್ ರಿಸರ್ಚ್​ ಇನ್​ಸ್ಟಿಟ್ಯೂಟ್​(ಎನ್​ಜಿಆರ್​​ಐ) ತಜ್ಞರು ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ಹಿಮಾಲಯ ಭಾಗದಲ್ಲಿ ಭೂಕಂಪ ಆಗುವ ಸಾಧ್ಯತೆಗಳಿದ್ದು, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ …

Read More »

ರಾಜಕೀಯ ರಿ ಎಂಟ್ರಿ’ ಮುಂದೂಡಿದ ನಟ ಅನಂತ್ ನಾಗ್ : ‘ಬಿಜೆಪಿ’ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರು

ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟ ಮತ್ತು ಮಾಜಿ ಸಚಿವ ಅನಂತ್ ನಾಗ್ ಅವರು ಇಂದು ಸಂಜೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಕಾರಣಾಂತರದಿಂದ ಬಿಜೆಪಿ ಸೇರ್ಪಡೆಯನ್ನು ಸದ್ಯಕ್ಕೆ ಮುಂದೂಡಿದ್ದಾರೆ. ಹೌದು. ಸ್ಯಾಂಡಲ್ ವುಡ್ ಹಿರಿಯ ನಟ ಮತ್ತು ಮಾಜಿ ಸಚಿವ ಅನಂತ್ ನಾಗ್ ಅವರು ಇಂದು ಸಂಜೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಸಂಜೆ 4.30ಕ್ಕೆ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ …

Read More »

ದೇಶದಲ್ಲಿ ಭೂಕಂಪನ , ಜಲ ಪ್ರಳಯ ಸಂಭವಿಸುತ್ತೆ’ : ಬಬಲಾದಿ ಸದಾಶಿವ ಮಠದ ಸ್ವಾಮೀಜಿ ಭವಿಷ್ಯ

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಸದಾಶಿವ ಮುತ್ಯಾನ ಮಠದ ಸ್ವಾಮೀಜಿ 2023 ರ ಕಾಲಜ್ಞಾನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಭೂಕಂಪನ ಹಾಗೂ ಜಲಪ್ರಳಯ ಉಂಟಾಗಲಿದೆ ಎಂದು ಹೊಳೆಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಶ್ರೀ ಸಿದ್ಧರಾಮಯ್ಯ ಹೊಳಿಮಠ ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಭೂಮಿ ಕುಪ್ಪಳಿಸಲಿದೆ ಎಂದು ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ಇದೀಗ ಭವಿಷ್ಯ ನುಡಿದಿದ್ದಾರೆ. ಸಜ್ಜನರು ಕೂಡ ದುರ್ಜನರಾಗುತ್ತಾರೆ, ಹಿಂಗಾರು ಮುಂಗಾರು ಮಳೆ ಉತ್ತಮವಾಗಲಿದೆ.ನಮ್ಮ ನಮ್ಮಲ್ಲಿ …

Read More »

2024ರ ಲೋಕಸಭೆ ಚುನಾವಣೆ: ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ- ಖರ್ಗೆ

ಕೊಹಿಮಾ: ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರಂತಹ ನೂರು ಮಂದಿ ಬಂದರೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಚುನಾವಣೆ ರ್‍ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.   ದೇಶವನ್ನು ಉತ್ತಮವಾಗಿ ಮುನ್ನಡೆಸುವ ವ್ಯಕ್ತಿ ತಾನೊಬ್ಬನೇ, ಬೇರೆ ಯಾರು ಇಲ್ಲ ಎಂದುಕೊಂಡಿದ್ದಾರೆ. ನಿಮ್ಮ ಈ ಎಲ್ಲಾ ನಂಬಿಕೆಗಳು ಮುಂದಿನ ಚುನಾವಣೆಯಲ್ಲಿ ಹುಸಿಯಾಗಲಿವೆ ಎಂದರು. ನೀವು ಸರ್ವಾಧಿಕಾರಿ ಅಲ್ಲ, ಜನರಿಂದ ಆಯ್ಕೆಯಾದ ನಿಮಗೆ …

Read More »

ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳ ಪೈಕಿ 10ರಲ್ಲಿ ಮರಾಠಿ ಮತದಾರರೇ ನಿರ್ಣಾಯಕ.

ಬೆಳಗಾವಿ: ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳ ಪೈಕಿ 10ರಲ್ಲಿ ಮರಾಠಿ ಮತದಾರರೇ ನಿರ್ಣಾಯಕ. ಹೀಗಾಗಿ, ಮರಾಠಿ ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತುಗಳು ನಡೆದಿವೆ. ಕೆಲವೇ ವರ್ಷಗಳ ಹಿಂದೆ 4ರಿಂದ 6 ಶಾಸಕರನ್ನು ಹೊಂದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಈಗ ದೂಳೀಪಟವಾಗಿದೆ. ಆ ಎಲ್ಲ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು, ಟಿಕೆಟ್‌ ಆಕಾಂಕ್ಷಿಗಳೂ ಓಲೈಕೆ ಆರಂಭಿಸಿದ್ದಾರೆ. ಶಿವಾಜಿ ಮೂರ್ತಿ ಪ್ರತಿಷ್ಠಾಪನೆ, ಮರಾಠಿ ಸಾಹಿತ್ಯ ಸಮ್ಮೇಳನ, ಮರಾಠಿಗರೇ ಹೆಚ್ಚಿರುವ ಹಳ್ಳಿಗಳಲ್ಲಿ ಭೂಮಿಪೂಜೆ, ಮಹಾರಾಷ್ಟ್ರ …

Read More »

ವರ್ತುಲ ರಸ್ತೆ: ಟೆಂಡರ್‌ಗೆ ಸರ್ಕಾರ ಅನುಮತಿ

ಬೆಳಗಾವಿ: ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ರಿಂಗ್‌ ರಸ್ತೆ ನಿರ್ಮಿಸಲು ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿದೆ. ಅಲ್ಲದೇ, ಕಳೆದ ಜನವರಿ 1ರಂದು ಟೆಂಡರ್‌ ಪ್ರಕ್ರಿಯೆಗೂ ಅನುಮತಿ ನೀಡಿದೆ. ತಮ್ಮ ಫಲವತ್ತಾದ ಭೂಮಿ ಹಾಳಾಗುತ್ತದೆ ಎಂದು 31 ಹಳ್ಳಿಗಳ ರೈತರು ಈ ರಿಂಗ್ ರಸ್ತೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಎರಡು ವರ್ಷಗಳಿಂದ ಇದರ ಕೆಲಸಗಳು ಆಮೆಗತಿಯಲ್ಲಿ ಸಾಗಿವೆ. ಮತ್ತೆ ಕೆಲವು ರೈತರು ನ್ಯಾಯಾಲಯದ ಮೆಟ್ಟಿಲೂ ಹತ್ತಿದ್ದಾರೆ. ಇದೆಲ್ಲರ ಆಚೆಗೂ ಸರ್ಕಾರದ …

Read More »