ಅಥಣಿ: ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಉಪಮುಖ್ಯಮಂತ್ರಿಯೂ ಆದ ಲಕ್ಷ್ಮಣ ಸವದಿ ಕೋಟಿ ವೀರ ಅನ್ನಿಸಿಕೊಂಡಿದ್ದಾರೆ. ತಮ್ಮ ಹಾಗೂ ಪಿತ್ರಾರ್ಜಿತ ಆಸ್ತಿ ಸೇರಿ ಈ ಬಾರಿ ₹ 29.55 ಕೋಟಿ ಆಸ್ತಿ ಹೊಂದಿದ್ದಾಗಿ ಅವರು ಘೋಷಿಸಿಕೊಂಡಿದ್ದಾರೆ. ಅವರ ಕೈಯಲ್ಲಿ ₹ 7 ಲಕ್ಷ ಹಾಗೂ ಪತ್ನಿ ಕೈಯಲ್ಲಿ ₹ 2 ಲಕ್ಷ ಹಣವಿದೆ. ವಿವಿಧ ಬ್ಯಾಂಕು, ಸಹಕಾರ ಸಂಘಗಳಲ್ಲಿ ₹ 6.66 ಕೋಟಿ ಹಣವನ್ನು ಅವರು ಉಳಿತಾಯ ಮಾಡಿದ್ದಾರೆ. …
Read More »ಲಕ್ಷ್ಮೀ ಹೆಬ್ಬಾಳಕರ ಆದಾಯ ₹7.15 ಕೋಟಿಗೆ ಏರಿಕೆ
ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಆದಾಯದಲ್ಲಿ ಗಣನೀಯ ಏರಿಕೆ ಕಂಡಿದೆ. 2018ರಲ್ಲಿ ₹36.58 ಲಕ್ಷ ಆದಾಯ ಹೊಂದಿದ್ದ ಅವರು, 2022ರ ಹೊತ್ತಿಗೆ ₹7.15 ಕೋಟಿ ಏರಿಸಿಕೊಂಡಿದ್ದಾರೆ. ಅಂದರೆ ಐದು ವರ್ಷಗಳಲ್ಲಿ ₹6.70 ಕೋಟಿ ಆದಾಯ ಏರಿಕೆ ಕಂಡಿದೆ. 2019ರಲ್ಲಿ ₹41.67 ಲಕ್ಷ, 2020ರಲ್ಲಿ ₹ 43.71 ಲಕ್ಷ, 2021ರಲ್ಲಿ ₹42.14 ಲಕ್ಷ ಆದಾಯ ಹೊಂದಿದ್ದಾಗಿ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿದೆ. ಆದರೆ, 2022ರಲ್ಲಿ ಏಕಾಏಕಿ …
Read More »ಬೊಮ್ಮಾಯಿ ಅವರನ್ನು ಬಳಸಿ ಬಿಸಾಕುತ್ತಾರೆ; ಎಂ.ಬಿ ಪಾಟೀಲ
ಹುಬ್ಬಳಿ: ಚುನಾವಣೆ ಮುಗಿದ ನಂತರ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಲಕ್ಷ್ಮ ಸವದಿ ಅವರಿಗೆ ಬಂದ ಪರಿಸ್ಥಿತಿ ಬಸವರಾಜ ಬೊಮ್ಮಾಯಿ ಅವರಿಗೆ ಬರಲಿದೆ. ಮುಂದಿನ ಸರದಿ ಅವರದ್ದು. ಅವರನ್ನೂ ಬಳಸಿ ಬಿಸಾಕಿತ್ತಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು. ನಗರದ ಮೂರು ಸಾವಿರ ಮಠದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯ ಕೆಲವು ನಾಯಕರು ಲಿಂಗಾಯತ ಸಮಾಜದ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಸಿ.ಎಂ ಸ್ಥಾನದಿಂದ ಕೆಳಗಿಳಿಸಿದ ನಂತರ …
Read More »ಅನಧಿಕೃತ ಶಾಲೆಗಳನ್ನು ಮುಚ್ಚಲು ಮೇ 25ರವರೆಗೆ ಗಡುವು
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯದಲ್ಲಿನ ಅನಧಿಕೃತ ಶಾಲೆಗಳನ್ನು ಮುಚ್ಚಲು ಮೇ 25ರವರೆಗೆ ಗಡುವು ನೀಡಿದೆ. ‘ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಬೇಕು. ದೂರುಗಳು ಬಂದರೂ, ಕ್ರಮ ಕೈಗೊಳ್ಳದೆ ಸಮಯ ವ್ಯರ್ಥ ಮಾಡಬಾರದು. ಪಟ್ಟಿಯನ್ನು ಒದಗಿಸಿದರೆ ಪೋಷಕರಿಗೂ ಅನುಕೂಲವಾಗುತ್ತದೆ. ಮಕ್ಕಳನ್ನು ಶಾಲೆಗೆ ಸೇರಿಸುವ ಮೊದಲು ಪೋಷಕರು ಶಾಲಾ ಪೂರ್ವಾಪರ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ, ಬೋಧಕ ಮತ್ತು …
Read More »ಮನೆಯಿಂದಲೇ ಮತದಾನ: 8,730 ಮಂದಿಯಿಂದ ಆಯ್ಕೆ
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ 80 ವರ್ಷಕ್ಕೂ ಹೆಚ್ಚಿನ ವಯೋಮಾನದವರಲ್ಲಿ 8,730 ಮತದಾರರು ಮನೆಯಿಂದ ಮತದಾನ ಮಾಡುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚುನಾವಣೆ ಆಯೋಗದ ಆದೇಶದಂತೆ ಪ್ರಥಮ ಬಾರಿಗೆ ಮನೆಯಿಂದ ಮತದಾನ ಆಯ್ಕೆಯನ್ನು ನೀಡಲಾಗುತ್ತಿದೆ. ಈ ಆಯ್ಕೆ ಪಡೆದ ಮತದಾರರ ಮನೆಯಲ್ಲಿ ತಾತ್ಕಾಲಿಕ ಮತಗಟ್ಟೆಯನ್ನು ಬಿಬಿಎಂಪಿ ಪ್ರತಿನಿಧಿಗಳು ನಿರ್ಮಿಸಲಿದ್ದಾರೆ. ಮೇ 10ರ ಮತದಾನದ ದಿನದಿಂದ ನಾಲ್ಕೈದು ದಿನ ಮೊದಲೇ ಮತ ಚಲಾಯಿಸಬಹುದು. ಮನೆಯಿಂದ ಮತದಾನ ಆಯ್ಕೆ ಪಡೆದುಕೊಂಡವರಲ್ಲಿ 8,611 ಮಂದಿ 80 ವರ್ಷಕ್ಕೂ …
Read More »ಸಚಿವ ಸುಧಾಕರ್ ಹಂಚಿದ ಕಳಪೆ ಸ್ಟೌಗಳು ಸ್ಫೋಟಗೊಳ್ಳುತ್ತಿವೆ: ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಸಚಿವ ಡಾ.ಕೆ. ಸುಧಾಕರ್ ಅವರು ಹಂಚಿರುವ ಕಳಪೆ ಸ್ಟೌಗಳು ಸ್ಫೋಟಗೊಳ್ಳುತ್ತಿವೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಪ್ರಜಾವಾಣಿ ಲೇಖನ ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮತದಾರರ ಓಲೈಕೆಗಾಗಿ ಬಿಜೆಪಿಗರು ನೀಡುವ ಆಮಿಷದ ಉಡುಗೊರೆಗಳೂ ಕೂಡ ಬಿಜೆಪಿ ಅಡಳಿತದಂತೆ ಕಳಪೆಯಾಗಿರುತ್ತವೆ’ ಎಂದು ಕಿಡಿಕಾರಿದೆ. ‘ಚಿಕ್ಕಬಳ್ಳಾಪುರದಲ್ಲಿ ಮತದಾರರಿಗೆ ಹಂಚಿದ ಕಳಪೆ ಗ್ಯಾಸ್ ಸ್ಟೌಗಳು ಸ್ಫೋಟಗೊಳ್ಳುತ್ತಿವೆ. ಜನರ ಜೀವದ ಜೊತೆ ಚೆಲ್ಲಾಟ ಆಡುವುದು ಸಚಿವ ಸುಧಾಕರ್ ಅವರಿಗೆ …
Read More »ಬೆಳ್ಳಂ ಬೆಳಗ್ಗೆ ರಾಮದುರ್ಗದಲ್ಲಿ ಭಾರಿ ಪ್ರಮಾಣದ ಹಣ ವಶ
ಬೆಳಗಾವಿ: ಕರ್ತವ್ಯ ನಿರತ ಚುನಾವಣೆ ಸಿಬ್ಬಂದಿ ಹಾಗೂ ಪೊಲೀಸರು ರಾಮದುರ್ಗದಲ್ಲಿ ಭಾರಿ ಪ್ರಮಾಣದ ಹಣ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಒಂಟ್ಟೂ 1.54 ಕೋಟಿ ರೂ. ಪತ್ತೆಯಾಗಿದ್ದು, ಆದಾಯ ತೇರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಈ ಕುರಿತು ಹೆಚ್ಚಿನ ವಿಚಾರಣೆ ಮುಂದುವರಿದಿದೆ.
Read More »ನೀರಾವರಿ ಯೋಜನೆಗೆ ಮೆಚ್ಚುಗೆ: ಪಾಟೀಲರ ಚುನಾವಣೆ ಖರ್ಚಿಗೆ ₹50 ಸಾವಿರ ನೀಡಿದ ರೈತ!
ವಿಜಯಪುರ: ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಮಾಡಿರುವ ನೀರಾವರಿ ಕೆಲಸಗಳಿಂದ ಸಂತಸನಾದ ರೈತರೊಬ್ಬರು, ಚುನಾವಣೆ ಖರ್ಚಿಗೆ ಕಾಣಿಕೆಯಾಗಿ ₹ 50 ಸಾವಿರ ಚೆಕ್ ಅನ್ನು ನೀಡಿ ಅಭಿಮಾನ ತೋರಿದ್ದಾರೆ. ಬಬಲೇಶ್ವರ ತಾಲ್ಲೂಕಿನ ಸಂಗಾಪುರ ಎಸ್.ಎಚ್. ಗ್ರಾಮದ ರೈತ ಶೇಖಪ್ಪ ಚಿಕ್ಕಗಲಗಲಿ ಅವರು ಎಂ.ಬಿ.ಪಾಟೀಲರ ನಿವಾಸಕ್ಕೆ ರೈತ ಸ್ನೇಹಿತರೊಂದಿಗೆ ಆಗಮಿಸಿ, ಚೆಕ್ ನೀಡಿದರು. ಬಳಿಕ ಮಾತನಾಡಿದ ಶೇಖಪ್ಪ ಚಿಕ್ಕಗಲಗಲಿ, ನಮ್ಮ ಭಾಗದಲ್ಲಿ ಈ ಮುಂಚೆ ಕುಡಿಯುವ ನೀರಿಗೂ ಹಾಹಾಕಾರವಿತ್ತು. …
Read More »ಚುನಾವಣಾ ಕಣ: ಬದಲಾದ ಚಿತ್ರಣ
ಬೆಂಗಳೂರು: ಮೇ 10ರಂದು ನಡೆಯ ಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆದಿನ ವಾಗಿದ್ದು, ಬುಧವಾರ 1,110 ನಾಮ ಪತ್ರಗಳು ಸಲ್ಲಿಕೆಯಾಗಿವೆ. 935 ಅಭ್ಯರ್ಥಿಗಳು ತಮ್ಮ ಶಕ್ತಿಪ್ರದರ್ಶನಕ್ಕೆ ಸಾವಿರಾರು ಜನರನ್ನು ಸೇರಿಸಿದ್ದರಿಂದಾಗಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಚುನಾವಣೆಯಲ್ಲಿ ಗೆಲ್ಲುವುದೊಂದನ್ನೇ ಎಲ್ಲ ರಾಜಕೀಯ ಪಕ್ಷಗಳು ಮಾನದಂಡವಾಗಿ ಇಟ್ಟುಕೊಂಡಿದ್ದ ರಿಂದಾಗಿ ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇರುವವರೆಗೂ ಆಕಾಂಕ್ಷಿಗಳು ಅಲ್ಲಿಂದಿಲ್ಲಿಗೆ ಜಿಗಿತವನ್ನು ನಡೆಸುತ್ತಲೇ ಇದ್ದರು. ಕೊನೆವರೆಗೂ …
Read More »ಹೈಕೋರ್ಟ್‌ಗೆ ಬೇಸಿಗೆ ರಜೆ 24ರಿಂದ
ಬೆಂಗಳೂರು: ಹೈಕೋರ್ಟ್‌ಗೆ ಇದೇ 24ರಿಂದ ಮೇ 20ರವರೆಗೆ ಬೇಸಿಗೆ ರಜೆ ಇರಲಿದೆ. ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿಯಲ್ಲಿ ವಿಭಾಗೀಯ ಮತ್ತು ಏಕಸದಸ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ರಜಾಕಾಲೀನ ಪೀಠಗಳನ್ನು ರಚಿಸಲಾಗಿದೆ. ‘ತಡೆಯಾಜ್ಞೆ, ಮಧ್ಯಂತರ ನಿರ್ದೇ ಶನ ಮತ್ತು ತಾತ್ಕಾಲಿಕ ಪ್ರತಿಬಂಧಕ ಆದೇಶ ಸೇರಿದಂತೆ ತುರ್ತು ಪ್ರಕರಣಗಳ ವಿಚಾರಣೆಯನ್ನು ಮಾತ್ರ ರಜಾಕಾಲೀನ ಅವಧಿಯಲ್ಲಿ ನಡೆಸಲಾಗುತ್ತದೆ. ಮೇಲ್ಮನವಿ, ಕ್ರಿಮಿನಲ್ ಮೇಲ್ಮನವಿ, ಕ್ರಿಮಿನಲ್ ಅರ್ಜಿ, ಸಿವಿಲ್ …
Read More »
Laxmi News 24×7