ಬೆಂಗಳೂರು: ಸುಮಾರು 70ರಿಂದ 80 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ 2ನೇ ಹಂತದ ಕಸರತ್ತು ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ನಡೆಯಲಿದೆ. ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಪ್ರಮುಖರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ಈ ಸಭೆ ನಡೆಯಲಿದೆ. ಪ್ರಥಮ ಹಂತದಲ್ಲಿ ಈಗಾಗಲೇ 130ರಿಂದ 150 ಕ್ಷೇತ್ರಗಳಿಗೆ ಒಂದೊಂದೇ ಅಭ್ಯರ್ಥಿ ಆಯ್ಕೆ ಮಾಡಿ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲೂ ಸಮ್ಮತಿ ಪಡೆಯಲಿದೆ. ಉಳಿದಂತೆ ಒಂದಕ್ಕಿಂತ ಹೆಚ್ಚು ಟಿಕೆಟ್ …
Read More »ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಮಾವೇಶಕ್ಕೆ ಸಿದ್ದು ಗೈರು ಏಕೆ
ಬೆಂಗಳೂರು: ತುಮಕೂರಿನ ಕೊರಟಗೆರೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ- ಸಿದ್ದರಾಮಯ್ಯ ಅವರ ಅನುಪಸ್ಥಿತಿ. ಪ್ರಮುಖವಾಗಿ ಅದು ರಾಜೀವ್ ಭವನ ಲೋಕಾರ್ಪಣೆ ಕಾರ್ಯಕ್ರಮವಾಗಿತ್ತು. ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅದರ ಕೇಂದ್ರಬಿಂದು ಆಗಿದ್ದರು. ಅಷ್ಟೇ ಅಲ್ಲ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುಜೇìವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ …
Read More »ಹಲವು ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ಸಿಗುವುದು ಕಷ್ಟ: B.S.Y.
ಕಲಬುರಗಿ: ರಾಜ್ಯಾದ್ಯಂತ ಈ ಬಾರಿ 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಹಾಲಿ ನಾಲ್ಕೈದು ಶಾಸಕರ ಟಿಕೆಟ್ ಸಿಗದಿರುವ ಸಾಧ್ಯತೆಯಿದೆ ಎಂದು ಇಂಗಿತ ವ್ಯಕ್ತಪಡಿಸಿದರು. ಇಲ್ಲಿನ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಕಾಂಗ್ರೆಸ್ ಪಕ್ಷದ ಪ್ರಜಾದನಿ …
Read More »ವಿಜಯ ಸಂಕಲ್ಪ ಯಾತ್ರೆ ನಾಳೆ ನಿಪ್ಪಾಣಿಯಲ್ಲಿ
ನಿಪ್ಪಾಣಿ: “”ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾದ ವಿಜಯ ಸಂಕಲ್ಪ ಯಾತ್ರೆ ಬುಧವಾರ (ಮಾ.8) ಮಧ್ಯಾಹ್ನ 3 ಗಂಟೆಗೆ ನಗರಕ್ಕೆ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಭವ್ಯವಾದ ರೋಡ್‍ಶೋ ಆಯೋಜಿಸಲಾಗಿದೆ” ಎಂದು ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ನಗರದ ಜೊಲ್ಲೆ ಶಿಕ್ಷಣ ಸಂಕೀರ್ಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಸಹಸಂಘಟನೆ ಕಾರ್ಯದರ್ಶಿ ಸಿ.ಟಿ. ರವಿ, …
Read More »ಚಿಕ್ಕೋಡಿ: ಪತ್ನಿಯನ್ನು ಕೊಲೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ
ಚಿಕ್ಕೋಡಿ: ಪತ್ನಿ ಕೊಲೆ ಮಾಡಿದ್ದ ಇಲ್ಲಿನ ಸಂಜಯ ಗಾಂಧಿ ನಗರದ ನಿವಾಸಿ ಅಜೀತ್ ಉರೂಫ್ ಸಾವಳಾ ಮಹಾದೇವ ಮಾಳಿ ಎಂಬಾತನಿಗೆ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಿವಾವಧಿ ಶಿಕ್ಷೆ ಹಾಗೂ ₹ 2,000 ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಈ ವ್ಯಕ್ತಿ ನಿರುದ್ಯೋಗಿ ಆಗಿದ್ದು ಪ್ರತಿನಿತ್ಯ ತನ್ನ ಪತ್ನಿ ಪಾರ್ವತಿ ಬಳಿ ಖರ್ಚಿಗೆ ಹಣ ಕೇಳುತ್ತಿದ್ದ. ಕೊಡದೇ ಇದ್ದಾಗ ಪೀಡಿಸುತ್ತಿದ್ದ. 2016ರ ನವೆಂಬರ್ 4ರಂದು ಹಣ …
Read More »28 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ತಮ್ಮ ಊರಿಗೆ ಆಗಮಿಸಿದ ತಾಲೂಕಿನ ಸುತಗಟ್ಟಿ ಗ್ರಾಮದ ಯೋಧ ಈರಪ್ಪ ಬಾಳಿಗಟ್ಟಿ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ
ಬೈಲಹೊಂಗಲ: ಭಾರತೀಯ ಸೇನೆಯಲ್ಲಿ 28 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ತಮ್ಮ ಊರಿಗೆ ಆಗಮಿಸಿದ ತಾಲೂಕಿನ ಸುತಗಟ್ಟಿ ಗ್ರಾಮದ ಯೋಧ ಈರಪ್ಪ ಬಾಳಿಗಟ್ಟಿ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಳಗಾವಿ ಜಿಲ್ಲಾ ಘಟಕ ಹಾಗೂ ಊರಿನ ಎಲ್ಲ ಮಾಜಿ ಸೈನಿಕರು ಹಮ್ಮಿಕೊಂಡಿದ್ದರು ಊರಿನ ದ್ವಾರದಿಂದ ಶ್ರೀ ಜೋಡು ಬಸವಣ್ಣನ ಗುಡಿಯವರಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬಸವಂತಪ್ಪ ಕರಾಂವಿ ಇವರ ನೇತೃತ್ವದಲ್ಲಿ …
Read More »ಸೀರೆಗಳನ್ನು ಹಂಚಲು ಮುಂದಾದ ಮಾಜಿ I,A,S, ಅಧಿಕಾರಿ 20 ಸಾವಿರಕ್ಕೂ ಹೆಚ್ಚು ಮುಗಿಬಿದ್ದ ಮಹಿಳೆಯರು
ರಾಯಬಾಗ: ಚುನಾವಣೆ ಸಮೀಪಿಸುತ್ತಿದ್ದಂತೆ ಈಗ ಎಲ್ಲೆಡೆ ಗಿಫ್ಟ್ ಪಾಲಿಟಿಕ್ಸ್ ತಾರಕಕ್ಕೇರುತ್ತಿದೆ. ಒಂದೆಡೆ ಪ್ರಾಮಾಣಿಕತೆಯ ಮಂತ್ರ, ಇನ್ನೊಂದೆಡೆ ಆಮಿಷದ ತಂತ್ರ ಮುಂದುವರಿದಿದೆ. ಹೊಸಹೊಸ ಆಕಾಂಕ್ಷಿಗಳು ತಮ್ಮ ಜಾಗ ಭದ್ರಪಡಿಸಿಕೊಳ್ಳಲು ಹೈ ಕಮಾಂಡ್ ಪಾದಪೂಜೆಯ ಜೊತೆಜೊತೆಗೇ ಜನರ ನಿಯತ್ತನ್ನೇ ಹಾಳುಗೆಡವುತ್ತಿದ್ದಾರೆ. ಇದೀಗ ರಾಯಬಾಗ ಕ್ಷೇತ್ರದಲ್ಲಿ ನಡೆದ ವಿದ್ಯಮಾನವೊಂದು ಯಾರು ಪ್ರಾಮಾಣಿಕರು? ಅಧಿಕಾರ ಮುಖ್ಯವೋ, ಪ್ರಾಮಾಣಿಕತೆ ಮುಖ್ಯವೋ ಎಂಬೆಲ್ಲ ವಿಷಯಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ತಮಿಳುನಾಡು ಸರಕಾರದ ಮಾಜಿ …
Read More »ರೈತರಿಗೆ ಪ್ರತಿ ವರ್ಷ 15 ಸಾವಿರ ರೂ. ಕೊಡುತ್ತೇನೆ: ಜನಾರ್ದನ ರೆಡ್ಡಿ
ಹಾವೇರಿ: ಬಡತನರೇಖೆಗಿಂತ ಕಡಿಮೆ ಇರುವ ರೈತರಿಗೆ ಪ್ರತಿ ವರ್ಷ 15 ಸಾವಿರ ಕೊಡುತ್ತೇನೆ. ಬಿತ್ತನೆ ಬೀಜ, ಗೊಬ್ಬರವನ್ನ ರೈತರ ಮನೆ ಬಾಗಿಲಿಗೆ ತಲುಪಿಸುತ್ತೇನೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಇದ್ದರೆ ಜನಾರ್ದನ ರೆಡ್ಡಿ ಇತಿಹಾಸ ಮಾಡುತ್ತಾನೆಂದು ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ಹಾನಗಲ್ ಪಟ್ಟಣದಲ್ಲಿ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಮೇಲೆ ನಿಮ್ಮ ಆಶೀರ್ವಾದ ಇರಲಿ. ಚಿಕ್ಕ ವಯಸ್ಸಿನಲ್ಲಿ ರಾಜಕೀಯ …
Read More »ಬೊಮ್ಮಾಯಿ ಯಾರು ಎಂದು ಕೇಳಿದ್ರೆ ಜನ ಪೇ ಸಿಎಂ ಎನ್ನುತ್ತಾರೆ: ರಣದೀಪ್ ಸುರ್ಜೆವಾಲಾ
ದಾವಣಗೆರೆ: ಕರ್ನಾಟಕದಲ್ಲಿ ಯಾವ ಸರ್ಕಾರ ಇದೆಯೆಂದು ದೇಶದಲ್ಲಿ ಕೇಳಿದರೆ 40 ಪರ್ಸೆಂಟ್ ಸರ್ಕಾರ ಎನ್ನುತ್ತಾರೆ. ಬಸವರಾಜ ಬೊಮ್ಮಾಯಿ ಯಾರು ಎಂದು ಕೇಳಿದ್ರೆ ಪೇ ಸಿಎಂ ಎನ್ನುತ್ತಾರೆಂದು ದಾವಣಗೆರೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ 8 ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆದರೆ ಎಲ್ಲಿಯೂ 40 ಪರ್ಸೆಂಟ್ ಅರೋಪದ ಬಗ್ಗೆ ಉತ್ತರಿಸಿಲ್ಲ. ಬಿಜೆಪಿ ಕಾರ್ಯಕರ್ತರೇ …
Read More »ಫುಲ್ ಟೈಟ್ ಆಗಿ ಆಸ್ಪತ್ರೆಗೆ ಬಂದ ಸರ್ಕಾರಿ ವೈದ್ಯ
ತುಮಕೂರು: ಇಂದು ಈ ಡಾಕ್ಟರ್ ಬಳಿಗೆ ಯಾರಾದರೂ ಹಲ್ಲು ನೋವೆಂದು ಹೋದರೆ ಹಲ್ಲು ಮುರಿದು ಕಳಿಸಿದರೂ ಅಚ್ಚರಿ ಇಲ್ಲ. ಏಕೆಂದರೆ ಈ ಸರ್ಕಾರಿ ವೈದ್ಯ ಪಾನಮತ್ತನಾಗಿ ಆಸ್ಪತ್ರೆಗೆ ಬಂದಿದ್ದು, ಮದ್ಯದ ಅಮಲಿನಲ್ಲಿ ಟೇಬಲ್ ಮೇಲೆ ಕಾಲೆತ್ತಿ ಕುಳಿತು ಅವಾಂತರ ನಡೆಸಿದ್ದಾನೆ. ತುಮಕೂರು ಜಿಲ್ಲೆಯ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ದಂತ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಜಯಪ್ರಕಾಶ್ ಈ ವರ್ತನೆ ತೋರಿದ್ದಾನೆ. ವೈದ್ಯನ ಅವಾಂತರದ ದೃಶ್ಯಾವಳಿ ಸಾರ್ವಜನಿಕರ ಮೊಬೈಲ್ಫೋನ್ನಲ್ಲಿ …
Read More »