ನವದೆಹಲಿ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಹುತೇಕ ಫೈನಲ್ ಆಗಿದ್ದು, ಇಂದು ಸಂಜೆ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇಂದು ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಣದೀಪ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್ ವರಿಷ್ಠರ ನೇತೃತ್ವದಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದ್ದು, ಕೈ ಅಭ್ಯರ್ಥಿಗಳ ಹೆಸರು ಮತ್ತೊಮ್ಮೆ ಫೈನಲ್ ಆಗಲಿದೆ. ಸಭೆ ಬಳಿಕ ಸಂಜೆಯೇ ಅಭ್ಯರ್ಥಿಗಳ ಹೆಸರು ಘೋಷಣೆಯಾದರೂ ಅಚ್ಚರಿ ಇಲ್ಲ. ಕಾಂಗ್ರೆಸ್ …
Read More »ಶಿಗ್ಗಾವಿಯಿಂದ ಸ್ಪರ್ಧಿಸಲಿದ್ದಾರಾ ವಿನಯ್ ಕುಲ್ಕರ್ಣಿ?
ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಎಂ ಬಸವರಾಜ್ ಬೊಮ್ಮಾಯಿ ಕ್ಷೇತ್ರ ಶಿಗ್ಗಾವಿಯಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಧಾರವಾಡ ಜಿಲ್ಲಾಪಂಚಾಯಿತಿ ಸದಸ್ಯ ಯೇಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ವಿನಯ್ ಕುಲ್ಕರ್ಣಿ, ಈ ಬಾರಿ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಶಿಗ್ಗಾವಿಯಿಂದ ಸ್ಪರ್ಧೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ …
Read More »ಹೆರಿಗೆ ಮಾಡಿಸಲು ಹಣ ಕೇಳಿದ್ದ ಪ್ರಕರಣ ಡಾ.ಪಲ್ಲವಿ ಪೂಜಾರಿ ಅಮಾನತು
ಹೆರಿಗೆ ಮಾಡಿಸಲು ಹಣ ಕೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ಪಲ್ಲವಿ ಪೂಜಾರಿ ಅವರನ್ನು ಅಮಾನತುಗೊಳಿಸಿ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್.ಆದೇಶ ಹೊರಡಿಸಿದ್ದಾರೆ. ಹೆರಿಗೆಗಾಗಿ ಸಂಗೀತಾ ಎಂಬ ಗರ್ಭಿಣಿ ಆಸ್ಪತ್ರೆಗೆ ಬಂದಿದ್ದರು. ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲು ಡಾ.ಪಲ್ಲವಿ 10 ಸಾವಿರ ಹಣ ಕೇಳಿದ್ದಾರೆ. ಅಷ್ಟೊಂದು ಹಣ ತಮ್ಮ ಬಳಿ ಇಲ್ಲ ಎಂದು ಸಂಗೀತಾ ಹೇಳಿದ್ದಾರೆ. ಹಣ ತರದೆ ಹೆರಿಗೆ ಮಾಡಿಸಲು ನಿರಾಕರಿಸಿದ್ದಾರೆ. ಸಂಗೀತಾ ಹಲವೆಡೆ …
Read More »ಪರಿಹಾರಕ್ಕಾಗಿ ಟವರ್ ಏರಿದ ರೈತರು
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಗಿ ಗ್ರಾಮದ ಆರು ಜನ ರೈತರು ಮಳೆಯಿಂದಾದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಮೊಬೈಲ್ ಟವರ್ ಏರಿ ಕುಳಿತುಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಮಲ್ಲಪ್ಪ ಬಿರಾದಾರ, ಸಿದ್ದು ಶಿಂಧೆ, ಯಲ್ಲಪ್ಪ ಬೆಳ್ಳುಬ್ಬಿ, ಮುನಿಕ ಗುರಚಿ, ಜ್ಞಾನದೇವ ಮಳಿಕ ಹಾಗೂ ಚಿರಾವ ಮೊಹಿತೆ ಟವರ್ ಏರಿದವರು. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ದ್ರಾಕ್ಷಿ ಬೆಳೆ ಹಾಳಾಗಿದೆ. ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. …
Read More »ವಿಜಯಪುರ: ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಕಾರು ಅಪಘಾತ
ವಿಜಯಪುರ : ಜಿಲ್ಲೆಯ ಪ್ರವಾಸದಲ್ಲಿದ್ದ ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದರೂ ಸುದೈವಶಾತ್ ಯಾವುದೇ ಅಪಾಯವಾಗಿಲ್ಲ. ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಗುರುವಾರ ಪಕ್ಷದ ಸಂಘಟನೆಗಾಗಿ ಜಿಲ್ಲೆಯ ಪ್ರವಾಸದಲ್ಲಿದ್ದರು. ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಗುರುವಾರ ಪಕ್ಷದ …
Read More »ಲಿಂಗಾಯತ ಮತ ಬೇಕಿಲ್ಲ; ಸುಳ್ಳಿನ ಫ್ಯಾಕ್ಟರಿಯಿಂದ ಸುಳ್ಳಿನ ಸುದ್ದಿ:ಸಿ.ಟಿ.ರವಿ
ಚಿಕ್ಕಮಗಳೂರು : ಲಿಂಗಾಯತ ಸಮುದಾಯಕ್ಕೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂಬ ಹೇಳಿಕೆ ಕುರಿತು ವ್ಯಾಪಕ ಚರ್ಚೆಯಾಗುತ್ತಿರುವ ವೇಳೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದು, ”ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಿಂದ ಸುಳ್ಳಿನ ಸುದ್ದಿ ಹಬ್ಬಿಸಿದ್ದಾರೆ” ಎಂದಿದ್ದಾರೆ. ”ಕನಸಿನಲ್ಲೂ ಕೂಡ ಜಾತಿ ರಾಜಕಾರಣ ಮಾಡಿದವನಲ್ಲ ಜಾತಿಯ ಬಗ್ಗೆ ಯೋಚನೆಯನ್ನು ಮಾಡಲ್ಲ,ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಲಿಂಗಾಯತ ವಿರೋಧಿ ಭಾವನೆ ಹುಟ್ಟು ಹಾಕುವ ಕೆಲಸವನ್ನ ಮಾಡುತ್ತಿದ್ದಾರೆ. ಇದರ ಹಿಂದೆ ಕಾಂಗ್ರೆಸ್ …
Read More »ಸಿಡಿಲಿಗೆ ರೈತ, ಹೋರಿ ಬಲಿ: ಓರ್ವನಿಗೆ ಗಾಯ, ದ್ರಾಕ್ಷಿ ಬೆಳೆ ಹಾನಿ
ವಿಜಯಪುರ: ಬೇಸಿಗೆ ಮಳೆಯ ಬಿರುಗಾಳಿ, ಸಿಡಿಲಿಗೆ ಜಿಲ್ಲೆಯಲ್ಲಿ ಓರ್ವ ರೈತ ಹಾಗೂ ಒಂದು ಜಾನುವಾರು ಬಲಿಯಾಗಿದ್ದು, ಮತ್ತೋರ್ವ ರೈತ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಜಿಲ್ಲೆಯಲ್ಲಿ ಬುಧವಾರ ಮಧ್ಯರಾತ್ರಿಯಿಂದ ಬಿರುಗಾಳಿ, ಗುಡು, ಸಿಡಿಲಿನ ಅಬ್ಬರ ಜೋರಾಗಿದೆ. ಪರಿಣಾಮ ಗೋದಿ ರಾಶಿಯನ್ನು ಮಳೆಯಿಂದ ರಕ್ಷಿಸಲು ತಾಡಪತ್ರಿ ಹೊದಿಸುವಾಗ ಬಬಲೇಶ್ವರ ತಾಲೂಕಿನ ಸಂಗಾಪೂರ ಎಸ್.ಎಚ್. ಗ್ರಾಮದ ಯುವ ರೈತ ಬಸವರಾಜ ಹಣಮಂತ ಹಮಾರಿ ಹಾಗೂ ಸಂಗಪ್ಪ ಹಣಮಂತ ಹಮಾರಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ …
Read More »ಕನ್ನಡದ ಕೀರ್ತಿ ಪತಾಕೆಯನ್ನು ಜಗತ್ತಿನಾದ್ಯಂತ ಮೊಳಗಿಸಿದ “ಕಾಂತಾರ’ ನಟ-ನಿರ್ದೇಶಕ ರಿಷಭ್ ಶೆಟ್ಟಿ
ಜಿನೇವಾ: ಕನ್ನಡದ ಕೀರ್ತಿ ಪತಾಕೆಯನ್ನು ಜಗತ್ತಿನಾದ್ಯಂತ ಮೊಳಗಿಸಿದ “ಕಾಂತಾರ’ ನಟ-ನಿರ್ದೇಶಕ ರಿಷಭ್ ಶೆಟ್ಟಿ ವಿಶ್ವಸಂಸ್ಥೆಯಲ್ಲಿ ಕನ್ನಡದ ದನಿಯನ್ನು ಹೊಮ್ಮಿಸಿದ್ದಾರೆ. ಗುರುವಾರ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ರಿಷಭ್, ಭಾರತದ ನಾಗರಿಕ ಸಮಾಜ ತನ್ನ ಪರಿಸರ ವನ್ನು ರಕ್ಷಿಸಲು ಪಣ ತೊಡುತ್ತದೆ. ಇಂಥ ಪ್ರಜ್ಞೆಗೆ ಸಿನೆಮಾ ಮಾಧ್ಯಮವೂ ನೆರವಾಗುತ್ತದೆ ಎಂದು ಹೇಳುತ್ತ ನಿಸರ್ಗ ಮಯ ಚಿತ್ರ ಕಾಂತಾರದ ಮಹತ್ವವನ್ನು ವಿವರಿಸಿದರು. ಭಾರತದ ಹಲವಾರು ಸಿನೆಮಾಗಳು ವಾಸ್ತ ವಿಕ ಮತ್ತು ಕಾಲ್ಪನಿಕ ಕಥೆಗಳ ಮೂಲಕ ಪರಿಸರದ ಮಹತ್ವವನ್ನು ಜಗತ್ತಿಗೆ …
Read More »ಚುನಾವಣೆ ದಿನಾಂಕ ನಿಗದಿಗೆ ದಿನಗಣನೆ: ರಾಜ್ಯಕ್ಕೆ ರಾಷ್ಟ್ರ ನಾಯಕರ ದಾಂಗುಡಿ
ರಾಜ್ಯ ವಿಧಾನಸಭೆಗೆ ಚುನಾವಣೆಗೆ ದಿನಾಂಕ ನಿಗದಿಗೆ ದಿನಗಣನೆ ಆರಂಭವಾಗಿರುವಂತೆಯೇ ವಿವಿಧ ರಾಜಕೀಯ ಪಕ್ಷಗಳ ರಾಷ್ಟ್ರೀಯ ನಾಯಕರು ರಾಜ್ಯದತ್ತ ದಾಂಗುಡಿ ಇಡಲಾರಂಭಿಸಿದ್ದಾರೆ. ಮಹಾ ಸಂಗಮಕ್ಕೆ 10 ಲಕ್ಷ ಮಂದಿ ಬೆಂಗಳೂರು: ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಮಾ. 25ರಂದು ದಾವಣಗೆರೆಯಲ್ಲಿ ಸಮಾಪನಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಈ “ಮಹಾ ಸಂಗಮ’ದಲ್ಲಿ 10 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಮೂಲಕ ಈ ಹಿಂದೆ ದಾವಣಗೆರೆಯಲ್ಲಿ ನಡೆದ “ಸಿದ್ದರಾಮೋತ್ಸವ’ಕ್ಕೆ ಪ್ರತ್ತಸ್ತ್ರ ಪ್ರಯೋಗಿಸಲು ಬಿಜೆಪಿ …
Read More »ಗಂಡು ಮಗು ಜನಿಸಲಿಲ್ಲವೆಂದು ನೆರೆಮನೆಯ ಗಂಡು ಮಗುವನ್ನು ಕೊಲೆಗೈದ ಮಹಿಳೆಗೆ ಜೀವಾವಧಿ ಶಿಕ್ಷೆ
ಚಿಕ್ಕೋಡಿ: ಗಂಡು ಮಗು ಜನಿಸಲಿಲ್ಲವೆಂದು ಹತಾಶೆಗೊಂಡು ಸಂಬಂಧಿಕರ ಗಂಡು ಮಗುವನ್ನು ನೀರಿನ ಬ್ಯಾರಲ್ ನಲ್ಲಿ ಮುಳುಗಿಸಿ ಕೊಲೆ ಮಾಡಿದ ಆರೋಪಿ ಮಹಿಳೆಗೆ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ. ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಜಯಶ್ರೀ ಬಾಹುಬಲಿ ಅಲಾಸೆ ಎಂಬ ಮಹಿಳೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಕಳೆದ ದಿ.24-8-2018 ರಂದು ಶೇಡಬಾಳ ಗ್ರಾಮದ ಕುರುಬರ ಗಲ್ಲಿಯ ರಾಜು ತಾತ್ಯಾಸಾಬ ಅಲಾಸೆ ಎಂಬುವವರ …
Read More »