ಒಂದು ವಿಶೇಷ ಸೆಲ್ಫಿ’. ನಾನು ಚೆನ್ನೈನಲ್ಲಿ ತಿರು ಎಸ್. ಮಣಿಕಂದನ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ಈರೋಡ್‌ನ ಹೆಮ್ಮೆಯ ಕಾರ್ಯಕರ್ತ- ಪ್ರಧಾನಿ ಮೋದಿ ಟ್ವೀಟ್. ಚೆನ್ನೈ (ತಮಿಳುನಾಡು): ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೆನ್ನೈಗೆ ಭೇಟಿ ನೀಡಿದ್ದರು. ಶನಿವಾರ ತಮ್ಮ ಚೆನ್ನೈ ಭೇಟಿಯ ಕೊನೆಯಲ್ಲಿ ಅವರು ವಿಕಲಚೇತನನಾಗಿರುವ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ತಿರು ಎಸ್. ಮಣಿಕಂದನ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ‘ಸೆಲ್ಫಿ’ ತೆಗೆದುಕೊಂಡರು. …
Read More »ಬಂಡೀಪುರದ `ಟೈಗರ್ ಸಫಾರಿ’ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿದ ಪ್ರಧಾನಿ ಮೋದಿ
ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಸಂದ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಟೈಗರ್ ಸಫಾರಿಗೂ ಮುನ್ನ ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಹೈದರಾಬಾದ್ ಮತ್ತು ಚೆನ್ನೈನ ಕಾರ್ಯಕ್ರಮಗಳ ನಂತರ ಮೈಸೂರಿಗೆ ಬಂದಿರುವೆ. ಏಪ್ರಿಲ್ 9 ರ ಇಂದು , ಪ್ರಾಜೆಕ್ಟ್ ಟೈಗರ್ ನ 50 ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸುವೆ ಎಂದು …
Read More »ಸಾರ್ವಜನಿಕರ ಗಮನಕ್ಕೆ : ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಏಪ್ರಿಲ್ 10 ಕೊನೆಯ ದಿನ
ಧಾರವಾಡ : ಕರ್ನಾಟಕ ವಿಧಾನಸಭೆಗೆ ಭಾರತ ಚುನಾವಣಾ ಆಯೋಗವು ಮಾರ್ಚ್ 29 ರಂದು ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಿದೆ. ಅದರಂತೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 20 (ಗುರುವಾರ) ಆಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಅರ್ಹ ಮತದಾರರು, ಮತದಾರರ ಯಾದಿಯಲ್ಲಿ ಹೆಸರುಗಳ ಸೇರ್ಪಡೆಯಾಗಿರುವ ಬಗ್ಗೆ https://ceo.karnataka.gov.in, https://www.nvsp.in ವೆಬ್‌ಸೈಟ್‌ಗಳಲ್ಲಿ ಹಾಗೂ Voter …
Read More »ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳವರೆಗೂ ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇದೇ ವೇಳೆ ಏಪ್ರಿಲ್ 12ರವರೆಗೂ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸಾರ್ವಜನಿಕರಿಗೆ ಮುನ್ಸೂಚನೆ ನೀಡಿದೆ.
Read More »ರೀಲ್ಸ್ ಮಾಡುವ ನೆಪದಲ್ಲಿ ಅಪ್ರಾಪ್ತೆಯೊರ್ವಳು ಭಾವಿ ಗಂಡನ ಕತ್ತಿಗೆ ಚೂರಿ ಹಾಕಿ ಕೊಲೆ
ಹಾವೇರಿ : ಹಾವೇರಿ ಜಿಲ್ಲೆಯ ರಾಣೇಬೆನ್ನೂರು (Ranebennuru) ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ ಅಪ್ರಾಪ್ತೆಯೊರ್ವಳು ಭಾವಿ ಗಂಡನ ಕತ್ತಿಗೆ ಚೂರಿ ಹಾಕಿ ಕೊಲೆ ಮಾಡಲೆತ್ನಿಸಿದ ಘಟನೆ ನಡೆದಿದೆ. ಮಾರ್ಚ್ 3ರಂದು ಹರಪನಹಳ್ಳಿ (Harapanahalli) ತಾಲೂಕಿನ ಮೂಲದ ದೇವೇಂದ್ರಗೌಡ ಎಂಬಾತನ ಜೊತೆ 17 ವರ್ಷದ ಅಪ್ರಾಪ್ತೆಯ ನಿಶ್ಚಿತಾರ್ಥವಾಗಿತ್ತು. ಆದರೆ ಅಪ್ರಾಪ್ತೆ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಪ್ರೀತಿಸುತ್ತಿದ್ದ ಗೆಳೆಯನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕೊಲೆಗೆ ಅಪ್ರಾಪ್ತೆ ಮುಂದಾಗಿದ್ದಳು ಎಂದು ತಿಳಿದುಬಂದಿದೆ. …
Read More »ಬೆಳಗಾವಿ ಜಿಲ್ಲೆಯ ವಿವಿಧೆಡೆ ತಪಾಸಣೆ ನಡೆಸಿ ಅಪಾರ ಪ್ರಮಾಣದಲ್ಲಿ ಹಣ ಹಾಗೂ ಮದ್ಯ ವಶ
ಬೆಳಗಾವಿ: ಚುನಾವಣೆ ಕರ್ತವ್ಯ ನಿರತ ಸಿಬ್ಬಂದಿ ಬೆಳಗಾವಿ ಜಿಲ್ಲೆಯ ವಿವಿಧೆಡೆ ತಪಾಸಣೆ ನಡೆಸಿ ಅಪಾರ ಪ್ರಮಾಣದಲ್ಲಿ ಹಣ ಹಾಗೂ ಮದ್ಯ ವಶಪಡಿಸಿಕೊಂಡಿದ್ದಾರೆ. ಘಟಪ್ರಭಾದ ಹುಣಶ್ಯಾಳ ಗ್ರಾಮದಲ್ಲಿ ಅಬಕಾರಿ ದಾಳಿ ಮಾಡಿ 34 ಬಾಕ್ಸ್, 3264 ಪೌಚ್ ಗಳನ್ನು ಜಪ್ತು ಮಾಡಲಾಗಿದೆ. ಒಟ್ಟು 301 ಲೀಟರ್ ಮಧ್ಯ (Original choice ), ಅಂದಾಜು 1,18,000 ರೂಪಾಯಿಗಳು. ಹಿಟ್ನಿ ಚೆಕ್ ಪೋಸ್ಟ್ ನಲ್ಲಿ 1 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಮಿರಜ್ ನ …
Read More »ಥೈರಾಯ್ಡ್ ನಿಂದ ಬಳಲುತ್ತಿದ್ದ 49 ವರ್ಷದ ಮಹಿಳೆಗೆ ಯಶಸ್ವಿಯಾಗಿ ಚಿಕಿತ್ಸೆ
ಬೆಳಗಾವಿ: ಗಂಟಲು ನೋವು, ಊತ, ನುಂಗಲು ತೊಂದರೆಯ ಸಮಸ್ಯೆಯೊಂದಿಗೆ ಉಲ್ಬಣಗೊಂಡಿದ್ದ ಥೈರಾಯ್ಡ್ ನಿಂದ ಬಳಲುತ್ತಿದ್ದ 49 ವರ್ಷದ ಮಹಿಳೆಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಹೆಮಿಥೈರೊಡಕ್ಟಮಿ (ಎಡಗಡೆಯ) ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಮೂಲತಃ ಖಾನಾಪುರ ತಾಲೂಕಿನ ರಹವಾಸಿಯಾದ ಮಹಿಳೆಗೆ ಕಳೆದ 20 ವರ್ಷಗಳಿಂದ ಗಂಟಲಿನ ಸಮೀಪ ಒಂದು ಸಣ್ಣಗಂಟಿನಾಕಾರದಲ್ಲಿದ್ದ ಥೈರಾಯ್ಡ ಸಮಸ್ಯೆಯು ಕಳೆದ 2ರಿಂದ 3 ವರ್ಷಗಳಲ್ಲಿ ಉಲ್ಭಣಗೊಂಡು ರೋಗಿಯು ನುಂಗಲು, ಮಾತನಾಡಲು ಸಮಸ್ಯೆಯನ್ನು ಎದುರಿಸಬೇಕಾಯಿತು. …
Read More »ಇದು ನಮ್ಮ ಮನವಿಯಲ್ಲ ಎಚ್ಚರಿಕೆ” ಅಮೂಲ್ ಉತ್ಪನ್ನ ಮಾರಾಟ ಮಾಡಲು ಯತ್ನಿಸಿದರೆ ದಾಳಿ
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಅಮೂಲ್ ಉತ್ಪನ್ನ ಮಾರಾಟ ಮಾಡಲು ಯತ್ನಿಸಿದರೆ ದಾಳಿ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ. ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಈ ಕುರಿತು ಹೇಳಿಕೆ ನೀಡಿದ್ದಾರೆ. “ಆಡಳಿತದಲ್ಲಿರುವ ಸಕಾ೯ರಕ್ಕೆ ನನ್ನದೊಂದು ಎಚ್ಚರಿಕೆ, ಯಾವುದೇ ಕಾರಣಕ್ಕೂ ಅಮೂಲ್ ಪದಾರ್ಥಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ಮಾರಾಟ ಮಾಡಕೂಡದು. ಯಾವುದೇ ಮೂಲೆಯಲ್ಲಿ ಮಾರಾಟ ಮಾಡಲು ಪ್ರಯತ್ನ ಮಾಡಿದರೆ ಕರವೇ ಬೆಳಗಾವಿ ಜಿಲ್ಲಾ ಘಟಕದಿಂದ ದಾಳಿ ಮಾಡುವುದು ನಿಶ್ಚಿತ. ಈಗಲಾದರೂ ಎಚ್ಛೆತ್ತುಕೊಳ್ಳಿ. …
Read More »ಸರ್ಕಾರಿ ಬಸ್ ಹರಿದ ಪರಿಣಾಮ ಸ್ಥಳದಲ್ಲೇ 2 ವರ್ಷದ ಮಗು ಸಾವು ; ಸ್ಥಳೀಯರಿಂದ ಬಸ್ ಗಾಜು ಪುಡಿಪುಡಿ.!
ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ ಸರ್ಕಾರಿ ಬಸ್ ಹರಿದ ಪರಿಣಾಮ ಸ್ಥಳದಲ್ಲೇ 2 ವರ್ಷದ ಮಗು ಸಾವಿಗೀಡಾದ ಘಟನೆ ನಡೆದಿದೆ. ಮೃತ ಮಗು ಶ್ಲೋಕ ಅಶೋಕ ತುಳಸಿಗೇರಿ (2) ಎಂದು ತಿಳಿದುಬಂದಿದೆ. ಪರಮಾನಂದವಾಡಿಯಿಂದ ರಾಯಬಾಗ ಪಟ್ಟಣಕ್ಕೆ ತೆರಳುತ್ತಿದ್ದ ಬಸ್, ಮಗು ರಸ್ತೆ ದಾಟುವಾಗ ಹರಿದಿದೆ ಎನ್ನಲಾಗಿದೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಸ್ಥಳೀಯರು ಬಸ್ಸಿನ ಗಾಜುಗಳನ್ನು ಪುಡಿಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ …
Read More »“ಟಿಕೆಟ್ ನೀರಿಕ್ಷೆಯಲ್ಲಿದ್ದ ಅಭ್ಯರ್ಥಿಗಳು ಕೈ ತಪ್ಪಿದರಿಂದ ನಿರಾಸೆಯಾಗುವುದು ಸಹಜ: ಸತೀಶ ಜಾರಕಿಹೊಳಿ
ಬೆಳಗಾವಿ: “ಟಿಕೆಟ್ ನೀರಿಕ್ಷೆಯಲ್ಲಿದ್ದ ಅಭ್ಯರ್ಥಿಗಳು ಕೈ ತಪ್ಪಿದರಿಂದ ನಿರಾಸೆಯಾಗುವುದು ಸಹಜ, ಅವರನ್ನು ಮನವೊಲಿಸುವ ಪ್ರಯತ್ನಗಳು ನಡೆಯಲಿದೆ ” ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ನಿಂದ ಗೋಕಾಕ ಕ್ಷೇತ್ರದಿಂದ ಸ್ಪರ್ಧಿಸಲು ಮಹಾಂತೇಶ ಕಡಾಡಿ ಅವರನ್ನು ಕಣಕ್ಕೆ ಇಳಿಸಲಾಗಿದೆ. ಹೈಕಮಾಂಡ್ ತೀರ್ಮಾನ ಅಂತಿಮ ತೀರ್ಮಾನ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು. ಯಾವ ಕ್ಷೇತ್ರದಕ್ಕೆ ಯಾವ …
Read More »