ಬೆಂಗಳೂರು: ಸಿಇಟಿ ಪರೀಕ್ಷೆ 2023ಕ್ಕೆ ಆನ್ ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಟ್ಟಕಡೆಯ ಅವಕಾಶ ನೀಡಿದೆ. ಕೆಇಎ ಕಾಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ಮಂಗಳವಾರ ಪತ್ರಿಕಾ ಹೇಳಿಕೆಯಲ್ಲಿ, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು 21-05-2023 ರ ಸಂಜೆ 6ರಿಂದ 24-05-2023 ರ ರಾತ್ರಿ 11.59 ರವರೆಗೆ ಮಾಹಿತಿ ತಿದ್ದುಪಡಿ ಮಾಡಬಹುದು ಎಂದಿದ್ದಾರೆ. ಸಿಇಟಿ-2023 ರ ಫಲಿತಾಂಶ ಪ್ರಕಟಿಸುವ ಮುನ್ನ ಇದು ತಿದ್ದುಪಡಿಗೆ ಕೊನೆಯ …
Read More »ಸ್ಕೂಟರ್ ನಲ್ಲಿ ಅಪ್ಪಿಕೊಂಡು, ಮುದ್ದಾಡಿದ ಜೋಡಿ; ವಿಡಿಯೋ ವೈರಲ್
ದೆಹಲಿ: ದಿಲ್ಲಿ ಮೆಟ್ರೋದಲ್ಲಿ ಕಳೆದ ಕೆಲ ದಿನಗಳ ಹಿಂದೆ ಜೋಡಿಯೊಂದು ಲಿಪ್ ಲಾಕ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದೀಗ ದಿಲ್ಲಿ ಮತ್ತೊಂದು ಅಂಥದ್ದೇ ವಿಚಾರದಲ್ಲಿ ಸುದ್ದಿಯಾಗಿದೆ. ಆದರೆ ಈ ಬಾರಿ ಸ್ಕೂಟರ್ ನಲ್ಲಿ ಪ್ರಯಾಣಿಸಿದ ಜೋಡಿಯಿಂದಾಗಿ. ದಿಲ್ಲಿಯ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಜೋಡಿಯೊಂದು ಹೋಗುವಾಗ ಹುಡುಗ ಒಂದು ಕೈಯಲ್ಲಿ ಸ್ಕೂಟರ್ ಚಲಾಯಿಸುತ್ತ ಇನ್ನೊಂದು ಕೈಯಲ್ಲಿ ಯುವತಿಯನ್ನು ಅಪ್ಪಿಕೊಂಡು ಮುದ್ದಾಡಿದ್ದಾನೆ. ಈ ವಿಡಿಯೋವನ್ನು ಕಾರಿನಲ್ಲಿ ಹೋಗುತ್ತಿದ್ದವರು ಸೆರೆ ಹಿಡಿದ್ದಾರೆ. ಶಾಲು …
Read More »ಐಟಿ ವೆಬ್‌ಸೈಟ್‌ಗೆ ಕನ್ನ ಹಾಕಿ ಭಾರೀ ವಂಚನೆ
ಬೆಂಗಳೂರು: ಆದಾಯ ತೆರಿಗೆ ಇಲಾಖೆಯ(ಐಟಿ) ವೆಬ್‌ಸೈಟ್ ಹ್ಯಾಕ್ ಮಾಡಿಕೊಂಡು ತೆರಿಗೆದಾರರ ಆದಾಯ ತೆರಿಗೆ ಮರುಪಾವತಿಯನ್ನು ನಕಲಿ ಖಾತೆ ತೆರೆದು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಆರೋಪಿಯನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆ ಹಿರಿಸಾವೆ ಮೂಲದ ದಿಲೀಪ್ ರಾಜೇಗೌಡ (32) ಬಂಧಿತ ಆರೋಪಿ. ಈತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣದಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಧಾರವಾಡದಲ್ಲಿ ಬಂಧಿಸಲಾಗಿದೆ. ಈತನಿಂದ ಕೆಲ ಡಿಜಿಟಲ್ ಹಾಗೂ ಇತರೆ ಸಾಕ್ಷ್ಯಗಳನ್ನು …
Read More »ಸಂವಹನ ಕೌಶಲ ಅತೀ ಮುಖ್ಯ: ಸಲೀಂ ಹವಾಲ್ದಾರ
ಉಗರಗೋಳ: ಎಸ್‌ಎಸ್‌ಎಲ್‌ಸಿ ನಂತರ ಅನೇಕ ಆಯ್ಕೆಗಳಿವೆ. ಸಮರ್ಪಕ ಮಾರ್ಗದರ್ಶನ ಮತ್ತು ಜ್ಞಾನದ ಕೊರತೆಯಿಂದ ಮಕ್ಕಳು ಗೊಂದಲದಲ್ಲಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳದಂತೆ ಪಾಲಕರು ಎಚ್ಚರವಹಿಸಬೇಕು ಎಂದು ಇಸ್ರೋ ವಿಜ್ಞಾನಿ ಸಲೀಮ್ ಹವಾಲ್ದಾರ ಹೇಳಿದರು. ಇಲ್ಲಿನ ಬಸವಜ್ಯೋತಿ ಪ್ರಾಥಮಿಕ ಶಾಲಾ ಆವರಣದಲ್ಲಿ ರವಿವಾರ ಜರುಗಿದ ಎಸ್‌ಎಸ್ ಎಲ್‌ಸಿ ಆಯ್ತು, ಮುಂದೆ- ಎಂಬ ವಿಷಯ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡಿದರು. ತಂತ್ರಜ್ಞಾನ ಯುಗದಲ್ಲಿ ಸಂವಹನ ಕೌಶಲ ಅತಿ ಮುಖ್ಯವಾಗಿದೆ. …
Read More »ಸುಳ್ಳು ಸುದ್ದಿ ಹರಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದಡಿ.ಕೆ.ಶಿ
ನವದೆಹಲಿ: ನೂತನ ಮುಖ್ಯಮಂತ್ರಿ ಆಯ್ಕೆ ವಿಚಾರ ಕ್ಷಣ ಕ್ಷಣಕ್ಕೂ ಕಗ್ಗಂಟಾಗುತ್ತಿದ್ದು, ಸಿಎಂ ಹುದ್ದೆಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನ ಎಲ್ಲಾ ನಾಯಕರನ್ನು ಭೆಟಿಯಾಗುತ್ತೇನೆ. ಮೊದಲು ಖರ್ಗೆ ಅವರನ್ನು ಭೇಟಿಯಾಗುತ್ತೇನೆ ಎಂದರು. ಕಾಂಗ್ರೆಸ್ ಪಕ್ಷ ನನಗೆ ತಾಯಿಯಿದ್ದಂತೆ. ಹೈಕಮಾಂಡ್ ಇದೆ, 135 ಶಾಸಕರು ಆಯ್ಕೆಯಾಗಿದ್ದೇವೆ. …
Read More »ಕಾರ್ಯಕರ್ತರಿಗೆ ಕೋಟಿ ಕೋಟಿ ನಮನ ಸಲ್ಲಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ
ಕಾರ್ಯಕರ್ತರಿಗೆ ಕೋಟಿ ಕೋಟಿ ನಮನ ಸಲ್ಲಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಹೃದಯಿ, ನಿಷ್ಠಾವಂತ ಕಾರ್ಯಕರ್ತರನ್ನು ಪಡೆದಿರುವುದು ನನ್ನ ಪುಣ್ಯ : ಬಾಲಚಂದ್ರ ಜಾರಕಿಹೊಳಿ ನಾಗನೂರ ಪಟ್ಟಣದಲ್ಲಿ ಅರಭಾವಿ ಮತಕ್ಷೇತ್ರದ ಕಾರ್ಯಕರ್ತರನ್ನು ಅಭಿನಂದಿಸಿದ ನೂತನ ಶಾಸಕ ಮೂಡಲಗಿ : ರಾಜ್ಯದ 224 ಕ್ಷೇತ್ರಗಳಲ್ಲಿಯೇ ನಮ್ಮ ಅರಭಾವಿ ಕ್ಷೇತ್ರವು ಬಹು ವಿಶೇಷತೆಗಳಿಂದ ಕೂಡಿದ್ದು, ಯಾವ ಹಳ್ಳಿಗಳಿಗೂ ಪ್ರಚಾರವನ್ನು ಮಾಡದೇ ಪ್ರತಿ ಮತಗಟ್ಟೆಗಳಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ನನ್ನ ಆಯ್ಕೆಗೆ ಶ್ರಮಿಸಿದ್ದಾರೆ. ಯಾವ …
Read More »ಸಿಎಂ ಸ್ಥಾನಕ್ಕೆ ಪರಮೇಶ್ವರ ಅವರನ್ನೂ ಪರಿಗಣಿಸಿ:ಬೃಹತ್ ಪ್ರತಿಭಟನೆ
ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ, ಜಿ. ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ದಲಿತ ಸಮುದಾಯದ ವ್ಯಕ್ತಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಪೋಸ್ಟರ್ಗಳನ್ನು ಹಿಡಿದು ಕಾರ್ಯಕರ್ತರು ಒತ್ತಾಯಿಸಿದರು. ತುಮಕೂರು ನಗರದ ಕಾಂಗ್ರೆಸ್ ಕಚೇರಿಯಿಂದ ಹೊರಟ ಪ್ರತಿಭಟನಾಕಾರರು ಭದ್ರಮ್ಮ ವೃತ್ತದ …
Read More »ಏಕಾಏಕಿ ಹೊತ್ತಿ ಉರಿದ ಕಾರು.!
ಬೆಳಗಾವಿ : ಬೆಳಗಾವಿಯ ಆರ್‌ಪಿಡಿ ವೃತ್ತದ ಸಮೀಪ ನಿನ್ನೆ ರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಮೂಲದ ಕುಟುಂಬ ಖಾನಾಪುರ ತಾಲೂಕಿನ ಅಸೋಗಾದಿಂದ ಸ್ವಗ್ರಾಮಕ್ಕೆ ವಾಪಸ್ಸಾಗುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಟಿಳಕವಾಡಿಯ ಆರ್‌ಪಿಡಿ ವೃತ್ತದ ಮಾರ್ಗವಾಗಿ ಬರುತ್ತಿದ್ದಾಗ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ತಕ್ಷಣ ಎಚ್ಚೆತ್ತ ಚಾಲಕ ಕಾರು ನಿಲ್ಲಿಸಿ ಕಾರಿನಲ್ಲಿದ್ದವರನ್ನು ಕೆಳಗಿಳಿಸಿದ್ದಾನೆ. …
Read More »ವಾಟ್ಸಪ್‌ನಲ್ಲಿ ಪಾಕ್ ಪರ ಪೋಸ್ಟ್ ಮಾಡಿದ್ದ ಯುವಕ ಕಂಬಿಹಿಂದೆ.!
ವಿಜಯಪುರ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದ ಕಾನಬಾವಿಯಲ್ಲಿ ಪಾಕಿಸ್ತಾನ ಪರ ಬರಹ ಬರೆದು ಅದನ್ನು ವಾಟ್ಸಪ್‌ನಲ್ಲಿ ಪೋಸ್ಟ್ ಮಾಡಿರುವ ಆರೋಪದ ಹಿನ್ನೆಲೆ ಯುವಕನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ ಘಟನೆ ನಡೆದಿದೆ. ನಾಲತವಾಡ ಪಟ್ಟಣದ ಕಾನಬಾವಿ ಓಣಿಯ ನಿವಾಸಿ ವೀರೇಶ ಪರಯ್ಯ ಕರ್ಪೂರಮಠ (31) ಎಂಬಾತನನ್ನು ಇಲ್ಲಿನ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ ವಿಜಯಪುರದ ದರ್ಗಾ ಜೈಲಿಗೆ ಕಳುಹಿಸಿದ್ದಾರೆ. ವೀರೇಶ, ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ …
Read More »ಬೈಕ್ ಕಾರು ಡಿಕ್ಕಿ : ಸ್ಥಳದಲ್ಲೇ ಮೂವರ ಸಾವು.!
ಗದಗ : ಗದಗ ತಾಲೂಕಿನ ಅಡವಿ ಸೋಮಾಪೂರ ಬಳಿ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ನಡೆದಿದೆ. ಮೃತ ದುರ್ದೈವಿಗಳು ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾದ ನಿವಾಸಿಗಳು ಶಿವಪ್ಪ ನಾಯಕ್ (50), ಶಿವಾನಂದ ಲಮಾಣಿ (33) ಕೃಷ್ಣಪ್ಪ ಚೌಹ್ವಾನ್ ಎಂದು ತಿಳಿದುಬಂದಿದೆ. ಅಡವಿ ಸೋಮಾಪುರ ಗ್ರಾಮದಿಂದ ಮುಂಡರಗಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಟಿವಿಎಸ್ ಎಕ್ಸೆಲ್, ಹೀರೋ ಸ್ಪ್ಲೆಂಡರ್ ಹಾಗೂ ಚವರ್ಲೆಟ್ ಕಾರ್ಮ ಮಧ್ಯೆ ಸರಣಿ ಅಪಘಾತ ಅಪಘಾತ ಸಂಭವಿಸಿದೆ. …
Read More »