ರೈತರಿಗೆ ಬೀಜ ವಿತರಿಸಿದ ಚನ್ನರಾಜ ಹಟ್ಟಿಹೊಳಿ ಹಿರೆಬಾಗೇವಾಡಿ: ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಸೋಮವಾರ ಹಿರೇಬಾಗೇವಾಡಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಿದರು. ಮುಂಗಾರು ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ, ಬೀಜಗಳನ್ನು ವಿತರಿಸಿ, ರೈತರ ಕೃಷಿ ಚಟುವಟಿಕೆಗಳಿಗೆ ಅವರು ಚಾಲನೆ ನೀಡಿದರು. ಈ ವೇಳೆ ರೈತರು, ಗ್ರಾಮದ ಮುಖಂಡರು, ಕೃಷಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Read More »ಕೋವಿಡ್ ಸಂಬಂಧಿಸಿದಂತೆ ಪರಿಸ್ಥಿತಿ ಅವಲೋಕಿಸಲು ಆರೋಗ್ಯ ಇಲಾಖೆ ಮತ್ತು ಆರೋಗ್ಯ ಶಿಕ್ಷಣ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಸಭೆ
ಕೋವಿಡ್ ಸಂಬಂಧಿಸಿದಂತೆ ಪರಿಸ್ಥಿತಿ ಅವಲೋಕಿಸಲು ಆರೋಗ್ಯ ಇಲಾಖೆ ಮತ್ತು ಆರೋಗ್ಯ ಶಿಕ್ಷಣ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಅಧಿಕಾರಿಗಳು, ತಜ್ಞರು ಮತ್ತು ಸಚಿವರುಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಈ ಕೆಳಗಿನ ಸೂಚನೆಗಳನ್ನು ನೀಡಿದರು… *ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮುಂಚಿತವಾಗಿಯೇ ಮುಂದೆ ಸಂಭವಿಸಬಹುದಾದ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯವಾದ ಎಲ್ಲಾ ಸವಲತ್ತು, ಸಲಕರಣೆಗಳನ್ನು ಸಜ್ಜುಗೊಳಿಸಿಟ್ಟುಕೊಳ್ಳಬೇಕು. *ಸದ್ಯಕ್ಕೆ ಆತಂಕ ಪಡುವ …
Read More »ಡಿಜಿ-ಐಜಿಪಿ ಎಂ ಎ ಸಲೀಂ ಆಯ್ಕೆ ಪ್ರಶ್ನಿಸಿ ಪತ್ರ: ಕೋರ್ಟ್ಗೆ ಹೋಗುವ ಎಚ್ಚರಿಕೆ ನೀಡಿದ ವಕೀಲೆ
ಬೆಂಗಳೂರು, ಮೇ 26: ಕರ್ನಾಟಕದ ಪ್ರಭಾರಿ ಡಿಜಿ-ಐಜಿಪಿಯಾಗಿ ನೇಮಕವಾಗಿರುವ ಎಂ.ಎ.ಸಲೀಂ (MA Salim) ಅವರಿಗೆ ಸಂಕಷ್ಟ ಎದುರಾಗಿದೆ. ಕನ್ನಡಿಗ, ಹಿರಿಯ ಐಪಿಎಸ್ ಅಧಿಕಾರಿ ಡಾ. ಎಂ.ಎ ಸಲೀಂ ಅವರನ್ನು ರಾಜ್ಯದ ಪೊಲೀಸ್ ಮಹಾನಿರ್ದೇಶಕರನ್ನಾಗಿ (ಪ್ರಭಾರ) ನೇಮಕ ಮಾಡಿ ರಾಜ್ಯ ಸರ್ಕಾರ (Karnataka Government) ಕಳೆದ ಬುಧವಾರ (ಮೇ.21) ಆದೇಶ ಹೊರಡಿಸಿತ್ತು. ಈ ಆದೇಶ ಹಿಂಪಡೆಯುವಂತೆ ವಕೀಲೆ ಸುಧಾ ಕಟ್ವಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸುಪ್ರೀಂ …
Read More »ಜ್ವರ, ನೆಗಡಿ ಇರುವ ವಿದ್ಯಾರ್ಥಿಗಳಿಗೆ ರಜೆ: ಕೋವಿಡ್ ಬಗ್ಗೆ ಸಭೆಯಲ್ಲಿ ಏನೆಲ್ಲಾ ಆಯ್ತು? ಇಲ್ಲಿದೆ ವಿವರ
ಬೆಂಗಳೂರು, (ಮೇ 26): ಕರ್ನಾಟಕದಲ್ಲಿ ಕೊವಿಡ್ (Covid) ನಿಯಂತ್ರಣ ಸಂಬಂಧ ಇಂದು (ಮೇ 26) ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ನೇತೃತ್ವದಲ್ಲಿ ನಡೆ ಸಭೆ ಅಂತ್ಯವಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಎಲ್ಲ ಸಿದ್ಧತೆಗಳನ್ನ ಮಾಡಿಕೊಳ್ಳಿ. ಕಳೆದ ಬಾರಿ ಆದಂತೆ ಸಮಸ್ಯೆ ಆಗಬಾರದು. ಕೊವಿಡ್ ಸಹಾಯವಾಣಿ ತೆರೆಯಿರಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಅಲ್ಲದೇ ಜ್ವರ, ನೆಗಡಿ ಇರುವ ಮಕ್ಕಳಿಗೆ ಶಾಲೆಗಳು ರಜೆ ನೀಡುವಂತೆ ಸೂಚಿಸಿದ್ದಾರೆ. ಪ್ರತಿ ವಾರ ಕೊವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸಿ ಪರಿಸ್ಥಿತಿ …
Read More »ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿಗಿಂತ ಕೆಟ್ಟದಾಗಿ ವರ್ತಿಸುತ್ತಿದೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕೆ
ಬೆಂಗಳೂರು, ಮೇ 26: ಕರ್ನಾಟಕದಲ್ಲಿ ಕಾಂಗ್ರೆಸ್ ಜನರ ಧ್ವನಿಯನ್ನು ಅಡಗಿಸುತ್ತಿದೆ. ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿಗಿಂತಲೂ ಕೆಟ್ಟದಾಗಿ ವರ್ತಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜ್ಯ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಂತರ ಬಿಜೆಪಿ ನಾಯಕ ಪ್ರಲ್ಹಾದ್ ಜೋಶಿ ಈ ಪ್ರತಿಕ್ರಿಯೆ ನೀಡಿದ್ದಾರೆ. “ರಾಜ್ಯ ಸರ್ಕಾರದ ಎರಡು ವರ್ಷಗಳ ವೈಫಲ್ಯದ ಬಗ್ಗೆ ಚಾರ್ಜ್‌ಶೀಟ್” ಎಂಬ ಶೀರ್ಷಿಕೆಯಡಿಯಲ್ಲಿ ದೃಶ್ಯ ಮಾಧ್ಯಮ …
Read More »ಮಳೆ ರಭಸಕ್ಕೆ ಬೆಳಗಾವಿ – ಗೋವಾ ಹೆದ್ದಾರಿ ಬಂದ್…
ಮಳೆ ರಭಸಕ್ಕೆ ಕೊಚ್ಚಿ ಹೋದ ರಸ್ತೆ…ಮುಳುಗಡೆಯ ಹಂತದಲ್ಲಿ ನಿರ್ಮಾಣಾಧೀನ ಸೇತುವೆ…. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಮಲಪ್ರಭಾ ನದಿಯಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಬೆಳಗಾವಿ-ಗೋವಾ ಸಂಪರ್ಕಿಸುವ ಹೆದ್ದಾರಿ ಬಂದ್ ಆಗಿದ್ದು, ಬೆಳಗಾವಿ, ಖಾನಾಪೂರ ಮತ್ತು ರಾಮನಗರದ ಜನರು ಪೇಚಿಗೆ ಸಿಲುಕಿದ್ದಾರೆ. ಖಾನಾಪುರ ತಾಲೂಕಿನ ಕಣಕುಂಬಿ ಇದು ಮಲಪ್ರಭಾ ನದಿ ಉಗಮ ಸ್ಥಾನ. ಇದೇ ಮಾರ್ಗದಲ್ಲಿರುವ ಕಸಮಳಿ ಗ್ರಾಮದ ಬಳಿ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ ನಡೆಯುತ್ತಿದೆ. …
Read More »ಅತ್ಯಾಚಾರ ಆರೋಪಮನುಗೆ 14 ದಿನಗಳ ನ್ಯಾಯಾಂಗ ಬಂಧನ
ಬೆಂಗಳೂರು: ಅತ್ಯಾಚಾರ ಆರೋಪದಡಿ ಬಂಧಿಸಲ್ಪಟ್ಟಿರುವ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಖ್ಯಾತಿಯ ನಟ ಮಡೆನೂರು ಮನುಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 3ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ. ಈ ಹಿಂದೆ ಖಾಸಗಿ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ಮನು ಭಾಗಿಯಾಗಿದ್ದರು. ಅದೇ ಶೋನಲ್ಲಿ ಭಾಗಿಯಾಗಿದ್ದ ಸಹ ಸ್ಪರ್ಧಿಯೊಬ್ಬರು ನೀಡಿದ್ದ ದೂರಿನನ್ವಯ ಮನು ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಕಾಮಿಡಿ ಕಾರ್ಯಕ್ರಮವೊಂದಕ್ಕೆ 2022ರಲ್ಲಿ ಶಿಕಾರಿಪುರಕ್ಕೆ ತೆರಳಿದ್ದಾಗ, ತನ್ನ ಮೇಲೆ …
Read More »ನಾನು ಯಾರಿಂದಲೂ ಕನ್ನಡಾಭಿಮಾನವನ್ನು ಕಲಿಯುವ ಅಗತ್ಯವಿಲ್ಲ ಎಂದ ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು: ಕೆಎಸ್ಡಿಎಲ್ ಸಂಸ್ಥೆಯ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕನ್ನಡದ ಅಸ್ಮಿತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸಂಸ್ಥೆಯ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವ್ಯವಹಾರ ನಡೆಸಿ ಜೈಲಿಗೆ ಹೋಗಿದ್ದರು. ಆಗ ತೆಪ್ಪಗಿದ್ದ ವಿಜಯೇಂದ್ರ ಅವರಿಗೂ ಮಾಡಾಳ್ಗೂ ವ್ಯವಹಾರ ಇತ್ತೇನೋ. ಆಗ ಏಕೆ ಇವರಿಗೆ ಕನ್ನಡದ ಅಸ್ಮಿತೆ ನೆನಪಾಗಲಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕಿಡಿ ಕಾರಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಎರಡು …
Read More »39 ನಿಮಿಷ 24 ಸೆಕೆಂಡ್‌ಗಳಲ್ಲಿ 11.18 ಕಿ.ಮೀ ಕ್ರಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾದ ಹುಬ್ಬಳ್ಳಿಯ ಬಾಲಕ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಬಾಲಕ ಸುಶ್ವಿನ್ ಅವರು 39 ನಿಮಿಷ 24 ಸೆಕೆಂಡ್‌ಗಳಲ್ಲಿ 11.18 ಕಿ.ಮೀ ಕ್ರಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾಗಿದ್ದಾರೆ. ಇವರಿಗೆ ಈಗ 4 ವರ್ಷ 8 ತಿಂಗಳು ವಯಸ್ಸು. ಸುಶ್ವಿನ್ ಹಳೇಹುಬ್ಬಳ್ಳಿಯ ಇಂದ್ರಪ್ರಸ್ತ ನಗರದ ವಿನಾಯಕ ಮತ್ತು ಸುಷ್ಮಾ ಹಳಪೇಟಿ ದಂಪತಿಯ ಪುತ್ರ ಏ.5ರಂದು ಈ ಬಾಲಕ ಸತ್ತೂರು ಆಶ್ರಯ ಕಾಲೊನಿಯಿಂದ ಬೆಳಗ್ಗೆ 6.40ಕ್ಕೆ ಆರಂಭಿಸಿ 7.19ಕ್ಕೆ ಉಣಕಲ್ ಕ್ರಾಸ್‌ವರೆಗೆ ಸೈಕಲ್ ಓಡಿಸಿ ಈ …
Read More »ಭಾರಿ ಮಳೆಗೆ ಕುಸಿದ ಮನೆ…ಓರ್ವ ಸಹೋದರಿ ಸಾವು…ಇನ್ನೋರ್ವಳಿಗೆ ಗಾಯ…
ಭಾರಿ ಮಳೆಗೆ ಕುಸಿದ ಮನೆ…ಓರ್ವ ಸಹೋದರಿ ಸಾವು…ಇನ್ನೋರ್ವಳಿಗೆ ಗಾಯ… ಗೋಕಾಕ ನಗರದ ಮಹಾಲಿಂಗೇಶ್ವರ ಕಾಲನಿಯಲ್ಲಿ ಘಟನೆ… ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರ ಮಳೆಗೆ ಮನೆಯ ಗೋಡೆ ಕುಸಿದು ಮೂರು ವರ್ಷದ ಮಗು ಮೃತಪಟ್ಟ ಘಟನೆ ಹೃದಯವಿದ್ರಾವಕ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಮಹಾಲಿಂಗೇಶ್ವರ ಕಾಲನಿಯಲ್ಲಿ ನಡೆದಿದೆ. ಕೀರ್ತಿಕಾ ನಾಗೇಶ್ ಪೂಜಾರಿ (3) ಮೃತ ದುರ್ದೈವಿ ಮನೆಯ ಹಿಂಬದಿಯ ಗೋಡೆ ಕುಸಿದು ಮಗವಿನ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವು. ಮತ್ತೋರ್ವ ನಾಲ್ಕು …
Read More »